-
Nadedu baa ma
Composer : Shri Prasannavenkata dasaru ನಡೆದು ಬಾಮ್ಮ ಲಕುಮೀ ನಿನಗೆನಡೆಮುಡಿಯ ಹಾಸುವೆ |ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ||ಅ.ಪ.|| ಮರುಗ,ಮಲ್ಲಿಗೆ,ಧವನ,ಸಂಪಿಗೆ ಸರಗಳನ್ನೇ ಪೂಜಿಪೆ |ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ ||೧|| ಹೀರೆ,ಕುಂಬಳ ಕಾಯಿ,ಪಡವಳ ಶಾಖ ಪಾಕವ ಮಾಡುವೆ |ಘನ್ನ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು ||೨|| ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ ಲಕ್ಷ್ಮೀ ನಿನಗೆ |ದಿಟ್ಟ ಪ್ರಸನ್ನ ವೆಂಕಟ ವಿಠಲನ ಪಟ್ಟದ ರಾಣಿಯೆ ||೩|| naDedu bAmma lakumI ninagenaDemuDiya hAsuve…
