-
Neene paliso enna
Composer : Shri Gurujagannatha dasaru ನೀನೆ ಪಾಲಿಸೊ ಎನ್ನ ಮಾರುತಿರಾಯ [ಪ] ನೀನೆ ಪಾಲಿಸೊ ಮಹಾನುಭಾವನೆ ಸದಾಜ್ಞನ ಭಕುತಿನಿತ್ತು ಮಾನಾದಿ ನೀ ವೇಗ [ಅ.ಪ] ನಿನ್ನ ಆಧಾರ ಲೋಕಾ ಜನರು ಸದಾನಿನ್ನ ಭಜಿಸುವೊರೇಕಾ ಪ್ರಕಾರದಿನಿನ್ನ ಸೇವಿಪರನೀಕಾ ಸಂಗಾವಿತ್ತುನಿನ್ನ ಧ್ಯಾನಿಪ ವಿವೇಕಾ ಮತಿಯನಿತ್ತುಮನ್ನಿಸೊ ಮಜ್ಜನಕಾನಿನ್ನಾ ಭಜಿಪರಿಗೆ ಅನ್ಯಾಲೋಕಗಳುಂಟೆಘನ್ನಾ ಹರಿಯ ಲೋಕವನ್ನೆ ಸೇರುವರಯ್ಯಾ [೧] ಸಂತತ ಪವಮಾನನು ನೀನೆ ಸರ್ವರಂತರ ದೊಳಗಿಹನು ಎಂದು ನಿನ್ನಾನಂತ ರೂಪಗಳನ್ನು ಭಜಿಸುವಗಂತು ಸುಜ್ಞಾನವನ್ನು ನೀಡುತ ಜನರಂತರದಲಿ ನೀನುನಿಂತು ಪಾಲಿಸಿ ಜೀವರಂತೆ ಗತಿಯನಿತ್ತುಕಂತುರಾದ್ಯರ ಸಂತತಿ…
-
Karunadi enna poriye
Composer : Shri Gurujagannatha dasaru ಕರುಣದಿ ಎನ್ನ ಪೊರಿಯೇ, ತೊರಮ್ಮ ಶಿರಿಯೇ |ಪ| ಶರಣರ ಪೊರೆಯುವ ಕರುಣಿಯೆ ನಿನ್ನಯಚರಣಯುಗಕೆ ನಾ ಶರಣು ಮಾಡಿದೆ ದೇವೀ |ಅ.ಪ| ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿಮಾರಾರಿ ಮುಖಸುರ ಸಂತ್ರಾಣಿವಾರವಾರಕೆ ನಿನ್ನ ಸಾರಿಭಜಿಪೆ ಎನ್ನದೂರ ನೋಡದೆ ಪೊರಿ ಭಾರ ನಿನ್ನದು ತಾಯಿ |೧| ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿಕಷ್ಟ ದಾರಿದ್ರ್ಯ ದುಃಖ ಹಾರಿಣೀದುಷ್ಟರ ಸಂಗದಿ ಕೆಟ್ಟಿಹ ಎನ್ನನುಥಟ್ಟನೆ ಕರುಣಾ ದೃಷ್ಟಿಲಿ ನೋಡಿ |೨| ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀಸೀತೆ ಸತ್ರಾಜಿತನ…
