Gurujagannatha dasaru

  • Rudra ennanu paliso

    Composer : Shri Gurujagannatha dasaru ರುದ್ರ ಎನ್ನನು ಪಾಲಿಸೋ ವೀರಭದ್ರಾ [ಪ] ರುದ್ರ ನೀ ಎನ್ನ ಹೃದ್ರೋಗ ಕಳೆದು ಸ –ಮುದ್ರ ನಿಲಯನ ಪದ ಭಕುತಿಯಾಛಿದ್ರವಿಲ್ಲದೆ ನೀಡ್ಯುಪದ್ರ-ವಳಿದು ಜ್ಞಾ –ನಾರ್ದ್ರ ಸ್ವಾಂತನ ಮಾಡೊ ಸುಭದ್ರ ಮೂರುತಿಯೆ [೧] ಕುಧ್ರಜಾಧವ ಕೇಳೋ ಕುಧ್ರ ಬೆನ್ನಲಿ ತಾಳಿ ಸ –ಮುದ್ರ ಮಥಿಸ್ಯಮೃತ ಸಾಧಿಸೀನಿದ್ರ ಹೀನರಿಗಿತ್ತ ಸುಭದ್ರೆಯಣ್ಣನ ಭಕುತಿಯುದ್ರೇಕವನೆ ಪಾಲಿಸಯ್ಯಾ ರುದ್ರಾ [೨] ಭೂತಿದಾಯಕನೆ ವಿಭೂತಿ ಭೂಷಣ ವಿ –ಧಾತನಾತ್ಮಜ ಹೃದಯ ವಾಸಾವಾತ ಗುರುಜಗನ್ನಾಥವಿಠ್ಠಲ ಪೌತ್ರಮಾತು ಲಾಲಿಸೊ ಮುಖ್ಯ ದೂತನಿವನೆಂದು…

  • Ninna dasanivane

    Composer: Shri Gurujagannatha dasaru ನಿನ್ನ ದಾಸನಿವನೇ ಅನನ್ಯ ರಕ್ಷಕನೇ [ಪ]ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರೆ ಧೊರೆಯೇ [ಅ.ಪ] ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರೆ ಪ್ರೇಮೀಘನ್ನವಿಪತ್ತಿವಗೆ ಬಹು ಬನ್ನ ಬಡಿಸುತಿಹುದೋ [೧] ಬಂದ ವಿಪತ್ತನ್ನು ಈಗ ಛಿಂದಿಸಿ ಬಿಡು ಬೇಗಬಂದಾದುರಿತಗಳೆಲ್ಲ ನೀ ನಿಂದ್ರಾದಂತೆ ಮಾಳ್ಪದೋ [೨] ಅನ್ಯರಿಗಾಸಾಧ್ಯವಿದು ಎನ್ನ ಮನಕೆ ತೋರುತಿಹುದುನಿನ್ನನುಳಿದು ಕಾಯ್ವೊರಾರಾಪಾನ್ನ ಜನಪಾಲಾ [೩] ಇನ್ನು ಸಂದೇಹವ್ಯಾಕೆ ಘನ್ನ ಮಹಿಮ ಬೇಡಿಕೊಂಬೆನಿನ್ನ ಸೇವಾ ನಿರುತವಿತ್ತು ಎನ್ನ ವಚನ ಲಾಲಿಸಯ್ಯಾ [೪] ಇವನ ಪೊರೆಯೇ ನಿನಗೆ ಖ್ಯಾತಿ ಭುವನದೊಳಗೆ…

  • Hari neene sarvottama

    Composer : Shri Gurujagannatha dasaru ಹರಿ ನೀನೆ ಸರ್ವೋತ್ತಮ ಸರ್ವಜ್ಞ ಸರ್ವಾಧಾರಹರಿ ನೀನೆ ಸರ್ವೋತ್ಪಾದಕ ಸರ್ವಪಾಲಕಹರಿ ನೀನೆ ಸರ್ವನಾಶಕ ಸರ್ವಪ್ರೇರಕಹರಿ ನೀನೆ ನಿಯಾಮಕ ನಿಯಮ್ಯನೋ [೧] ಹರಿ ನೀನೆ ಬಾಧ್ಯ ಭಾಧಕ ವ್ಯಾಪ್ಯ ವ್ಯಾಪಕಹರಿ ನೀನೆ ಕಾರ್ಯ ಕಾರಣಹರಿ ನೀನೆ ಕರ್ತೃಕರ್ಮಕ್ರಿಯಾ ಶಕ್ತಿಹರಿ ನೀನೆ ಧಾತೃ ದೇಯ ದಾನಪಾತ್ರನೊ [೨] ಹರಿ ನೀನೆ ಸಹಕಾರಿ ಸಹಿತ ಪೋಗುವೀಹರಿ ನೀನೆ ಮುಂಪೋಗಿ ಪರರೀಗೀಪರಿಹರಿ ನೀನೆ ಪ್ರೇರಿಸಿ ಕಾರ್ಯಮಾಳ್ಪಿಹರಿ ನೀನೆ ಸರ್ವದ ಸರ್ವತ್ರದಲಿ ನಿಂತೂ [೩] ಹರಿ ನೀನೆ…

error: Content is protected !!