-
Pavana sambhuta olidu
Composer: Shri Gurupranesha vittala ಪವನ ಸಂಭೂತ ಒಲಿದು ತವಕದಿ ಕಾಯಬೇಕು ||ಪ||ಇವನಾರೋ ಏನೋ ಎಂದುದಾಸೀನ ಮಾಡದಲೆನ್ನ ||ಅಪ|| ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು,ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧|| ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ,ಹರಿಯಂತೆ ಒದಗುವಿಯೋ ನೀನು ಹರಿದಾಸನು ನಾನು ||೨|| ಅಜಸುತನ ಶಾಪದಿಂದ ಅಜಗರನಾದವನ ಪಾದ,ರಜದಿ ಪುನೀತನ ಮಾಡಿದನೇ ಅಜಪದವಿಗೆ ಬಹನೇ ||೩|| ಕಲಿಯುಗದಿ ಕವಿಗಳೆಲ್ಲ ಕಲಿ ಬಾಧೆಯಿಂದ ಬಳಲೆ,ಕಲಿವೈರಿ ಮುನಿಯೆಂದೆನಿಸಿದೆ ಕಲಿಮಲವ ಕಳೆದಿ ||೪|| ಗುರು ಪ್ರಾಣೇಶ ವಿಠಲ ಹರಿಪರನೆಂಬೊ…
-
Sukhada sundara vittala
Composer: Shri Gurupranesha dasaru ಸುಖದ ಸುಂದರ ವಿಠ್ಠಲರಾಯಾ |ಭಕುತರ ಪಾಲಿಸೊ ಜೀಯಾ || ಪ. || ಸುಖತೀರ್ಥರ ಶಾಸ್ತ್ರಕೆ ಸಮ್ಮತವಾಗಿ |ಪ್ರಕಟಿಸಿದೆನನ್ನಿಂದ ಕೀರ್ತನೆಯ ||ಸಕಲ ಜನರು ಕೇಳಿ ಪಠಿಸುತಲಿರದು |ಮುಕುತಿಗೆ ಸತ್ಪಥವಾಗಿರಲಿ || ೧ || ಆಯುರಾರೋಗ್ಯವು ಹೆಚ್ಚುತಲಿರಲಿ |ಮಾಯಾಮೋಹಗಳು ದೂರಾಗಲಿ ||ಶ್ರೇಯಸ್ಸೆಂಬುದು ಕರಗತವಾಗಲಿ |ವಾಯುದೇವರು ಸುಪ್ರೀತರಾಗಲಿ || ೨ || ಕರುಣಾಕರ ನೀನೆಂಬುದು |ಮರೆಯದ್~ ಹಾಂಗೆ ಮಾಡೊ ಕರಿವರದಾ ||ಗುರು ಪ್ರಾಣೇಶ ವಿಠ್ಠಲ ಕರವ ಪಿಡಿದು |ಶರಣರ ಪೊರೆಯ ಬೇಕೊ ವಿಠ್ಠಲ || ೩…
-
Nandenado Swami
Composer: Shri Venkata vittala ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ|| ಜನನ ಮರಣ ನಿಂದೇ, ಜನ್ಮಸಾಧನ ನಿಂದೇಅನುಕೂಲಾದರವು ನಿಂದೇ ಸ್ವಮೀತನುಮನವೂ ನಿಂದೇ, ಕಾಯ ದೊರೆವುದೂ ನಿಂದೇಚಿನುಮಯರೂಪನೇ ಅನುಮಾನವ್ಯಾತಕೆ ||೧|| ಕಾಯಕಷ್ಟವು ನಿಂದೇ, ದೇಹದ ಬಲ ನಿಂದೇನ್ಯಾಯ ಅನ್ಯಾಯವೂ ನಿಂದೇ,ಬಾಯಿಮಾತು ನಿಂದೇ, ಬರುವ ಭಾಗ್ಯವು ನಿಂದೇಕಾಯಜ ಪಿತ ನಿನ್ನ ಮಾಯಾ ತಿಳಿಯದಯ್ಯಾ ||೨|| ಯಾತ್ರೆ ತೀರ್ಥವು ನಿಂದೇ, ಕ್ಷೇತ್ರದ ಫಲ ನಿಂದೇಸತ್ಪಾತ್ರ ದಾನ ನೇಮ ನಿಂದೇ,ಧಾತ್ರಿಯೊಳ್ ಪರಿಪೂರ್ಣ ಕ್ಷೇತ್ರ ವೆಂಕಟವಿಠಲಸ್ತೋತ್ರ ಮಾಳ್ಪುದು…
