Satyavara munipa

Composer : Shri Jagannatha dasaru

By Smt.Shubhalakshmi Rao

Shri Satyavara Thirtha: 1794 – 1797
Aradhana – Shravana Shuddha Saptami
Vrundavana – Santebidanooru
Ashrama Gurugalu : Sri Satyasandha Tirtharu
Ashrama Shishyaru : Sri Satyadharma Tirtharu
ಶ್ರೀಸತ್ಯಸಂಧಸಿಂಧೂತ್ಥಃ ಶ್ರೀಸತ್ಯವರಚಂದ್ರಮಾಃ |
ಪ್ರಾರ್ಥಿತಾರ್ಥಪ್ರದೋ ನಿತ್ಯಂ ಭೂಯಃ ಸ್ಯಾತ್ ದೃಷ್ಟಿಸಿದ್ಧಯೇ ||
श्रीसत्यसंधसिंधूत्थः श्रीसत्यवरचंद्रमाः ।
प्रार्थितार्थप्रदो नित्यं भूयः स्यात् दृष्टिसिद्धये ॥


ಸತ್ಯವರ ಮುನಿಪ ದಿಕ್ಷತಿಗಳಂತೆ
ನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ [ಪ]

ಸಿಂಧೂರವೇರಿ ದೇವೇಂದ್ರನಂತೊಪ್ಪುವನು
ವಂದಿಪ ಜನರಘಾಳಿವನ ಕೃಶಾನು
ಮಂದ ಜನರಿಗೆ ದಂಡ ಧರನಂತೆ ತೋರ್ಪ ಕ
ರ್ಮಂದಿಪನು ನರವಾಹನವೇರಿ ನಿರಋತಿಯೆನಿಪ [೧]

ಜ್ಞಾನಾದಿ ಗುಣದಿ ರತ್ನಾಕರನೆನಿಪ ಶೈವ
ಜೈನಾದಿಮತ ಘನಾಳಿಗೆ ಮಾರುತಾ
ದೀನ ಜನರಿಗೆ ಧನದನಾಗಿ ಸಂತೈಪ ವ್ಯಾ
ಖ್ಯಾನ ಕಾಲದಿ ಜಗತ್ತೀಶನೆಂದೊರೆವಾ [೨]

ಶ್ರೀಮದ್ರಮಾಪತಿ ಜಗನ್ನಾಥ ವಿಠ್ಠಲ
ಸ್ವಾಮಿ ಪಾದಾಬ್ಜ ಭಜನಾಸಕ್ತನಿವ
ಧೀಮಂತ ಗುರು ಸಾರ್ವಭೌಮ ಭೂ ಸುರನುತ
ಮಹಾ ಮಹಿಮ ಪೊಗಳಲೆನ್ನೊಶವೇ
ಕರುಣಾ ಸಿಂಧು [೩]


satyavara munipa dikShatigaLaMte
nityadali tOrpa nOLparige saMBramadi [pa]

siMdhUravEri dEvEMdranaMtoppuvanu
vaMdipa janaraGALivana kRuSAnu
maMda janarige daMDa dharanaMte tOrpa ka
rmaMdipanu naravAhanavEri niraRutiyenipa [1]

j~jAnAdi guNadi ratnAkaranenipa Saiva
jainAdimata GanALige mArutA
dIna janarige dhanadanAgi saMtaipa vyA
KyAna kAladi jagattISaneMdorevA [2]

SrImadramApati jagannAtha viThThala
svAmi pAdAbja BajanAsaktaniva
dhImaMta guru sArvaBauma BU suranuta
mahA mahima pogaLalennoSavE
karuNA siMdhu [3]

Leave a Reply

You might also like

error: Content is protected !!