Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೧೮. ಸರ್ವ ಸ್ವತಂತ್ರ್ಯ ಸಂಧಿ
|| ( ಕ್ರೀಡಾವಿಲಾಸ ಸಂಧಿ ) ||
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಶ್ರೀನಿ-ವಾಸನ — ಚರಿತೆ-ಗಳ ಪರ- |
ಮಾನು- ರಾಗದಿ — ಬೆಸಗೊ-ಳಲು ಮುನಿ- |
ಶೌನ-ಕಾದ್ಯರಿ — ಗರುಹಿ-ದನು ಸೂ — ತಾರ್ಯ- ದಯದಿಂ-ದ || ಸಂ. ಸೂ. ||
ಪಚನ- ಭಕ್ಷಣ — ಗಮನ- ಭೋಜನ |
ವಚನ- ಮೈಥುನ — ಶಯನ- ವೀಕ್ಷಣ- |
ಅಚಲ-ನಾಚಲ — ನ ಪ್ರ-ಯತ್ನವು — ಸಾಧ್ಯ-ವೇ ಜನ-ಕೆ ||
ಶುಚಿ ಸ-ದನ ದಯ — ದಿಂದ- ಜೀವರ |
ನಿಚಯ-ದೊಳು ತಾ — ನಿಂತು- ಮಾಡುವ |
ನುಚಿತ- ನೋಚಿತ — ಕರ್ಮ-ಗಳನೆಂ — ದರಿದು- ಕೊಂಡಾ-ಡು || ೧೮-೧ ||
ವಿಷ್ಟ-ರಶ್ರವ — ದೇಹ-ದೊಳಗೆ ಪ್ರ- |
ವಿಷ್ಟ-ನಾಗಿ ನಿ — ರಂತ-ರದಿ ಬಹು- |
ಚೇಷ್ಟೆ-ಗಳ ಮಾ — ಡುತಿರೆ- ಕಂಡು ಸ — ಜೀವಿ-ಯೆನುತಿಹ-ರು ||
ಹೃಷ್ಟ-ರಾಗುವ — ರವನ- ನೋಡಿ ಕ- |
ನಿಷ್ಠ-ರೆಲ್ಲರು — ಸೇವೆ- ಮಾಳ್ಪರು |
ಬಿಟ್ಟ- ಕ್ಷಣದಲಿ — ಕುಣಪ-ನೆಂದರಿ — ದದನು-ಪೇಕ್ಷಿಪ-ರು || ೧೮-೨ ||
ಕ್ರೀಡೆ-ಗೋಸುಗ — ಅವರ-ವರ ಗತಿ |
ನೀಡ-ಲೋಸುಗ — ದೇಹ-ಗಳ ಕೊ- |
ಟ್ಟಾಡು-ವನು ಸ್ವೇ — ಚ್ಛೆಯಲಿ- ಬ್ರಹ್ಮೇ — ಶಾದ್ಯ-ರೊಳು ಪೊ-ಕ್ಕು ||
ಮಾಡು-ವನು ವ್ಯಾ — ಪಾರ- ಬಹು ವಿಧ |
ಮೂಢ- ದೈತ್ಯರೊ — ಳಿದ್ದು- ಪ್ರತಿದಿನ |
ಕೇಡು- ಲಾಭಗ — ಳಿಲ್ಲ-ವಿದರಿಂ — ದಾವ- ಕಾಲದ-ಲಿ || ೧೮-೩ ||
ಅಕ್ಷ-ರೇಡ್ಯನು — ಬ್ರಹ್ಮ- ವಾಯು- |
ತ್ರ್ಯಕ್ಷ- ಸುರಪ ಸು — ರಾಸು-ರರ ಅ- |
ಧ್ಯಕ್ಷ-ನಾಗಿ — ದ್ದೆಲ್ಲ-ರೊಳು ವ್ಯಾ — ಪಾರ- ಮಾಡುತಿ-ಹ ||
ಅಕ್ಷ-ಯನು ಸ — ತ್ಯಾತ್ಮ-ಕ ಪರಾ- |
ಪೇಕ್ಷೆ-ಯಿಲ್ಲದೆ — ಸರ್ವ-ರೊಳಗೆ ವಿ- |
ಲಕ್ಷ-ಣನು ತಾ — ನಾಗಿ- ಲೋಕವ — ರಕ್ಷಿ-ಸುತಲಿ-ಪ್ಪ || ೧೮-೪ ||
ಶ್ರೀ ಸ-ರಸ್ವತಿ — ಭಾರ-ತೀ ಗಿರಿ- |
ಜಾ ಶ-ಚೀ ರತಿ — ರೋಹಿ-ಣೀ ಸಂ- |
ಜ್ಞಾ ಸು-ಶತರೂ — ಪಾದ್ಯ-ಖಿಳ ಸ್ತ್ರೀ — ಯರೊಳು- ಸ್ತ್ರೀರೂ-ಪ ||
ವಾಸ-ವಾಗಿ — ದ್ದೆಲ್ಲ-ರಿಗೆ ವಿ- |
ಶ್ವಾಸ- ತನ್ನಲಿ — ಕೊಟ್ಟು- ಅವರಭಿ- |
ಲಾಷೆ-ಗಳ ಪೂ — ರೈಸು-ತಿಪ್ಪನು — ಯೋಗ್ಯ-ತೆಗಳರಿ-ತು || ೧೮-೫ ||
ಕೋಲು- ಕುದುರೆಯ — ಮಾಡಿ- ಆಡುವ |
ಬಾಲ-ಕರ ತೆರ — ನಂತೆ- ಲಕುಮೀ- |
ಲೋಲ- ಸ್ವಾತಂ — ತ್ರಿಯ ಗು-ಣವ ಬ್ರ — ಹ್ಮಾದ್ಯ-ರೊಳಗಿ-ಟ್ಟು ||
ಲೀಲೆ- ಗೈವನು — ತನ್ನ-ವರಿಗನು- |
ಕೂಲ-ವಾಗಿ — ದ್ದೆಲ್ಲ- ಕಾಲದಿ |
ಖೂಳ-ರಿಗೆ ಪ್ರತಿ — ಕೂಲ-ನಾಗಿಹ — ಪ್ರಕಟ-ನಾಗದ-ಲೆ || ೧೮-೬ ||
ಸೌಪ-ರಣಿ ವರ — ವಹನ- ನಾನಾ- |
ರೂಪ- ನಾಮದಿ — ಕರೆಸು-ತವರ ಸ- |
ಮೀಪ-ದಲ್ಲಿ — ದ್ದಖಿಳ- ವ್ಯಾಪಾ — ರಗಳ- ಮಾಡುವ-ನು ||
ಪಾಪ- ಪುಣ್ಯಗ — ಳೆರಡು- ಅವರ ಸ್ವ- |
ರೂಪ-ಗಳನನು — ಸರಿಸಿ- ಉಣಿಪ ಪ- |
ರೋಪ-ಕಾರಿ ಪ — ರೇಶ- ಪೂರ್ಣಾ — ನಂದ- ಜ್ಞಾನಘ-ನ || ೧೮-೭ ||
ಅಹರ- ನಿದ್ರಾ — ಮೈಥು-ನಗಳಹ- |
ರಹರ- ಬಯಸಿ ಬ — ಳಲುವ- ಲಕ್ಷ್ಮೀ- |
ಮಹಿತ-ನ ಮಹಾ — ಮಹಿಮೆ-ಗಳನೆಂ — ತರಿವ- ನಿತ್ಯದ-ಲಿ ||
ಅಹಿಕ- ಸೌಖ್ಯವ — ಮರೆದು- ಮನದಲಿ |
ಗ್ರಹಿಸಿ- ಶಾಸ್ತ್ರಾ — ರ್ಥಗಳ- ಪರಮೋ- |
ತ್ಸಹದಿ- ಕೊಂಡಾ — ಡುತಲಿ- ಮೈಮರೆ — ದವರಿ-ಗಲ್ಲದ-ಲೆ || ೧೮-೮ ||
ಬಂಧ- ಮೋಕ್ಷ — ಪ್ರದನ- ಜ್ಞಾನವು |
ಮಂದ-ಮತಿಗಳಿ — ಗೆಂತು- ದೊರೆವುದು |
ಬಿಂದು-ಮಾತ್ರ ಸು — ಖಾನು-ಭವ ಪ — ರ್ವತಕೆ- ಸಮ ದುಃ-ಖ ||
ಎಂದು- ತಿಳಯದ — ಲನ್ಯ- ದೈವಗ- |
ಳಿಂದ- ಸುಖವಾ — ಪೇಕ್ಷಿ-ಸುವರು ಮು- |
ಕುಂದ-ನಾರಾ — ಧನೆಯ- ಬಿಟ್ಟವ — ಗುಂಟೆ- ಮುಕ್ತಿಸು-ಖ || ೧೮-೯ ||
ರಾಜ- ತನ್ನಾ — ಮಾತ್ಯ- ಕರುಣದಿ |
ನೈಜ- ಜನರಿಗೆ — ಕೊಟ್ಟು- ಕಾರ್ಯ ನಿ- |
ಯೋಜಿ-ಸುತ ಮಾ — ನಾಪ-ಮಾನವ — ಮಾಳ್ಪ- ತೆರದಂ-ತೆ ||
ಶ್ರೀಜ-ನಾರ್ದನ — ಸಕಲ-ರೊಳಗಪ- |
ರಾಜಿ-ತನು ತಾ — ನಾಗಿ- ಸರ್ವಪ್ರ- |
ಯೋಜ-ನವ ಮಾ — ಡಿಸುತ- ಮಾಡುವ — ಫಲಕೆ- ಗುರಿಮಾ-ಡಿ || ೧೮-೧೦ ||
ವಾಸು-ದೇವ ಸ್ವ — ತಂತ್ರ-ವ ಸರೋ- |
ಜಾಸ-ನಾದ್ಯಮ — ರಾ ಸು-ರರಿಗಿಯ- |
ಲೋಸು-ಗರ್ಧವ — ತೆಗೆದ-ದರೊಳ — ರ್ಧವ ಚ-ತುರ್ಭಾ-ಗ- |
ಗೈಸಿ- ಒಂದನು — ಶತವಿ-ಧ ದ್ವಿಪಂ- |
ಚಾಶ-ತಾಬ್ಜ ಜ — ಗಷ್ಟ- ಚತ್ವಾ- |
ರಿಂಶ-ದನಿಲನಿ — ಗಿತ್ತು- ವಾಣೀ — ಭಾರ-ತೀಗ-ರ್ಧ || ೧೮-೧೧ ||
ದ್ವಿತಿಯ- ಭಾಗವ — ತೆಗೆದು- ಕೊಂಡದ- |
ಶತ ವಿ-ಭಾಗವ — ಮಾಡಿ- ತಾ ವಿಂ- |
ಶತಿ ಉ-ಮೇಶನೊ — ಳಿಟ್ಟು- ಇಂದ್ರನೊ — ಳೈದ-ಧಿಕ ಹ-ತ್ತು ||
ರತಿಪ-ನೊಳಗಿನಿ — ತಿಟ್ಟ-ಖಿಳ ದೇ- |
ವತೆಗ-ಳೊಳಗೀ — ರೈದು- ಜೀವ- |
ಪ್ರತತಿ-ಯೊಳು ದಶ — ವೈದ-ಧಿಕ ನಾ — ಲ್ವತ್ತು- ದೈತ್ಯರೊ-ಳು || ೧೮-೧೨ ||
ಕಾರು-ಣಿಕ ಸ್ವಾ — ತಂತ್ರಿ-ಯತ್ವವ |
ಮೂರು-ವಿಧ ಗೈ — ಸೆರಡು- ತನ್ನೊಳು |
ನಾರಿ-ಗೊಂದನು — ಕೊಟ್ಟು- ಸ್ವಾತಂ — ತ್ರಿಯವ- ಸರ್ವರಿ-ಗೆ ||
ಧಾರು-ಣಿಪ ತ — ನ್ನಣುಗ-ರಿಗೆ ವ್ಯಾ- |
ಪಾರ- ಕೊಟ್ಟು ಗು — ಣಾಗು-ಣಗಳ ವಿ- |
ಚಾರ- ಮಾಡುವ — ತೆರದಿ- ತ್ರಿಗುಣ — ವ್ಯಕ್ತಿ-ಯನೆ ಮಾ-ಳ್ಪ || ೧೮-೧೩ ||
ಪುಣ್ಯ- ಕರ್ಮಕೆ — ಸಹಯ-ವಾಗುವ |
ಧನ್ಯ-ರಿಗೆ ಕ — ಲ್ಯಾದಿ- ದೈತ್ಯರ- |
ಪುಣ್ಯ- ಫಲಗಳ — ನೀವ- ದಿವಿಜರ — ಪಾಪ- ಕರ್ಮಫ-ಲ ||
ಅನ್ಯ- ಕರ್ಮವ — ಮಾಳ್ಪ-ರಿಗೆ ಅನು- |
ಗುಣ್ಯ- ಜನರಿಗೆ — ಕೊಡುವ- ಬಹು ಕಾ- |
ರುಣ್ಯ- ಸಾಗರ — ನೀತೆ-ರದಿ ಭ — ಕ್ತರನು- ಸಂತೈ-ಪ || ೧೮-೧೪ ||
ನಿರುಪ-ಮಗೆ ಸಮ — ರುಂಟು- ಎಂದು- |
ಚ್ಚರಿಸು-ವವ ತ — ದ್ಭಕ್ತ-ರೊಳು ಮ- |
ತ್ಸರಿಸು-ವವ ಗುಣ — ಗುಣಿಗ-ಳಿಗೆ ಭೇ — ದಗಳ- ಪೇಳುವ-ವ ||
ದರ ಸು-ದರ್ಶನ — ಊರ್ಧ್ವ- ಪುಂಡ್ರವ |
ಧರಿಸಿ-ದವರೊಳು — ದ್ವೇಷಿ-ಸುವ ಹರಿ- |
ಚರಿತೆ-ಗಳ ಕೇ — ಳದಲೆ- ಲೋಗರ — ವಾರ್ತೆ- ಕೇಳುವ-ವ || ೧೮-೧೫ ||
ಏವ-ಮಾದಿ — ದ್ವೇಷ-ವುಳ್ಳ ಕು- |
ಜೀವ-ರೆಲ್ಲರ — ದೈತ್ಯ-ರೆಂಬರು |
ಕೋವಿ-ದರ ವಿ — ಜ್ಞಾನ- ಕರ್ಮವ — ನೋಡಿ- ನಿಂದಿಪ-ರು ||
ದೇವ- ದೇವನ — ಬಿಟ್ಟು- ಯಾವ- |
ಜ್ಜೀವ- ಪರಿಯಂ — ತರದಿ- ತುಚ್ಛರ |
ಸೇವೆ-ಯಿಂದುಪ — ಜೀವಿ-ಸುವರ — ಜ್ಞಾನ-ಕೊಳಗಾ-ಗಿ || ೧೮-೧೬ ||
ಕಾಮ- ಲೋಭ — ಕ್ರೋಧ- ಮದ ಹಿಂ- |
ಸಾಮ-ಯಾನೃತ — ದಂಭ- ಕಪಟ ತ್ರಿ- |
ಧಾಮ-ನವತಾ — ರಗಳ- ಭೇದ ಅ — ಪೂರ್ಣ- ಸುಖ ಬ-ದ್ಧ ||
ಆಮಿ-ಷನಿವೇ — ದಿತವ-ಭೋಜ್ಯತಿ- |
ತಾಮ-ಸಾನ್ನವ — ನುಂಬ- ತಾಮಸ- |
ಶ್ರೀಮ-ದಾಂಧರ — ಸಂಗ-ದಿಂದಲಿ — ತಮವೆ- ವರ್ಧಿಪು-ದು || ೧೮-೧೭ ||
ಜ್ಞಾನ- ಭಕ್ತಿ ವಿ — ರಕ್ತಿ- ವಿನಯ ಪು- |
ರಾಣ- ಶಾಸ್ತ್ರ — ಶ್ರವಣ- ಚಿಂತನ |
ದಾನ- ಶಮ ದಮ — ಯಜ್ಞ- ಸತ್ಯಾ — ಹಿಂಸೆ- ಭೂತದ-ಯಾ ||
ಧ್ಯಾನ- ಭಗವ — ನ್ನಾಮ- ಕೀರ್ತನ |
ಮೌನ- ಜಪ ತಪ — ವೃತ- ಸುತೀರ್ಥ- |
ಸ್ನಾನ- ಮಂತ್ರ — ಸ್ತೋತ್ರ- ವಂದನ — ಸಜ್ಜ-ನರ ಗುಣ-ವು || ೧೮-೧೮ ||
ಲೇಶ- ಸ್ವಾತಂ — ತ್ರಿಯ ಗು-ಣವನು ಪ್ರ- |
ವೇಶ-ಗೈಸಿದ — ಕಾರ-ಣದಿ ಗುಣ- |
ದೋಷ-ಗಳು ತೋ — ರುವವು- ಸತ್ವಾ — ಸತ್ವ- ಜೀವರೊ-ಳು ||
ಶ್ವಾಸ- ಭೋಜನ — ಪಾನ- ಶಯನ ವಿ- |
ಲಾಸ- ಮೈಥುನ — ಗಮನ- ಹರ್ಷ |
ಕ್ಲೇಷ- ಸ್ವಪ್ನ ಸು — ಷುಪ್ತಿ- ಜಾಗ್ರತೆ — ಯಹವು- ಚೇತನ-ಕೆ || ೧೮-೧೯ ||
ಅರ್ಧ- ತನ್ನೊಳ — ಗಿರಿಸಿ- ಉಳಿದೊಂ- |
ದರ್ಧ-ವ ವಿಭಾ — ಗವ ಗ-ಯಿಸಿ ವೃಜಿ- |
ನಾರ್ದ-ನನು ಪೂ — ರ್ವದಲಿ- ಸ್ವಾತಂ — ತ್ರಿಯವ- ಕೊಟ್ಟಂ-ತೆ ||
ಸ್ವರ್ಧು-ನೀಪಿತ — ಕೊಡುವ-ವರ ಸುಖ- |
ವೃದ್ಧಿ-ಗೋಸುಗ — ಬ್ರಹ್ಮ- ವಾಯು ಕ- |
ಪರ್ದಿ- ಮೊದಲಾ — ದವರೊ-ಳಿದ್ದವ — ಯೋಗ್ಯ-ತೆಯನರಿ-ತು || ೧೮-೨೦ ||
ಹಲಧ-ರಾನುಜ — ಮಾಳ್ಪ- ಕೃತ್ಯವ |
ತಿಳಿಯ-ದಾಹಂ — ಕಾರ-ದಿಂದೆ- |
ನ್ನುಳಿದು- ವಿಧಿಯು ನಿ — ಷೇಧ- ಪಾತ್ರರು — ಇಲ್ಲ-ವೆಂಬುವ-ಗೆ ||
ಫಲಗ-ಳ ದ್ವಯ — ಕೊಡುವ- ದೈತ್ಯರ |
ಕಲುಷ- ಕರ್ಮವ — ಬಿಟ್ಟು- ಪುಣ್ಯವ |
ಸೆಳೆದು- ತನ್ನೊಳ — ಗಿಟ್ಟು- ಕ್ರಮದಿಂ — ಕೊಡುವ- ಭಕುತರಿ-ಗೆ || ೧೮-೨೧ ||
ತೋಯ- ಜಾಪ್ತನ — ಕಿರಣ- ವೃಕ್ಷ- |
ಚ್ಛಾಯ- ವರ್ತಿಸು — ವಂತೆ- ಕಮಲದ- |
ಳಾಯ-ತಾಕ್ಷನು — ಸರ್ವ-ರೊಳು ವ್ಯಾ — ಪಿಸಿದ- ಕಾರಣ-ದಿ ||
ಹೇಯ- ಸದ್ಗುಣ — ಕರ್ಮ- ತೋರ್ಪವು |
ನ್ಯಾಯ- ಕೋವಿದ — ರಿಗೆ ನಿ-ರಂತರ |
ಶ್ರೀಯ-ರಸ ಸ — ರ್ವೋತ್ತ-ಮೋತ್ತಮ — ನೆಂದು- ಪೇಳುವ-ರು || ೧೮-೨೨ ||
ಮೂಲ-ಕಾರಣ — ಪ್ರಕೃತಿ-ಯೆನಿಪ ಮ- |
ಹಾಲ-ಕುಮಿ ಎ — ಲ್ಲರೊಳ-ಗಿದ್ದು ಸು- |
ಲೀಲೆ-ಗೈಯುತ — ಪುಣ್ಯ- ಪಾಪಗ — ಳರ್ಪಿ-ಸಳು ಪತಿ-ಗೆ ||
ಪಾಲ-ಗಡಲೊಳು — ಬಿದ್ದ- ಜಲ ಕೀ- |
ಲಾಲ-ವೆನಿಪುದೆ — ಜೀವ-ಕೃತ ಕ- |
ರ್ಮಾಳಿ- ತದ್ವತು — ಶುಭವು- ಎನಿಪವು — ಎಲ್ಲ- ಕಾಲದ-ಲಿ || ೧೮-೨೩ ||
ಜ್ಞಾನ- ಸುಖ ಬಲ — ಪೂರ್ಣ- ವಿಷ್ಣು ವಿ- |
ಗೇನು- ಮಾಳ್ಪುವು — ತ್ರಿಗುಣ- ಕಾರ್ಯ ಕೃ- |
ಶಾನು-ವಿನ ಕೃಮಿ — ಕವಿದು- ಭಕ್ಷಿಪು — ದುಂಟೆ- ಲೋಕದೊ-ಳು ||
ಈ ನ-ಳಿನಜಾಂ — ಡವನು- ಬ್ರಹ್ಮೇ- |
ಶಾನ- ಮುಖ್ಯ ಸು — ರಾಸು-ರರ ಕಾ- |
ಲಾನ-ಲನವೋಲ್ — ನುಂಗು-ವನಿಗೀ — ಪಾಪ-ಗಳ ಭಯ-ವೆ || ೧೮-೨೪ ||
ಮೋದ- ಶಿರ ದ — ಕ್ಷಿಣ ಸು-ಪಕ್ಷ ಪ್ರ- |
ಮೋದ- ಉತ್ತರ — ಪಕ್ಷ-ವೆಂದು ಋ- |
ಗಾದಿ- ಶ್ರುತಿಗಳು — ಪೇಳು-ವವು ಆ — ನಂದ-ಮಯ ಹರಿ-ಗೆ ||
ಮೋದ- ವೈಷಿಕ — ಸುಖ ವಿ-ಷೇಶ ಪ್ರ- |
ಮೋದ- ಪಾರ — ತ್ರಿಕ ಸು-ಖಪ್ರದ- |
ನಾದ- ಕಾರಣ — ದಿಂದ- ಮೋದ ಪ್ರ — ಮೋದ-ನೆನಿಸಿದ-ನು || ೧೮-೨೫ ||
ಎಂದಿ-ಗಾದರು — ವೃಷ್ಟಿ-ಯಿಂದ ವ- |
ಸುಂಧ-ರೆಯೊಳಿ — ಪ್ಪಖಿಳ- ಜಲದಿಂ- |
ಸಿಂಧು- ವೃದ್ಧಿಯ — ನೈದು-ವುದೆ ಬಾ — ರದಿರೆ- ಬರಿದಹು-ದೆ ||
ಕುಂದು- ಕೊರತೆಗ — ಳಿಲ್ಲ-ದಿಹ ಸ್ವಾ- |
ನಂದ- ಸಂಪೂ — ರ್ಣ ಸ್ವ-ಭಾವಗೆ |
ಬಂದು- ಮಾಡುವು — ದೇನು- ಕರ್ಮಾ — ಕರ್ಮ- ಜನ್ಯಫ-ಲ || ೧೮-೨೬ ||
ದೇಹ- ವೃಕ್ಷದೊ — ಳೆರಡು- ಪಕ್ಷಿಗ- |
ಳೀಹ-ವೆಂದಿಗು — ಬಿಡದೆ- ಪರಮ- |
ಸ್ನೇಹ-ದಿಂದಲಿ — ಕರ್ಮ-ಜ ಫಲಗ — ಳುಂಬ- ಜೀವಖ-ಗ ||
ಶ್ರೀಹ-ರಿಯು ತಾ — ಸಾರ-ಭೋಕ್ತನು |
ದ್ರೊಹಿ-ಸುವ ಕ — ಲ್ಯಾದಿ- ದೈತ್ಯ ಸ- |
ಮೂಹ-ಕೀವ ವಿ — ಶಿಷ್ಟ- ಪಾಪ — ಕ್ಲೇಶ-ವೆಲ್ಲರಿ-ಗೆ || ೧೮-೨೭ ||
ದ್ಯುಮಣಿ- ಕಿರಣವ — ಕಂಡ- ಮಾತ್ರ-ದಿ |
ತಿಮಿರ-ವೋಡುವ — ತೆರದಿ- ಲಕ್ಷ್ಮೀ- |
ರಮಣ- ನೋಡಿದ — ಮಾತ್ರ-ದಿಂದಘ — ನಾಶ-ವೈದುವು-ದು ||
ಕಮಲ- ಸಂಭವ — ಮುಖ್ಯ- ರೆಲ್ಲಾ |
ಸುಮನ-ಸರೊಳಿಹ — ಪಾಪ- ರಾಶಿಯ |
ಅಮರ- ಮುಖನಂ — ದದಲಿ- ಭಸ್ಮವ — ಮಾಳ್ಪ- ಹರಿ ತಾ-ನು || ೧೮-೨೮ ||
ಚತುರ- ಶತಭಾ — ಗದಿ ದ-ಶಾಂಶದೊ- |
ಳಿತರ- ಜೀವರಿ — ಗೀವ- ಲೇಶವ |
ದಿತಿಜ- ದೇವ — ರ್ಕಳಿಗೆ- ಕೊಡುವ ವಿ — ಶಿಷ್ಟ- ದುಃಖ ಸು-ಖ ||
ಮತಿ ವಿ-ಹೀನ — ಪ್ರಾಣಿ-ಗಳಿಗಾ- |
ಹುತಿಯ- ಸುಖ ಮೃತಿ — ದುಃಖ-ವರ ಯೋ- |
ಗ್ಯತೆಯ-ನರಿತು ಪಿ — ಪೀಲ- ಮಶಕಾ — ದಿಗಳಿ-ಗೀವ ಹ-ರಿ || ೧೮-೨೯ ||
ನಿತ್ಯ- ನಿರಯಾಂ — ಧಾಖ್ಯ- ಕೂಪದಿ |
ಭೃತ್ಯ-ರಿಂದೊಡ — ಗೂಡಿ- ಪುನರಾ- |
ವರ್ತಿ- ವರ್ಜಿತ — ಲೋಕ-ವೈದುವ — ಕಲಿಯು- ದ್ವೇಷದ-ಲಿ ||
ಸತ್ಯ-ಲೋಕಾ — ಧಿಪ ಚ-ತುರ್ಮುಖ |
ತತ್ತ್ವ-ದೇವ — ರ್ಕಳ ಸ-ಹಿತ ನಿಜ- |
ಮುಕ್ತಿ-ಯೈದುವ — ಹರಿಪ-ದಾಬ್ಜವ — ಭಜಿಸಿ- ಭಕುತಿಯ-ಲಿ || ೧೮-೩೦ ||
ವಿಧಿ ನಿ-ಷೇಧಗ — ಳೆರಡು- ಮರೆಯ-ದೆ |
ಮಧುವಿ-ರೋಧಿಯ — ಪಾದ-ಕರ್ಪಿಸು |
ಅದಿತಿ- ಮಕ್ಕಳಿ — ಗೀವ- ಪುಣ್ಯವ — ಪಾಪ- ದೈತ್ಯರಿ-ಗೆ ||
ಸುದರು-ಶನಧರ — ಗೀಯ-ದಿರೆ ಬಂ- |
ದೊದಗಿ- ಒಯ್ವರು — ಪುಣ್ಯ- ದೈತ್ಯರು |
ಅಧಿಪ-ರಿಲ್ಲದ — ವೃಕ್ಷ-ಗಳ ಫಲ — ದಂತೆ- ನಿತ್ಯದ-ಲಿ || ೧೮-೩೧ ||
ತಿಲಜ- ಕಶ್ಮಲ — ತ್ಯಜಿಸಿ- ದೀಪವು |
ತಿಳಿಯ- ತೈಲವ — ಗ್ರಹಿಸಿ- ಮಂದಿರ- |
ದೊಳಗೆ- ವ್ಯಾಪಿಸಿ — ಇಪ್ಪ- ಕತ್ತಲೆ — ಭಂಗಿ-ಸುವ ತೆರ-ದಿ ||
ಕಲಿ ಮೊ-ದಲುಗೊಂ — ಡಖಿಳ- ದಾನವ- |
ಕುಲಜ-ರನುದಿನ — ಮಾಳ್ಪ- ಪುಣ್ಯಜ- |
ಫಲವ- ಬ್ರಹ್ಮಾ — ದ್ಯರಿಗೆ- ಕೊಟ್ಟ — ಲ್ಲಲ್ಲೆ- ರಮಿಸುವ-ನು || ೧೮-೩೨ ||
ಇದ್ದ-ಲೆಯು ನಿ — ತ್ಯದಲಿ- ಮೇಧ್ಯಾ- |
ಮೇಧ್ಯ- ವಸ್ತುಗ — ಳುಂಡು- ಲೋಕದಿ |
ಶುದ್ಧ- ಶುಚಿಯೆಂ — ದೆನಿಸಿ-ಕೊಂಬನು — ವೇದ-ಸ್ಮೃತಿಗಳೊ-ಳು ||
ಬುದ್ಧಿ- ಪೂರ್ವಕ — ವಾಗಿ- ವಿಬುಧರು |
ಶ್ರದ್ಧೆ-ಯಿಂದ — ರ್ಪಿಸಿದ- ಕರ್ಮ ನಿ- |
ಷಿದ್ಧ-ವಾದರು — ಸರಿಯೆ- ಕೈಕೊಂ — ಡುದ್ಧ-ರಿಸುತಿ-ಪ್ಪ || ೧೮-೩೩ ||
ಒಡೆಯ-ರಿದ್ದ ವ — ನಸ್ಥ-ಫಲಗಳ |
ಬಡಿದು- ತಿಂಬುವ — ರುಂಟೆ- ಕಂಡರೆ |
ಹೊಡೆದು- ಬಿಸುಡುವ — ರೆಂಬ- ಭಯದಿಂ — ನೋಡ-ಲಂಜುವ-ರು ||
ಬಿಡದೆ- ಮಾಡುವ — ಕರ್ಮ-ಗಳು ಮನೆ- |
ಮಡದಿ- ಮಕ್ಕಳು — ಬಂಧು-ಗಳು ಕಾ- |
ರೊಡಲ- ನಾಳುಗ — ಳೆಂದ-ಮಾತ್ರದ — ಲೋಡು-ವವು ದುರಿ-ತ || ೧೮-೩೪ ||
ಜ್ಞಾನ- ಕರ್ಮೇಂ — ದ್ರಿಯಗ-ಳಿಂದೇ- |
ನೇನು- ಮಾಡುವ — ಕರ್ಮ-ಗಳ ಲ- |
ಕ್ಷ್ಮೀನಿ-ವಾಸನಿ — ಗರ್ಪಿ-ಸುತಲಿರು — ಕಾಲ- ಕಾಲದ-ಲಿ ||
ಪ್ರಾಣ-ಪತಿ ಕೈ — ಕೊಂಡು- ನಾನಾ- |
ಯೋನಿ-ಯೈದಿಸ — ನೊಮ್ಮೆ- ಕೊಡದಿರೆ |
ದಾನ-ವರು ಸೆಳೆ — ದೊಯ್ವ-ರೆಲ್ಲಾ — ಪುಣ್ಯ- ರಾಶಿಗ-ಳ || ೧೮-೩೫ ||
ಶ್ರುತಿಯು- ಸ್ಮೃತ್ಯ — ರ್ಥವ ತಿ-ಳಿದಹಂ- |
ಮತಿ ವಿ-ಶಿಷ್ಟನು — ಕರ್ಮ- ಮಾಡಲು |
ಪ್ರತಿ ಗ್ರ-ಹಿಸನವ — ಪಾಪ-ಗಳ ಕೊಡು — ತಿಪ್ಪ- ನಿತ್ಯ ಹ-ರಿ ||
ಚತುರ-ದಶ ಭುವ — ನಾಧಿ-ಪತಿ ಕೃತ |
ಕೃತ ಕೃ-ತಜ್ಞ ನಿ — ಯಾಮ-ಕನು ಎನೆ |
ಮತಿಯ- ಭ್ರಂಶ ಪ್ರ — ಮಾದ- ಸಂಕಟ — ದೋಷ-ವವಗಿ-ಲ್ಲ || ೧೮-೩೬ ||
ವಾರಿ-ಜಾಸನ — ಮುಖ್ಯ-ರಾಜ್ಞಾ- |
ಧಾರ-ಕನು ಸ — ರ್ವ ಸ್ವ-ತಂತ್ರ ರ- |
ಮಾರ-ಮಣನೆಂ — ದರಿದು- ಇಷ್ಟಾ — ನಿಷ್ಟ- ಕರ್ಮಫ-ಲ ||
ಸಾರ- ಭೋಕ್ತನಿ — ಗರ್ಪಿ-ಸಲು ಸ್ವೀ- |
ಕಾರ- ಮಾಡುವ — ಪಾಪ- ಫಲವ ಕು- |
ಬೇರ- ನಾಮಕ — ದೈತ್ಯ-ರಿಗೆ ಕೊ — ಟ್ಟವರ- ನೋಯಿಸು-ವ || ೧೮-೩೭ ||
ಕ್ರೂರ- ದೈತ್ಯರೊ — ಳಿದ್ದು- ತಾನೇ |
ಪ್ರೇರಿ-ಸುವ ಕಾ — ರಣದಿ- ಹರಿಗೆ ಕು- |
ಬೇರ-ನೆಂಬರು — ಎಲ್ಲ-ರೊಳು ನಿ — ರ್ಗತಗ-ತಿಗ ನಿರು-ತಿ ||
ಸೂರಿ-ಗಮ್ಯಗೆ — ಸೂರ್ಯ-ನೆಂಬರು |
ದೂರ- ಶೋಕಗೆ — ಶುಕ್ರ- ಲಿಂಗಶ- |
ರೀರ-ವಿಲ್ಲದ — ಕಾರ-ಣದಲಿ ಅ — ಕಾಯ-ನೆನಿಸುವ-ನು || ೧೮-೩೮ ||
ಪೇಳ-ಲೊಶವ — ಲ್ಲದ ಮ-ಹಾ ಪಾ- |
ಪಾಳಿ-ಗಳನೊಂ — ದೇ ಕ್ಷ-ಣದಿ ನಿ- |
ರ್ಮೂಲ-ಗೈಸಲಿ — ಬೇಕು- ಎಂಬವ — ಗೊಂದೆ- ಹರಿನಾ-ಮ ||
ನಾಲಿ-ಗೆಯೊಳು — ಳ್ಳವಗೆ- ಪರಮ ಕೃ- |
ಪಾಳು- ಕೃಷ್ಣನು — ಕೈವಿ-ಡಿದು ತ- |
ನ್ನಾಲ-ಯದೊಳಿ — ಟ್ಟನುದಿ-ನದಲಾ — ನಂದ- ಬಡಿಸುವ-ನು || ೧೮-೩೯ ||
ರೋಗಿ- ಔಷಧ — ಪಥ್ಯ-ದಿಂದ ನಿ- |
ರೋಗಿ-ಯೆನಿಸುವ — ತೆರದಿ- ಶ್ರೀಮ- |
ದ್ಭಾಗ-ವತ ಸು — ಶ್ರವಣ- ಗೈದು ಭ — ವಾಖ್ಯ- ರೋಗವ-ನು ||
ನೀಗಿ- ಶಬ್ದಾ — ದ್ಯಖಿಳ- ವಿಷಯ ನಿ- |
ಯೋಗಿ-ಸು ದಶೇಂ — ದ್ರಿಯವ-ನಿಲನೊಳು |
ಶ್ರೀಗು-ರುಜಗ — ನ್ನಾಥ-ವಿಠ್ಠಲ — ಪ್ರೀತ-ನಾಗುವ-ನು || ೧೮-೪೦ ||
|| ಇತಿ ಶ್ರೀ ಸರ್ವ ಸ್ವತಂತ್ರ್ಯ ಸಂಧಿ ಸಂಪೂರ್ಣಂ ||
|| ( ಇತಿ ಶ್ರೀ ಕ್ರೀಡಾವಿಲಾಸ ಸಂಧಿ ಸಂಪೂರ್ಣಂ ) ||
|| ಶ್ರೀ ಕೃಷ್ಣಾರ್ಪಣಮಸ್ತು ||
- sarva swataMtrya saMdhi
|| ( kreeDaavilaasa saMdhi ) ||
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
shreeni-vaasana — carite-gaLa para- |
maanu- raagadi — besago-Lalu muni- |
shouna-kaadyari — garuhi-danu soo — taarya- dayadiM-da || saM. soo. ||
pacana- bhakShaNa — gamana- bhOjana |
vacana- maithuna — shayana- veekShaNa- |
acala-naacala — na pra-yatnavu — saadhya-vE jana-ke ||
shuci sa-dana daya — diMda- jeevara |
nicaya-doLu taa — niMtu- maaDuva |
nucita- nOcita — karma-gaLaneM — daridu- koMDaa-Du || 18-1 ||
viShTa-rashrava — dEha-doLage pra- |
viShTa-naagi ni — raMta-radi bahu- |
cEShTe-gaLa maa — Dutire- kaMDu sa — jeevi-yenutiha-ru ||
hRuShTa-raaguva — ravana- nODi ka- |
niShTha-rellaru — sEve- maaLparu |
biTTa- kShaNadali — kuNapa-neMdari — dadanu-pEkShipa-ru || 18-2 ||
kreeDe-gOsuga — avara-vara gati |
neeDa-lOsuga — dEha-gaLa ko- |
TTaaDu-vanu swE — cCeyali- brahmE — shaadya-roLu po-kku ||
maaDu-vanu vyaa — paara- bahu vidha |
mooDha- daityaro — Liddu- pratidina |
kEDu- laabhaga — Lilla-vidariM — daava- kaalada-li || 18-3 ||
akSha-rEDyanu — brahma- vaayu- |
tryakSha- surapa su — raasu-rara a- |
dhyakSha-naagi — ddella-roLu vyaa — paara- maaDuti-ha ||
akSha-yanu sa — tyaatma-ka paraa- |
pEkShe-yillade — sarva-roLage vi- |
lakSha-Nanu taa — naagi- lOkava — rakShi-sutali-ppa || 18-4 ||
shree sa-raswati — bhaara-tI giri- |
jaa sha-cI rati — rOhi-NI saM- |
j~jaa su-shataroo — paadya-khiLa stree — yaroLu- strIroo-pa ||
vaasa-vaagi — ddella-rige vi- |
shwaasa- tannali — koTTu- avarabhi- |
laaShe-gaLa poo — raisu-tippanu — yOgya-tegaLari-tu || 18-5 ||
kOlu- kudureya — maaDi- aaDuva |
baala-kara tera — naMte- lakumI- |
lOla- swaataM — triya gu-Nava bra — hmaadya-roLagi-TTu ||
leele- gaivanu — tanna-variganu- |
koola-vaagi — ddella- kaaladi |
khooLa-rige prati — koola-naagiha — prakaTa-naagada-le || 18-6 ||
soupa-raNi vara — vahana- naanaa- |
roopa- naamadi — karesu-tavara sa- |
meepa-dalli — ddakhiLa- vyaapaa — ragaLa- maaDuva-nu ||
paapa- puNyaga — LeraDu- avara swa- |
roopa-gaLananu — sarisi- uNipa pa- |
rOpa-kaari pa — rEsha- poorNaa — naMda- j~jaanagha-na || 18-7 ||
ahara- nidraa — maithu-nagaLaha- |
rahara- bayasi ba — Laluva- lakShmI- |
mahita-na mahaa — mahime-gaLaneM — tariva- nityada-li ||
ahika- soukhyava — maredu- manadali |
grahisi- shaastraa — rthagaLa- paramO- |
tsahadi- koMDaa — Dutali- maimare — davari-gallada-le || 18-8 ||
baMdha- mOkSha — pradana- j~jaanavu |
maMda-matigaLi — geMtu- dorevudu |
biMdu-maatra su — khaanu-bhava pa — rvatake- sama duH-kha ||
eMdu- tiLayada — lanya- daivaga- |
LiMda- sukhavaa — pEkShi-suvaru mu- |
kuMda-naaraa — dhaneya- biTTava — guMTe- muktisu-kha || 18-9 ||
raaja- tannaa — maatya- karuNadi |
naija- janarige — koTTu- kaarya ni- |
yOji-suta maa — naapa-maanava — maaLpa- teradaM-te ||
shreeja-naardana — sakala-roLagapa- |
raaji-tanu taa — naagi- sarvapra- |
yOja-nava maa — Disuta- maaDuva — phalake- gurimaa-Di || 18-10 ||
vaasu-dEva swa — taMtra-va sarO- |
jaasa-naadyama — raa su-rarigiya- |
lOsu-gardhava — tegeda-daroLa — rdhava ca-turbhaa-ga- |
gaisi- oMdanu — shatavi-dha dwipaM- |
caasha-taabja ja — gaShTa- catwaa- |
riMsha-danilani — gittu- vaaNI — bhaara-teega-rdha || 18-11 ||
dwitiya- bhaagava — tegedu- koMDada- |
shata vi-bhaagava — maaDi- taa viM- |
shati u-mEshano — LiTTu- iMdrano — Laida-dhika ha-ttu ||
ratipa-noLagini — tiTTa-khiLa dE- |
vatega-LoLagee — raidu- jeeva- |
pratati-yoLu dasha — vaida-dhika naa — lwattu- daityaro-Lu || 18-12 ||
kaaru-Nika swaa — taMtri-yatwava |
mooru-vidha gai — seraDu- tannoLu |
naari-goMdanu — koTTu- swaataM — triyava- sarvari-ge ||
dhaaru-Nipa ta — nnaNuga-rige vyaa- |
paara- koTTu gu — Naagu-NagaLa vi- |
caara- maaDuva — teradi- triguNa — vyakti-yane maa-Lpa || 18-13 ||
puNya- karmake — sahaya-vaaguva |
dhanya-rige ka — lyaadi- daityara- |
puNya- phalagaLa — neeva- divijara — paapa- karmapha-la ||
anya- karmava — maaLpa-rige anu- |
guNya- janarige — koDuva- bahu kaa- |
ruNya- saagara — nIte-radi bha — ktaranu- saMtai-pa || 18-14 ||
nirupa-mage sama — ruMTu- eMdu- |
ccarisu-vava ta — dbhakta-roLu ma- |
tsarisu-vava guNa — guNiga-Lige bhE — dagaLa- pELuva-va ||
dara su-darshana — oordhwa- puMDrava |
dharisi-davaroLu — dwEShi-suva hari- |
carite-gaLa kE — Ladale- lOgara — vaarte- kELuva-va || 18-15 ||
Eva-maadi — dwESha-vuLLa ku- |
jeeva-rellara — daitya-reMbaru |
kOvi-dara vi — jjaana- karmava — nODi- niMdipa-ru ||jaana-koLagaa-gi || 18-16 ||
dEva- dEvana — biTTu- yaava- |
jjIva- pariyaM — taradi- tucCara |
sEve-yiMdupa — jeevi-suvara — j
kaama- lObha — krOdha- mada hiM- |
saama-yaanRuta — daMbha- kapaTa tri- |
dhaama-navataa — ragaLa- bhEda a — poorNa- sukha ba-ddha ||
aami-ShanivE — ditava-bhOjyati- |
taama-saannava — nuMba- taamasa- |
shreema-daaMdhara — saMga-diMdali — tamave- vardhipu-du || 18-17 ||
jjaana- bhakti vi — rakti- vinaya pu- |ja- satyaa — hiMse- bhootada-yaa ||
raaNa- shaastra — shravaNa- ciMtana |
daana- shama dama — yaj
dhyaana- bhagava — nnaama- keertana |
mouna- japa tapa — vRuta- suteertha- |
snaana- maMtra — stOtra- vaMdana — sajja-nara guNa-vu || 18-18 ||
lEsha- swaataM — triya gu-Navanu pra- |
vEsha-gaisida — kaara-Nadi guNa- |
dOSha-gaLu tO — ruvavu- satwaa — satwa- jeevaro-Lu ||
shwaasa- bhOjana — paana- shayana vi- |
laasa- maithuna — gamana- harSha |
klESha- swapna su — Shupti- jaagrate — yahavu- cEtana-ke || 18-19 ||
ardha- tannoLa — girisi- uLidoM- |
dardha-va vibhaa — gava ga-yisi vRuji- |
naarda-nanu poo — rvadali- swaataM — triyava- koTTaM-te ||
swardhu-neepita — koDuva-vara sukha- |
vRuddhi-gOsuga — brahma- vaayu ka- |
pardi- modalaa — davaro-Liddava — YOgya-teyanari-tu || 18-20 ||
haladha-raanuja — maaLpa- kRutyava |
tiLiya-daahaM — kaara-diMde- |
nnuLidu- vidhiyu ni — ShEdha- paatraru — illa-veMbuva-ge ||
phalaga-La dwaya — koDuva- daityara |
kaluSha- karmava — biTTu- puNyava |
seLedu- tannoLa — giTTu- kramadiM — koDuva- bhakutari-ge || 18-21 ||
tOya- jaaptana — kiraNa- vRukSha- |
cChaaya- vartisu — vaMte- kamalada- |
Laaya-taakShanu — sarva-roLu vyaa — pisida- kaaraNa-di ||
hEya- sadguNa — karma- tOrpavu |
nyaaya- kOvida — rige ni-raMtara |
shreeya-rasa sa — rvOtta-mOttama — neMdu- pELuva-ru || 18-22 ||
moola-kaaraNa — prakRuti-yenipa ma- |
haala-kumi e — llaroLa-giddu su- |
leele-gaiyuta — puNya- paapaga — Larpi-saLu pati-ge ||
paala-gaDaloLu — bidda- jala kI- |
laala-venipude — jeeva-kRuta ka- |
rmaaLi- tadwatu — shubhavu- enipavu — ella- kaalada-li || 18-23 ||
j~jaana- sukha bala — poorNa- viShNu vi- |
gEnu- maaLpuvu — triguNa- kaarya kRu- |
shaanu-vina kRumi — kavidu- bhakShipu — duMTe- lOkado-Lu ||
ee na-LinajaaM — Davanu- brahmE- |
shaana- mukhya su — raasu-rara kaa- |
laana-lanavOl — nuMgu-vanigee — paapa-gaLa bhaya-ve || 18-24 ||
mOda- shira da — kShiNa su-pakSha pra- |
mOda- uttara — pakSha-veMdu Ru- |
gaadi- shrutigaLu — pELu-vavu aa — naMda-maya hari-ge ||
mOda- vaiShika — sukha vi-ShEsha pra- |
mOda- paara — trika su-khaprada- |
naada- kaaraNa — diMda- mOda pra — mOda-nenisida-nu || 18-25 ||
eMdi-gaadaru — vRuShTi-yiMda va- |
suMdha-reyoLi — ppakhiLa- jaladiM- |
siMdhu- vRuddhiya — naidu-vude baa — radire- baridahu-de ||
kuMdu- koratega — Lilla-diha swaa- |
naMda- saMpoo — rNa swa-bhaavage |
baMdu- maaDuvu — dEnu- karmaa — karma- janyapha-la || 18-26 ||
dEha- vRukShado — LeraDu- pakShiga- |
Leeha-veMdigu — biDade- parama- |
snEha-diMdali — karma-ja phalaga — LuMba- jeevakha-ga ||
shreeha-riyu taa — saara-bhOktanu |
drohi-suva ka — lyaadi- daitya sa- |
mooha-keeva vi — shiShTa- paapa — klEsha-vellari-ge || 18-27 ||
dyumaNi- kiraNava — kaMDa- maatra-di |
timira-vODuva — teradi- lakShmI- |
ramaNa- nODida — maatra-diMdagha — naasha-vaiduvu-du ||
kamala- saMbhava — mukhya- rellaa |
sumana-saroLiha — paapa- raashiya |
amara- mukhanaM — dadali- bhasmava — maaLpa- hari taa-nu || 18-28 ||
catura- shatabhaa — gadi da-shaaMshado- |
Litara- jeevari — geeva- lEshava |
ditija- dEva — rkaLige- koDuva vi — shiShTa- duHkha su-kha ||
mati vi-heena — praaNi-gaLigaa- |
hutiya- sukha mRuti — duHkha-vara yO- |
gyateya-naritu pi — pIla- mashakaa — digaLi-geeva ha-ri || 18-29 ||
nitya- nirayaaM — dhaakhya- koopadi |
bhRutya-riMdoDa — gooDi- punaraa- |
varti- varjita — lOka-vaiduva — kaliyu- dwEShada-li ||
satya-lOkaa — dhipa ca-turmukha |
tattwa-dEva — rkaLa sa-hita nija- |
mukti-yaiduva — haripa-daabjava — bhajisi- bhakutiya-li || 18-30 ||
vidhi ni-ShEdhaga — LeraDu- mareya-de |
madhuvi-rOdhiya — paada-karpisu |
aditi- makkaLi — geeva- puNyava — paapa- daityari-ge ||
sudaru-shanadhara — geeya-dire baM- |
dodagi- oyvaru — puNya- daityaru |
adhipa-rillada — vRukSha-gaLa phala — daMte- nityada-li || 18-31 ||
tilaja- kashmala — tyajisi- deepavu |
tiLiya- tailava — grahisi- maMdira- |
doLage- vyaapisi — ippa- kattale — bhaMgi-suva tera-di ||
kali mo-dalugoM — DakhiLa- daanava- |
kulaja-ranudina — maaLpa- puNyaja- |
phalava- brahmaa — dyarige- koTTa — llalle- ramisuva-nu || 18-32 ||
idda-leyu ni — tyadali- mEdhyaa- |
mEdhya- vastuga — LuMDu- lOkadi |
shuddha- shuciyeM — denisi-koMbanu — vEda-smRutigaLo-Lu ||
buddhi- poorvaka — vaagi- vibudharu |
shraddhe-yiMda — rpisida- karma ni- |
Shiddha-vaadaru — sariye- kaikoM — Duddha-risuti-ppa || 18-33 ||
oDeya-ridda va — nastha-phalagaLa |
baDidu- tiMbuva — ruMTe- kaMDare |
hoDedu- bisuDuva — reMba- bhayadiM — nODa-laMjuva-ru ||
biDade- maaDuva — karma-gaLu mane- |
maDadi- makkaLu — baMdhu-gaLu kaa- |
roDala- naaLuga — LeMda-maatrada — lODu-vavu duri-ta || 18-34 ||
j~jaana- karmEM — driyaga-LiMdE- |
nEnu- maaDuva — karma-gaLa la- |
kShmIni-vaasani — garpi-sutaliru — kaala- kaalada-li ||
praaNa-pati kai — koMDu- naanaa- |
yOni-yaidisa — nomme- koDadire |
daana-varu seLe — doywa-rellaa — puNya- raashiga-La || 18-35 ||
shrutiyu- smRutya — rthava ti-LidahaM- |
mati vi-shiShTanu — karma- maaDalu |
prati gra-hisanava — paapa-gaLa koDu — tippa- nitya ha-ri ||
catura-dasha bhuva — naadhi-pati kRuta |
kRuta kRu-taj~ja ni — yaama-kanu ene |
matiya- bhraMsha pra — maada- saMkaTa — dOSha-vavagi-lla || 18-36 ||
vaari-jaasana — mukhya-raaj~jaa- |
dhaara-kanu sa — rva swa-taMtra ra- |
maara-maNaneM — daridu- iShTaa — niShTa- karmapha-la ||
saara- bhOktani — garpi-salu swee- |
kaara- maaDuva — paapa- phalava ku- |
bEra- naamaka — daitya-rige ko — TTavara- nOyisu-va || 18-37 ||
kroora- daityaro — Liddu- taanE |
prEri-suva kaa — raNadi- harige ku- |
bEra-neMbaru — ella-roLu ni — rgataga-tiga niru-ti ||
soori-gamyage — soorya-neMbaru |
doora- shOkage — shukra- liMgasha- |
reera-villada — kaara-Nadali a — kaaya-nenisuva-nu || 18-38 ||
pELa-loshava — llada ma-haa paa- |
paaLi-gaLanoM — dE kSha-Nadi ni- |
rmoola-gaisali — bEku- eMbava — goMde- harinaa-ma ||
naali-geyoLu — LLavage- parama kRu- |
paaLu- kRuShNanu — kaivi-Didu ta- |
nnaala-yadoLi — TTanudi-nadalaa — naMda- baDisuva-nu || 18-39 ||
rOgi- ouShadha — pathya-diMda ni- |
rOgi-yenisuva — teradi- shreema- |
dbhaaga-vata su — shravaNa- gaidu bha — vaakhya- rOgava-nu ||
neegi- shabdaa — dyakhiLa- viShaya ni- |
yOgi-su dashEM — driyava-nilanoLu |
shreegu-rujaga — nnaatha-viThThala — preeta-naaguva-nu || 18-40 ||
|| iti shree sarva swataMtrya saMdhi saMpoorNaM ||
|| ( iti shree kreeDaavilaasa saMdhi saMpoorNaM ) ||
|| shree kRuShNaarpaNamastu ||

Leave a Reply
You must be logged in to post a comment.