Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೧೪. ಪಿತೃಗಣ ಸಂಧಿ
|| ( ಜೀವನಪ್ರಕ್ರಿಯಾ ಸಂಧಿ ) ||
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಕೃತಿರ-ಮಣ ಪ್ರ — ದ್ಯುಮ್ನ ವಸುದೇ- |
ವತೆಗ-ಳಾಹಂ — ಕಾರ-ತ್ರಯದೊಳು |
ಚತುರ-ವಿಂಶತಿ — ರೂಪ-ದಿಂದಲಿ — ಭೋಜ್ಯ-ನೆನಿಸುವ-ನು ||
ಹುತವ-ಹಾಕ್ಷಾಂ — ತರ್ಗ-ತ ಜಯಾ- |
ಪತಿಯು- ತಾನೇ — ಮೂರ-ಧಿಕ ತ್ರಿಂ- |
ಶತಿ ಸು-ರೂಪದಿ — ಭೋಕ್ತೃ- ಎನಿಸುವ — ಭೋಕ್ತೃ-ಗಳೊಳಿ-ದ್ದು || ೧೪-೧ ||
ಆರ-ಧಿಕ ಮೂ — ವತ್ತು- ರೂಪದಿ |
ವಾರಿ-ಜಾಪ್ತನೊ — ಳಿರುತಿ-ಹನು ಮಾ- |
ಯಾ ರ-ಮಣ ಶ್ರೀ — ವಾಸು-ದೇವನು — ಕಾಲ- ನಾಮದ-ಲಿ ||
ಮೂರು-ವಿಧ ಪಿತೃ — ಗಳೊಳು- ವಸು ತ್ರಿಪು- |
ರಾರಿ- ಆದಿ — ತ್ಯಗನಿ-ರುದ್ಧನು |
ತೋರಿ-ಕೊಳ್ಳದೆ — ಕರ್ತೃ- ಕರ್ಮ — ಕ್ರಿಯನೆ-ನಿಸಿಕೊಂ-ಬ || ೧೪-೨ ||
ಸ್ವವಶ- ನಾರಾ — ಯಣನು- ತಾ ಷ- |
ಣ್ಣವತಿ- ನಾಮದಿ — ಕರೆಸು-ತಲಿ ವಸು- |
ಶಿವ ದಿ-ವಾಕರ — ಕರ್ತೃ- ಕರ್ಮ — ಕ್ರಿಯೆಗ-ಳೊಳಗಿ-ದ್ದು ||
ನೆವನ-ವಿಲ್ಲದೆ — ನಿತ್ಯ-ದಲಿ ತ- |
ನ್ನವರು- ಮಾಡುವ — ಸೇವೆ- ಕೈಕೊಂ- |
ಡವರ- ಪಿತೃಗಳಿ — ಗೀವ-ನಂತಾ — ನಂತ- ಸುಖಗಳ-ನು || ೧೪-೩ ||
ತಂತು- ಪಟದಂ — ದದಲಿ- ಲಕ್ಷ್ಮೀ |
ಕಾಂತ- ಪಂಚಾ — ತ್ಮಕನೆ-ನಿಸಿ ವಸು |
ಕಂತು-ಹರ ರವಿ — ಕರ್ತೃ-ಗಳೊಳಿ — ದ್ದನವ-ರತ ತ-ನ್ನ ||
ಚಿಂತಿ-ಸುವ ಸಂ — ತರನು- ಗುರು ಮ- |
ಧ್ವಾಂತ-ರಾತ್ಮಕ — ಸಂತ-ಯಿಸುವನು |
ಸಂತ-ತಖಿಲಾ — ರ್ಥಗಳ- ಪಾಲಿಸಿ — ಇಹ ಪ-ರಂಗಳ-ಲಿ || ೧೪-೪ ||
ತಂದೆ- ತಾಯ್ಗಳ — ಪ್ರೀತಿ-ಗೋಸುಗ |
ನಿಂದ್ಯ- ಕರ್ಮವ — ತೊರೆದು- ವಿಹಿತ ಗ- |
ಳೊಂದು- ಮೀರದೆ — ಸಾಂಗ- ಕರ್ಮಗ — ಳಾಚ-ರಿಸುವವ-ರು ||
ವಂದ-ನಿಯರಾ — ಗಿಳೆಯೊ-ಳಗೆ ದೈ- |
ನಂದಿ-ನದಿ ದೈ — ಶಿಕ ದ-ಹಿಕ ಸುಖ- |
ದಿಂದ- ಬಾಳ್ವರು — ಬಹು ದಿ-ವಸದಲಿ — ಕೀರ್ತಿ-ಯುತರಾ-ಗಿ || ೧೪-೫ ||
ಅಂಶಿ- ಅಂಶಾಂ — ತರ್ಗ-ತ ತ್ರಯ |
ಹಂಸ- ವಾಹನ — ಮುಖ್ಯ- ದಿವಿಜರ |
ಸಂಶ-ಯದಿ ತಿಳಿ — ದಂತ-ರಾತ್ಮಕ — ಶ್ರೀ ಜ-ನಾರ್ದನ-ನ ||
ಸಂಸ್ಮ-ರಣೆ ಪೂ — ರ್ವಕದಿ- ಷಡಧಿಕ- |
ತ್ರಿಂಶ-ತಿ ತ್ರಯ — ರೂಪ-ವರಿತು ವಿ- |
ಪಾಂಸ-ಗನ ಪೂ — ಜಿಸುವ-ರವರೆ ಕೃ — ತಾರ್ಥ-ರೆನಿಸುವ-ರು || ೧೪-೬ ||
ಮೂರು-ವರೆ ಸಾ — ವಿರದ- ಮೇಲರೆ- |
ನೂರ-ಯಿದು ರೂ — ಪದಿ ಜ-ನಾರ್ದನ |
ಸೂರಿ-ಗಳು ಮಾ — ಡುವ ಸ-ಮಾರಾ — ಧನೆಗೆ- ವಿಘ್ನಗ-ಳು ||
ಬಾರ-ದಂತೆ ಬ — ಹು ಪ್ರ-ಕಾರ ಖ- |
ರಾರಿ- ಕಾಪಾ — ಡುವನು- ಸರ್ವ ಶ- |
ರೀರ-ಗಳೊಳಿ — ದ್ದವರ-ವರ ಪೆಸ — ರಿಂದ- ಕರೆಸುತ-ಲಿ || ೧೪-೭ ||
ಜಯ ಜ-ಯ ಜಯಾ — ಕಾಂತ- ದತ್ತಾ- |
ತ್ರಯ ಕ-ಪಿಲ ಮಹಿ — ದಾಸ- ಭಕ್ತ- |
ಪ್ರಿಯ ಪು-ರಾತನ — ಪುರುಷ- ಪೂರ್ಣಾ — ನಂದ- ಜ್ಞಾನ ಘ-ನ ||
ಹಯವ-ದನ ಹರಿ — ಹಂಸ- ಲೋಕ- |
ತ್ರಯ ವಿ-ಲಕ್ಷಣ — ನಿಖಿಳ- ಜಗದಾ- |
ಶ್ರಯ ನಿ-ರಾಮಯ — ದಯದಿ- ಸಂತೈ — ಸೆಂದು- ಪ್ರಾರ್ಥಿಪು-ದು || ೧೪-೮ ||
ಷಣ್ಣ-ವತಿ ಎಂ — ಬಕ್ಷ-ರೇಡ್ಯನು |
ಷಣ್ಣ-ವತಿ ನಾ — ಮದಲಿ- ಕರೆಸುತ |
ತನ್ನ-ವರು ಸ — ದ್ಭಕ್ತಿ- ಪೂರ್ವಕ — ದಿಂದ- ಮಾಡುತಿ-ಹ ||
ಪುಣ್ಯ- ಕರ್ಮವ — ಸ್ವೀಕ-ರಿಸಿ ಕಾ- |
ರುಣ್ಯ- ಸಾಗರ — ಸಲಹು-ವನು ಬ್ರ- |
ಹ್ಮಣ್ಯ-ದೇವ ಭ — ವಾಬ್ಧಿ- ಪೋತ ಬ — ಹು ಪ್ರ-ಕಾರದ-ಲಿ || ೧೪-೯ ||
ದೇಹ-ಗಳ ಕೊಡು — ವವನು- ಅವರವ- |
ರಹರ-ಗಳ ಕೊಡ — ದಿಹನೆ- ಸುಮನಸ- |
ಮಹಿತ- ಮಂಗಳ — ಚರಿತ- ಸದ್ಗುಣ — ಭರಿತ-ನನವರ-ತ ||
ಅಹಿಕ- ಪಾರ — ತ್ರಿಕ ಸು-ಖಪ್ರದ |
ವಹಿಸಿ- ಬೆನ್ನಲಿ — ಬೆಟ್ಟ-ವಮೃತವ |
ದ್ರುಹಿಣ- ಮೊದಲಾ — ದವರಿ-ಗುಣಿಸಿದ — ಮುರಿದ-ನಹಿತರ-ನು || ೧೪-೧೦ ||
ದ್ರುಹಿಣ- ಮೊದಲಾ — ದಮರ-ರಿಗೆ ಸ- |
ನ್ಮಹಿತ- ಮಾಯಾ — ರಮಣ- ತಾನೇ |
ಸ್ವಹನೆ-ನಿಸಿ ಸಂ — ತೃಪ್ತಿ- ಬಡಿಸುವ — ಸರ್ವ- ಕಾಲದ-ಲಿ ||
ಪ್ರಹಿತ- ಸಂಕರು — ಷಣನು- ಪಿತ್ರುಗಳಿ- |
ಗಹರ-ನೆನಿಪ ಸ್ವ — ಧಾಖ್ಯ- ರೂಪದಿ |
ಮಹಿಜ- ಫಲ ತೃಣ — ಪೆಸರಿ-ನಲಿ ಪ್ರ — ದ್ಯುಮ್ನ- ಅನಿರು-ದ್ಧ || ೧೪-೧೧ ||
ಅನ್ನ-ನೆನಿಸುವ — ನೃಪಶು-ಗಳಿಗೆ ಹಿ- |
ರಣ್ಯ- ಗರ್ಭಾಂ — ಡದೊಳು- ಸಂತತ |
ತನ್ನ-ನೀ ಪರಿ — ಯಿಂದು-ಪಾಸನೆ — ಗೈವ- ಭಕ್ತರ-ನು ||
ಬನ್ನ- ಬಡಿಸದೆ — ಭವ ಸ-ಮುದ್ರ ಮ- |
ಹೋನ್ನ-ತಿಯ ದಾ — ಟಿಸಿ ಚ-ತುರ್ವಿಧ |
ಅನ್ನ-ಮಯನಾ — ತ್ಮ ಪ್ರ-ದರ್ಶನ — ಸುಖವ-ನೀವ ಹ-ರಿ || ೧೪-೧೨ ||
ಮನ ವ-ಚನ ಕಾ — ಯಗಳ- ದೆಸೆಯಿಂ- |
ದನುದಿ-ನದಿ ಬಿಡ — ದಾಚ-ರಿಸುತಿ- |
ಪ್ಪನುಚಿ-ತೋಚಿತ — ಕರ್ಮ-ಗಳ ಸ — ದ್ಭಕ್ತಿ- ಪೂರ್ವಕ-ದಿ ||
ಅನಿಲ-ದೇವನೊ — ಳಿಪ್ಪ- ನಾರಾ- |
ಯಣಗಿ-ದನ್ನವು — ಎಂದು- ಕೃಷ್ಣಾ- |
ರ್ಪಣವೆ-ನುತ ಕೊಡೆ — ಸ್ವೀಕ-ರಿಸಿ ಸಂ — ತೈಪ- ಕರುಣಾ-ಳು || ೧೪-೧೩ ||
ಏಳು- ವಿಧ ಅ — ನ್ನ ಪ್ರ-ಕರಣವ |
ಕೇಳಿ- ಕೋವಿದ — ರಾಸ್ಯ-ದಿಂದಲಿ |
ಆಲ-ಸವ ಮಾ — ಡದಲೆ- ಅನಿರು — ದ್ಧಾದಿ- ರೂಪಗ-ಳ ||
ಕಾಲ- ಕಾಲದಿ — ನೆನೆದು- ಪೂಜಿಸು |
ಸ್ಥೂಲ-ಮತಿಗಳಿ — ಗಿದನು- ಪೇಳದೆ |
ಶ್ರೀಲ-ಕುಮಿವ — ಲ್ಲಭನೆ- ಅನ್ನಾ — ದನ್ನ- ಅನ್ನದ-ನು || ೧೪-೧೪ ||
ಎಂದ-ರಿತು ಸ — ಪ್ತಾನ್ನ-ಗಳ ದೈ- |
ನಂದಿ-ನದಿ ಮರೆ — ಯದೆ ಸ-ದಾ ಗೋ- |
ವಿಂದ-ಗರ್ಪಿಸು — ನಿರ್ಭ-ಯದಿ ಮಹ — ಯಜ್ಞ-ವಿದುಯೆಂ-ದು ||
ಇಂದಿ-ರೇಶನು — ಸ್ವೀಕ-ರಿಸಿ ದಯ- |
ದಿಂದ- ಬೇಡಿಸಿ — ಕೊಳದೆ- ತವಕದಿ |
ತಂದು- ಕೊಡುವನು — ಪರಮ- ಮಂಗಳ — ತನ್ನ- ದಾಸರಿ-ಗೆ || ೧೪-೧೫ ||
ಸೂಜಿ- ಕರದಲಿ — ಪಿಡಿದು- ಸಮರವ |
ನಾ ಜ-ಯಿಸುವೆನು — ಎಂಬ- ನರನಂ- |
ತೀ ಜ-ಗತ್ತಿನೊ — ಳುಳ್ಳ- ಅಜ್ಞಾ — ನಿಗಳು- ನಿತ್ಯದ-ಲಿ ||
ಶ್ರೀಜ-ಗತ್ಪತಿ — ಚರಣ-ಯುಗಳ ಸ- |
ರೋಜ- ಭಕ್ತಿ — ಜ್ಞಾನ- ಪೂರ್ವಕ |
ಪೂಜಿ-ಸದೆ ಧ — ರ್ಮಾರ್ಥ- ಕಾಮವ — ಬಯಸಿ- ಬಳಲುವ-ರು || ೧೪-೧೬ ||
ಶಕಟ- ಭಂಜನ — ಸಕಲ- ಜೀವರ |
ನಿಕಟ-ಗನು ತಾ — ನಾಗಿ- ಲೋಕಕೆ |
ಪ್ರಕಟ-ನಾಗದೆ — ಸಕಲ- ಕರ್ಮವ — ಮಾಡಿ- ಮಾಡಿಸು-ತ ||
ಅಕುಟಿ-ಲಾತ್ಮಕ — ಭಕುತ- ಜನರಿಗೆ |
ಸುಖದ-ನೆನಿಸುವ — ಸರ್ವ-ಕಾಲದಿ |
ಅಕಟ-ಕಟ ಈ — ತನ ಮ-ಹಾ ಮಹಿ — ಮೆಗಳಿ-ಗೇನೆಂ-ಬೆ || ೧೪-೧೭ ||
ಶ್ರೀ ಲ-ಕುಮಿವ — ಲ್ಲಭನು- ವೈಕುಂ- |
ಠಾಲ-ಯದಿ ಪ್ರಣ — ವ ಪ್ರ-ಕೃತಿ ಕೀ- |
ಲಾಲ- ಜಾಸನ — ಮುಖ್ಯ- ಚೇತನ — ರೊಳಗೆ- ನೆಲೆಸಿ-ದ್ದು ||
ಮೂಲ- ಕಾರಣ — ನಂಶ- ನಾಮದಿ |
ಲೀಲೆ-ಗೈವುತ — ತೋರಿ-ಕೊಳ್ಳದೆ |
ಪಾಲಿ-ನೊಳು ಘೃತ — ವಿದ್ದ- ತೆರದಂ — ತಿಪ್ಪ- ತ್ರಿಸ್ಥಳ-ದಿ || ೧೪-೧೮ ||
ಮೂರು- ಯುಗದಲಿ — ಮೂಲ- ರೂಪನು |
ಸೂರು-ಗಳ ಸಂ — ತೈಸಿ- ದಿತಿಯ ಕು- |
ಮಾರ-ಕರ ಸಂ — ಹರಿಸಿ- ಧರ್ಮವ — ನುಳುಹ-ಬೇಕೆಂ-ದು ||
ಕಾರು-ಣಿಕ ಭೂ — ಮಿಯೊಳು- ನಿಜಪರಿ- |
ವಾರ- ಸಹಿತವ — ತರಿಸಿ- ಬಹುವಿಧ |
ತೋರಿ-ದನು ನರ — ವತ್ಪ್ರ-ವೃತ್ತಿಯ — ಸಕಲ- ಚೇತನ-ಕೆ || ೧೪-೧೯ ||
ಕಾರ-ಣಾಹ್ವಯ — ಪ್ರಕೃತಿ-ಯೊಳಗಿ- |
ದ್ದಾರ-ಧಿಕ ಹದಿ — ನೆಂಟು- ತತ್ತ್ವವ |
ತಾ ರ-ಚಿಸಿ ತ — ದ್ರೂಪ- ತನ್ನಾ — ಮಂಗ-ಳನೆ ಧರಿ-ಸಿ ||
ನೀರ-ಜ ಭವಾಂ — ಡವನು- ನಿರ್ಮಿಸಿ |
ಕಾರು-ಣಿಕ ಕಾ — ರ್ಯಾಖ್ಯ- ರೂಪದಿ |
ತೋರು-ವನು ಸಹ — ಜಾಹಿ-ತಾಚಲ — ಗಳಲಿ- ಪ್ರತಿದಿನ-ದಿ || ೧೪-೨೦ ||
ಜೀವ-ರಂತ — ರ್ಯಾಮಿ- ಅಂಶಿ ಕ- |
ಳೇವ-ರಗಳೊಳ — ಗಿಂದ್ರಿ-ಯಗಳಲಿ |
ತಾ ವಿ-ಹಾರವ — ಗೈವು-ತನುದಿನ — ಅಂಶ- ನಾಮದ-ಲಿ ||
ಈ ವಿ-ಷಯಗಳ — ನುಂಡು- ಸುಖಮಯ |
ಈವ- ಸುಖ ಸಂ — ಸಾರ- ದುಃಖವ |
ದೇವ- ಮಾನವ — ದಾನ-ವರಿಗವಿ — ರತ ಸು-ಧಾಮ ಸ-ಖ || ೧೪-೨೧ ||
ದೇಶ- ದೇಶವ — ಸುತ್ತಿ- ದೇಹಾ- |
ಯಾಸ-ಗೊಳಿಸದೆ — ಕಾಮ್ಯ- ಕರ್ಮ ದು- |
ರಾಸೆ-ಗೊಳಗಾ — ಗದಲೆ- ಬ್ರಹ್ಮಾ — ದ್ಯಖಿಲ- ಚೇತನ-ರು ||
ಭೂ ಸ-ಲಿಲ ಪಾ — ವಕ ಸ-ಮೀರಾ- |
ಕಾಶ- ಮೊದಲಾ — ದಖಿಲ-ತತ್ತ್ವ ಪ- |
ರೇಶ-ಗಿವಧಿ — ಷ್ಠಾನ-ವೆಂದರಿ — ದರ್ಚಿ-ಸನವರ-ತ || ೧೪-೨೨ ||
ಎರಡು- ವಿಧದಲಿ — ಲೋಕ-ದೊಳು ಜೀ- |
ವರುಗ-ಳಿಪ್ಪರು — ಸಂತ-ತ ಕ್ಷರಾ- |
ಕ್ಷರ ವಿ-ಲಿಂಗ ಸ — ಲಿಂಗ- ಸೃಜ್ಯಾ — ಸೃಜ್ಯ- ಭೇದದ-ಲಿ ||
ಕರೆಸು-ವುದು ಜಡ — ಪ್ರಕೃತಿ- ಪ್ರಣವಾ- |
ಕ್ಷರ ಮ-ಹಾದಣು — ಕಾಲ- ನಾಮದಿ |
ಹರಿ ಸ-ಹಿತ ಭೇ — ದಗಳ- ಪಂಚಕ — ಸ್ಮರಿಸು- ಸರ್ವ-ತ್ರ || ೧೪-೨೩ ||
ಜೀವ- ಜೀವರ — ಭೇದ- ಜಡಜಡ- |
ಜೀವ- ಜಡಗಳ — ಭೇದ- ಪರಮನು |
ಜೀವ- ಜಡ ಸುವಿ — ಲಕ್ಷ-ಣನು ಎಂ — ದರಿದು- ನಿತ್ಯದ-ಲಿ ||
ಈ ವಿ-ರಿಂಚಾಂ — ಡದೊಳು- ಎಲ್ಲಾ |
ಠಾವಿ-ನಲಿ ತಿಳಿ — ದೈದು- ಭೇದ ಕ- |
ಳೇವ-ರದೊಳರಿ — ತಚ್ಯು-ತನ ಪದ — ವೈದು- ಶೀಘ್ರದ-ಲಿ || ೧೪-೨೪ ||
ಆದಿ-ಯಲ್ಲಿ ಕ್ಷ — ರಾ ಕ್ಷ-ರಾಖ್ಯ |
ದ್ವೇಧ- ಅಕ್ಷರ — ದೊಳು ರ-ಮಾ ಮಧು- |
ಸೂದ-ನರು ಕ್ಷರ — ಗಳೊಳು- ಪ್ರಕೃತಿ — ಪ್ರಣವ- ಕಾಲಗ-ಳು ||
ವೇಧ- ಮುಖ್ಯ ತೃ — ಣಾಂತ- ಜೀವರ |
ಭೇದ-ಗಳನರಿ — ತೀ ರ-ಹಸ್ಯವ |
ಬೋಧಿ-ಸದೆ ಮಂ — ದರಿಗೆ- ಸರ್ವ — ತ್ರದಲಿ- ಚಿಂತಿಪು-ದು || ೧೪-೨೫ ||
ದೀಪ-ದಿಂ ದೀ — ಪಗಳು- ಪೊರಮ- |
ಟ್ಟಾಪ-ಣಾಲಯ — ಗತ ತಿ-ಮಿರಗಳ |
ತಾ ಪ-ರಿಹರವ — ಗೈಸಿ- ತದ್ಗ ಪ — ದಾರ್ಥ- ತೋರ್ಪಂ-ತೆ ||
ಸೌಪ-ರಣಿ ವರ — ವಹನ- ತಾ ಬಹು- |
ರೂಪ- ನಾಮದಿ — ಎಲ್ಲ- ಕಡೆಯಲಿ |
ವ್ಯಾಪಿ-ಸಿದ್ದು ಯ — ಥೇಷ್ಟ- ಮಹಿಮೆಯ — ತೋರ್ಪ- ತಿಳಿಸದ-ಲೆ || ೧೪-೨೬ ||
ನಳಿನ- ಮಿತ್ರಗೆ — ಇಂದ್ರ-ಧನು ಪ್ರತಿ- |
ಫಲಿಸು-ವಂತೆ ಜ — ಗತ್ರ-ಯವು ಕಂ- |
ಗೊಳಿಪ-ದನುಪಾ — ಧಿಯಲಿ- ಪ್ರತಿಬಿಂ — ಬಾಹ್ವ-ಯದಿ ಹರಿ-ಗೆ ||
ತಿಳಿಯೆ- ತ್ರಿಕಕುದ್ — ಧಾಮ-ನತಿ ಮಂ- |
ಗಳ ಸು-ರೂಪವ — ಸರ್ವ- ಠಾವಿಲಿ |
ಪೊಳೆವ- ಹೃದಯಕೆ — ಪ್ರತಿ ದಿ-ವಸ ಪ್ರ — ಹ್ಲಾದ- ಪೋಷಕ-ನು || ೧೪-೨೭ ||
ರಸ ವಿ-ಷೇಶ ದೊ — ಳತಿ ವಿ-ಮಲ ಸಿತ- |
ವಸನ- ತೋಯಿಸಿ — ಅಗ್ನಿ-ಯೊಳಗಿಡೆ |
ಪಸರಿ-ಸುವುದು ಪ್ರ — ಕಾಶ- ನಸುಗುಂ — ದದಲೆ- ಸರ್ವ-ತ್ರ ||
ತ್ರಿಶಿರ-ದೂಷಣ — ವೈರಿ- ಭಕ್ತಿ ಸು- |
ರಸದಿ- ತೋಯ್ದ ಮ — ಹಾತ್ಮ-ರನ ಬಾ- |
ಧಿಸವು- ಭವದೊಳ — ಗಿದ್ದ-ರೆಯು ಸರಿ — ದುರಿತ- ರಾಶಿಗ-ಳು || ೧೪-೨೮ ||
ವಾರಿ-ನಿಧಿಯೊಳ — ಗಖಿಲ- ನದಿಗಳು |
ಬೇರೆ- ಬೇರೆ ನಿ — ರಂತ-ರದಲಿ ವಿ- |
ಹಾರ- ಗೈಯ್ಯುತ — ಪರಮ- ಮೋದದ — ಲಿಪ್ಪ- ತೆರದಂ-ತೆ ||
ಮೂರು- ಗುಣಗಳ — ಮಾನಿ- ಎನಿಸುವ |
ಶ್ರೀರ-ಮಾ ರೂ — ಪಗಳು- ಹರಿಯಲಿ |
ತೋರು-ತಿಪ್ಪವು — ಸರ್ವ- ಕಾಲದಿ — ಸಮರ-ಹಿತವೆನಿ-ಸಿ || ೧೪-೨೯ ||
ಕೋಕ-ನದ ಸಖ — ನುದಯ- ಘೂಕಾ- |
ಲೋಕ-ನಕೆ ಸೊಗ — ಸದಿರೆ- ಭಾಸ್ಕರ |
ತಾ ಕ-ಳಂಕನೆ — ಈ ಕೃ-ತೀಪತಿ — ಜಗದ- ನಾಥನಿ-ರೆ ||
ಸ್ವೀಕ-ರಿಸಿ ಸುಖ — ಬಡಲ-ರಿಯದವಿ- |
ವೇಕಿ-ಗಳು ನಿಂ — ದಿಸಿದ-ರೇನಹು- |
ದೀ ಕ-ವಿತ್ವವ — ಕೇಳಿ- ಸುಖ ಬಡ — ದಿಹರೆ- ಕೋವಿದ-ರು || ೧೪-೩೦ ||
ಚೇತ-ನಾ ಚೇ — ತನಗ-ಳಲಿ ಗುರು- |
ಮಾತ-ರಿಶ್ವಾಂ — ತರ್ಗ-ತ ಜಗ- |
ನ್ನಾಥ- ವಿಠಲ ನಿ — ರಂತ-ರದಿ ವ್ಯಾ — ಪಿಸಿ ತಿ-ಳಿಸಿಕೊಳ-ದೆ ||
ಕಾತ-ರವ ಪು — ಟ್ಟಿಸಿ ವಿ-ಷಯದಲಿ |
ಯಾತು- ಧಾನರ — ಮೋಹಿ-ಸುವ ನಿ- |
ರ್ಭೀತ- ನಿತ್ಯಾ — ನಂದ-ಮಯ ನಿ — ರ್ದೋಷ- ನಿರವ-ದ್ಯ || ೧೪-೩೧ |
|| ಇತಿ ಶ್ರೀ ಪಿತೃಗಣ ಸಂಧಿ ಸಂಪೂರ್ಣಂ ||
|| ( ಇತಿ ಶ್ರೀ ಜೀವನಪ್ರಕ್ರಿಯಾ ಸಂಧಿ ಸಂಪೂರ್ಣಂ ) ||
|| ಶ್ರೀ ಕೃಷ್ಣಾರ್ಪಣಮಸ್ತು ||
- pitRugaNa saMdhi
|| ( jeevanaprakriyaa saMdhi ) ||
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
kRutira-maNa pra — dyumna vasudE- |
vatega-LaahaM — kaara-trayadoLu |
catura-viMshati — roopa-diMdali — bhOjya-nenisuva-nu ||
hutava-haakShaaM — targa-ta jayaa- |
patiyu- taanE — moora-dhika triM- |
shati su-roopadi — bhOktRu- enisuva — bhOktRu-gaLoLi-ddu || 14-1 ||
aara-dhika moo — vattu- roopadi |
vaari-jaaptano — Liruti-hanu maa- |
yaa ra-maNa shree — vaasu-dEvanu — kaala- naamada-li ||
mooru-vidha pitRu — gaLoLu- vasu tripu- |
raari- aadi — tyagani-ruddhanu |
tOri-koLLade — kartRu- karma — kriyane-nisikoM-ba || 14-2 ||
swavasha- naaraa — yaNanu- taa Sha- |
NNavati- naamadi — karesu-tali vasu- |
shiva di-vaakara — kartRu- karma — kriyega-LoLagi-ddu ||
nevana-villade — nitya-dali ta- |
nnavaru- maaDuva — sEve- kaikoM- |
Davara- pitRugaLi — geeva-naMtaa — naMta- sukhagaLa-nu || 14-3 ||
taMtu- paTadaM — dadali- lakShmI |
kaaMta- paMcaa — tmakane-nisi vasu |
kaMtu-hara ravi — kartRu-gaLoLi — ddanava-rata ta-nna ||
ciMti-suva saM — taranu- guru ma- |
dhwaaMta-raatmaka — saMta-yisuvanu |
saMta-takhilaa — rthagaLa- paalisi — iha pa-raMgaLa-li || 14-4 ||
taMde- taaygaLa — preeti-gOsuga |
niMdya- karmava — toredu- vihita ga- |
LoMdu- meerade — saaMga- karmaga — Laaca-risuvava-ru ||
vaMda-niyaraa — giLeyo-Lage dai- |
naMdi-nadi dai — shika da-hika sukha- |
diMda- baaLwaru — bahu di-vasadali — keerti-yutaraa-gi || 14-5 ||
aMshi- aMshaaM — targa-ta traya |
haMsa- vaahana — mukhya- divijara |
saMsha-yadi tiLi — daMta-raatmaka — shree ja-naardana-na ||
saMsma-raNe poo — rvakadi- ShaDadhika- |
triMsha-ti traya — roopa-varitu vi- |
paaMsa-gana poo — jisuva-ravare kRu — taartha-renisuva-ru || 14-6 ||
mooru-vare saa — virada- mElare- |
noora-yidu roo — padi ja-naardana |
soori-gaLu maa — Duva sa-maaraa — dhanege- vighnaga-Lu ||
baara-daMte ba — hu pra-kaara kha- |
raari- kaapaa — Duvanu- sarva sha- |
reera-gaLoLi — ddavara-vara pesa — riMda- karesuta-li || 14-7 ||
jaya ja-ya jayaa — kaaMta- dattaa- |
traya ka-pila mahi — daasa- bhakta- |
priya pu-raatana — puruSha- poorNaa — naMda- j~jaana gha-na ||
hayava-dana hari — haMsa- lOka- |
traya vi-lakShaNa — nikhiLa- jagadaa- |
shraya ni-raamaya — dayadi- saMtai — seMdu- praarthipu-du || 14-8 ||
ShaNNa-vati eM — bakSha-rEDyanu |
ShaNNa-vati naa — madali- karesuta |
tanna-varu sa — dbhakti- poorvaka — diMda- maaDuti-ha ||
puNya- karmava — sweeka-risi kaa- |
ruNya- saagara — salahu-vanu bra- |
hmaNya-dEva bha — vaabdhi- pOta ba — hu pra-kaarada-li || 14-9 ||
dEha-gaLa koDu — vavanu- avarava- |
rahara-gaLa koDa — dihane- sumanasa- |
mahita- maMgaLa — carita- sadguNa — bharita-nanavara-ta ||
ahika- paara — trika su-khaprada |
vahisi- bennali — beTTa-vamRutava |
druhiNa- modalaa — davari-guNisida — murida-nahitara-nu || 14-10 ||
druhiNa- modalaa — damara-rige sa- |
nmahita- maayaa — ramaNa- taanE |
swahane-nisi saM — tRupti- baDisuva — sarva- kaalada-li ||
prahita- saMkaru — ShaNanu- pitrugaLi- |
gahara-nenipa swa — dhaakhya- roopadi |
mahija- phala tRuNa — pesari-nali pra — dyumna- aniru-ddha || 14-11 ||
anna-nenisuva — nRupashu-gaLige hi- |
raNya- garbhaaM — DadoLu- saMtata |
tanna-nee pari — yiMdu-paasane — gaiva- bhaktara-nu ||
banna- baDisade — bhava sa-mudra ma- |
hOnna-tiya daa — Tisi ca-turvidha |
anna-mayanaa — tma pra-darshana — sukhava-neeva ha-ri || 14-12 ||
mana va-cana kaa — yagaLa- deseyiM- |
danudi-nadi biDa — daaca-risuti- |
ppanuci-tOcita — karma-gaLa sa — dbhakti- poorvaka-di ||
anila-dEvano — Lippa- naaraa- |
yaNagi-dannavu — eMdu- kRuShNaa- |
rpaNave-nuta koDe — sweeka-risi saM — taipa- karuNaa-Lu || 14-13 ||
ELu- vidha a — nna pra-karaNava |
kELi- kOvida — raasya-diMdali |
aala-sava maa — Dadale- aniru — ddhaadi- roopaga-La ||
kaala- kaaladi — nenedu- poojisu |
sthoola-matigaLi — gidanu- pELade |
shreela-kumiva — llabhane- annaa — danna- annada-nu || 14-14 ||
eMda-ritu sa — ptaanna-gaLa dai- |
naMdi-nadi mare — yade sa-daa gO- |
viMda-garpisu — nirbha-yadi maha — yaj~ja-viduyeM-du ||
iMdi-rEshanu — sweeka-risi daya- |
diMda- bEDisi — koLade- tavakadi |
taMdu- koDuvanu — parama- maMgaLa — tanna- daasari-ge || 14-15 ||
sooji- karadali — piDidu- samarava |
naa ja-yisuvenu — eMba- naranaM- |
tee ja-gattino — LuLLa- ajjaa — nigaLu- nityada-li ||jaana- poorvaka |
shreeja-gatpati — caraNa-yugaLa sa- |
rOja- bhakti — j
pooji-sade dha — rmaartha- kaamava — bayasi- baLaluva-ru || 14-16 ||
shakaTa- bhaMjana — sakala- jeevara |
nikaTa-ganu taa — naagi- lOkake |
prakaTa-naagade — sakala- karmava — maaDi- maaDisu-ta ||
akuTi-laatmaka — bhakuta- janarige |
sukhada-nenisuva — sarva-kaaladi |
akaTa-kaTa ee — tana ma-haa mahi — megaLi-gEneM-be || 14-17 ||
shree la-kumiva — llabhanu- vaikuM- |
Thaala-yadi praNa — va pra-kRuti kee- |
laala- jaasana — mukhya- cEtana — roLage- nelesi-ddu ||
moola- kaaraNa — naMsha- naamadi |
leele-gaivuta — tOri-koLLade |
paali-noLu ghRuta — vidda- teradaM — tippa- tristhaLa-di || 14-18 ||
mooru- yugadali — moola- roopanu |
sooru-gaLa saM — taisi- ditiya ku- |
maara-kara saM — harisi- dharmava — nuLuha-bEkeM-du ||
kaaru-Nika bhoo — miyoLu- nijapari- |
vaara- sahitava — tarisi- bahuvidha |
tOri-danu nara — vatpra-vRuttiya — sakala- cEtana-ke || 14-19 ||
kaara-Naahwaya — prakRuti-yoLagi- |
ddaara-dhika hadi — neMTu- tattwawa |
taa ra-cisi ta — droopa- tannaa — maMga-Lane dhari-si ||
neera-ja bhavaaM — Davanu- nirmisi |
kaaru-Nika kaa — ryaakhya- roopadi |
tOru-vanu saha — jaahi-taacala — gaLali- pratidina-di || 14-20 ||
jeeva-raMta — ryaami- aMshi ka- |
LEva-ragaLoLa — giMdri-yagaLali |
taa vi-haarava — gaivu-tanudina — aMsha- naamada-li ||
ee vi-ShayagaLa — nuMDu- sukhamaya |
eeva- sukha saM — saara- duHkhava |
dEva- maanava — daana-varigavi — rata su-dhaama sa-kha || 14-21 ||
dEsha- dEshava — sutti- dEhaa- |
yaasa-goLisade — kaamya- karma du- |
raase-goLagaa — gadale- brahmaa — dyakhila- cEtana-ru ||
bhoo sa-lila paa — vaka sa-meeraa- |
kaasha- modalaa — dakhila-tattwa pa- |
rEsha-givadhi — ShThaana-veMdari — darci-sanavara-ta || 14-22 ||
eraDu- vidhadali — lOka-doLu jee- |
varuga-Lipparu — saMta-ta kSharaa- |
kShara vi-liMga sa — liMga- sRujyaa — sRujya- bhEdada-li ||
karesu-vudu jaDa — prakRuti- praNavaa- |
kShara ma-hAdaNu — kaala- naamadi |
hari sa-hita bhE — dagaLa- paMcaka — smarisu- sarva-tra || 14-23 ||
jeeva- jeevara — bhEda- jaDajaDa- |
jeeva- jaDagaLa — bhEda- paramanu |
jeeva- jaDa suvi — lakSha-Nanu eM — daridu- nityada-li ||
ee vi-riMcaaM — DadoLu- ellaa |
Thaavi-nali tiLi — daidu- bhEda ka- |
LEva-radoLari — tacyu-tana pada — vaidu- sheeghrada-li || 14-24 ||
aadi-yalli kSha — raa kSha-raakhya |
dwEdha- akShara — doLu ra-maa madhu- |
sooda-naru kShara — gaLoLu- prakRuti — praNava- kaalaga-Lu ||
vEdha- mukhya tRu — NaaMta- jeevara |
bhEda-gaLanari — tee ra-hasyava |
bOdhi-sade maM — darige- sarva — tradali- ciMtipu-du || 14-25 ||
deepa-diM dee — pagaLu- porama- |
TTaapa-Naalaya — gata ti-miragaLa |
taa pa-riharava — gaisi- tadga pa — daartha- tOrpaM-te ||
soupa-raNi vara — vahana- taa bahu- |
roopa- naamadi — ella- kaDeyali |
vyaapi-siddu ya — thEShTa- mahimeya — tOrpa- tiLisada-le || 14-26 ||
naLina- mitrage — iMdra-dhanu prati- |
phalisu-vaMte ja — gatra-yavu kaM- |
goLipa-danupaa — dhiyali- pratibiM — baahwa-yadi hari-ge ||
tiLiye- trikakud — dhaama-nati maM- |
gaLa su-roopava — sarva- Thaavili |
poLeva- hRudayake — prati di-vasa pra — hlaada- pOShaka-nu || 14-27 ||
rasa vi-ShEsha do — Lati vi-mala sita- |
vasana- tOyisi — agni-yoLagiDe |
pasari-suvudu pra — kaasha- nasuguM — dadale- sarva-tra ||
trishira-dooShaNa — vairi- bhakti su- |
rasadi- tOyda ma — haatma-rana baa- |
dhisavu- bhavadoLa — gidda-reyu sari — durita- raashiga-Lu || 14-28 ||
vaari-nidhiyoLa — gakhila- nadigaLu |
bEre- bEre ni — raMta-radali vi- |
haara- gaiyyuta — parama- mOdada — lippa- teradaM-te ||
mooru- guNagaLa — maani- enisuva |
shreera-maa roo — pagaLu- hariyali |
tOru-tippavu — sarva- kaaladi — samara-hitaveni-si || 14-29 ||
kOka-nada sakha — nudaya- ghookaa- |
lOka-nake soga — sadire- bhaaskara |
taa ka-LaMkane — ee kRu-tIpati — jagada- naathani-re ||
sweeka-risi sukha — baDala-riyadavi- |
vEki-gaLu niM — disida-rEnahu- |
dee ka-vitwava — kELi- sukha baDa — dihare- kOvida-ru || 14-30 ||
cEta-naa cE — tanaga-Lali guru- |
maata-rishwaaM — targa-ta jaga- |
nnaatha- viThala ni — raMta-radi vyaa — pisi ti-LisikoLa-de ||
kaata-rava pu — TTisi vi-Shayadali |
yaatu- dhaanara — mOhi-suva ni- |
rbheeta- nityaa — naMda-maya ni — rdOSha- nirava-dya || 14-31 |
|| iti shree pitRugaNa saMdhi saMpoorNaM ||
|| ( iti shree jeevanaprakriyaa saMdhi saMpoorNaM ) ||
|| shree kRuShNaarpaNamastu ||

Leave a Reply
You must be logged in to post a comment.