Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೨೦. ಗುಣತಾರತಮ್ಯ ಸಂಧಿ
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಶ್ರೀಧ-ರಾ ದು — ರ್ಗಾ ಮ-ನೋರಮ |
ವೇಧ- ಮುಖ ಸುಮ– ನಸ ಗ-ಣ ಸಮಾ- |
ರಾಧಿ-ತ ಪದಾಂ — ಭೋಜ- ಜಗದಂ — ತರ್ಬ-ಹಿರ್ವ್ಯಾ-ಪ್ತ ||
ಗೋಧ-ರ ಫಣಿ ವ — ರಾತ- ಪತ್ರ ನಿ- |
ಷೇಧ- ದೂರ ವಿ — ಚಿತ್ರ- ಕರ್ಮ ಸು- |
ಭೋಧ- ಸುಖಮಯ — ಗಾತ್ರ- ಪರಮ ಪ — ವಿತ್ರ- ಸುಚರಿ-ತ್ರ || ೨೦-೧ ||
ನಿತ್ಯ- ನಿರ್ಮಲ — ನಿಗಮ-ವೇದ್ಯೋ- |
ತ್ಪತ್ತಿ- ಸ್ಥಿತಿ ಲಯ — ದೋಷ- ವರ್ಜಿತ |
ಸ್ತುತ್ಯ- ಪೂಜ್ಯ ಪ್ರ — ಸಿದ್ಧ- ಮುಕ್ತಾ — ಮುಕ್ತ- ಗಣಸೇ-ವ್ಯ ||
ಸತ್ಯ-ಕಾಮ ಶ — ರಣ್ಯ- ಶಾಶ್ವತ |
ಭೃತ್ಯ- ವತ್ಸಲ — ಭಯನಿ-ವಾರಣ |
ಅತ್ಯ-ಧಿಕ ಸಂ — ಪ್ರಿಯತ-ಮ ಜಗ — ನ್ನಾಥ- ಮಾಂ ಪಾ-ಹಿ || ೨೦-೨ ||
ಪರಮ- ಪುರುಷನ — ರೂಪ- ಗುಣವನು- |
ಸರಿಸಿ- ಕಾಂಬಳು — ಪ್ರವಹ-ದಂದದಿ |
ನಿರುಪ-ಮಳು ನಿ — ರ್ದುಷ್ಟ- ಸುಖ ಸಂ — ಪೂರ್ಣ-ಳೆನಿಸುವ-ಳು ||
ಹರಿಗೆ- ಧಾಮ — ತ್ರಯವೆ-ನಿಸಿ ಆ- |
ಭರಣ- ವಸನಾ — ಯುಧಗ-ಳಾಗಿ- |
ದ್ದರಿಗ-ಳನು ಸಂ — ಹರಿಸು-ವಳು ಅ — ಕ್ಷರಳೆ-ನಿಸಿಕೊಂ-ಡು || ೨೦-೩ ||
ಈತ-ಗಿಂತಾ — ನಂತ- ಗುಣದಲಿ |
ಶ್ರೀ ತ-ರುಣಿ ತಾ — ಕಡಿಮೆ- ಎನಿಪಳು |
ನಿತ್ಯ- ಮುಕ್ತಳು — ನಿರ್ವಿ-ಕಾರಳು — ತ್ರಿಗುಣ- ವರ್ಜಿತ-ಳು ||
ದೌತ- ಪಾಪ ವಿ — ರಿಂಚಿ- ಪವನರ |
ಮಾತೆ-ಯೆನಿಪ ಮ — ಹಾಲ-ಕುಮಿ ವಿ- |
ಖ್ಯಾತ-ಳಾಗಿಹ — ಳೆಲ್ಲ- ಕಾಲದಿ — ಶೃತಿ ಪು-ರಾಣದೊ-ಳು || ೨೦-೪ ||
ಕಮಲ- ಸಂಭವ — ಪವನ-ರೀರ್ವರು |
ಸಮರು- ಸಮವ — ರ್ತಿಗಳು- ರುದ್ರಾ- |
ದ್ಯಮರ-ಗಣ ಸೇ — ವಿತರು- ಅಪರ — ಬ್ರಹ್ಮ- ನಾಮಕ-ರು ||
ಯಮಳ-ರಿಗೆ ಮಹ — ಲಕ್ಷ್ಮಿ- ತಾ ಉ- |
ತ್ತಮಳು- ಕೋಟಿ ಸ — ಜಾತಿ- ಗುಣದಿಂ- |
ದಮಿತ- ಸುವಿಜಾ — ತ್ಯಧಮ-ರೆನಿಪರು — ಬ್ರಹ್ಮ- ವಾಯುಗ-ಳು || ೨೦-೫ ||
ಪತಿಗ-ಳಿಂದ ಸ — ರಸ್ವ-ತೀ ಭಾ- |
ರತಿಗ-ಳಧಮರು — ನೂರು- ಗುಣ ಪರಿ- |
ಮಿತ ವಿ-ಜಾತ್ಯವ — ರರು ಬ-ಲಜ್ಞಾ — ನಾದಿ- ಗುಣದಿಂ-ದ ||
ಅತಿಶ-ಯಳು ವಾ — ಗ್ದೇವಿ- ಶ್ರೀಭಾ- |
ರತಿಗೆ- ಪದದ ಪ್ರ — ಯುಕ್ತ- ವಿಧಿಮಾ- |
ರುತರ- ವೋಲ್ ಚಿಂ — ತಿಪುದು- ಸದ್ಭ — ಕ್ತಿಯಲಿ- ಕೋವಿದ-ರು || ೨೦-೬ ||
ಖಗಪ- ಫಣಿಪತಿ — ಮೃಡರು- ಸಮ ವಾ- |
ಣಿಗೆ ಶ-ತಗುಣಾ — ವರರು- ಮೂವರು |
ಮಿಗಿಲೆ-ನಿಸುವರು — ಶೇಷ- ಪದದಿಂ — ದಲಿ ತ್ರಿ-ಯಂಬಕ-ಗೆ ||
ನಗಧ-ರನ ಷ — ಣ್ಮಹಿಷಿ-ಯರು ಪ- |
ನ್ನಗ ವಿ-ಭೂಷಣ — ಗೈದು- ಮೇನಕೆ- |
ಮಗಳು- ವಾರುಣಿ — ಸೌಪ-ರಣಿಗಳಿ — ಗಧಿಕ-ರೆರಡು ಗು-ಣ || ೨೦-೭ ||
ಗರುಡ- ಶೇಷ ಮ — ಹೇಶ-ರಿಗೆ ಸೌ- |
ಪರಣಿ- ವಾರುಣಿ — ಪಾರ್ವ-ತೀ ಮೂ- |
ವರು ದ-ಶಾಧಮ — ವಾರು-ಣಿಗೆ ಕಡಿ — ಮೆನಿಸು-ವಳು ಗೌ-ರಿ ||
ಹರನ- ಮಡದಿಗೆ — ಹತ್ತು- ಗುಣದಲಿ |
ಸುರಪ- ಕಾಮರು — ಕಡಿಮೆ- ಇಂದ್ರಗೆ |
ಕೊರತೆ- ಎನಿಸುವ — ಮನ್ಮ-ಥನು ಪದ — ದಿಂದ-ಲಾವಾ-ಗ || ೨೦-೮ ||
ಈರ-ಯಿದು ಗುಣ — ಕಡಿಮೆ- ಯಾಹಂ- |
ಕಾರಿ-ಕ ಪ್ರಾ — ಣನು ಮ-ನೋಜ ನ- |
ಗಾರಿ-ಗಳಿಗನಿ — ರುದ್ಧ- ರತಿ ಮನು — ದಕ್ಷ- ಗುರು ಶಚಿ-ಯು ||
ಆರು- ಜನ ಸಮ — ಪ್ರಾಣ-ನಿಂದಲಿ |
ಹೌರ-ವೆನಿಪರು — ಹತ್ತು- ಗುಣದಲಿ |
ಮಾರ-ಜಾದ್ಯರಿ — ಗೈದು- ಗುಣದಿಂ — ದಧಮ- ಪ್ರವಹಾ-ಖ್ಯ || ೨೦-೯ ||
ಗುಣ-ದ್ವಯದಿಂ — ಕಡಿಮೆ- ಪ್ರವಹಗೆ |
ಇನ ಶ-ಶಾಂಕ ಯ — ಮ ಸ್ವ-ಯಂಭುವ- |
ಮನು ಮ-ಡದಿ ಶತ — ರೂಪ- ನಾಲ್ವರು — ಪಾದ- ಪಾದಾ-ರ್ಧ ||
ವನಧಿ- ನೀಚ ಪ — ದಾರ್ಧ- ನಾರದ- |
ಮುನಿಗೆ- ಭೃಗ್ವ — ಗ್ನಿ ಪ್ರ-ಸೂತಿಗ- |
ಳೆನಿಸು-ವರು ಪಾ — ದಾರ್ಧ- ಗುಣದಿಂ — ದಧಮ-ರಹುದೆಂ-ದು || ೨೦-೧೦ ||
ಹುತವ-ಹಗೆ ದ್ವಿಗು — ಣಾಧ-ಮರು ವಿಧಿ- |
ಸುತಮ-ರೀಚ್ಯಾ — ದಿಗಳು- ವೈವ- |
ಸ್ವತನು- ವಿಶ್ವಾ — ಮಿತ್ರ-ರಿಗೆ ಕಿಂ — ಚಿದ್ಗು-ಣಾಧಮ-ನು ||
ವ್ರತಿವ-ರ ಜಗ — ನ್ಮಿತ್ರ- ವರನಿ- |
ಋ೯ತಿಯು- ಪ್ರಾವಹಿ — ತಾರ-ರಿಗೆ ಕಿಂ- |
ಚಿತು ಗು-ಣಾಧಮ — ಧನಪ- ವಿಷ್ವ — ಕ್ಸೇನ-ರೆನಿಸುವ-ರು || ೨೦-೧೧ ||
ಧನಪ- ವಿಷ್ವ — ಕ್ಸೇನ- ಗೌರೀ- |
ತನಯ-ರಿಗೆ ಉ — ಕ್ತೇತ-ರರು ಸಮ- |
ರೆನಿಸು-ವರು ಎಂ — ಭತ್ತ-ಯಿದು ಜನ — ಶೇಷ- ಶತರೆಂ-ದು ||
ದಿನಪ-ರಾರೇ — ಳಧಿಕ- ನಾಲ್ವ- |
ತ್ತನಿಲ-ರೇಳ್ವಸು — ರುದ್ರ-ರೀರೈ- |
ದನಿತು- ವಿಶ್ವೇ — ದೇವ- ಋಭು ವ — ಶ್ವಿನಿಯು- ಪಿತೃ ಧರ-ಣೀ || ೨೦-೧೨ ||
ಇವರಿ-ಗಿಂತಲಿ — ಕೊರತೆ-ಯೆನಿಪರು |
ಚ್ಯವನ- ಸನಕಾ — ದಿಗಳು- ಪಾವಕ |
ಕವಿ ಯು-ಚಥ್ಯ ಜ — ಯಂತ- ಕಶ್ಯಪ — ಮನುಗ-ಳೇಕದ-ಶ ||
ಧ್ರುವ ನ-ಹುಷ ಶಶ — ಬಿಂದು- ಹೈಹಯ |
ದವು ಷ-ಯಂತಿ ವಿ — ರೋಚ-ನನ ನಿಜ- |
ಕುವರ- ಬಲಿ ಮೊದ — ಲಾದ- ಸಪ್ತೇಂ — ದ್ರರು ಕ-ಕುತ್ಸ್ಥ ಗ-ಯ || ೨೦-೧೩ ||
ಪೃಥು ಭ-ರತ ಮಾಂ — ಧಾತ- ಪ್ರೀಯ- |
ವ್ರತ ಮ-ರುತ ಪ್ರ — ಹ್ಲಾದ- ಸುಪರೀ- |
ಕ್ಷಿತ ಹ-ರಿಶ್ಚಂ — ದ್ರಾಂಬ-ರೀಷೋ — ತ್ತಾನ-ಪಾದ ಮು-ಖ ||
ಶತ ಸು-ಪುಣ್ಯ — ಶ್ಲೋಕ-ರು ಗದಾ- |
ಭೃತಗ-ಧಿಷ್ಠಾ — ನರು ಸು-ಪ್ರೀಯ- |
ವ್ರತಗೆ- ದ್ವಿಗುಣಾ — ಧಮರು- ಕರ್ಮಜ — ರೆಂದು- ಕರೆಸುವ-ರು || ೨೦-೧೪ ||
ನಳಿನಿ- ಸಂಜ್ಞಾ — ರೋಹಿ-ಣೀ ಶ್ಯಾ- |
ಮಲ ವಿ-ರಾಟ್ ಪ — ರ್ಜನ್ಯ-ರಧಮರು |
ಎಲರು- ಮಿತ್ರನ — ಮಡದಿ- ದ್ವಿಗುಣಾ — ಧಮಳು- ಬಾಂಬೊಳೆ-ಗೆ ||
ಜಲಮ-ಯ ಬುಧಾ — ಧಮನು- ದ್ವಿಗುಣದಿ |
ಕೆಳಗೆ-ನಿಸುವಳು — ಷಾ ಶ-ನೈಶ್ಚರ |
ಇಳೆಗ-ಳೀರು ಗು — ಣಾಧ-ಮರುಷಾ — ದೇವಿ- ದೆಸೆಯಿಂ-ದ || ೨೦-೧೫ ||
ಎರಡು- ಗುಣ ಕ — ರ್ಮಾಧಿ-ಪತಿ ಪು- |
ಷ್ಕರ ಕ-ಡಿಮೆ ಆ — ಜಾನ- ದಿವಿಜರು |
ಚಿರಪಿ-ತೃಗಳಿಂ — ದುತ್ತ-ಮರು ಕಿಂ — ಕರರು- ಪುಷ್ಕರ-ಗೆ ||
ಸುರಪ-ನಾಲಯ — ಗಾಯ-ಕೋತ್ತಮ- |
ರೆರಡ-ಯಿದು ಗುಣ — ದಿಂದ-ಧಮ ತುಂ- |
ಬುರಗೆ- ಸಮ ಶತ — ಕೋಟಿ- ಋಷಿಗಳು — ನೂರು- ಜನರುಳಿ-ದು || ೨೦-೧೬ ||
ಅವರ-ವರ ಪ — ತ್ನಿಯರು- ಅಪ್ಸರ- |
ಯುವತಿ-ಯರು ಸಮ — ಉತ್ತ-ಮರನುಳಿ- |
ದವರ-ರೆನಿಪರು — ಮನುಜ- ಗಂಧ — ರ್ವರು ದ್ವಿ-ಷಡ್ಗುಣ-ದಿ ||
ಕುವಲ-ಯಾಧಿಪ — ರೀರ-ಯಿದು ಗುಣ |
ವವನಿ-ಪರ ಸ್ತ್ರೀ — ಯರು ದ-ಶೋತ್ತರ- |
ನವತಿ- ಗುಣದಿಂ — ದಧಮ-ರೆನಿಪರು — ಮಾನು-ಷೋತ್ತಮ-ರು || ೨೦-೧೭ ||
ಸತ್ವ- ಸತ್ವರು — ಸತ್ವ- ರಾಜಸ |
ಸತ್ವ- ತಾಮಸ — ಮೂವ-ರೂ ರಜ- |
ಸತ್ವ-ರಧಿಕಾ — ರಿಗಳು- ಭಗವ — ದ್ಭಕ್ತ-ರೆನಿಸುವ-ರು ||
ನಿತ್ಯ- ಬದ್ಧರು — ರಜಸ-ರಜರು |
ತ್ಪತ್ತಿ- ಭೂಸ್ವ — ರ್ಗದೊಳು- ನರಕದಿ |
ಪೃಥ್ವಿ-ಯೊಳು ಸಂ — ಚರಿಸು-ತಿಪ್ಪರು — ರಜಸ-ತಾಮಸ-ರು || ೨೦-೧೮ ||
ತಮಸು-ಸಾತ್ವಿಕ — ರೆನಿಸಿ-ಕೊಂಬರು |
ಅಮಿತ-ನಾಖ್ಯಾ — ತಾಸು-ರರಗಣ |
ತಮಸು- ರಾಜಸ — ರೆನಿಸಿ-ಕೊಂಬರು — ದೈತ್ಯ- ಸಮುದಾ-ಯ ||
ತಮಸು- ತಾಮಸ — ಕಲಿಪು-ರಂಧ್ರಿಯು |
ಅಮಿತ- ದುರ್ಗುಣ — ಪೂರ್ಣ- ಸರ್ವಾ- |
ಧಮರೊ-ಳಧಮಾ — ಧಮ ದು-ರಾತ್ಮನು — ಕಲಿಯೆ-ನಿಸಿಕೊಂ-ಬ || ೨೦-೧೯ ||
ಇವನ- ಪೋಲುವ — ಪಾಪಿ- ಜೀವರು |
ಭುವನ- ಮೂರರೊ — ಳಿಲ್ಲ- ನೋಡಲು |
ನವವಿ-ಧ ದ್ವೇ — ಷಗಳಿ-ಗಾಕರ — ನೆನಿಸಿ-ಕೊಳುತಿ-ಪ್ಪ ||
ಬವರ-ದೊಳು ಭಂ — ಗಾರ-ದೊಳು ನಟ |
ಯುವತಿ- ದ್ಯೂತಾ — ಪೇಯ- ಮೃಷದೊಳು |
ಕವಿಸಿ- ಮೋಹವ — ಕೆಡಿಸು-ವನು ಎಂ — ದರಿತು- ತ್ಯಜಿಸುವು-ದು || ೨೦-೨೦ ||
ತ್ರಿವಿಧ- ಜೀವ — ಪ್ರತತಿ-ಗಳ ಸ- |
ಗ್ಗವೊಳೆ-ಯಾಣ್ಮಾ — ಲಯನು- ನಿರ್ಮಿಸಿ |
ಯುವತಿ-ಯರ ಒಡ — ಗೂಡಿ- ಕ್ರೀಡಿಸು — ವನು ಕೃ-ಪಾಸಾಂ-ದ್ರ ||
ದಿವಿಜ- ದಾನವ — ತಾರ-ತಮ್ಯದ |
ವಿವರ- ತಿಳಿವ ಮ — ಹಾತ್ಮ-ರಿಗೆ ಬಾ- |
ನ್ನವಿರ- ಸಖ ತಾ — ನೊಲಿದು- ಉದ್ಧರಿ — ಸುವನು- ಭವದಿಂ-ದ || ೨೦-೨೧ ||
ದೇವ- ದೈತ್ಯರ — ತಾರ-ತಮ್ಯವು |
ಪಾವ-ಮಾನಿ ಮ — ತಾನು-ಗರಿಗಿದು |
ಕೇವ-ಲಾವ — ಶ್ಯಕವು- ತಿಳಿವುದು — ಸರ್ವ- ಕಾಲದ-ಲಿ ||
ದಾವ- ಶಿಖಿ ಪಾ — ಪಾಟ-ವಿಗೆ ನವ- |
ನಾವೆ-ಯೆನಿಪುದು — ಭವ ಸ-ಮುದ್ರಕೆ |
ಪಾವ-ಟಿಗೆ ವೈ — ಕುಂಠ- ಲೋಕಕಿ — ದೆಂದು- ಕರೆಸುವು-ದು || ೨೦-೨೨ ||
ತಾರ-ತಮ್ಯ — ಜ್ಞಾನ- ಮುಕ್ತಿ- |
ದ್ವಾರ-ವೆನಿಪುದು — ಭಕ್ತ- ಜನರಿಗೆ |
ತೋರಿ- ಪೇಳಿ ಸು — ಖಾಬ್ಧಿ-ಯೊಳು ಲೋ — ಲಾಡು-ವುದು ಬುಧ-ರು ||
ಕ್ರೂರ- ಮಾನವ — ರಿಗಿದು- ಕರ್ಣಕ- |
ಠೋರ-ವೆನಿಪುದು — ನಿತ್ಯ-ದಲಿ ಅಧಿ- |
ಕಾರಿ-ಗಳಿಗಿದ — ನರುಪು-ವುದು ದು — ಸ್ತರ್ಕಿ-ಗಳ ಬಿ-ಟ್ಟು || ೨೦-೨೩ ||
ಹರಿ ಸಿ-ರಿ ವಿರಿಂ — ಚೀರ- ಭಾರತಿ |
ಗರುಡ- ಫಣಿಪತಿ — ಷಣ್ಮ-ಹಿಷಿಯರು |
ಗಿರಿಜ- ನಾಕೇ — ಶ ಸ್ಮ-ರ ಪ್ರಾ — ಣಾನಿ-ರುದ್ಧ ಶ-ಚೀ ||
ಗುರು ರ-ತೀ ಮನು — ದಕ್ಷ- ಪ್ರವಹಾ- |
ಮರುತ- ಮಾನವಿ — ಯಮ ಶ-ಶಿ ದಿವಾ- |
ಕರ ವ-ರುಣ ನಾ — ರದ ಸು-ರಾಸ್ಯ ಪ್ರ — ಸೂತಿ- ಭೃಗು ಮುನಿ-ಪ || ೨೦-೨೪ ||
ವ್ರತತಿ-ಜಾಸನ — ಪುತ್ರ-ರೆನಿಸುವ |
ವ್ರತಿವ-ರತ್ರಿ ಮ — ರೀಚಿ- ವೈವ- |
ಸ್ವತನು- ತಾರಾ — ಮಿತ್ರ- ನಿರಋತಿ — ಪ್ರವಹ- ಮಾರುತ-ನ ||
ಸತಿ ಧ-ನೇಶಾ — ಶ್ವಿನಿಗ-ಳಿರ್ಗಣ- |
ಪತಿಯು- ವಿಷ್ವ — ಕ್ಸೇನ- ಶೇಷಸು- |
ಶತರು- ಮನುಗಳು — ಚಥ್ಯ- ಚ್ಯಾವನ — ಮುನಿಗ-ಳಿಗೆ ನಮಿ-ಪೆ || ೨೦-೨೫ ||
ಶತ ಸು-ಪುಣ್ಯ — ಶ್ಲೋಕ-ರೆನಿಸುವ |
ಕ್ಷಿತಿಪ-ರಿಗೆ ನಮಿ — ಸುವೆನು- ಭಾಗೀ- |
ರಥಿ ವಿ-ರಾಟ್ಪ — ರ್ಜನ್ಯ- ರೋಹಿಣಿ — ಶ್ಯಾಮ-ಲಾ ಸಂ-ಜ್ಞಾ ||
ಹುತವ-ಹನ ಮಹಿ — ಳಾ ಬು-ಧೋಷಾ |
ಕ್ಷಿತಿ ಶ-ನೈಶ್ಚರ — ಪುಷ್ಕ-ರರಿಗಾ- |
ನತಿಸಿ- ಬಿನ್ನೈ — ಸುವೆನು- ಭಕ್ತಿ — ಜ್ಞಾನ- ಕೊಡಲೆಂ-ದು || ೨೦-೨೬ ||
ನೂರ-ಧಿಕವಾ — ಗಿಪ್ಪ- ಮತ್ಹದಿ- |
ನಾರು- ಸಾವಿರ — ನಂದ-ಗೋಪ ಕು- |
ಮಾರ-ನರ್ಧಾಂ — ಗಿಯರ-ಗಸ್ತ್ಯಾ — ದೀ ಮು-ನೀಶ್ವರ-ರು ||
ಊರ್ವ-ಶೀ ಮೊದ — ಲಾದ- ಅಪ್ಸರ- |
ನಾರಿ-ಯರು ಶತ — ತುಂಬು-ರರು ಕಂ- |
ಸಾರಿ ಗುಣಗಳ — ಕೀರ್ತ-ನೆಯ ಮಾ — ಡಿಸಲಿ- ಎನ್ನಿಂ-ದ || ೨೦-೨೭ ||
ಪಾವ-ನರು ಶುಚಿ — ಶುದ್ಧ- ನಾಮಕ- |
ದೇವ-ತೆಗಳಾ — ಜಾನ- ಚಿರಪಿತೃ- |
ದೇವ- ನರ ಗಂ — ಧರ್ವ-ರವನಿಪ — ಮಾನು-ಷೋತ್ತಮ-ರು ||
ಈ ವ-ಸುಮತಿಯೊ — ಳುಳ್ಳ- ವೈಷ್ಣವ- |
ರಾವ-ಳಿಯೊಳಿಹ — ರೆಂದು- ನಿತ್ಯದಿ |
ಸೇವಿ-ಪುದು ಸಂ — ತೋಷ-ದಿಂ ಸ — ರ್ವ ಪ್ರ-ಕಾರದ-ಲಿ || ೨೦-೨೮ ||
ಮಾನು-ಷೋತ್ತಮ — ರನ ವಿ-ಡಿದು ಚತು- |
ರಾನ-ನಾಂತ ಶ — ತೋತ್ತ-ಮತ್ವ ಕ್ರ- |
ಮೇಣ- ಚಿಂತಿಪ — ಭಕ್ತ-ರಿಗೆ ಚತು — ರವಿಧ- ಪುರುಷಾ-ರ್ಥ ||
ಶ್ರೀನಿ-ಧಿ ಜಗ — ನ್ನಾಥ-ವಿಠ್ಠಲ |
ತಾನೆ- ಒಲಿದೀ — ವನು ನಿ-ರಂತರ |
ಸಾನು-ರಾಗದಿ — ಪಠಿಸು-ವುದು ಪ್ರಾ — ಜ್ಞರಿದ- ಮರೆಯದ-ಲೆ || ೨೦-೨೯ ||
|| ಇತಿ ಶ್ರೀ ಗುಣತಾರತಮ್ಯ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||
- guNataaratamya saMdhi
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
shreedha-raa du — rgaa ma-nOrama |
vEdha- mukha suma– nasa ga-Na samaa- |
raadhi-ta padaaM — bhOja- jagadaM — tarba-hirvyaa-pta ||
gOdha-ra phaNi va — raata- patra ni- |
ShEdha- doora vi — citra- karma su- |
bhOdha- sukhamaya — gaatra- parama pa — vitra- sucari-tra || 20-1 ||
nitya- nirmala — nigama-vEdyO- |
tpatti- sthiti laya — dOSha- varjita |
stutya- poojya pra — siddha- muktaa — mukta- gaNasE-vya ||
satya-kaama sha — raNya- shaashwata |
bhRutya- vatsala — bhayani-vaaraNa |
atya-dhika saM — priyata-ma jaga — nnaatha- maaM paa-hi || 20-2 ||
parama- puruShana — roopa- guNavanu- |
sarisi- kaaMbaLu — pravaha-daMdadi |
nirupa-maLu ni — rduShTa- sukha saM — poorNa-Lenisuva-Lu ||
harige- dhaama — trayave-nisi aa- |
bharaNa- vasanaa — yudhaga-Laagi- |
ddariga-Lanu saM — harisu-vaLu a — kSharaLe-nisikoM-Du || 20-3 ||
eeta-giMtaa — naMta- guNadali |
shree ta-ruNi taa — kaDime- enipaLu |
nitya- muktaLu — nirvi-kaaraLu — triguNa- varjita-Lu ||
douta- paapa vi — riMci- pavanara |
maate-yenipa ma — haala-kumi vi- |
khyaata-Laagiha — Lella- kaaladi — shRuti pu-raaNado-Lu || 20-4 ||
kamala- saMbhava — pavana-reervaru |
samaru- samava — rtigaLu- rudraa- |
dyamara-gaNa sE — vitaru- apara — brahma- naamaka-ru ||
yamaLa-rige maha — lakShmi- taa u- |
ttamaLu- kOTi sa — jaati- guNadiM- |
damita- suvijaa — tyadhama-reniparu — brahma- vaayuga-Lu || 20-5 ||
patiga-LiMda sa — raswa-tI bhaa- |
ratiga-Ladhamaru — nooru- guNa pari- |
mita vi-jaatyava — raru ba-laj~jaa — naadi- guNadiM-da ||
atisha-yaLu vaa — gdEvi- shreebhaa- |
ratige- padada pra — yukta- vidhimaa- |
rutara- vOl ciM — tipudu- sadbha — ktiyali- kOvida-ru || 20-6 ||
khagapa- phaNipati — mRuDaru- sama vaa- |
Nige sha-taguNaa — vararu- moovaru |
migile-nisuvaru — shESha- padadiM — dali tri-yaMbaka-ge ||
nagadha-rana Sha — NmahiShi-yaru pa- |
nnaga vi-bhooShaNa — gaidu- mEnake- |
magaLu- vaaruNi — soupa-raNigaLi — gadhika-reraDu gu-Na || 20-7 ||
garuDa- shESha ma — hESa-rige sou- |
paraNi- vaaruNi — paarva-tI moo- |
varu da-shaadhama — vaaru-Nige kaDi — menisu-vaLu gou-ri ||
harana- maDadige — hattu- guNadali |
surapa- kaamaru — kaDime- iMdrage |
korate- enisuva — manma-thanu pada — diMda-laavaa-ga || 20-8 ||
eera-yidu guNa — kaDime- yaahaM- |
kaari-ka praa — Nanu ma-nOja na- |
gaari-gaLigani — ruddha- rati manu — dakSha- guru shaci-yu ||
aaru- jana sama — praaNa-niMdali |
houra-veniparu — hattu- guNadali |
maara-jaadyari — gaidu- guNadiM — dadhama- pravahaa-khya || 20-9 ||
guNa-dwayadiM — kaDime- pravahage |
ina sha-shaaMka ya — ma swa-yaMbhuva- |
manu ma-Dadi shata — roopa- naalwaru — paada- paadaa-rdha ||
vanadhi- neeca pa — daardha- naarada- |
munige- bhRugwa — gni pra-sootiga- |
Lenisu-varu paa — daardha- guNadiM — dadhama-rahudeM-du || 20-10 ||
hutava-hage dwigu — Naadha-maru vidhi- |
sutama-reecyaa — digaLu- vaiva- |
swatanu- vishwaa — mitra-rige kiM — cidgu-Naadhama-nu ||
vrativa-ra jaga — nmitra- varani- |
Ru9tiyu- praavahi — taara-rige kiM- |
citu gu-Naadhama — dhanapa- viShwa — ksEna-renisuva-ru || 20-11 ||
dhanapa- viShwa — ksEna- gourI- |
tanaya-rige u — ktEta-raru sama- |
renisu-varu eM — bhatta-yidu jana — shESha- shatareM-du ||
dinapa-raarE — Ladhika- naalwa- |
ttanila-rELwasu — rudra-reerai- |
danitu- vishwE — dEva- Rubhu va — shwiniyu- pitRu dhara-NI || 20-12 ||
ivari-giMtali — korate-yeniparu |
cyavana- sanakaa — digaLu- paavaka |
kavi yu-cathya ja — yaMta- kashyapa — manuga-LEkada-sha ||
dhruva na-huSha shasha — biMdu- haihaya |
davu Sha-yaMti vi — rOca-nana nija- |
kuvara- bali moda — laada- saptEM — draru ka-kutstha ga-ya || 20-13 ||
pRuthu bha-rata maaM — dhaata- preeya- |
vrata ma-ruta pra — hlaada- suparI- |
kShita ha-rishcaM — draaMba-reeShO — ttaana-paada mu-kha ||
shata su-puNya — shlOka-ru gadaa- |
bhRutaga-dhiShThaa — naru su-preeya- |
vratage- dwiguNaa — dhamaru- karmaja — reMdu- karesuva-ru || 20-14 ||
naLini- saMj~jaa — rOhi-NI shyaa- |
mala vi-raaT pa — rjanya-radhamaru |
elaru- mitrana — maDadi- dwiguNaa — dhamaLu- baaMboLe-ge ||
jalama-ya budhaa — dhamanu- dwiguNadi |
keLage-nisuvaLu — Shaa sha-naishcara |
iLega-LIru gu — Naadha-maruShaa — dEvi- deseyiM-da || 20-15 ||
eraDu- guNa ka — rmaadhi-pati pu- |
Shkara ka-Dime aa — jaana- divijaru |
cirapi-tRugaLiM — dutta-maru kiM — kararu- puShkara-ge ||
surapa-naalaya — gaaya-kOttama- |
reraDa-yidu guNa — diMda-dhama tuM- |
burage- sama shata — kOTi- RuShigaLu — nooru- janaruLi-du || 20-16 ||
avara-vara pa — tniyaru- apsara- |
yuvati-yaru sama — utta-maranuLi- |
davara-reniparu — manuja- gaMdha — rvaru dwi-ShaDguNa-di ||
kuvala-yaadhipa — reera-yidu guNa |
vavani-para stree — yaru da-shOttara- |
navati- guNadiM — dadhama-reniparu — maanu-ShOttama-ru || 20-17 ||
satwa- satwaru — satwa- raajasa |
satwa- taamasa — moova-roo raja- |
satwa-radhikaa — rigaLu- bhagava — dbhakta-renisuva-ru ||
nitya- baddharu — rajasa-rajaru |
tpatti- bhooswa — rgadoLu- narakadi |
pRuthwi-yoLu saM — carisu-tipparu — rajasa-taamasa-ru || 20-18 ||
tamasu-saatwika — renisi-koMbaru |
amita-naakhyaa — taasu-raragaNa |
tamasu- raajasa — renisi-koMbaru — daitya- samudaa-ya ||
tamasu- taamasa — kalipu-raMdhriyu |
amita- durguNa — poorNa- sarvaa- |
dhamaro-Ladhamaa — dhama du-raatmanu — kaliye-nisikoM-ba || 20-19 ||
ivana- pOluva — paapi- jeevaru |
bhuvana- mooraro — Lilla- nODalu |
navavi-dha dwE — ShagaLi-gaakara — nenisi-koLuti-ppa ||
bavara-doLu bhaM — gaara-doLu naTa |
yuvati- dyootaa — pEya- mRuShadoLu |
kavisi- mOhava — keDisu-vanu eM — daritu- tyajisuvu-du || 20-20 ||
trividha- jeeva — pratati-gaLa sa- |
ggavoLe-yaaNmaa — layanu- nirmisi |
yuvati-yara oDa — gooDi- kreeDisu — vanu kRu-paasaaM-dra ||
divija- daanava — taara-tamyada |
vivara- tiLiva ma — haatma-rige baa- |
nnavira- sakha taa — nolidu- uddhari — suvanu- bhavadiM-da || 20-21 ||
dEva- daityara — taara-tamyavu |
paava-maani ma — taanu-garigidu |
kEva-laava — shyakavu- tiLivudu — sarva- kaalada-li ||
daava- shikhi paa — paaTa-vige nava- |
naave-yenipudu — bhava sa-mudrake |
paava-Tige vai — kuMTha- lOkaki — deMdu- karesuvu-du || 20-22 ||
taara-tamya — j~jaana- mukti- |
dwaara-venipudu — bhakta- janarige |
tOri- pELi su — khaabdhi-yoLu lO — laaDu-vudu budha-ru ||
kroora- maanava — rigidu- karNaka- |
ThOra-venipudu — nitya-dali adhi- |
kaari-gaLigida — narupu-vudu du — starki-gaLa bi-TTu || 20-23 ||
hari si-ri viriM — ceera- bhaarati |
garuDa- phaNipati — ShaNma-hiShiyaru |
girija- naakE — sha sma-ra praa — Naani-ruddha sha-cee ||
guru ra-tee manu — dakSha- pravahaa- |
maruta- maanavi — yama sha-shi divaa- |
kara va-ruNa naa — rada su-raasya pra — sooti- bhRugu muni-pa || 20-24 ||
vratati-jaasana — putra-renisuva |
vrativa-ratri ma — reeci- vaiva- |
swatanu- taaraa — mitra- niraRuti — pravaha- maaruta-na ||
sati dha-nEshaa — shwiniga-LirgaNa- |
patiyu- viShwa — ksEna- shEShasu- |
shataru- manugaLu — cathya- cyaavana — muniga-Lige nami-pe || 20-25 ||
shata su-puNya — shlOka-renisuva |
kShitipa-rige nami — suvenu- bhaagee- |
rathi vi-raaTpa — rjanya- rOhiNi — shyaama-laa saM-jjaa ||
hutava-hana mahi — Laa bu-dhOShaa |
kShiti sha-naishchara — puShka-rarigaa- |
natisi- binnai — suvenu- bhakti — jjaana- koDaleM-du || 20-26 ||
noora-dhikavaa — gippa- mat~hadi- |
naaru- saavira — naMda-gOpa ku- |
maara-nardhaaM — giyara-gastyaa — dee mu-neeshwara-ru ||
oorva-shee moda — laada- apsara- |
naari-yaru shata — tuMbu-raru kaM- |
saari guNagaLa — keerta-neya maa — Disali- enniM-da || 20-27 ||
paava-naru shuci — shuddha- naamaka- |
dEva-tegaLaa — jaana- cirapitRu- |
dEva- nara gaM — dharva-ravanipa — maanu-ShOttama-ru ||
ee va-sumatiyo — LuLLa- vaiShNava- |
raava-LiyoLiha — reMdu- nityadi |
sEvi-pudu saM — tOSha-diM sa — rva pra-kaarada-li || 20-28 ||
maanu-ShOttama — rana vi-Didu catu- |
raana-naaMta sha — tOtta-matwa kra- |
mENa- ciMtipa — bhakta-rige catu — ravidha- puruShaa-rtha ||
shreeni-dhi jaga — nnaatha-viThThala |
taane- olidee — vanu ni-raMtara |
saanu-raagadi — paThisu-vudu praa — j~jarida- mareyada-le || 20-29 ||
|| iti shree guNataaratamya saMdhi saMpoorNaM ||
|| shreekRuShNaarpaNamastu ||

Leave a Reply
You must be logged in to post a comment.