Rudra / Shiva

  • Namipe padake bhavani

    Composer : Shri Prasannavenkata dasaru ನಮಿಪೆ ಪದಕೆ ಭವಾನಿ ಶಂಕರ [ಪ]ಅಮರಗಣ ವಂದಿತನೆ ಮಾರಹರ [ಅ.ಪ] ಕಾಮಹರನೆ ಉಮಾಮನೋಹರನೆ |ವಾಮಮುನಿ ತನಯಾ ಮೃತ್ಯುಂಜಯ ||ರಾಮನಾಮದ ಮಹಿಮೆ ಭಾಮೆಗೆ |ನೇಮದಿಂದರುಹಿದಹೀಂದ್ರಪದ ಭಾಗ್ಯ [೧] ಪರಾತ್ಪರನೆ ಪಂಚಾಕ್ಷರೀ ಜಪ |ನಿರುತ ನಿರ್ವಂಚನೆಯಲಿ ಮಾಳ್ಪಗೆ ||ದುರಿತ ತರಿದು ಕಂಚೀವರದನ |ಅರಿವ ವಾಂಛಿತವೀವ ಸದಾಶಿವ [೨] ಸದ್ಯೋಜಾತ ನೀ ಯೆನ್ನ ತಿದ್ದಿ |ಮಧ್ವಮತದ ಪ್ರಬುದ್ಧ ತತ್ವದಿ |ಶುದ್ಧಮತಿಯನೆಯಿತ್ತು ಸದ್ವೈಷ್ಣವರ |ಮಧ್ಯದಿ ಬದುಕು ಮಾಡಿಸೋ ಹರ [೩] ವಿಜ್ಞಾಪಿಸುವೆನು ಸುಜ್ಞಾನನಿಧಿ ಸ |ರ್ವಜ್ಞರಾಯರ…

  • Jangamaru naavu jagadolu

    Composer : Shri Purandara dasaru ಜಂಗಮರು ನಾವು ಜಗದೊಳುಜಂಗಮರು ನಾವು ಲಿಂಗಾಂಗಿಗಳುಮಂಗಳವಂತರು ಭಾವಿಗಳೆಂತೆಂಬಿರಿ ||ಅ.ಪ|| ಹರ ಗುರು ದೈವ ಕೇಶವ ನಮ್ಮ ಮನೆದೈವವರದ ಮೋಹನ ಗುರು ಶಾಂತೇಶಹರ ಗುರು ದ್ರೋಹ ಮಾಡಿದ ಪರವಾದಿಯುರೌರವ ನರಕದಿ ಮುಳುಗುವುದೆ ಸಿದ್ಧ ||೧|| ವಿಭೂತಿ ನಮಗುಣ್ಟು ವಿಶ್ವೇಶ ನಮಗುಣ್ಟುಶೋಭನ ನಾಮ ಮುದ್ರೆಗಳುಣ್ಟುಶ್ರೀ ಭಾಗೀರತಿಯ ಗಣಿತ ಮಜ್ಜನವುಣ್ಟುಸೌಭಾಗ್ಯವೀವ ಮಹಂತನ ಮಠದವರು ||೨||| ವಿರಕ್ತರು ನಾವು ಶೀಲವಂತರು ನಾವುವೀರಭದ್ರ ಪ್ರಿಯ ಭಕ್ತರು ನಾವುಕಾರಣ ಕರ್ತ ಶ್ರೀ ಪುರಂದರ ವಿಠ್ಠಲನಕಾರುಣ್ಯಕೆ ಮುಖ್ಯ ಪಾತ್ರರು ನಾವು…

  • Eeta nodi sundareshwara – Dirgha kriti

    Composer : Shri Prasannavenkata dasaru ಈತ ನೋಡಿ ಸುಂದರೇಶ್ವರ ಭೂತನಾಥ ಮಾಹೇಶ್ವರಾ ||ಪ||ಅತೀತ ಹರಿಗುಣ ಕಥಾ ಶ್ರವಣದ ಸುಖವನಿತ್ತಾ ಪಂಚವಕ್ತ್ರಾ ||ಅ.ಪ|| ಕಂತುಪಿತನಾ ಮಂತ್ರಿಯೆನಿಸಿ ಸಂತತವೂ ಸರ್ವಾಂತರಾತ್ಮನ |ತಂತ್ರ ತಿಳಿದು ಅನಂತವಾದ ಜಗದ ಸಂತೆಯ ಕಾಣುವಂಥಾ ||೧|| ಈತ ಶುಕದೂರ್ವಾಸ ಜೈಗಿಷ ದ್ರೋಣಸುತ ಅಶ್ವತ್ಥಾಮಸಂಪ್ರತ ||ತತುವನಾಥಾ ತಪವನಿರತ ಮಹಪದ ಮಹಾದೇವ ದೇವ ||೨|| ರಾಮದೇವ ವಾಸವಂದ್ಯ ಕಾಮಿತಾರ್ಥ ಪ್ರದಾಯಕಾ |ಭಾಮೆ ಉಮೆಗೆ ರಾಮ ನಾಮದ ಮಹಿಮೆ ತಿಳಿಸಿದ ಹರಿಸಖಾ ||೩|| ಸಿದ್ಧವಿದ್ಯೆಲಿ ಸಿದ್ಧಹಸ್ತಾ ಶುದ್ಧ ಭಾವುಕ…

error: Content is protected !!