Composer : Shri Gurugovinda dasaru on Shri Vishwottama Tirtharu
Shri Vishwottama Tirtharu – 1934-2007
Sode Vadiraja Matha
Aradhana- Bhadrapada Shukla Shashti
೧೪-೯-೭೯ ಶ್ರೀ ಸೋದೆ ಶ್ರೀಗಳವರನ್ನ ಹುಬ್ಬಳ್ಳಿಯಲ್ಲಿ
ಪಾದಪೂಜೆಗೆ ಆಹ್ವಾನಿಸಿ ಅವರು ಬಂದಾಗ ರಚನೆಯಾದದ್ದು |
ಸ್ವಾಗತವು ಸ್ವಾಗತವು ಯೋಗಿವರ್ಯಾ [ಪ]
ಯೋಗಿ ದಶಮತಿ ಭ್ರಾತೃ | ವಂಶ ಸಂಭೂತಾ [ಅ.ಪ]
ಭಾವಿ ವಾಯ್ವೆನಿಸಿದ್ದು | ಆ ವಿಪರು ಶೇಷಾದಿ
ದೇವ ಸದ್ವಂದ್ಯರೆನೆ | ಶ್ರೀ ವಾದಿರಾಜಾ |
ಆವ ವಂಶಾಬ್ಧಿಯಲಿ | ದಿವ್ಯ ಸೋಮನು ಎನಿಸಿ
ದೈವ ವಿಭವದಿ ಮೆರೆವ | ವಿಶ್ವೋತ್ತಮಾಖ್ಯಾ [೧]
ಉದಿತ ಭಾಸ್ಕರನಂತೆ | ಮೆರೆದು ಸದ್-ಬಾಲ್ಯದೊಳು
ಅದುಭುತವು ಎಂದೆನಿಪ | ಸುಧೆಯ ಪ್ರವಚನವಾ |
ಸದಯ ಯತಿ ಕಾಣ್ಯೂರು | ಪದದಲ್ಲಿ ಅಭ್ಯಾಸಿಸಿ
ಮುದದಿ ಮಂಗಳ ಮಾಡ್ದ ವಿಭವ ನಾ ನೋಡ್ದೇ [೨]
ನಂದಮುನಿಮತ ಸುಜನ | ವೃಂದದಲ್ಲಿ ಬೋಧಿಸುತ
ಇಂದಿಲ್ಲಿ ಸಿದ್ದಾರ್ಥಿ | ಸಂದ ಅಯ ನವಮೀ |
ಮಂದಿರಕೆ ಬಂದು ತವ | ನಂದ ಪದ ಪೂಜಿಸುತ
ಸುಂದು ಇತ್ತಿಹ ಗುರೂ | ಗೋವಿಂದ ಭಜಕಾ [೩]
14-9-79 SrI sOde SrIgaLavaranna hubbaLLiyalli
pAdapUjege AhvAnisi avaru baMdAga racaneyAdaddu |
svAgatavu svAgatavu yOgivaryA [pa]
yOgi daSamati BrAtRu | vaMSa saMBUtA [a.pa]
BAvi vAyvenisiddu | A viparu SEShAdi
dEva sadvaMdyarene | SrI vAdirAjA |
Ava vaMSAbdhiyali | divya sOmanu enisi
daiva viBavadi mereva | viSvOttamAKyA [1]
udita BAskaranaMte | meredu sad-bAlyadoLu
aduButavu eMdenipa | sudheya pravacanavA |
sadaya yati kANyUru | padadalli aByAsisi
mudadi maMgaLa mADda viBava nA nODdE [2]
naMdamunimata sujana | vRuMdadalli bOdhisuta
iMdilli siddArthi | saMda aya navamI |
maMdirake baMdu tava | naMda pada pUjisuta
suMdu ittiha gurU | gOviMda BajakA [3]

Leave a Reply
You must be logged in to post a comment.