Kanakadasaru

  • Ninna nanenendeno

    Composer : Shri Kanakadasaru ನಿನ್ನ ನಾನೇನೆಂದೆನೊ ರಂಗಯ್ಯ ರಂಗನಿನ್ನ ನಾನೇಂದೆನೊ ||ಪ|| ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ||ಅ.ಪ|| ಧೀರ ಸೋಮಕ ವೇದಚೋರನ ಮಡುಹಿದೆ |ವಾರಿಧಿಗಿಳಿದ ಪರ್ವತವ ಪೊತ್ತೆ |ಧಾರಿಣಿಯನು ತಂದು ದನುಜ ದಲ್ಲಣನಾದೆ |ನಾರಸಿಂಹ ನಿನಗೆ ನಮೊ ಎಂಬೆನಲ್ಲದೆ |ನೀರ ಪೊಕ್ಕವನೆಂದೆನೆಬೆನ್ನಿನ ಮೇಲೆ ಭಾರ ತಾಳ್ದವನೆಂದೆನೆಮಣ್ಣನು ಅಗಿದು ಬೇರ ಮೆದ್ದವನೆಂದೆನೆರಕ್ಕಸರೊಳುಹೋರಾಡಿದವನೆಂದು ಹೊಗಳಿದೆನಲ್ಲದೆ ||೧|| ಧರೆಯ ದಾನವ ಬೇಡಿ ನೆಲವ ಮೂರಡಿ ಮಾಡಿ |ಪರಶು ಪಿಡಿದು ಕ್ಷತ್ರಿಯರ ಸವರಿ |ಚರಣದಿ ಪಾಷಾಣ ಹೆಣ್ಣು…

  • Bagilanu teradu

    Composer : Shri Kanakadasaru ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ [ಪ] ಪರಮಪದದೊಳಗೆ ವಿಷಧರನ ತಲ್ಪದಲಿ ನೀಸಿರಿಸಹಿತ ಕ್ಷೀರ ವಾರಿಧಿಯೊಳಿರಲುಕರಿರಾಜ ಕಷ್ಟದಲ್ಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ [೧] ಕಡು ಕೋಪದಿಂ ಖಳನು ಖಡ್ಗವನು ಹಿಡಿದುನಿನ್ನೊಡೆಯ ಎಲ್ಲಿಹನೆಂದು ನುಡಿಯೇದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆಯೋ ನರಹರಿಯೇ [೨] ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ [೩] bAgilanu teredu sEveyanu…

  • Enu Karana Baya

    Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ, ಪ್ರಹ್ಲಾದವರದನರಸಿಂಹ ನರಸಿಂಹ ||೧|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮಲೆತು ಮಾವನ ಕೊಂದು ನಿಂತೆ,ಇಂಥಾ ಭೂಮಿಗಿಳಿದನಾರಸಿಂಹ ನರಸಿಂಹ || ೨|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ…

error: Content is protected !!