Composer : Shri Lakumeesha
Shri RaghuprEma tIrtharu: 1860-1943
Aradhane : Bhadrapada shukla pratipada
parampare: Had adorned the pItA of kUDali Arya akshObhya tIrtha maTa
and then relinquished and remained a biDi sanyAsigaLu.
vidyA gurugaLu: araLikaTTe narasimhAchArya of hattibeLagal
Ashrama gurugaLu: shri raghudAnta tIrtharu
ಚಿಂತಾಮಣಿಂ ಸ್ವಭಕ್ತಾನಾಂ ಕಲ್ಪವೃಕ್ಷಂಚ ಕಾಮದಂ |
ಸ್ವಾಮಿನಂ ತ್ವಾಂ ರಘುಪ್ರೇಮ ತೀರ್ಥಂ ವಂದೇ ಹ್ಯಭೀಷ್ಟದಂ ||
chiMtAmaNiM svabhaktAnAM kalpavRukShaMcha kAmadaM |
svAminaM tvAM raghuprEma teerthaM vaMdE hyabhIShTadaM ||
ಶ್ರೀ ರಘುಪ್ರೇಮ ಗುರುವರ್ಯರ ಪದ |
ವಾರಿಜಗಳ ಭಜಿಸೋ , ಸಂತತ ಸುಖಿಸೋ || ಪ ||
ಆರರ ಬಾಧೆಗಳ್ ದೂರೋಡಿಸಿ ಬಲು |
ಘೋರ ದುರಿತಗಳ್ ತರಿವಾ ಸುಖ ಈತ ಗರೆವಾ || ಅ.ಪ ||
ರಾಯಚೂಟಿಲಿ ಜನಿಸಿ ತ್ವರಿತದಿ |
ತಾಯಿಹೀನ ನೆನಿಸಿ |
ಮಾಯಗಾತಿ ಸಾಕು ತಾಯಿಯು ಗೋಳಿಡೆ ||
ಕಾಯ ಕ್ಲೇಶ ಪಟ್ಟಾ ಹರಿ ಮೊರೆಯಿಟ್ಟಾ || ೧ ||
ವೆಂಕಟೇಶನೊರದಿ ಜನ್ಮತಾಳಿ |
ವೆಂಕಟ ನಾಮದೀ |
ಸಂಕಟ ನಾನಾ ಕಂಟಕದಲಿ | ವೈ |
ಕುಂಠನ ಕೃಪೆ ಪಡೆದಾ ವ್ರತಧಾರಿಯಾದ || ೨ ||
ಸಕಲ ಕ್ಷೇತ್ರ ಚರಿಸೀ ತೀರ್ಥಾದೀ |
ಬಕವೈರಿ ಶಾಸ್ತ್ರ ಗ್ರಹಿಸೀ |
ಮುಕುತಿಯ ಶಾಶ್ವತ ಸುಖಕೇ ಸೇವಿಸೇ |
ಅಖಿಲ ಜೀವೇಶನೊಲಿದಾ ಹಂಪೆಲಿ ನಲಿದಾ || ೩ ||
ಹತ್ತಿಬೆಳೆಗಲ್ಗೆ ಬಂದೂ ಅರಳೀಕಟ್ಟೀ |
ಉತ್ತಮಾರ್ಯರಲಿ ನಿಂದೂ |
ಭಕ್ತಿಲಿ ಇವರ ನಿತ್ಯವೂ ಸೇವಿಸೇ |
ನಿತ್ಯ ತೃಪ್ತನೊಲಿದಾ ಯದುಗಿರಿಗೆ ಬಂದಾ || ೪ ||
ತೋಷದಿ ಪತ್ನಿಯ ಕೂಡೀ ಸಂತತ |
ಭಾಸುರ ವ್ರತ ನೇಮ ಮಾಡಿ |
ಭಾಸುರರಿಗೆ ದಿವ್ಯ ವಾಸಕೆ ಗೃಹ ವಸ್ತು |
ರಾಶಿ ಸರ್ವಸ್ವ ನೀಡ್ದಾ ಹರಿಕೃಪೆ ಪಡೆದಾ || ೫ ||
ಆದವಾನಿಯಲ್ಲಿ ಸೀತಾರಾಮರ |
ಮೋದದಿ ಸ್ಥಾಪಿಸಿಲ್ಲೀ |
ಸಾಧುವರ್ಯ ರಘುದಾಂತ ತೀರ್ಥರಿಂದಾ |
ಅದಕರೋದ್ಭವನೀತಾ ಮಳಖೇಡದೀತಾ || ೬ ||
ಸಕಲ ಸುಖವ ಗರೆವಾ ಇವರನು ನಂಬಲು |
ಲಕುಮೀಶನೇ ಒಲಿವಾ |
ಮುಕುತಿಯ ಪಥ ತೋರಿ ವಿಕಸಿತ ಮನವಿತ್ತು |
ಯುಕುತಿ ಧ್ಯಾನವೀವ ಭಕುತರ ಪೊರೆವಾ || ೭ ||
SrI raGuprEma guruvaryara pada |
vArijagaLa BajisO , saMtata suKisO || pa ||
Arara bAdhegaL dUrODisi balu |
GOra duritagaL tarivA suKa Ita garevA || a.pa ||
rAyacUTili janisi tvaritadi |
tAyihIna nenisi |
mAyagAti sAku tAyiyu gOLiDe ||
kAya klESa paTTA hari moreyiTTA || 1 ||
veMkaTESanoradi janmatALi |
veMkaTa nAmadI |
saMkaTa nAnA kaMTakadali | vai |
kuMThana kRupe paDedA vratadhAriyAda || 2 ||
sakala kShEtra carisI tIrthAdI |
bakavairi SAstra grahisI |
mukutiya SASvata suKakE sEvisE |
aKila jIvESanolidA haMpeli nalidA || 3 ||
hattibeLegalge baMdU araLIkaTTI |
uttamAryarali niMdU |
Baktili ivara nityavU sEvisE |
nitya tRuptanolidA yadugirige baMdA || 4 ||
tOShadi patniya kUDI saMtata |
BAsura vrata nEma mADi |
BAsurarige divya vAsake gRuha vastu |
rASi sarvasva nIDdA harikRupe paDedA || 5 ||
AdavAniyalli sItArAmara |
mOdadi sthApisillI |
sAdhuvarya raGudAMta tIrthariMdA |
adakarOdBavanItA maLaKEDadItA || 6 ||
sakala suKava garevA ivaranu naMbalu |
lakumISanE olivA |
mukutiya patha tOri vikasita manavittu |
yukuti dhyAnavIva Bakutara porevA || 7 ||

Leave a Reply
You must be logged in to post a comment.