Vadirajane ninna

Composer : Shri Venugopala vittala on Shri Vadirajaru

By Smt.Shubhalakshmi Rao

ವಾದಿರಾಜನೆ ನಿನ್ನ ಪಾದಕ್ಕೆರಗಿ ನಾ
ಮೋದದಿಂ ಬೇಡುವೆ ಮಾಧವನ ತೋರೊ || ಪ.||

ಸಕಲ ವೇದ ಪುರಾಣ ಶಾಸ್ತ್ರಗಳೆಲ್ಲಾ
ಪ್ರಕಟಿಸಿದೆ ಕನ್ನಡದಿ ಪ್ರೇಮದಿಂದ
ನಿಖಿಳ ಜನರು ತಾವಾನಕ ದುಂದುಭಿ ಸುತನ
ಭಕುತಿಯ ಪಡೆದು ಮೇಣ್ಮುಕುತಿಯೈದಲಿ ಎಂದು ||೧||

ಗಣನೆ ಇಲ್ಲದ ಕೀರ್ತನೆ ಸುಳಾದಿಗಳನ್ನು
ಮನವೊಲಿದು ಮಾಡಿದ್ದು ಜನರು ಪಠಿಸಿ
ವನಜನಾಭನ ಕರುಣವನು ಪಡೆದು
ತಾವನುಭವಿಸ-ಲಾನಾಂದ-ವೆನುತಲಿ ||೨||

ನಿನ್ನ ನೆನೆಯೆ ಧನ್ಯ ನಿನ್ನ ಪಾಡಲು ಮಾನ್ಯ
ನಿನ್ನ ಕೊಂಡಾಡಲು ಪಾಪ ಶೂನ್ಯ
ನಿನ್ನವನೆನೆ ವೇಣುಗೋಪಾಲ ವಿಠ್ಠಲ
ಮನ್ನಿಸಿ ಸದ್ಗತಿ ಪಾಲಿಪ ಮುದದಿ ||೩||


vAdirAjane ninna pAdakkeragi nA
mOdadiM bEDuve mAdhavana tOro || pa.||

sakala vEda purANa shAstragaLellA
prakaTiside kannaDadi prEmadiMda
nikhiLa janaru tAvAnaka duMdubhi sutana
bhakutiya paDedu mENmukutiyaidali eMdu ||1||

gaNane illada kIrtane suLAdigaLannu
manavolidu mADiddu janaru paThisi
vanajanAbhana karuNavanu paDedu
tAvanubhavisa-lAnAMda-venutali ||2||

ninna neneye dhanya ninna pADalu mAnya
ninna koMDADalu pApa shUnya
ninnavanene vENugOpAla viThThala
mannisi sadgati pAlipa mudadi ||3||

Leave a Reply

You might also like

error: Content is protected !!