Composer : Shri Jagannatha dasaru on Shri Vadirajaru
ವಾದಿರಾಜ ಅಸ್ಮದ್ಗುರು ವಾದಿರಾಜ [ಪ]
ವಾದಿರಾಜ ತವ ಪಾದಕಮಲಕಭಿ
ವಾದನ ಮಾಳ್ಪೆ ಸನ್ಮೋದವನೀಯೊ [೧]
ಸಾರಿದರಿಗೆ ಕಲ್ಪ ಭೂರುಹ ದಂತೆ
ಮನೋರಥ ಸಲ್ಲಿಸು ಸೂರಿಗಳರಸೇ [೨]
ಭೇದ ಪಂಚಕವನು ಸಾಧಿಸಿ ಕುಮತ
ಕುವಾದಿಗರ್ವ ಅತಿಭೇದನ ಗೈದೆ [೩]
ದೇಶಿಕವರ್ಯ ವಾಗೀಶ ಕುವರನೆ
ಕ್ಲೇಶ ಹರಿಸೊ ಅಘನಾಶನ ಗೈದು [೪]
ನಿಗಮಾನುತ ಸಿರಿ ಜಗನ್ನಾಥವಿಠ್ಠಲನ
ಸುಗುಣಗಳನುದಿನ ಪೊಗಳಿ ಹಿಗ್ಗುವ [೫]
vAdirAja asmadguru vAdirAja [pa]
vAdirAja tava pAdakamalakaBi
vAdana mALpe sanmOdavanIyo [1]
sAridarige kalpa BUruha daMte
manOratha sallisu sUrigaLarasE [2]
BEda paMcakavanu sAdhisi kumata
kuvAdigarva atiBEdana gaide [3]
dESikavarya vAgISa kuvarane
klESa hariso aGanASana gaidu [4]
nigamAnuta siri jagannAthaviThThalana
suguNagaLanudina pogaLi higguva [5]

Leave a Reply
You must be logged in to post a comment.