Haridasa seva

  • Vyasaraya Asmadguru

    Composer : Shri Gurujagannatha dasaru ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ |ಪ| ವ್ಯಾಸರಾಯಾ ತವೋಪಾಸನ ಮಾಳ್ಪವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ |ಅ.ಪ| ದಾಸನಾಮಕ ದ್ವಿಜ ದೇಶ ಮುಖನ ಮನಿಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ |೧| ಶ್ರೀಪಾದರಾಯರು ಈ ಪರಿ ನಿನ್ನನುಕಾಪಾಡಿ ನವ ವರ್ಷ ಭೂಪತಿ ಮಾಡಿದರೋ |೨| ದಶಮ ವತ್ಸರದಲ್ಲಿ ಅಸಮ ಜ್ಞಾನಿ ಎನಿಸಿವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ |೩| ಅಲವಭೋಧರ ಮತ ಜಲಧಿ ನಿಶಾಕರಕಲೆಯಂತೆ ದಿನದಿನದಲಿ ವೃದ್ಧನಾದೆ ನೀ |೪| ಚಂಪಕ ತರು ಮುಖ್ಯ ಕಂಪಿತ…

    ,
  • Vasudevana charana

    Composer : Shri Purandara dasaru ವಾಸುದೇವನ ಚರಣವನಜ ವಂದಿಪನೆ , ಸಂ-ನ್ಯಾಸ ರತ್ನಾಕರನೆ ವ್ಯಾಸಮುನಿರಾಯ [ಪ] ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ-ವಾದಿ ಫಣಿ ಗರುಡ ತತ್ವಾದಿರಚಿತವಾದಿ ಭಯಂಕರ ದುರ್ವಾದಿ ಕೋಲಾಹಲವಾದಿ ಮಸ್ತಕ ಶೂಲ ಮಧುರ ಗುಣಶೀಲ [೧] ವೈಷ್ಣವೋತ್ತಮನೆ ಸದ್ವೈಷ್ಣವ ವ್ರಜಾನಂದವೈಷ್ಣವಾಗಮ ಭರಿತ ವೈಷ್ಣವ ಸುಪ್ರೀತವೈಷ್ಣವ ಕಮಲ ಸೂರ್ಯ ವೈಷ್ಣವ ಕುಮುದ ಚಂದ್ರವೈಷ್ಣವ ಕುಲೋತ್ಕೃಷ್ಟ ವೈಷ್ಣವ ಶಿಷ್ಟ [೨] ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮಹರಿಕೃಷ್ಣ ಚರಣ ಸರಸೀರುಹ ಭೃಂಗಗುರು ಪುರಂದರ ವಿಠ್ಠಲನೆ ಪರದೈವವೆಂ-ದರುಹಿ ಸುಜನರ ಪೊರೆವ…

    ,
  • Yogi Vyasarayaremba

    Composer : Shri Vijayeendra tirtharu ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘಬೇಗ ವಿಷ್ಣುಪದವ ತೋರಿಸುತ್ತ ಬಂತಿದೆಕೊ [ಪ] ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತವಾಯುಗತಿಯಂತೆ ಗಮಿಸುತಲಿಹೇಯ ಕಾಮಾದಿಗಳೆಂಬ ರಜವನಡಗಿಸುತನಾಯಕನುಪೇಂದ್ರ-ನಾಜ್ಞೆಯ ಪಡೆದು [೧] ಅಂಗಜನಯ್ಯನೆ ಪರನೆಂದು ಘುಡಿಘುಡಿಸುತ್ತಕಂಗಳೆಂಬ ಮಿಂಚನೆ ನೆರಹಿ ಲೋಕದಿಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯಭಂಗಿಸಿ ಸುರಪಥವ ತೋರಿಸುತ್ತ [೨] ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆಬೇರು ಬಿಡಿಸಿ ಹರಿಕಥೆಯೆಂಬ ಮಳೆಗರೆದುನೆರೆ ಶಿಷ್ಯ ಮನವೆಂಬ ಕೆರೆ ತುಂಬಿಸಿಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು [೩] yOgi vyAsarAyareMba vicitra mEGabEga viShNupadava tOrisutta…

error: Content is protected !!