Composer : Shri Karpara Narahari dasaru on Shri Vadirajaru
ವಾದಿರಾಜ ಗುರುವೇ ಪಾದಾರಾಧಕ ಸುರತರುವೆ [ಪ]
ಮೋದವ ಕೊಡುವದು ನೀ ದಯದಿಂದಲಿ
ಸ್ವಾದಿನಿಲಯ ತವ ಪಾದಕೆ ನಮಿಸುವೆ [ಅ.ಪ]
ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ
ಮೋದಮುನಿಯ ಸುಮತೋದಧಿ ಚಂದಿರ
ವಾದಿ ಮದ ಗಜ ಮೃಗಾಧಿಪರೆನಿಸಿದ [೧]
ಯುಕ್ತಿ ಮಲ್ಲಿಕಾದೀ ಬಹುಸರಸೋಕ್ತಿ ಸಹಿತವಾಗಿ
ಭಕ್ತಿ ಪುಟ್ಟಿಸುವ ರುಕ್ಮಿಣೀಶ ವಿಜಯಾಖ್ಯ
ಗ್ರಂಥದಿ ಚಮತ್ಕೃತಿ ತೋರಿದ [೨]
ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ
ಯೋಗಿವರ್ಯ ಕವಿಗೇಯ ದಯಾಕರ
ಭೋಗಪುರೀಶನ ರೋಗವ ಕಳೆದಿ [೩]
ರಾಜರನ್ನು ಪೊರೆದಿ ಯತಿಕುಲ ರಾಜರೆನಿಸಿ ಮೆರೆದಿ
ವಾಜಿವದನ ಪದ ರಾಜೀವ ಯುಗಲ
ಪೂಜಿಸಿ ಜಗದಿ ವಿರಾಜಿಸಿದಂಥ [೪]
ಭೂತಭಯವ ಬಿಡಿಸಿ ಭಜಕರ ಪಾತಕ ಪರಿಹರಿಸಿ
ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ
ನಾಥನ ಪರಮ ಪ್ರೀತಿಯ ಪಡೆದಿ [೫]
vAdirAja guruvE pAdArAdhaka surataruve [pa]
mOdava koDuvadu nI dayadiMdali
svAdinilaya tava pAdake namisuve [a.pa]
mEdiniyoLu carisI janaroLagAdha mahimarenisi
mOdamuniya sumatOdadhi caMdira
vAdi mada gaja mRugAdhiparenisida [1]
yukti mallikAdI bahusarasOkti sahitavAgi
Bakti puTTisuva rukmiNISa vijayAKya
graMthadi camatkRuti tOrida [2]
BAgavatara prIyA namisuve vAgISara tanayA
yOgivarya kavigEya dayAkara
BOgapurISana rOgava kaLedi [3]
rAjarannu poredi yatikula rAjarenisi meredi
vAjivadana pada rAjIva yugala
pUjisi jagadi virAjisidaMtha [4]
BUtaBayava biDisi Bajakara pAtaka pariharisi
KyAta kArpara kShEtradi naramRuga
nAthana parama prItiya paDedi [5]
Leave a Reply