-
Edurarai nimage Samanarai
Composer : Shri Vyasarajaru on Shri Jayatirtharu ಎದುರಾರೈ ಗುರುವೆ ಸಮರಾರೈ ||ಪ||ಮದನ ಗೋಪಾಲನ ಪ್ರಿಯ ಜಯರಾಯ ||ಅ.ಪ|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಾಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆ ಯೆಂಬಚಟುಲಾ ತಪದಿಂದ ಖಂಡಿಸಿ,ತೇಜೋ-ತ್ಕಟದಿ ಮೆರೆದೆ ಬುಧ ಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರ ಹೃತ್ ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ ||೩|| ವ್ಯಾಸ…
-
Jaya muneendrana
Composer : Shri Vyasarajaru ವರ್ಣಿಸಲಳವೆ ಸುಗುಣಸಾಂದ್ರನ || ಪ ||ಕರ್ಣಜನಕ ಕೋಟಿ ತೇಜ ಶ್ರೀಶ ಭಜಕಜಯ ಮುನೀಂದ್ರನ || ಅ.ಪ || ಮಧ್ವಶಾಸ್ತ್ರ ದುಗ್ಧ ನಿಧಿಯೊಳ್ಬುದ್ಧಿಯೆಂಬ ಮಂದರಗಿರಿಯಶುದ್ಧ ನೇತ್ರ ಸೂತ್ರದಿಂದಬದ್ಧ ಮಾಡಿ ಪಿಡಿದು ಕಡಿದು,ಶುದ್ಧ ಯುಕುತಿ ಸುಧೆಯ ತೆಗೆದನ,ಶಿಷ್ಯ ಜನಕೆ ಶ್ರದ್ಧೆಯಿಂದ ಲದನು ಎರೆದನ,ಮೋದದಿಂದ ಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ [೧] ಮಾನನೀಯ ಶೀಲರಾದ ಮಾನವರಕರೆದು ಹರಿಯ ಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಕೊಡುವ,ಜ್ಞಾನಮತವ ಜನಕೆ ಸಾರ್ದನ,ಶಿಷ್ಯಜನಕೆ ಸಾನುರಾಗದಿ ತತ್ವ ಪೇಳ್ದನದೋಶ ದೂರ ದಾನವರಿಯ ಕಥೆಯ ಪೇಳ್ದನ…
