Nambide nambide ambujaksha

Composer : Shri Helavanakatte Giriyamma

By Smt.Shubhalakshmi Rao

ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ
ನಂಬಿದೆ ನಂಬಿದೆ ನಂಬಿದೆನಯ್ಯ ||ಪ||

ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ
ಪೊರೆದ ಮಹಾನುಭಾವ ಮುರಹರ ನಿನ್ನ ||೧||

ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆ
ಭಕ್ತರಿಗೆಲ್ಲ ನೀನು ಮುಕ್ತಿ ಕೊಡುವೆ ಎಂದು ||೨||

ಧರೆಯೊಳು ರಾಜಿಪ ವರಹೆಳವನಕಟ್ಟೆ
ಗಿರಿಯೊಳು ನೆಲಸಿಹ ಪರಮಪುರುಷ ರಂಗ ||೩||


naMbide naMbide aMbujAkShane ninna
naMbide naMbide naMbidenayya ||pa||

moreyiDe draupadi tvaritadi pOguta
poreda mahAnuBAva murahara ninna ||1||

Saktane ninnayA BaktiyiM Bajisuve
Baktarigella nInu mukti koDuve eMdu ||2||

dhareyoLu rAjipa varaheLavanakaTTe
giriyoLu nelasiha paramapuruSha raMga ||3||

Leave a Reply

You might also like

error: Content is protected !!