Enu dhayaro jagadi

Composer : Shri Shyamasundara dasaru

By Smt.Shubhalakshmi Rao

Shri RaghuprEma tIrtharu: 1860-1943
Aradhane : Bhadrapada shukla pratipada
parampare: Had adorned the pItA of kUDali Arya akshObhya tIrtha maTa
and then relinquished and remained a biDi sanyAsigaLu.
vidyA gurugaLu: araLikaTTe narasimhAchArya of hattibeLagal
Ashrama gurugaLu: shri raghudAnta tIrtharu
ಚಿಂತಾಮಣಿಂ ಸ್ವಭಕ್ತಾನಾಂ ಕಲ್ಪವೃಕ್ಷಂಚ ಕಾಮದಂ |
ಸ್ವಾಮಿನಂ ತ್ವಾಂ ರಘುಪ್ರೇಮ ತೀರ್ಥಂ ವಂದೇ ಹ್ಯಭೀಷ್ಟದಂ ||
chiMtAmaNiM svabhaktAnAM kalpavRukShaMcha kAmadaM |
svAminaM tvAM raghuprEma teerthaM vaMdE hyabhIShTadaM ||


ಏನು ಧನ್ಯರೋ ಜಗದಿ ಎಂಥ ಮಾನ್ಯರೋ |
ಕ್ಷೋಣಿ ವಿಬುಧ ಶ್ರೇಣಿ ನಮಿತ,
ಮೌನಿ ಶ್ರಿ ರಘುಪ್ರೇಮ ತೀರ್ಥರು [ಪ]

ಕಲಿಯುಗದಿ ಕ್ರತುವಗೈದು ಇಳೆಯ,
ಜನಕ ಸಾಧ್ಯವೆಂದು,
ತಿಳಿದು ನಾಖದಿಳಿದು ಬಂದ,
ಕುಲಶ ಪಾಣಿಯಂತೆ ತೋರ್ಪರು (೧)

ಧೂರ್ತರಿಂದ ದೂರವಿದ್ದು |
ಸ್ವಾರ್ಥ ರಹಿತರಾಗಿ | ಸಕಲ,
ತೀರ್ಥಕ್ಷೇತ್ರ ಚರಿಸಿ ಜನ್ಮ,
ಸಾರ್ಥಕತೆನಿಸಿದಂತ ಯತಿಯು (೨)

ಧನ ಧಾನ್ಯ ಭರಿತ ಸದನ,
ತೃಣ ಸಮಾನವೆನಿಸಿ ಮುದದಿ |
ವಿನಯ ಶೀಲ ದ್ವಿಜರಿಗಿತ್ತು,
ಮುನಿಯೆನಿಸಿದ ಘನ ವಿರಕ್ತರು (೩)

ಚತುರಾಶ್ರಮ ವ್ರತದ ನೇಮ,
ಸತತಾಚರಿಸುತಲಿ | ಶಿಷ್ಯ,
ತತಿಗೆ ತತ್ವ ಬೋಧಾಮೃತವ,
ಹಿತದಿಗರೆದು ಪೊರೆದ ಕಾರಣ (೪)

ಶ್ರೀಮಧ್ವಸುಮತ ವಾರಿಧಿ,
ಸೋಮನೆನಿಸಿ | ಸತತ ಜಿತ,
ಕಾಮರಾಗಿ ಕಠಿಣ ತಪದಿ |
ಶಾಮಸುಂದರನೊಲಿಸಿದವರು (೫)


Enu dhanyarO jagadi eMtha mAnyarO |
kShONi vibudha SrENi namita,
mauni Sri raGuprEma tIrtharu [pa]

kaliyugadi kratuvagaidu iLeya,
janaka sAdhyaveMdu,
tiLidu nAkhadiLidu baMda,
kulaSa pANiyaMte tOrparu (1)

dhUrtariMda dUraviddu |
svArtha rahitarAgi | sakala,
tIrthakShEtra carisi janma,
sArthakatenisidaMta yatiyu (2)

dhana dhAnya Barita sadana,
tRuNa samAnavenisi mudadi |
vinaya SIla dvijarigittu,
muniyenisida ghana viraktaru (3)

caturASrama vratada nEma,
satatAcarisutali | SiShya,
tatige tatva bOdhAmRutava,
hitadigaredu poreda kAraNa (4)

SrImadhvasumata vAridhi,
sOmanenisi | satata jita,
kAmarAgi kaThiNa tapadi |
SAmasuMdaranolisidavaru (5)

Leave a Reply

You might also like

error: Content is protected !!