-
Bandevayya Govinda shetty
Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ |೧| ಒಡೆದ ಮಡಕೆ ತಂದು ಅರೆದು ನಾಮವ ಮಾಡಿಕೊಡುವೆನು ಕಾಸಿಗೆ ಒಂದೊಂದನುಒಡಲ ತುಂಬಿ ಮಿಕ್ಕ ವೋಗರ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ |೨| ಶೇಷಗಿರಿಯಮೇಲೆ ವಾಸವಾಗಿಹ ಶೆಟ್ಟಿದೇಶ ದೇಶಕ್ಕೆ ಹೆಸರಾದ ಶೆಟ್ಟಿಕಾಸು ಕಾಸಿಗೆ ಬಡ್ಡಿ ಗಳಿಸಿಕೊಂಬ ಶೆಟ್ಟಿಆದಿಕೇಶವ ನಾರಾಯಣ ತಿಮ್ಮ ಶೆಟ್ಟಿ…
-
Enna Kanda halliya hanuma
Composer : Shri Kanakadasaru ಎನ್ನ ಕಂದ ಹಳ್ಳಿಯ ಹನುಮ ||ಪ||ಚೆನ್ನಾಗೈದಾರೆ ಲಕ್ಷ್ಮಣ ದೇವರು ||ಅ.ಪ|| ತುಪ್ಪ ಪಂಚಾಮೃತವಂದು ಅಡವಿ ಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲ್ಲೈದಾರೆ ||೧|| ನವ ವಸ್ತ್ರವಂದು ನಾರ ಸೀರೆಗಳಿಂದುಹೂವಿನ ಗಂಟು ಅಂದು ಜಡೆಗಳಿಂದುಜವ್ವಾದಿ ಕಸ್ತುರಿಯಂದು ಭಸಿತ ಧೂಳಿಂದುಶ್ರೀವರ ರಾಘವ ಕ್ಷೇಮದಲ್ಲೈದಾರೆ ||೨|| ಕನಕ ರಥಗಳಂದು ಕಾಲು ನಡಿಗೆಯಿಂದುಘನ ಛತ್ರ ಚಾಮರಂದು ಬಿಸಿಲು ಇಂದುಸನಕಾದಿ ಓಲೈಪ ಆದಿಕೇಶವ ನಮ್ಮಹನುಮೇಶ ರಾಘವ ಕ್ಷೇಮದಲ್ಲೈದಾರೆ ||೩|| enna kaMda haLLiya…
-
Srinivasa Kalyana – Byadaveshava taali
Composer : Shri Kanakadasaru ಬ್ಯಾಡವೇಷವ ತಾಳಿಒಡಿಸುತ ತುರಗವನುಪ್ರೌಢೆ ಪದ್ಮಾವತಿಯನೋಡಿ ನಸುನಗುತ || ಜೋಡಾಗು ತನಗೆಂದುಗಾಡಿಗಾರನ ಮಾತುಆಡಿ ಕ್ರೋಢಾಲಯಕೆಓಡಿ ಪೋದವಗೆ ಜಯ ಜಯ //೧// ತಾಯಿ ಬಕುಳೆಯ ಕಳುಹಿ ಕಾಯದಿಂದಆಕಾಶ ರಾಯನರಮನೆಜೀಯೆಂದು ಪೋಗಿಸಲುಪಾಯಗಲ ನಡೆಸಿತನ್ನಾಲಯವ ಕೈಕೊಂಡ ಕಮನೀಯಮೂರುತಿಗೆ ಜಯ ಜಯ //೨// ಶುಕಮುನಿಯ ಮುಖದಿಂದಶುಭವಾರ್ತೆಯ ಕೇಳಿಅಕಳಂಕ ಲಗ್ನದಲಿ ಇನಿತು ಪೋಗಿಉರಗಗಿರಿಯಲ್ಲಿ ನೆಲೆಯಾಗಿ ನೆಲೆಸಿದನೆಲೆಯಾದಿ ಕೇಶವಗೆ ಜಯ ಜಯ //೩// byADavEShava tALioDisuta turagavanuprauDhe padmAvatiyanODi nasunaguta || jODAgu tanageMdugADigArana mAtuaaDi krODhAlayakeODi pOdavage jaya jaya…
