-
Shubha Sundara kaya
Composer : Shri Vijayadasaru ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿಕರವ ಜೋಡಿಸಿ ಬಿನ್ನೈಪಾ ||ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |ಪರಿಹಾರ ಮಾಡೊ (೧) ಮಾರುತಿ ಸದಾಗತಿ ಭಾರತೀಪತಿ ಯತಿ |ಮಾರರಾತಿಗೆ ನೀ ಗತಿ ||ಮಾರುತ್ತರ ಕಾಣೆ ಮಾರುತಿಮಾರಿಗಳಿಗೆ ನಿರುತ ಮಾರಕ ನೀನಹುದೋ (೨) ವಾಯು ಎನಗೆ ಸಂಪೂರ್ಣಾಯು ಸರ್ವ |ಸಾಯುಜ್ಯ ಸಾರೂಪ್ಯನೆ ||ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |ಈ ಯುಗದೊಳು ಬಲವಾಗೋ (೩) ಕಾಯಯ್ಯಾ ಕರುಣದಿ ಕಾಯ ನಿನ್ನದು…
-
Eera haripada sevaka
Composer : Shri Gurugovinda dasaru ಈರಾ – ಹರಿಪದ ಸೇವಕ ಧೀರಾ |ಹರಿರಿಪುವನ ಪಾವಕ ಘೋರಾ |ಭಾರತೀಶ ಮಹ ಶೂರಾ [ಪ] ಅರಿಕರಿ ಸಂಕುಲ ಕೇಸರಿ ರೂಪನೆಶರಣೆನ್ನುವೆ ತವ ಚರಣಾಬ್ಜಗಳಿಗೆ [ಅ.ಪ] ಪ್ರಾಣಾ-ಜಗಧರ ಕೂರ್ಮ ಸತ್ರಾಣ |ಮಾನ ಪ್ರಮೇಯದಿ ನಿಪುಣ ಪಠಿಸಿಮೆರೆದ ನವ ವ್ಯಾಕರಣ |ಜಡ ಜೀವ ನಿಯಾಮಕ ಪ್ರಾಣಜ್ಞಾನ ಜ್ಞೇಯ ಜ್ಞಾತ್ರ ಅಭಿಧಾನದಕ್ಷೋಣೀಶಗೆ ಕರ್ತೃ ಕರ್ಮ – ಕರಣ [೧] ಭೀಮಾ – ಕೌರವರಳಿದ ನಿಸ್ಸೀಮ |ಪ್ರಥಮಾಂಗ ಹರಿಗೆ ಸುಧಾಮಅಸಮ ನಿನ್ನೊಳು ಹರಿಪ್ರೇಮ |ನಿನಗೊಂದಿಪೆ…
-
Sudheendra tirtha kara – Bidanur Panchamukhi prana
Composer : Shri Prasannavenkata dasaru ಸುಧೀಂದ್ರತೀರ್ಥಕರ ಪೂಜಿತಾ |ಬಿದನೂರದಿ ನಿಂತಾ ಹನುಮಂತಾ [ಪ] ಐದು ಮೊಗ ಐದೆರಡು ಭುಜದಿ ಮಹಾ |ಯುಧ ಪಿಡಿದಾಯುಧ ಧರನೆನಿಸಿದಾ |ಭೇದಗಳೈದು ಬೋಧಿಸಿ ಬುಧರಿಗೆ |ಸಾಧನ ದಾರಿಯ ತೋರಿದ ಮುದಮುನಿ [೧] ರಾಮನಾಜ್ಞೆಗೆ ಅಕ್ಷಯ ಕುವರನ |ಹೋಮಗೈಸಿ ಪ್ರತಿ ಧಮನಿ ಧಮನಿಯಲಿ |ಸ್ವಾಮಿಯನಾಮವ ನೇಮದಿ ನೆನೆಯುತ |ಭೂಮಂಡಲಕತಿ ಬಲನೆಂದೆನಿಸಿದ [೨] ಸೂರಿಗಳರಸೆಂದೆನಿಸಿ ಧರೆಯೊಳಗೆ |ಸಾರ ಶಾಸ್ತ್ರರಸ ಸುರಿಸಿ ಭೂಸುರಗೆ |ಸರಸಿಜಾಪತಿ ಪ್ರಸನ್ವೆಂಕಟನ |ಸರುವಾಧಿಕ್ಯವ ಸಾರಿದ ಸುರಮುನಿ [೩] sudhIMdratIrthakara pUjitA |bidanUradi…
