-
Indu Paramananda
Composer: Shri Kakhandaki Krishna dasaru ಇಂದು ಪರಮಾನಂದ |ನಮಗ ಮುಕುಂದನ ಕೃಪೆಯಿಂದಾ |ಕಮಲ ಮಕ |ಭ್ರಮರ ಸಂಗ ಛಂದದಲಾಯಿತು [೧] ವೇಗದಿಂದಲಿ ನೋಡೀ |ಸಕಲರು | ಭಾಗವತರು ಕೂಡಿ |ಭಾಗಿರಥೀ ಪಡೆದ ನಾಗಶಾಯಿಯ |ನಿಗ ಮಾಗ ಮಯುಕ್ತದಿ | ಈಗ ಪಾಡಿದೆವೆಂದು [೨] ಸಂದಿದ ದೋಷಾದಿಗಳು ಚೂಕಿ |ಕುಂದಿ ತೊಲಗಿದವು ತಂದೆ ಮಹಿಪತಿ |ನಂದನ ಪ್ರಿಯನಾನಂದ ಕರುಣದೀ [೩] iMdu paramAnaMda |namaga mukuMdana kRupeyiMdA |kamala maka |Bramara saMga CaMdadalAyitu [1] vEgadiMdali…
-
Manda matiyu nanu
Composer: Shri Purandara dasaru ಮಂದಮತಿಯು ನಾನು ಮದನಜನಕನು ನೀನುಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ|| ಪಾಪಕರ್ತನು ನಾನು ಪಾಪನಾಶನು ನೀನುಕೋಪ ಮದ ಮತ್ಸರದಿ ಸುಳಿವೆ ನಾನುತಾಪವನು ತರಿದು ನಿರ್ಭಯವ ಮಾಡುವೆ ನೀನುರೂಪ ಛಾಯಕೆ ಮರುಳುಗೊಂಬೆ ನಾನು |೧| ಶರಣರಕ್ಷಕ ನೀನು ಪರಮಪಾತಕಿ ನಾನುದುರಿತ ಪರ್ವತವ ಪರಿಹರಿಪೆ ನೀನುಮರುಳುಗೊಂಬೆನು ನಾನು ಅರಿತು ರಕ್ಷಿಪೆ ನೀನುಗರುವಾಹಂಕಾರಿ ನಾನು ಅಗಮ್ಯ ನೀನು |೨| ಮಂದಭಾಗ್ಯನು ನಾನು ಇಂದಿರಾಪತಿ ನೀನುಹಿಂದು ಮುಂದಿನ ಸುದ್ದಿ ಅರಿಯದವ ನಾನುತಂದೆ ಶ್ರೀಪುರಂದರವಿಠಲರಾಯನೆಎಂದೆಂದು ಭಕ್ತರನು ಸಲಹುವೆಯೊ ನೀನು |೩|…
-
Paapi ballane parara
Composer: Shri Purandara dasaru ಪಾಪಿ ಬಲ್ಲನೆ ಪರರ ಸುಖ ದುಃಖವಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪ || ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ |ತೊತ್ತು ಬಲ್ಲಳೆ ಮಾನಾಪಮಾನವೆಂಬುದನುಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ ||೧|| ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವಶ್ವಾನ ಬಲ್ಲುದೆ ರಾಗ ಭೇದಂಗಳ |ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನುಹೀನ ಬಲ್ಲನೆ ಸುಗುಣ ದುರ್ಗುಣವನು ||೨|| ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನುಸೂಳೆ ಬಲ್ಲಳೆ…
