-
Kadegannali nee
Composer : Shri Helavanakatte Giriyamma ಕಡೆಗಣ್ಣಲಿ ನೀ ನೋಡದಿರೆನ್ನಯ್ಯ |ಬಿಡ ಬೇಡವೊ ಕೈಯ್ಯ | ಬಡವರ ಬಂಧು ಬಹು ಕೃಪಾಸಿಂಧು |ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ || ಪ || ಶತ ಅಪರಾಧವ ಮಾಡಿದೆನಯ್ಯ |ಸೇರಿದೆ ನಾ ನಿನ್ನ ಬೆನ್ನಾಅತಿ ಪಾತಕಿ ಅಜಾಮಿಳನ ಉದ್ಧರಿಸಿದೆ |ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ || ೧ || ನೆಲೆಗಾಣದೆ ನಾನಾ ಪರಿ ಚಿಂತೆಗೆ |ಒಳಗಾದೆನೊ ನಾ ಹೀಗೆಬಳಲಿಸ ಬ್ಯಾಡವೊ ಭಕ್ತ ಕುಟುಂಬಿ |ನಳಿನದಳಾಂಬಕ ನೀ ಸಲಹೆನ್ನನು || ೨ ||…
-
Shravana Sampat Shukravara haadu
Composer : Shri Harapanahalli Bheemavva ರುದ್ರಕುಮಾರನ ಚರಣಕೆ ವಂದನೆ ಮಾಡಿವಿದ್ಯಾಭಿಮಾನಿ ವಾಣಿಯಸುಪದ್ಮ ಪಾದಗಳಿಗೆ ಎರಗಿ ನಾ ಪೇಳುವೆಶುದ್ದಾಗಿ ಕೊಡು ಮತಿಯ (೧) ಶ್ರಾವಣಮಾಸ ಶುಕ್ಕುರುವಾರ ಶುಭಮುಹೂರ್ತಕಾಲದಿ ಕಮಲಾಕ್ಷಿಯನುಆಲಯದೊಳಗೆ ಇಟ್ಟು ಆದರದಿಂದ ಪೂಜಿಸಿಬೇಡಿದ ಅಭೀಷ್ಟ ನೀಡುವಳು (೨) ಇರುತಿರಲು ಒಂದು ಪಟ್ಟಣದಲ್ಲಿ ರಾಜನುತನಯರು ಇಲ್ಲದ ಕಾರಣವುವಿವಾಹದ ಉತ್ಸವಕೆಂದು ತೆರಳೋ ಪತಿಯ ಕಂಡುತೆಗೆದಿಟ್ಟಳು ಆತನ ಆಯುಧವ (೩) ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದುಅಟ್ಟಿಹ ತನ್ನ ದೂತರನುನೆಟ್ಟನೆ ಎರಡು ಕಾಲು ಚಾಚಿ ಕುಳ್ಳಿರಲು ಆಗತಟ್ಟನೆ ದಾಟಿ ನಡೆದನು (೪) ಮೂರು…
-
Shravana Sampat Shanivara haadu
Composer : Shri Harapanahalli Bheemavva ಗಜವದನನ ಪಾದಾಂಬುಜಗಳಿಗೆರಗುವೆ |ಅಜನರಸಿಗೆ ನಮಸ್ಕರಿಸಿ |ತ್ರಿಜಗವಂದಿತ ಲಕ್ಷ್ಮೀ ನಾರಾಯಣ ಸ್ವಾಮಿಯ |ನಿಜ ಪತ್ನಿ ಕಥೆಯ ವರ್ಣಿಸುವೆ || ೧ || ಅರಸನ ಸೇವೆ ಮಾಡುತೊಂದು ಪಟ್ಟಣದೊಳುಇರುತಿದ್ದ ಸೋಮೇಶ ಭಟ್ಟ |ಹರುಷದಿಂದಲಿ ಸೊಸೆಯರು ಗಂಡು ಮಕ್ಕಳುಭರಿತರಾದರು ಸುಖದಿಂದ || ೨ || ಆ ಮಹಾ ಕ್ಷೀರ ಸಾಗರದಲ್ಲಿ ಜನಿಸಿದ |ಶ್ರೀಮಹಾಲಕ್ಷ್ಮೀ ದೇವಿಯನು |ನೇಮ ದಿಂದಿಂದಿಟ್ಟು ನಿಷ್ಟೇಯಲಿ ಸೋಮೇಶನು |ತಾ ಮಹಾ ಸಂಭ್ರಮ ದಿಂದ || ೩ || ಚಾರು ಪರಿಮಳ ಅರಿಶಿಣ…