Composer : Shri Gurugovinda dasaru
ಭಾಗಣ್ಣಾ | ಗುರು ನಿನ್ನ ಪೊಗಳುವೆನಯ್ಯಾ
ಕರುಣದಿ ಪಿಡಿ ಕೈಯ್ಯಾ | ಮುರಹರ ಕುವರಯ್ಯಾ [ಪ]
ನಗಧರ ಮೊಮ್ಮಗ ಮಗನೀ ಯೆನ್ನನು
ಖಗವರ ವಹ ಪ್ರಿಯ ಪಾಲಿಸೊ ಜೀಯಾ [ಅ.ಪ]
ಜ್ಞಾನ ಸದ್ಭಕ್ತಿ ವಿರಕ್ತಿಯ ಮೂರ್ತೀ |
ಸಾರುವೆ ತವಕೀರ್ತೀ ಗಾನ ಲೋಲನ
ಸೇವಿಸೆ ಜಾಗರ್ತೀ | ಮಾಡುವೆ ಶರಣಾರ್ತೀ |
ಘನ್ನ ಮಹಿಮ ಕಾರುಣ್ಯ ಮೂರುತೀ
ಎನ್ನವಗುಣ ಮರೆದು ಸಲಹೊ ವಿಶ್ವಂಭರ [೧]
ಕಾಲಜ್ಞ ಕಲಿ ಕಲ್ಮಷವನೆ ಕಳೆಯೊ |
ಮನದೋಳು ನೀ ಸುಳಿಯೋ,
ಆಲಸ್ಯಾವ್ಯಾತಕೊ ನೀ ಪೇಳೋ |
ಭಕುತಗೆ ನೀನೊಲಿಯೋ |
ಅಲವ ಭೋಧರ ಮತ ಜಲಧಿ
ವಿಹಾರನೆ ಸುಲಭದಿ ಸಾಧನ ಪಾಲಿಸೋ ಜೀಯ [೨]
ಅರುಹಲೇತಕೊ ಎನದುರಿತ ಸಮೂಹ |
ನೀನಲ್ಲವೆ ದುರಿತಹರ ತುರು ತನ್ನ ಕರುವನೆ, ಮರೆವುದೆ ಆಹಾ |
ಪಾಲಿಸು ತವನೇಹಾ,
ಸಿರಿಪತಿ ಗುರುಗೋವಿಂದ ವಿಠ್ಠಲನ
ಚರಣಾಂಬುಜದೊಳು ನಿಲಿಸೆಲೊ ಮನವಾ [೩]
BAgaNNA | guru ninna pogaLuvenayyA
karuNadi piDi kaiyyA | murahara kuvarayyA [pa]
nagadhara mommaga maganI yennanu
Kagavara vaha priya pAliso jIyA [a.pa]
j~jAna sadBakti viraktiya mUrtI |
sAruve tavakIrtI gAna lOlana
sEvise jAgartI | mADuve SaraNArtI |
Ganna mahima kAruNya mUrutI
ennavaguNa maredu salaho viSvaMBara [1]
kAlaj~ja kali kalmaShavane kaLeyo |
manadOLu nI suLiyO,
AlasyAvyAtako nI pELO |
Bakutage nInoliyO |
alava BOdhara mata jaladhi
vihArane sulaBadi sAdhana pAlisO jIya [2]
aruhalEtako enadurita samUha |
nInallave duritahara turu tanna karuvane, marevude AhA |
pAlisu tavanEhA,
siripati gurugOviMda viThThalana
caraNAMbujadoLu niliselo manavA [3]
Leave a Reply