-
Vishwatma paripoorna
Composer : Shri Mahipati Dasaru ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇವಿಶ್ವವಂದಿತ ವಿಶ್ವನಾಥ ನೀನೆ ||ಪ|| ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆವಿಶ್ವನಿರ್ಮಿತ ವಿಶ್ವಪಾಲ ನೀನೆವಿಶ್ವವುದ್ಧರಿಸುವ ವಿಶ್ವಪಾವನ್ನನೆವಿಶ್ವಲಿಹ ವಿಶ್ವೇಶ್ವರನು ನೀನೆ ||೧|| ವಿಶ್ವತೋಚಕ್ಷು ನೀ ವಿಶ್ವತೋಮುಖ ನೀನೆವಿಶ್ವತೋಬಾಹು ಸಾಕ್ಷಾತ್ ನೀನೆವಿಶ್ವಾಂತ್ರಸೂತ್ರನೆ ವಿಶ್ವಂಭರನು ನೀನೆವಿಶ್ವರಹಿತ ವಿರಾಜಿತನು ನೀನೆ ||೨|| ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆವಿಶ್ವಾನಂದ ಘನಮಹಿಮ ನೀನೇವಿಶ್ವಾತ್ಮಹಂಸ ಮಹಿಪತಿ ಗುರುನಾಥನೆವಿಶ್ವಾಸಲೋಲ ವಿಶ್ವೇಶ ನೀನೆ ||೩|| viSvAtma paripUrNa viSvavyApaka nInEviSvavaMdita viSvanAtha nIne ||pa|| viSvAtmadalyADuva viSvasvarUpavu nIneviSvanirmita viSvapAla nIneviSvavuddharisuva viSvapAvannaneviSvaliha…
-
Bhaya nivaranavu – Keshava nama
Composer : Shri Mahipati dasaru – Keshava nama ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ | ಕ್ಲೇಶಪಾಶವು ಕತ್ತರಿಸಿ ದೋಷ ನಾಶವನು ಗೈಸಿಪೋಷಿಸುವ ಕೇಶವ ನಿಮ್ಮ ನಾಮ 1 ನರಕ ಘೋರದ ಘಟವೆಂಬ ನರಜನ್ಮದುರ್ಘಟತಾರಿಸುವ ನಾರಾಯಣ ನಿಮ್ಮ ನಾಮ 2 ಮದಮತ್ಸರವ ಜರಿಸಿ ಭೇದಾಭೇದವು ಹರಿಸಿಸದ್ಗೈಸುತಿಹ ಮಾಧವ ನಿಮ್ಮ ನಾಮ 3 ಗೋವಿಸಿಹ ವಿದ್ಯದ ಮಾಯ ಮೋಹವನಳಿಸಿಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4 ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿದೃಷ್ಟಾಂತದಲಿ ಹೊರೆವ ವಿಷ್ಣು…
-
Neene enagadhari
Composer : Shri Mahipati dasaru ನೀನೆ ಎನಗಾಧಾರಿ ಶ್ರೀಹರಿ |ನೀನೆ ಎನಗಾಧಾರಿ |ಪ| ಸಕಲ ಸುಖವ ಬೀರುವ ಉದಾರಿಭಕ್ತ ವತ್ಸಲ ಮುಕುಂದ ಮುರಾರಿ [೧] ಅಂತರ್ಬಾಹ್ಯದಲೀಹ ಶ್ರೀ ನರಹರಿಕಂತುಪಿತನೆ ಪೀತಾಂಬರಧಾರಿ [೨] ಹಿತದಾಯಕ ನೀನೆವೆ ಪರೋಪರಿಪತಿತಪಾವನ ಮಹಿಪತಿ ಸಹಕಾರಿ [೩] nIne enagAdhAri SrIhari |nIne enagAdhAri |pa| sakala suKava bIruva udAriBakta vatsala mukuMda murAri [1] aMtarbAhyadalIha shrI naraharikaMtupitane pItAMbaradhAri [2] hitadAyaka nIneve parOparipatitapAvana mahipati sahakAri [3]
