-
Palisenna Indira
Composer : Shri Vijaya dasaru ಪಾಲಿಸೆನ್ನ ಇಂದಿರಾದೇವಿ, ಪಾಲಿಸೆನ್ನಾ [ಪ] ಪಾಲಿಸೆನ್ನ ನಿನ್ನ ಪಾಲಿಗೆ ವಂದಿಪೆ,ಶ್ರೀಲೋಲನ ಪದ ಕೀಲಾಲಜವ ತೋರಿ [ಅ.ಪ] ಚಿತ್ ಪ್ರಕೃತಿ ನಿತ್ಯ ಪ್ರಕೃತಿಯಭಿಮಾನಿಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ [೧] ಮಂತ್ರಗಳರಿಯೆ ಮಂದಮತಿಯೆ ನಾನುಸ್ವಾತಂತ್ರಯದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ [೨] ಗುಣ ರೂಪ ಕ್ರಿಯೆಗಳನಂತ ಲಕ್ಷಗುಣವಂತೆ ವಿಜಯವಿಠ್ಠಲನ ನಿಜಾಂಗನೆ [೩] pAlisenna iMdirAdEvi, pAlisennA [pa] pAlisenna ninna pAlige vaMdipe,SrIlOlana pada kIlAlajava tOri [a.pa] chit prakRuti nitya prakRutiyaBimAnisatpramANavAda kIrtane nuDisutta…
-
Neere Nee Kare Taare
Composer: Shri Purandara dasaru ನೀರೆ ನೀ ಕರೆತಾರೆ |ಮಾರಸುಂದರನ ಸುಕುಮಾರ ಶರೀರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ |೧| ಯಾದವರೆಲ್ಲ ಆದರಿಸಿದನವೇದವೇದಾಂತನ ಯಾದವಪ್ರಿಯನ |೨| ವರ ಗೌರಿ ಪುರದಲ್ಲಿ ವಾಸವಾಗಿಹನವರದ ಪುರಂದರವಿಟ್ಠಲರಾಯನ |೩| nIre nI karetAre |mArasuMdarana sukumAra sharIrana ||pa|| gollara maneyoLagidda pAlmosaramellane melluva vallaBa SrI hariya |1| yAdavarella AdarisidanavEdavEdAMtana yAdavapriyana |2| vara gauri puradalli vAsavAgihanavarada puraMdaraviTThalarAyana |3|
