Author: Daasa

  • Janma Saphalavayitu

    Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ – ।ಗಮ್ಯ ಗೋಚರನೆಂದು ಸ್ತುತಿ ಸುರರೇ ॥ಬ್ರಹ್ಮಾ ರುದ್ರಾದಿಗಳು ಇಂದ್ರ ಚಂದ್ರಾದಿಗಳು ।ನಿರ್ಮಲಾ ಮೂರುತಿ ನಿಮ್ಮ ನಿಜವ ತೋರಿದ ಮ್ಯಾಲೆ ॥ 1 ॥ ಚತುರಮುಖನು ಬಂದು ಪೃಥುವಿ ವಳಗೆ ನಿಂದೂ ।ಕ್ರತುಗಳ ಮಾಡಿ ಆಹುತಿ ಕೊಡಲು ಅರೆ ಘ್ರಾಸವಾ…

  • Pavadisu paramatmane

    Composer : Shri Purandara dasaru ಪವಡಿಸು ಪರಮಾತ್ಮನೆ ಸ್ವಾಮಿಭವರೋಗ ವೈದ್ಯನೆ ಭಕ್ತರ ಪ್ರಿಯನೆ ||ಪ|| ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿಇಂದ್ರನೀಲ ಮಣಿ ಮಂಟಪದಿ ||ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲುಸಿಂಧು ಶಯನ ಆನಂದದಿಂದಲಿ [೧] ತೂಗುಮಂಚದಿ ಹಂಸತೂಲದ ಹಾಸಿಗೆನಾಗಸಂಪಿಗೆಯ ಹೂವಿನ ಒರಗು ||ಸಾಗರಸುತೆಯ ಸಮ್ಮೇಳದಲಿ ನಿಜಭೋಗವ ಪಡುತ ಓಲಾಡುತಿರು [೨] ಸದ್ದಡಗಿತು ಗಡಿಯಾರ ಸಾರಿತು ಬೇಗಮುದ್ರೆಗಳಾಗಿವೆ ಬಾಗಿಲಿಗೆ ||ತಿದ್ದಿದ ಧವಳ ಶಂಖಗಳ ನಾದದಿಂದಪದ್ಮನಾಭ ಶ್ರೀ ಪುರಂದರವಿಠಲ [೩] pavaDisu paramAtmane svAmiBavarOga vaidyane Baktara priyane ||pa|| kuMdaNadi…

  • Idu Bhagya

    Composer : Shri Purandara dasaru ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ||ಪ||ಪದುಮನಾಭನ ಪಾದ ಭಜನೆ ಸುಖವಯ್ಯ ||ಅ|| ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆಬಿಲ್ಲಾಗಿ ಇರಬೇಕು ಬಲ್ಲವರೊಳಗೆಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕುಬೆಲ್ಲವಾಗಿರಬೇಕು ಬಂಧುಜನರೊಳಗೆ |೧| ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕುಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆಮಧ್ವಮತಾಬ್ಧಿಯಲಿ ಮೀನಾಗಿ ಇರಬೇಕುಶುದ್ಧನಾಗಿ ತತ್ವ ಶೋಧಿಸಲುಬೇಕು |೨| ವಿಷಯಭೋಗದ ತೃಣಕೆ ಉರಿಯಾಗಿ ಇರಬೇಕುನಿಶಿಹಗಲು ಶ್ರೀಹರಿಯ ಭಜಿಸಬೇಕುವಸುಧೇಯೊಳು ಪುರಂದರವಿಠ್ಠಲನ ನಾಮವನುಹಸನಾಗಿ ನೆನೆನೆನೆದು ಸುಖಿಯಾಗಬೇಕು |೩| idu BAgya idu BAgya idu BAgyavayya…

error: Content is protected !!