Explanation by Shri Kesava Rao Tadipatri
ರಾಗ: ತೋಡಿ
ಢ್ರುವತಾಳ:
ಮಂದಮತಿ ಮನಸು ಮಂಗನಂತೆಯಾಗಿ |
ಸಂದೇಹ ಬಿಡದಲೆ ಸಂಶಯದಲ್ಲೀ |
ಮುಂದೆ ಪುಳ್ಳಾವಸ್ತಾ ಎಡೆಹಿ ಮುಂಗಾಣದಂತೆ |
ಅಂಧಕ ನಾನಾದೆ ಅಕಟಕಟಾ |
ಹಿಂದಣ ಸಂಚಿತವೊ ಮುಂದೆಯಾಗುವಾಗಮವೊ |
ಇಂದನುಭವಿಸುವ ಪ್ರಾರಬ್ಧವೋ |
ಒಂದೆ ಒಂದೆ ದೈವಯಂದಾ ಬಿಂಬಮೂರುತಿ |
ಇಂದು ಹೃದಯಾರವಿಂದದೊಳು |
ಅಂದವಾಗಿರೆ ಮನ ಪೊಂದದಲೆ ಬರಿದೆ |
ಸಂದರುಶನವಿಲ್ಲಾ ಇಲ್ಲಾವೆಂದೂ |
ಕುಂದಿ ಬೆಂಡಾಗುವದು ಏನೆಂಬೆ ಎಲೊಜೀಯಾ |
ಬಂದ ವ್ಯಾಕುಲ ಇನ್ನು ತೊಲಗದಲ್ಲಾ |
ಪೊಂದಿದೆನು ಸಶಿಬಿಂದು(ಶಶಬಿಂದು)
ವಿಜಯವಿಠ್ಠಲ |
ವಂದಿಸುವೆನು ನಿನ್ನ ದ್ವಂದ್ವಾಬ್ಜ ಪದಕೆ ||೧||
ಮಟ್ಟ ತಾಳ:
ಅಂತರಂಗದಲ್ಲಿ ಅಂತರಾತ್ಮಕ ನೀನು |
ಸಂತತ ಪೊಳೆವುತ್ತ ನಿಂತು ಸೊಬಗಿನಿಂದ |
ಸಂತೋಷದ ಮೂರ್ತಿವಂತನಾಗಿ ಇರಲೆ|ಕಾಂತ
ವಿಜವಿಠ್ಠಲ ಚಿಂತೆ ಪೋಗದಲ್ಲೊ ||೨||
ರೂಪಕತಾಳ:
ಒಳಗೊಂದು ಮೂರುತಿ ನೆಲೆಯಾಗಿ ಇರಲಾಗಿ |
ನೆಲೆಯನ್ನು ತಿಳಿಯದೆ ಕಲಿ ಮತ ಬಿಡದಲೆ |
ಕೆಲಸಾರಿ ಬಲುಹಾರಾ ಬಳಿಯಲ್ಲಿ ಇಪ್ಪವಾ |
ಅಚಲ ಮೂರ್ತಿಗಳಿಗಾಗಿ ಬಳಲಿ ನಾನು |
ಅಲಿಸೀದೆ ಅನುಗಾಲ ಬೆಳಗುವಿಡಿಯ ಪೋಗಿ |
ತಳಕೆಳಗಾದಂತೆ ಅಳಲಿದೆನೊ
ಅನು|ಕುಲ ವಿಜಯವಿಠ್ಠಲನೆ ಗಳದ ಸತ್ವ ಮೀರಿ |
ಸಿಲಚೆಯ ಪೊತ್ತಂತೆ ಇಳಿಯೊಳಗತಿ ಮೂರ್ಖ |
ಕುಲಶಿರೋಮಣಿಯಾದೆ ||೩||
ಜಂಪೆತಾಳ:
ಸಮೀಪದಲ್ಲಿದ್ದ ಸಡಗರದ ಚಲುವ |
ಅಮೃತನ್ನದಯಡೆ ಆದರಣೆ ಇದ್ದಲ್ಲಿ |
ಸಮ್ಮತವಾಗಿರಲು ಕಾಲಕಾಲಕೆ ಸವಿದು |
ಅಮೃತವ ಊಣದಲೆ ಬಲು ಅನಾದರದಲ್ಲಿ |
ಹಮ್ಮು ತೋರಿಯದಲೇವೆ ದೂರಿದ್ದ ಯಂಜಲ |
ವೊಮ್ಮುಸುರೆ ಎಡೆ ಬಯಿಸಿದಂತೆ |
ಇಮ್ಮನ ನಾನಾಗಿ ಅಜ್ಞಾನದಲ್ಲಿನ್ನು |
ಅಮೃತ ವಿಜಯವಿಠ್ಠಲ ವಿಶ್ವಮಾಯಕನೆ |
ಹೆಮ್ಮೆಯಿಂದಲಿ ಬಾಳಿ ಗತಿ ರಹಿತನಾದೆ ||೪||
ತ್ರಿವಿಡಿತಾಳ:
ಆಕಾರವಾಗಿ ಅರ್ಚನೆಗೊಂಬ ದೈವವು |
ಸಾಕಾರವಾಗಿ ಸಂಪತ್ತು ಪಾಲಿಸುತ
ರವಿ|ಯಾಕಾರ ದಂತೆ ರಂಜಿಸುತಾ ಮನಿಯೊಳಗಿರೆ |
ಪ್ರಾಕಾರ ಶಿಲೆಗಳಿಗೆ ಕೈಯ್ಯಾ ಮುಗಿದು
ವರ|ವಾ ಕರುಣಿಸು ಎಂದು ಮಂಡೆ ಹೊರಳಿ
ಪೂಜಿಸುವಾ | ವೀಕಾರ ಮನುಜಗೆ
ಸಂಪ್ರೀತಿಯಾಗುವುದೇ | ಪ್ರಾಕಾರ ಕಲ್ಲುಗಳು
ವರಕೊಡ ಬಲ್ಲವೆ | ಏಕಪಾದ ನಾಮ ವಿಜಯವಿಠ್ಠಲ
ನಿನ್ನ | ವಾಕರಿಸೀ ಅನ್ಯರನ್ನು ಹಂಬಲಿಸುವೆನೋ ||೫||
ಅಟ್ಟತಾಳ:
ಬಿಂಬಮೂರುತಿಯ ಅಪರೋಕ್ಷವಾಗದೆ ಗತಿ |
ಯೆಂಬುದು ಸಲ್ಲಾದು ಎಲ್ಲರಿಗೇ |
ಬಿಂಬನೆಂಬ ಪ್ರಾಜ್ಞನನುಭವ ತಿಳಿದು |
ನಂಬುವಂತೆ ಮಾಡು ವಿಜಯವಿಠ್ಠಲರೇಯಾ ||೬||
ಆದಿತಾಳ:
ನಿತ್ಯ ನೈಮಿತ್ಯಗಳು ಆವಾವ ಕರ್ಮಗಳು |
ಕೃತಾರ್ಥ ನಾಗಿ ಸಂಚರಿಸಿದರು |
ನಿತ್ಯ ತನ್ನೊಳಗಿದ್ದ ಬಿಂಬಗೆ ಆವಾಹನಿಸಿ |
ಭೃತ್ಯನು ನಾನು ಎಂದು ಪೂಜಿಸದಲೆ |
ನಿತ್ಯ ಪದವಿ ಇಲ್ಲಾಶ್ರುತ್ಯರ್ಥದಲ್ಲಿ ಪೇಳೆ |
ಅಂತ್ಯದಲಿ ಕೇಳಿ ಮೊರೆ ಬಿದ್ದೆನೊ |
ಸತ್ಯಧರ್ಮ ಪರಾಕ್ರಮ ವಿಜಯವಿಠ್ಠಲರೇಯಾ
ಮಿಥ್ಯ ಸಂಗವನೀಯದೆ ಕೃತ ಕೃತ್ಯನ್ನ ಮಾಡೊ ||೭||
ಜತೆ:
ಅಂಗುಟ ಪರಿಮಿತವಾಗಿ ಎನ್ನೊಳು ನಿಂದೂ |
ಶ್ರಿಂಗಿಣಿ ವಿಜಯವಿಠ್ಠಲ ಎನ್ನ ಕರುಣಿಸೊ ||೮||
