Haridasa seva

  • Namo namo Krishnaveni

    Composer : Shri Prasannavenkata dasaru ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ [ಪ.] ಈ ಜನ್ಮದಘವು ನಾನಾ ಜನ್ಮ ಕೃತ ದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ (೧) ವಿಪ್ರಮುನಿ ಸುರನರರು ಕನ್ಯಕ್ಕೆ ಗುರು ಬರಲುಕ್ಷಿಪ್ರ ನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆಪ್ರಸನ್ನೀ ಕರಿಸಿಕೊಳ್ಳುವರಮ್ಮ (೨) ನಿರ್ಮಳಾತ್ಮಕ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ (೩) namO namO kRuShNavENinamO namO kRuShNavENi kalyANi…

    ,
  • Shobhanavennire swarga

    Composer : Shri Vijayadasaru ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ |ಶೋಭಾನವೆನ್ನಿ ಶುಭವೆನ್ನಿ [ಪ] ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು |ಭರದಿಂದ ಇಳಿದು ಸತ್ಯಲೋಕ |ಭರದಿಂದ ಇಳಿದು ಸತ್ಯಲೋಕಕೆ ಬಂದ |ವಿರಜೆಗಾರುತಿ ಬೆಳಗಿರೇ (೧)ಸರಸಿಜಾಸನನಂದು ಹರಿಪಾದ ತೊಳೆಯಲು |ಸರಸ ಸದ್ಗುಣ ಸುರಲೋಕ |ಸರಸ ಸದ್ಗುಣದಿ ಸುರಲೋಕಕೈದಿದಾ |ಸ್ವರ್ಣೆಗಾರುತಿಯ ಬೆಳಗಿರೇ (೨)ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು |ಚಂದದಿಂದಲಿ ಮೇರುಗಿರಿಗೆ |ಚಂದದಿಂದಲಿ ಮೇರುಗಿರಿಗೆ ಬಂದಾ |ಸಿಂಧುವಿಗಾರುತಿಯ ಬೆಳಗಿರೇ (೩)ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು |ಚತುರ್ಭಾಗವಾಗಿ ಕರೆಸಿದ |ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ…

    , ,
  • Jaya Jahnavi devi

    Composer : Shri Vijayadasaru ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ [ಪ] ಅಜನ ಸಭೆಯಲಿ ವರುಣಗೆ ಶಾಪವು ಬರಲುಪ್ರಜಪಾಲನಾದ ಶಂತುನ ನಾಮದೀನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ [೧] ಭಗೀರಥಗೆ ವೊಲಿದು ಭವದೂರ ಪಾವನಕಾರೆಸಗರರಾಯನ ವಂಶವನ್ನೆ ಉದ್ಧಾರೆಅಗಣಿತೋದಯ ಪಾರಂವಾರೆ ಶುಭಶರೀರೆಮುಗಿವೆನು ಕರವೆತ್ತಿ ಸಂತತ ವಾರಂವಾರೆ [೨] ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲುನೀನುಬ್ಬಿ ಪೊರದೆ ಉತ್ಸಾಹದಿ ಮೆರೆದೆಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿಜ್ಞಾನಪೂರ್ವಕ ವೊಲಿದು ಭಕುತಿ ಕೊಡು…

    , ,

error: Content is protected !!