Haridasa seva

  • Pranadeva Jeeya

    Composer : Shri Gururama vittala ಪ್ರಾಣದೇವ ಜೀಯ್ಯಾ ದೇಹದಲಿತ್ರಾಣ ತಗ್ಗಿತಯ್ಯಾ [ಪ]ಕಾಣೆ ಕಾಯುವರ ನೀ ಕೈ ಬಿಟ್ಟರೆಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ] ಕಾಲು ನೋಯುತಿಹುದು ಕೈಸೋತುಬೀಳಾಗಿರುತಿಹುದು |ಕಾಲಮೃತ್ಯುಬಹ ಕಾಲದಲ್ಲಿ ಗೋಪಾಲನ ಸ್ಮೃತಿ ಕೊಡು ಜಾಲವ ಮಾಡದೆ [೧] ಜನರ ಬೇಡಲಾರೆ ನಿನಗಿದುವಿನೋದವೇನೋ ದೊರೆ |ಅನುದಿನದಲಿ ದುರ್ಜನರರಿಯದೆಯಿವಧನಿಕನೆನ್ನುತಲಿ ಗೊಣಗಿ ಕೊಂಬುವರು [೨] ವರುಷವೈವತ್ತಾರು ಕಳೆದಿತುಪರಿಪಾಲಿಪರ್ಯಾರು |ಕರವಪಿಡಿದು ಶ್ರೀ ಗುರುರಾಮವಿಠಲನಚರಣವ ತೋರಿಸಿ ದುರಿತವ ಕಳೆಯೈ [೩] prANadEva jIyyA dEhadalitrANa taggitayyA [pa]kANe kAyuvara nI kai…

  • Vijayadasara Stotra Suladi – Guru Shrisha Vittala

    ಶ್ರೀಗುರುಶ್ರೀಶವಿಟ್ಠಲದಾಸರ ಶಿಷ್ಯರಾದ ಶ್ರೀಲಕ್ಷ್ಮೀಪತಿವಿಟ್ಠಲ ದಾಸಾರ್ಯ ವಿರಚಿತಶ್ರೀವಿಜಯದಾಸರ ಸ್ತೋತ್ರ ಸುಳಾದಿರಾಗ: ಹಂಸಾನಂದಿ ಧ್ರುವತಾಳಭಜನೆ ಮಾಡೆಲೊ ಮನವೆ ಭಕುತಿಯಿಂದಲಿ ಸತತವಿಜಯರಾಯರ ಪಾದಪದುಮಂಗಳದ್ವಿಜಕುಲೋತ್ತಮ ಸುರಧೇನು ಸತ್ಕಲ್ಪತರುಸುಜನಚಿಂತಾಮಣಿಯು ತಾನೆನಿಸೀತ್ಯಜಿಸಿ ದುರ್ವಿಷಯಗಳ ತತ್ವೋಪದಿಷ್ಟನಾಗಿನಿಜಗುರುಗಳ ಕರುಣವನ್ನೆ ಪಡೆದುವೃಜಿನವರ್ಜಿತನಾದ ಹರಿಯ ಸನ್ಮಹಿಮೆಗಳತ್ರಿಜಗದೊಳಗೆ ತುಂಬಿ ತುಳುಕುವಂತೆಯಜಿಸಿ ಪ್ರಾಕೃತದಿಂದ ಎಲ್ಲ ಶಾಸ್ತ್ರಾರ್ಥ ಸಾ –ಹಜ ಭಕ್ತಿಯಿಂದ ರಚಿಸಿ ಸತ್ಕವನವಋಜುಮಾರ್ಗ ತೋರ್ಪ ಗದ್ಯ ಪದ್ಯ ಪದ ಸುಳಾದಿಗಳಋಣಗಣದರಸಿನ ದಾಸರಾದಪ್ರಜೆಗಳಿಗೆ ಗತಿಸಾಧನವಾಗುವಂತೆ ತೋರಿಕುಜನರ ಸಂಗವನ್ನೇ ದೂರಗೈಸಿಸುಜಗದೊಳಗೆ ಸತ್ಸಂತಾನ ನಿಲಿಸಿ ಸಾ –ಮಜನಂತೆ ಚರಿಸಿ ಸದ್ಧರ್ಮದಿಂದಅಜನಪಿತನ ಪಾದಾಂಬುಜದಲ್ಲಿ ನಿಲಿಸಿ ಮನಭುಜಗಶಯನನ ಪುರವ ಸಾರಿದರುವಿಜಯಸಾರಥಿ ಲಕ್ಷ್ಮೀಪತಿವಿಟ್ಠಲರೇಯನನಿಜದಾಸರೊಲಿಮಿ…

    ,
  • Srinivasa Stotra Suladi – Guru Shrisha Vittala

    ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ ಶ್ರೀನಿವಾಸನ ಸ್ತೋತ್ರ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳಶ್ರೀನಿವಾಸನೆ ನಿನಗೇನು ಬಿನ್ನೈಸಲೋಧೇನಿಸಿದರೆ ಎನಗಾಶ್ಚರ್ಯ ತೋರುತಿದೆಅನಾದಿ ಕಾಲದಿಂದ ಸೃಷ್ಟ್ಯಾದಿ ವ್ಯಾಪಾರನೀನೆ ಮಾಡಿಸುವೆಂದು ಶಾಸ್ತ್ರಸಿದ್ಧಜ್ಞಾನಿಗಳು ಹೀಗೆ ತಿಳಿದು ಪೇಳುವರಯ್ಯಾಈ ನೀತಿ ನೋಡಿದರೆ ಪುಶಿಗಾಣದುಹೀನ ಜ್ಞಾನಗಳಿಂದನೇಕ ಭವಣಿ ಬಡುತನಾನಾ ಯೋನಿಗಳಲ್ಲಿ ಸಂಚರಿಸುವಈ ನಡತೆಯ ನೋಡೆದಾರಿಂದಲಾಗುವದುಶ್ರೀನಾಥ ನೀನೆ ದಯದಿ ತಿಳಿಸಬೇಕುತಾನೆ ಮಾಡುವ ಜೀವನೆಂದು ಯೋಚನೆ ಮಾಡೆಅನಾದಿಯಿಂದ ಶಕ್ತಿಶೂನ್ಯ ಅಲ್ಪಾಕಾಣ ತನ್ನ ಸ್ವರೂಪ ಇನ್ನಾವದು ಬಲ್ಲನೋಜ್ಞಾನಪೂರ್ಣ ಸರ್ವಜ್ಞ ನೀನೇನರಿಯಾಜ್ಞಾನ ಕರ್ಮೇಂದ್ರಿ ಮೊದಲಾದ ತತ್ವಗಳನ್ನೆಮಾನಿಗಳಿವಕೆ ಬ್ರಹ್ಮರುದ್ರೇಂದ್ರರೂನಾನಾ ವ್ಯಾಪಾರವ ಮಾಡಿಸಿ ಇವರಿಂದಹೀನ ಸುಖವು ಉಣಿಸುವರೆಂಬೆನೇಜ್ಞಾನಿಗಳರಸೇ ನಿನ್ನಾಜ್ಞಧಾರಕರವ…

error: Content is protected !!