-
Kayabekenna lakumi
Composer : Shri Amba bai ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿಕಾಯಬೇಕೆನ್ನ ಲಕುಮಿ || ಪ || ಕಾಯಬೇಕೆನ್ನ ನೋಯುವೆ ಭವದಲಿಕಾಯಜಪಿತನನು ಕಾಯದಿ ತೋರಿ || ಅ.ಪ || ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ |ಪಾರುಗಾಣಿಸೆ ಜನನಿಯೆ ||ತೋರೆ ನಿನ್ನ ಪತಿಯ ಪಾದವ ಮನದೊಳು |ಸೇರಿಸೆ ಸುಜನರ ಸಂಗದೊಳೀಗ || ೧ || ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ |ಮುಕ್ತಿಮಾರ್ಗವ ನೀನೀಯೆ ||ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ |ಮುಕ್ತರೊಡೆಯನೊಳು ಭಕ್ತಿಯ ನೀಡೆ…
