-
Jaya Jayatu Jahnaviye
Composer : Shri Vijayadasaru ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿಜಯ ಮಂಗಳವನೀಯೆ ಜಯ ನಮ್ಮ ಕಾಯೆ ||ಪ|| ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-ಕಮಲವನು ತೊಳೆಯಲಾವೇಗದಿಂದವಿಮಲ ಸಂಗತಿಯಿಂದ ಮಂದಾದಿನಿಯೆನಿಸಿಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||೧|| ಧ್ರುವಲೋಕಕಿಳಿದು ಅಮರಾವತಿಯ ಸಾರಿದೆರವಿಯಂತೆ ಪೊಳೆಯುತ ಆ ಜನ ಮಧ್ಯದಿಂಭುವನದೊಳಗೀರೈದು ನೂರು ಯೋಜನದಗಲತವಕದಿಂದಲಿ ಧುಮುಕಿ ಚತುರ ಭಾಗವಾದೆ ||೨|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆಭವದೊರೆ ಭಗೀರಥಗೆ ವಲಿದು ಬರುತಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ||೩|| ಅಳಕನಂದನೆ ನಿನ್ನ ಸ್ಮರಣೆ…
-
Nodide na nodide
Composer : Shri Vijayadasaru ನೋಡಿದೇ ನಾ ನೋಡಿದೇ | ನೋಡಿದೇ ನಾ ನೋಡಿದೇ |ಮೂಡಲ ಗಿರಿಯ ವಾಸನ ಯಾತ್ರೆಯ ಮಾಡಿದೆ ನಾ ಮಾಡಿದೆ | ಅ.ಪ.| ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸಿರಿಕ್ಕದೆ ಏರಿದೆ |ಕಟ್ಟೆ ಕಡೆಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ |ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕೆ ಎರಗಿದೆ |ಕ್ಲೇಶವ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೇ | ೧ | ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ…
