Smarisuve na – Karuna kavacha

Composer : Shri Gopala dasaru

ಸ್ಮರಿಸುವೆ ನಾ ನಿಮ್ಮ ಚರಣಕಮಲ
ಗುರು ವಿಜಯರಾಯ |
ಶರಣಜನಪ್ರಿಯ ಪರಮ ಕರುಣಾನಿಧಿ
ವಿಜಯರಾಯ || ಪ ||

ಜನ್ಮಾರಭ್ಯವು ನಿಮ್ಮಗುಣ ಕರ್ಮಗಳೆಲ್ಲ
ವಿಜಯರಾಯ |
ಇನ್ನು ನಾ ವರ್ಣಿಸಲೆಷ್ತರವನು ಗುರು
ವಿಜಯರಾಯ || ೧ ||

ದಿವಿಜರ ವೇಷದಿಂದವನಿಯೊಳುದುಸಿದ್ಯೊ
ವಿಜಯರಾಯ |
ದಿವಿಜರಿಂದಲಿ ಪ್ರತಿದಿವಸ ಬಿಡದಲಿದ್ಯೋ
ವಿಜಯರಾಯ || ೨ ||

ಭಾಗವತ ಧರ್ಮವಹಿಸಿ ತ್ರಿರಾವರ್ತಿ
ವಿಜಯರಾಯ |
ಭಾಗೀರಥಿಯ ಚನ್ನಾಗಿ ಸೇವಿಸಿದ್ಯೊ
ವಿಜಯರಾಯ || ೩ ||

ಕಂಚಿ ಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆ
ವಿಜಯರಾಯ |
ಪಂಚವಾರವು ಸಂಚರಿಸಿ ಸೇವಿಸಿದಯ್ಯ
ವಿಜಯರಾಯ || ೪ ||

ಮರಿಯಾದೆಯಿಲ್ಲದೆ ವರಗಿರಿಯಾತ್ರೆಯ
ವಿಜಯರಾಯ |
ಪರಿಪರಿ ಕ್ಷೇತ್ರಕ್ಕೆ ಪೋಗಿ ಪೂಜಿಸಿದಯ್ಯ
ವಿಜಯರಾಯ || ೫ ||

ಮಹಿಯಲ್ಲಿ ತಿರುಗಿ ಸರ್ವ ಕ್ಷೇತ್ರದಿ
ವಿಜಯರಾಯ |
ವಹಿಸಿ ದಾಸತ್ವ ವೈಷ್ಣವ ಸಿದ್ಧಾಂತ
ವಿಜಯರಾಯ || ೬ ||

ಗುರೂಪದೇಶಕನಾಗಿ ವ್ಯಾಸ ಕಾಶಿಯಲ್ಲಿದ್ಯೋ
ವಿಜಯರಾಯ |
ದುರ್ಯೋನಿಯಲಿ ಬಂದ ವಂಶ ಉದ್ಧರಿಸಿದ್ಯೋ
ವಿಜಯರಾಯ || ೭ ||

ಸ್ವಚ್ಛವಾಗಿ ಗಂಗಾತೀರ ವಾಸ ಮಾಡಿ
ವಿಜಯರಾಯ |
ಹೆಚ್ಚಾದ ಪರ್ವಣಿಯೊಳು ಮತ್ಸ್ಯೋದರಿ ತೋರ್ದೆ
ವಿಜಯರಾಯ || ೮ ||

ತುಂಗಾತೀರದಿ ಕುಳಿತು ಗಂಗೆ ಪೆಚ್ಚಿಸಿದಿ
ವಿಜಯರಾಯ |
ಅಂಗದ ಮುಸುಕಿಲಿ ಪಾಂಡುರಂಗನ್ನ ಕಂಡ್ಯೊ
ವಿಜಯರಾಯ || ೯ ||

ಮಧ್ವಮತದ ಸಾರ ಕವನದಿ ರಚಿಸಿದ್ಯೊ
ವಿಜಯರಾಯ |
ಅದ್ವೈತ ಸಿದ್ಧಾಂತಾಬದ್ಧ ವೆನಿಸಿದ್ಯೊ
ವಿಜಯರಾಯ || ೧೦ ||

ಶುದ್ಧ ತತ್ವಸಾರ ಸುಳಾದಿ ಪದಮಾಡಿ
ವಿಜಯರಾಯ |
ಹೃದ್ಯದಿ ಧಿಮಿಕೆಂದು ಹರಿಯ ಕುಣಿಸಿದ್ಯೊ
ವಿಜಯರಾಯ || ೧೧ ||

ಸದಾಚಾರ ಸಂಪತ್ತು ಮಧುಕರ ವೃತ್ತಿಯು
ವಿಜಯರಾಯ |
ಕದನ್ನ ಉಂಡರಿಯರು ಶಿಷ್ಯ ಜನ ಸಂಘ
ವಿಜಯರಾಯ || ೧೨ ||

ಭಕ್ತರ ಅಪಮೃತ್ಯು ಬಿಡಿಸಿ ಆಯುವಿತ್ತೆ
ವಿಜಯರಾಯ |
ಪ್ರತ್ಯಕ್ಷ್ಯವಲ್ಲವೆ ಮನವೆ ಇದಕೆ ಸಾಕ್ಷಿ
ವಿಜಯರಾಯ || ೧೩ ||

ನಿತ್ಯಾನ್ನ ಪುತ್ರೋತ್ಸವಗಳು ಭೃತ್ಯರಿಗೆ
ವಿಜಯರಾಯ |
ಮತ್ತೆ ಧರ್ಮ ಮುಂಜಿ ಮದುವೆಗಳ ಮಾಡಿಸಿದ್ಯೊ
ವಿಜಯರಾಯ || ೧೪ ||

ಭಕ್ತ ಜನರಿಗೆ ತತ್ವ ಉಪದೇಶವ ಮಾಡಿ
ವಿಜಯರಾಯ |
ಹೃತ್ ಕಮಲದಿ ಹರಿಯ ತಿಳಿಸಿ ಸದ್ಗತಿಗಭಯ
ಇತ್ತ್ಯೊ ನೀ ವಿಜಯರಾಯ || ೧೫ ||

ಎಲ್ಲರಲ್ಲಿ ಸಿರಿನಲ್ಲನ ಅಂಶವ
ವಿಜಯರಾಯ |
ನಿಲ್ಲಿಸಿದೆಯೊ ನಿನ್ನ ಬಗೆಯ ಬಲ್ಲವಯಾರೊ
ವಿಜಯರಾಯ || ೧೬||

ಬಲ್ಲಿದ ನೀನೊಂದು ರೂಪದಿ ಎನ್ನಲ್ಲಿ
ವಿಜಯರಾಯ |
ನಿಲ್ಲಿಸಿದ್ದರೆ ಎಲ್ಲ ಜನರು ಓಲೈಸೋರು
ವಿಜಯರಾಯ || ೧೭ ||

ನಿಮ್ಮ ಪುಣ್ಯದ ಶೇಷವಿನ್ನು ಉಂಬೆವೊ
ನಾವು ವಿಜಯರಾಯ |
ನಮ್ಮ ಸಾಮರ್ಥ್ಯವು ನಿಮ್ಮದೆಂದಿಗು
ವಿಜಯರಾಯ || ೧೮ ||

ಎನ್ನಿಂದ ಆಗೋ ಸಾಧನವೆಲ್ಲ ನಿನ್ನದೊ
ವಿಜಯರಾಯ |
ಎನ್ನ ಪೊಂದಿಹರೆಲ್ಲ ನಿನ್ನ ದಾಸರೊ
ಗುರು ವಿಜಯರಾಯ || ೧೯ ||

ಈಗ ಈ ಯುಗದಿ ಸಾಧನವೆಂಬುದು
ಕಾಣೆ ವಿಜಯರಾಯ |
ಯೋಗಿ ನಿನ್ನವರಿಗೆ ಬೇಗ ಒದಗುವುದೊ
ವಿಜಯರಾಯ || ೨೦ ||

ಗುರು ನಿನ್ನ ಕರುಣ ಕವಚ ತೊಟ್ಟ
ಭಕುತರ್ಗೆ ವಿಜಯರಾಯ |
ಸಿರಿವರ ಗೋಪಾಲವಿಠಲರೇಯ
ಕೈಯ್ಯ ಪಿಡಿವನೊ ವಿಜಯರಾಯ || ೨೧ ||


smarisuve nA nimma caraNakamala
guru vijayarAya |
SaraNajanapriya parama karuNAnidhi
vijayarAya || pa ||

janmAraByavu nimmaguNa karmagaLella
vijayarAya |
innu nA varNisaleShtaravanu guru
vijayarAya || 1 ||

divijara vEShadiMdavaniyoLudusidyo
vijayarAya |
divijariMdali pratidivasa biDadalidyO
vijayarAya || 2 ||

BAgavata dharmavahisi trirAvarti
vijayarAya |
BAgIrathiya cannAgi sEvisidyo
vijayarAya || 3 ||

kaMci kALhasti SrIraMga sEtuyAtre
vijayarAya |
paMcavAravu saMcarisi sEvisidayya
vijayarAya || 4 ||

mariyAdeyillade varagiriyAtreya
vijayarAya |
paripari kShEtrakke pOgi pUjisidayya
vijayarAya || 5 ||

mahiyalli tirugi sarva kShEtradi
vijayarAya |
vahisi dAsatva vaiShNava siddhAMta
vijayarAya || 6 ||

gurUpadESakanAgi vyAsa kASiyallidyO
vijayarAya |
duryOniyali baMda vaMSa uddharisidyO
vijayarAya || 7 ||

svacCavAgi gaMgAtIra vAsa mADi
vijayarAya |
heccAda parvaNiyoLu matsyOdari tOrde
vijayarAya || 8 ||

tuMgAtIradi kuLitu gaMge peccisidi
vijayarAya |
aMgada musukili pAMDuraMganna kaMDyo
vijayarAya || 9 ||

madhvamatada sAra kavanadi racisidyo
vijayarAya |
advaita siddhAMtAbaddha venisidyo
vijayarAya || 10 ||

Suddha tatvasAra suLAdi padamADi
vijayarAya |
hRudyadi dhimikeMdu hariya kuNisidyo
vijayarAya || 11 ||

sadAcAra saMpattu madhukara vRuttiyu
vijayarAya |
kadanna uMDariyaru SiShya jana saMGa
vijayarAya || 12 ||

Baktara apamRutyu biDisi Ayuvitte
vijayarAya |
pratyakShyavallave manave idake sAkShi
vijayarAya || 13 ||

nityAnna putrOtsavagaLu BRutyarige
vijayarAya |
matte dharma muMji maduvegaLa mADisidyo
vijayarAya || 14 ||

Bakta janarige tatva upadESava mADi
vijayarAya |
hRut kamaladi hariya tiLisi sadgatigaBaya
ittyo nI vijayarAya || 15 ||

ellaralli sirinallana aMSava
vijayarAya |
nillisideyo ninna bageya ballavayAro
vijayarAya || 16||

ballida nInoMdu rUpadi ennalli
vijayarAya |
nillisiddare ella janaru OlaisOru
vijayarAya || 17 ||

nimma puNyada SEShavinnu uMbevo
nAvu vijayarAya |
namma sAmarthyavu nimmadeMdigu
vijayarAya || 18 ||

enniMda AgO sAdhanavella ninnado
vijayarAya |
enna poMdiharella ninna dAsaro
guru vijayarAya || 19 ||

Iga I yugadi sAdhanaveMbudu
kANe vijayarAya |
yOgi ninnavarige bEga odaguvudo
vijayarAya || 20 ||

guru ninna karuNa kavaca toTTa
Bakutarge vijayarAya |
sirivara gOpAlaviThalarEya
kaiyya piDivano vijayarAya || 21 ||

You might also like

error: Content is protected !!