Composer : Shri Purandara dasaru
ರಾಗ: ಹಿಂದೋಳ , ಖಂಡಛಾಪುತಾಳ
ಜಯತು ಕೋದಂಡರಾಮ ಜಯತು ದಶರಥರಾಮ॥ಪ॥
ಜಯತು ಸೀತಾರಾಮ ಜಯತು ರಘುರಾಮ ॥ ಅ ಪ ॥
ಜಯತು ಜಯತು ॥
ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲೆ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಬವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ॥ 1 ॥
ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋರಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ ॥ 2 ॥
ವಸುದೇವಸುತನೆನಿಸಿ ವನಿತೆಯರ ವ್ರತ ಕೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷ ಅಯೋಧ್ಯಪುರವಾಸ ರಘುರಾಮ ॥ 3 ॥
jayatu kOdaMDarAma jayatu daSaratharAma||pa||
jayatu sItArAma jayatu raGurAma || a pa ||
jayatu jayatu ||
tamadaityananu maDuhi maMdarAcala negahi
prItiyiMdale taMdu sakala BUtaLava
kShEtradiMdudbavisi moreyiDuva bAlakana
BItiyanu biDisi nerekAyda raGurAma || 1 ||
baliya dAnava bEDi nelava IraDi mADi
CaladiMda kShatriyara kulava hOrADi
lalanegOsuga baMda nevadiMda rAvaNana
talegaLanu ceMDADi mereda raGurAma || 2 ||
vasudEvasutanenisi vaniteyara vrata keDisi
eseva turagavanEri mallaranu savari
vasudheyoLu puraMdaraviThala nI pAlisai
bisajAkSha ayOdhyapuravAsa raGurAma || 3 ||
Leave a Reply