-
Ambikapati shambho
Composer : Shri Shyamasundara dasaru ಅಂಬಿಕಾ ಪತಿ ಶಂಭೊ ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ |ಪ| ಭವಕಮಲ ಭವ ಭ್ರಕುಟ ಭವಹರನೆ ನೀಎನ್ನ ಅವಗುಣಗಳೆಣಿಸದಿರು ಕವಿಗೇಯನೆ |ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ [೧] ಬಲವಿರೋಧಿ ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾ |ಎಲರುಣಿ ಭೂಷಣನೆ ಒಲಿದು ಪಾಲಿಸು ದಯದಿಛಳಿ ಗಿರೀಶನ ಅಳಿಯ ನಳಿನಾರಿ ಧರನೆ [೨] ಸಿರಿ ರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರ ಗೊರಳನೆಕರುಣದಿಂದಲಿ…
-
Amba Ramana Shambho
Composer : Shri Gurugovinda dasaru ಅಂಬಾ ರಮಣ ಶಂಭೋ- ಪಾಲಯ |ಬಿಂಬ ನೃಹರಿಪಾದ | ಬೆಂಬಿಡದಲೆ ಭಜಿಪ |ಶಂಭೋ ನಿನ್ನಯ ಚರಣಾಂಭೋಜ ವಂದಿಪೆ ||ಅ.ಪ.|| ವಾಸ ಮಶಣ | ವಿಭೂತಿ ಭೂಷನೆ ಈಶ ಗಿರಿಕೈಲಾಸ ವಾಸನೆ, ಹೇ ಸದಾಶಿವ |ಪಾಹಿ ವೃಷಭಧ್ವಜ, ನೀ ಸದಾ ಗತಿ |ಪ್ರಾಣ ಶಿಶು ಪಾಹಿ ||೧|| ತ್ರ್ಯಕ್ಷ ಸುರಾಧ್ಯಕ್ಷ | ವೃಷಭೇಕ್ಷಾಪಕ್ಷಿ ವಹ ಪ್ರಿಯ | ದಕ್ಷ ಯಜ್ಞಹ, ಅಕ್ಷಿಇನ ಅನಲೇಕ್ಷಣ ಸೋಮೇಕ್ಷ |ಪಕ್ಷಿ ಸಮಪದ | ಹರ್ಯಕ್ಷ ಗುರುಪಾಹಿ…
-
Akka Kele
Composer : Shri Kakhandaki Krishna dasaru ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬಮುಕ್ಕಣ್ಣಗೀವರಂತೆ || ಪ || ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನು ಲೆಕ್ಕಿಸಿ ಮದುವೆ ಮಾಡಿ ಕೊಟ್ಟನಂತೆ || ಅ. ಪ. || ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |ತಿಲಕ ಫಣೆಗೆ ಬಾಲ ಚಂದ್ರನಂತೆ |ಹೊಳೆವ ಕಿಡಿಗಣ್ಣಂತೆ | ಕಂದು ಗೊರಳನಂತೆ |ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || ೧ || ಉರಗ ಭೂಷಣನಂತೆ | ಭಸ್ಮ ಲೇಪನನಂತೆ |ಕರಿಯ ಚರ್ಮಾಂಬರ…