-
Entha Cheluvage
Composer : Shri Purandara dasaru ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ |ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನಾಗಲೆ ನೋಡಮ್ಮಮ್ಮ [ಅ.ಪ] ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಕೊರಳೊಳು ರುಂಡ ಮಾಲೆಯ ಧರಿಸಿದ ಉರಗ ಭೂಷಣನ ನೋಡಮ್ಮಮ್ಮ |೧| ತಲೆಯೆಂಬೊದು ನೋಡಿದರೆ ಜಟೆ ಹೊಳೆಯುತಲಿದೆ ನೋಡಮ್ಮಮ್ಮಹಲವು ಕಾಲ ತಪಸಿ ರುದ್ರನ ಮೈಬೂದಿಯು ನೋಡಮ್ಮಮ್ಮ |೨| ಭೂತ ಪ್ರೇತ-ಪಿಶಾಚಿಗಳೆಲ್ಲವು ಪರಿವಾರವು ನೋಡಮ್ಮಮ್ಮ |ಈತನ ನಾಮವು ಒಂದೇ ಮಂಗಳ ಮುಪ್ಪುರ ಹರನ ನೋಡಮ್ಮಮ್ಮ |೩| ಮನೆಯೆಂಬೊದು ಸ್ಮಶಾಣವು ನೋಡೇ…
