-
Antarangada Kadavu
Composer : Shri Vijayadasaru ರಾಗ: ರಂಜಿನಿ, ಆದಿತಾಳ ಅಂತರಂಗದ ಕದವು ತೆರೆಯಿತಿಂದು || ಪ ||ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ.ಪ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |ವಾಸವಾಗಿದ್ದರೋ ದುರುಳರಿಲ್ಲಿ ||ಮೋಸವಾಯಿತು ಇಂದಿನ ತನಕ ತಮಸಿನ |ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ || ೧ || ಹರಿಕರುಣವೆಂಬಂಥ ಕೀಲಿ ಕೈ ದೊರಕಿತು |ಗುರುಕರುಣವೆಂಬಂಥ ಶಕ್ತಿಯಿಂದ ||ಪರಮ ಭಾಗವತರ ಸಹವಾಸದಲಿ ಪೋಗಿ |ಹರಿಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ || ೨ || ಸುತ್ತಲಿದ್ದವರೆಲ್ಲ ಪಲಾಯನವಾದರು |ಭಕ್ತಿಕಕ್ಕಡವೆಂಬ ಜ್ಞಾನದೀಪ ||ಜತ್ತಾಗಿ…
-
Ele manave Murariyanu
Composer : Shri Vijayadasaru ಎಲೆ ಮನವೆ ಮುರಾರಿಯನು ಕೊಂಡಾಡು ||ಪ||ಸಾಧನಕಿದು ಉಪಾಯ ನೋಡು ||ಅ.ಪ|| ಕಾಲನ ದೂತರ ಕಾಲಿಗೆ ಬಿದ್ದರೆನಾಳೆಗೆ ನಿಲುವರೆ ನೋಡು ||೧|| ಮಂದಿಯ ಮಾತಿಗೆ ಎಂದೆಂದು ಮರುಗದೆಮುಂದಿನ ಗತಿಯ ನೀ ನೋಡು ||೨|| ರಾಜೀವ ಮುಖಿಯರ ಸೋಜಿಗ ಮೆಚ್ಚದೆವಿಜಯವಿಠಲನ ಪಾಡು ||೩|| ele manave murAriyanu koMDADu ||pa||sAdhanakidu upAya nODu ||a.pa|| kAlana dUtara kAlige biddarenALege niluvare nODu ||1|| maMdiya mAtige eMdeMdu marugademuMdina gatiya nI nODu…
-
Ballavagille paramatma
Composer : Shri Vijayadasaru ಬಲ್ಲವಾಗಿಲ್ಲೆ ಪರಮಾತ್ಮಾಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ [ಪ] ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದುಆಡಿದವೆಲ್ಲ ಹರಿಯ ರೂಪವೆಂದುಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದುಕೂಡಿದದ್ದೆಲ್ಲ ಹರಿ ಭಕ್ತರೆಂದು [೧] ತಾಪತ್ರಯಗಳೆಲ್ಲ ಮಹಾ ತಪಸು ಎಂದುರೂಪಗಳೆಲ್ಲ ಹರಿಕಾಂತಿ ಎಂದುಪೋಪದು ಬರುವುದೆಲ್ಲವ್ಯಾಪಾರ ಹರಿ ಅಧೀನವೆಂದು [೨] ತಾರತಮ್ಯಕಿದು ಪರಲೋಕದಿ ಸರಿಯಿಲ್ಲಸಿರಿ ಹರಿಯದೊರೆ ತನಗೆ ಎಂದೆನುತಾಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ [೩] ಒಲಿಸಿ ಒಲಿಸಿ ಒಲಿದು ಒಲಿದುಖಳರೊಳಗಾಡದಲೆ ವಿಜಯವಿಠ್ಠಲವೆಂಕಟ ಶೈಲ ನಿವಾಸಾಸರ್ವೋತ್ತಮನೆ ಗತಿ ಎಂದು…