-
Enu pelali ninna
Composer : Shri Gurugopala vittala ಏನು ಪೇಳಲಿ ನಿನ್ನ ಆಗಮನವನು |ಆನಂದಮಯ ಭುವನ ಪಾವನ ದಿವಿಜಗಂಗೆ | ಪ | ಮೊದಲು ನೀ ಹಿರಣ್ಯ ಹರಣಂಘ್ರಿಯಿಂದುದುಭವಿಸಿ |ತದನಂತರದಿ ಸುರರಾಧಿತನ್ನ |ಉದಕ ಪಾತ್ರಿಯಲಿದ್ದು ಆತ ಕರದಿ ಜರಿದು |ಮುದದಿಂದ ಬ್ರಹ್ಮಾಘತನಯ ಶಿರಕಿಳಿದೆ | ೧ | ಗುರುತಲ್ಪಕನ್ನ ಸಂಯೋಗವನು ಮಾಡಿ ನೀ |ಗರಳ ಕಂದರನ ಜಡೆಯಿಂದಲಿಳಿದು |ಧರಿಯೊಳಗೆ ಕಪಿಲ ದ್ರೋಹಿಗಳ ಸ್ಪರುಶವ ಮಾಡಿ |ಹರುಷದಲಿ ಜಡಧಿ ಸಂಗವ ಮಾಡಿದೆಲೆ ದೇವಿ |೨| ಪತಿತ ಜಡಮತಿ ಕುಗತಿಗಳ ನೋಡಿದದರಿಂದ…
-
Bhageerathiye bhava nashi
Composer : Shri Gopaladasaru ಭಾಗೀರಥಿಯೆ ಭವನಾಶಿ ಸಾಗರನಾ ಅರಸಿ |ಭಾಗವತ ಜನ ಪೋಷಿ |ಬಾಗುವೆ ನಿನ್ನ ಚರಣಗಳಿಗೆನ್ನಭವ |ರೋಗ ನೀಗೋದಕೂಪಾಯೋಗವ ತೋರಿಸು | ಪ | ಲೋಕ ಪಾವನಿ ಕಲ್ಯಾಣಿ ಶಾಂತನ್ನ ರಾಣಿ |ಕೋಕಿಲವಾಣಿ ಶುಭಗುಣಿ |ಶ್ರೀಕಂಠನ್ನ ಶಿರದ ಮನಿ ವಾಸಮಾಡಿದ್ದು |ಹೇ ಕರುಣಿ ಭೀಷ್ಮನ್ನ ಜನನಿ |ನಾಕೆರಡೊಸುಗಳ ಸಾಕಿ ನೀ ಗರ್ಭಾದಿ |ಹಾಕಾದೆ ಪುನಹ ಲೌಕಿಕದೊಳಗಿನ್ನು |ಆಕಾರ ತೋರದೆ ಯೇಕಾಂತದಿ ಪತಿಯ |ಕೂಡಿ ಆಡಿದಾ ಲೋಕ ವಿಲಕ್ಷಣಿ | ೧ | ವಾಲಿ ಸುಸುಖ…
-
Sharanu Bhargava Rama
Composer : Shri Gurugovinda dasaru ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮಶರಣು ಭವ ಭಯ ಪರಿಹರಾ ||ಪ|| ಸನಕಾದಿ ಮುನಿವಂದ್ಯ |ಕನಕ ಗರ್ಭಜ ಜನಕ ಅನುನಯದಿ ಗೀತೆ ಫ |ಲ್ಗುಣಗೆ ಭೋಧಿಸಿದೇಎಣೆಯೆ ತವ ಕರುಣ |ಘನವರ್ಷಣಕೆ ಹರಿ ಅನಘ ನಿನ್ನಡಿ ನೆಳಲ |ನಾಶ್ರಯಿಪೆ ಎಂದೆಂದೂ (೧) ಭುವನ ಮೋಹನ ದೇವ |ಭವಗು ಮೋಹಿಪ ಭಾವದಿವಿ ಭವರು ತವರೂಪ |ಯವಗಳಿಕ್ಕದಲೇ |ಸವನ ತ್ರಯದಲಿ ಕಂಡು |ಪವನಾಂತರಾತ್ಮ ಮಾಧವನೆ ಹಿಗ್ಗುತಲಿ |ಹವಿಷನರ್ಪಿಪರೋ (೨) ಸರ್ವ ಶಬ್ದಾಭಿಧನೆ |ಸರ್ವ…