Purandara dasaru

  • Palisamma Muddu Sharade

    Composer : Shri Purandara dasaru ಪಾಲಿಸಮ್ಮ ಮುದ್ದು ಶಾರದೆ |ಎನ್ನ ನಾಲಿಗೆ ಮೇಲೆ ನಿಲ್ಲ ಬಾರದೆ ||ಲೋಲಲೋಚನೆ ತಾಯಿ ನಿರುತ ನಂಬಿದೆ ನಿನ್ನ ||ಅ.ಪ|| ಅಕ್ಷರಕ್ಷರ ವಿವೇಕವ |ನಿನ್ನ ಕುಕ್ಷಿಯೊಳೀರೇಳು ಲೋಕವ ||ಸಾಕ್ಷತ್ ರೂಪದಿಂದ ಒಲಿದು ರಕ್ಷಿಸು ತಾಯೇ ||೧|| ಶೃಂಗಾರಪುರ ನೆಲೆ ವಾಸಿನೀ ದೇವೀ |ಸಂಗೀತ ಗಾನ ವಿಲಾಸಿನಿ ||ಮಂಗಳೆ ಗಾತ್ರಳೆ ಭಳಿರೆ ಬ್ರಹ್ಮನ ರಾಣಿ ||೨|| ಸರ್ವಾಲಂಕಾರ ದಯಾ ಮೂರುತಿ ನಿನ್ನಚರಣವ ಸ್ತುತಿಸುವೆ ಕೀರುತಿ |ಗುರುಮೂರ್ತಿ ಪುರಂದರವಿಠಲನ್ನ ಸ್ತುತಿಸುವೆ ||೩|| pAlisamma muddu…

  • Gurubhakti yentemba

    Composer : Shri Purandara dasaru ಗುರುಭಕ್ತಿ ಯೆಂತೆಂಬ ಕನಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವನಿಟ್ಟುಪರತತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೇ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೧|| ಆದಿ ಮೂರುತಿಯೆಂಬ ಅಚ್ಚ ಅರಿಶಿಣ ಬಳಿದುವೇದಮುಖವೆಂಬ ಕುಂಕುಮವನಿಟ್ಟುಸಾಧು ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಮ್ ಲಕ್ಷ್ಮೀಗೆ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೨|| ತನುವೆಂಬ ತಟ್ಟೆಯಲಿ ಮನಸೊಡಲನು ಇರಿಸಿಘನಶಾಂತಿ ಎಂಬ ಆಜ್ಯವನು ತುಂಬಿಆನಂದವೆಂತೆಂಬ ಬತ್ತಿಯನು ಹಚ್ಚಿಟ್ಟುಚಿನುಮಯ ಹರಿಗೆ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೩|| ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನೆ…

  • Mangalam Sri Tulasi

    Composer : Shri Purandara dasaru ಮಂಗಳಂ ಶ್ರೀ ತುಳಸೀ ದೇವಿಗೆ ,ಮಂಗಳಂ ವೃಂದಾವನ ವಾಸಿಗೆಜಯ ಮಂಗಳಂ ನಿತ್ಯ ಶುಭ ಮಂಗಳಂ |ಪ| ನೋಡಿದ ಮಾತ್ರಕೆ ದೋಷ ಸಂಹಾರಿಗೆಬೇಡಿದ ವರಗಳ ಕೊಡುವಳಿಗೆಮಾಡೆ ವಂದನೆಯನು ಮನುಜರಪಾಪದ ಗೂಡನೀಡಾಡುವ ಗುಣವಂತೆಗೆ (೧) ಮುಟ್ಟೀದ ಮಾತ್ರಕ್ಕೆ ಮುಕ್ತರ ಮಾಡುವಮುದದಿಂದುದ್ಧರಿಸುವ ಮುನಿ ವಂದ್ಯೆಗೆಕೊಟ್ಟರೆ ನೀರನು ಪೇರಿಗೆ ಕಾಲನಮುಟ್ಟಲೇಸದ ಹಾಗೆ ಮಾಳ್ಪಳಿಗೆ (೨) ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆಚಿತ್ತವಲ್ಲಭ ಕೃಷ್ಣನ ಹರುಷದಲಿಅತ್ಯಂತವಾಗಿ ತಾ ಭವದ ಬೇರಕಿತ್ತು ಬಿಸಾಡುವ ಕೋಮಲೆಗೆ (೩) ಕೋಮಲವಾಗಿದ್ದ ದಳ ಮಂಜರಿಗಳಪ್ರೇಮದಿಂದಲಿ…

error: Content is protected !!