-
Dasana madiko enna
Composer : Shri Purandara dasaru ದಾಸನ ಮಾಡಿಕೊ ಎನ್ನ ಸ್ವಾಮಿಸಾಸಿರನಾಮದ ವೆಂಕಟರಮಣ [ಪ] ದುರು ಬುದ್ಧಿಗಳನೆಲ್ಲ ಬಿಡಿಸೋನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋಚರಣ ಸೇವೆ ಎನಗೆ ಕೊಡಿಸೋಅಭಯ ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ [೧] ದೃಢ ಭಕ್ತಿ ನಿನ್ನಲಿ ಬೇಡಿನಾ ಅಡಿಗೆರಗುವೆನಯ್ಯ ಅನುದಿನ ಪಾಡಿಕಡೆಗಣ್ಣಲೇಕೆನ್ನ ನೋಡಿ ಬಿಡುವೆಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ [೨] ಮೊರೆಹೊಕ್ಕವರ ಕಾವ ಬಿರುದುಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದುದುರಿತಗಳೆಲ್ಲವ ತರಿದು ಸಿರಿಪುರಂದರ ವಿಠಲ ಯೆನ್ನನ್ನು ಪೊರೆದು [೩] dAsana mADiko…
