(udAttAnudAtta sandhi) Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೯. ವರ್ಣಪ್ರಕ್ರಿಯಾ ಸಂಧಿ (ಉದಾತ್ತಾನುದಾತ್ತ )
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಹರಿಯೆ- ಪಂಚಾ — ಶದ್ವ-ರಣ ಸು- |
ಸ್ವರ ಉ-ದಾತ್ತನು — ದಾತ್ತ- ಪ್ರಚಯ |
ಸ್ವರಿತ- ಸಂಧಿ ವಿ — ಸರ್ಗ- ಬಿಂದುಗ — ಳೊಳಗೆ- ತದ್ವಾ-ಚ್ಯ ||
ಇರುವ- ತತ್ತ — ನ್ನಾಮ- ರೂಪಗ- |
ಳರಿತು-ಪಾಸನೆ — ಗೈವ-ರಿಳೆಯೊಳು |
ಸುರರೆ- ಸರಿ ನರ — ರಲ್ಲ- ಅವರಾ — ಡುವದೆ ವೇದಾ-ರ್ಥ || ೯-೧ ||
ಈಶ-ನಲಿ ವಿ — ಜ್ಞಾನ- ಭಗವ- |
ದ್ದಾಸ-ರಲಿ ಸ — ದ್ಭಕ್ತಿ- ವಿಷಯ ನಿ- |
ರಾಸೆ- ಮಿಥ್ಯಾ — ವಾದ-ದಲಿ ಪ್ರ — ದ್ವೇಷ- ನಿತ್ಯದ-ಲಿ ||
ಈ ಸ-ಮಸ್ತ — ಪ್ರಾಣಿ-ಗಳೊಳು ರ- |
ಮೇಶ-ನಿಹನೆಂ — ದರಿದು- ಅವರಭಿ- |
ಲಾಷೆ-ಗಳ ಪೂ — ರೈಸು-ವದೆ ಮಹ — ಯಜ್ಞ- ಹರಿಪೂ-ಜೆ || ೯-೨ ||
ತ್ರಿದಶ- ಏಕಾ — ತ್ಮಕನೆ-ನಿಸಿ ಭೂ- |
ಉದಕ- ಶಿಖಿಯೊಳು — ಹತ್ತು- ಕರಣದಿ |
ಅಧಿಪ-ರೆನಿಸುವ — ಪ್ರಾಣ- ಮುಖ್ಯಾ — ದಿತ್ಯ-ರೊಳು ನೆಲೆ-ಸಿ ||
ವಿದಿತ-ನಾಗಿ — ದ್ದನವ-ರತ ನಿರ- |
ವಧಿಕ- ಮಹಿಮನು — ಸಕಲ- ವಿಷಯವ |
ನಿಧನ- ನಾಮಕ — ಸಂಕ-ರುಷಣಾ — ಹ್ವಯನು- ಸ್ವೀಕರಿ-ಪ || ೯-೩ ||
ದಹಿಕ- ದೈಶಿಕ — ಕಾಲಿ-ಕ ತ್ರಯ |
ಗಹನ- ಕರ್ಮಗ — ಳುಂಟು- ಇದರೊಳು |
ವಿಹಿತ- ಕರ್ಮಗ — ಳರಿತು- ನಿಷ್ಕಾ — ಮಕನು- ನೀನಾ-ಗಿ ||
ಬೃಹತಿ- ನಾಮಕ — ಭಾರ-ತೀಶನ |
ಮಹಿತ- ರೂಪವ — ನೆನೆದು- ಮನದಲಿ |
ಅಹರ-ಹರ್ ಭಗ — ವಂತ-ಗರ್ಪಿಸು — ಪರಮ- ಭಕುತಿಯ-ಲಿ || ೯-೪ ||
ಮೂರು- ವಿಧ ಕ — ರ್ಮಗಳೊ-ಳಗೆ ಕಂ- |
ಸಾರಿ- ಭಾರ್ಗವ — ಹಯವ-ದನ ಸಂ- |
ಪ್ರೇರ-ಕನು ತಾ — ನಾಗಿ- ನವರೂ — ಪಂಗ-ಳನೆ ಧರಿ-ಸಿ ||
ಸೂರಿ- ಮಾನವ — ದಾನ-ವರೊಳು ವಿ- |
ಕಾರ- ಶೂನ್ಯನು — ಮಾಡಿ- ಮಾಡಿಸಿ |
ಸಾರ-ಭೋಕ್ತನು — ಸ್ವೀಕ-ರಿಸಿ ಕೊಡು — ತಿಪ್ಪ- ಜೀವರಿ-ಗೆ || ೯-೫ ||
ಅನಲ- ಪಕ್ವವ — ಗೈಸಿ-ದನ್ನವ |
ಅನಲ-ನೊಳು ಹೋ — ಮಿಸುವ- ತೆರದಂ- |
ತನಿಮಿ-ಷೇಶನು — ಮಾಡಿ- ಮಾಡಿಸಿ — ದಖಿಲ- ಕರ್ಮಗ-ಳ ||
ಮನ ವ-ಚನ ಕಾ — ಯದಲಿ- ತಿಳಿದನು- |
ದಿನದಿ- ಕೊಡು ಶಂ — ಕಿಸದೆ- ವೃಜಿನಾ- |
ರ್ದನ ಸ-ದಾ ಕೈ — ಕೊಂಡು- ಸಂತೈ — ಸುವನು- ತನ್ನವ-ರ || ೯-೬ ||
ಕುದುರೆ- ಬಾಲದ — ಕೊನೆಯ- ಕೂದಲು |
ತುದಿ ವಿ-ಭಾಗವ — ಮಾಡೆ- ಶತವಿಧ- |
ವದರೊ-ಳೊಂದನು — ನೂರು- ಭಾಗವ — ಮಾಡ-ಲೆಂತಿಹು-ದೋ ||
ವಿಧಿ ಭ-ವಾದಿ ಸ — ಮಸ್ತ- ದಿವಿಜರ |
ಮೊದಲು- ಮಾಡಿ ತೃ — ಣಾಂತ- ಜೀವರೊ- |
ಳಧಿಕ- ನ್ಯೂನತೆ — ಇಲ್ಲ-ವೆಂದಿಗು — ಜೀವ- ಪರಿಮಾ-ಣು || ೯-೭ ||
ಜೀವ-ನಂಗು — ಷ್ಠಾಗ್ರ- ಮೂರುತಿ |
ಜೀವ-ನಂಗುಟ — ಮಾತ್ರ- ಮೂರುತಿ |
ಜೀವ-ನ ಪ್ರಾ — ದೇಶ- ಜೀವಾ — ಕಾರ- ಮೂರ್ತಿಗ-ಳು ||
ಏವ-ಮಾದಿ ಅ — ನಂತ- ರೂಪದಿ |
ಯಾವ-ದವಯವ — ಗಳೊಳು- ವ್ಯಾಪಿಸಿ |
ಕಾವ- ಕರುಣಾ — ಳುಗಳ- ದೇವನು — ಈ ಜ-ಗತ್ರಯ-ವ || ೯-೮ ||
ಬಿಂಬ- ಜೀವಾಂ — ಗುಷ್ಠ- ಮಾತ್ರದಿ |
ಇಂಬು-ಗೊಂಡಿಹ — ಸರ್ವ-ರೊಳು ಸೂ- |
ಕ್ಷ್ಮಾಂಬ-ರದಿ ಹೃ — ತ್ಕಮಲ- ಮಧ್ಯ ನಿ — ವಾಸಿ-ಯೆಂದೆನಿ-ಸಿ ||
ಎಂಬ-ರೀತಗೆ — ಕೋವಿ-ದರು ವಿ- |
ಶ್ವಂಭ-ರಾತ್ಮಕ — ಪ್ರಾಜ್ಞ- ಭಕ್ತಕು- |
ಟುಂಬಿ- ಸಂತೈ — ಸುವನು- ಈ ಪರಿ — ಬಲ್ಲ- ಭಜಕರ-ನು || ೯-೯ ||
ಪುರುಷ- ನಾಮಕ — ಸರ್ವ- ಜೀವರೊ- |
ಳಿರುವ- ದೇಹಾ — ಕಾರ- ರೂಪದಿ |
ಕರಣ- ನೀಯಾ — ಮಕ ಹೃ- ಷೀಕಪ — ನಿಂದ್ರಿ-ಯಂಗಳ-ಲಿ ||
ತುರಿಯ- ನಾಮಕ — ವಿಶ್ವ- ತಾ ಹ- |
ನ್ನೆರಡು- ಬೆರಳುಳಿ — ದುತ್ತ-ಮಾಂಗ-ದಿ |
ಎರಡ-ಧಿಕ ಎ — ಪ್ಪತ್ತು-ಸಾವಿರ — ನಾಡಿ-ಯೊಳಗಿ-ದ್ದು || ೯-೧೦ ||
ವ್ಯಾಪ-ಕನು ತಾ — ನಾಗಿ- ಜೀವ ಸ್ವ- |
ರೂಪ- ದೇಹದ — ಒಳ ಹೊ-ರಗೆ ನಿ- |
ರ್ಲೇಪ-ನಾಗಿಹ — ಜೀವ- ಕೃತ ಕ — ರ್ಮಗಳ-ನಾಚರಿ-ಸಿ ||
ಶ್ರೀ ಪ-ಯೋಜ ಭ — ವೇರ-ರಿಂದ ಪ್ರ- |
ದೀಪ- ವರ್ಣ ಸ್ವ — ಮೂರ್ತಿ- ಮಧ್ಯಗ |
ತಾ ಪೊ-ಳೆವ ವಿ — ಶ್ವಾದಿ- ರೂಪದಿ — ಸೇವೆ- ಕೈಕೊಳು-ತ || ೯-೧೧ ||
ಗರುಡ- ಶೇಷ ಭ — ವಾದಿ- ನಾಮವ |
ಧರಿಸಿ- ಪವನ ಸ್ವ — ರೂಪ- ದೇಹದಿ |
ಕರಣ- ನೀಯಾ — ಮಕನು- ತಾನಾ — ಗಿಪ್ಪ- ಹರಿಯಂ-ತೆ ||
ಸರಸಿ-ಜಾಸನ — ವಾಣಿ- ಭಾರತಿ |
ಭರತ-ನಿಂದೊಡ — ಗೂಡಿ- ಲಿಂಗದ- |
ಲಿರುತಿ-ಹರು ಮಿ — ಕ್ಕಾದಿ-ತೇಯರಿ — ಗಿಲ್ಲ-ವಾಸ್ಥಾ-ನ || ೯-೧೨ ||
ಜೀವ-ನಕೆ ತುಷ — ದಂತೆ- ಲಿಂಗವು |
ಸಾವ-ಕಾಶದಿ — ಪೊಂದಿ- ಸುತ್ತಲು |
ಪ್ರಾವ-ರಣ ರೂ — ಪದಲಿ- ಇಪ್ಪುದು — ಭಗವ-ದಿಚ್ಛೆಯ-ಲಿ ||
ಕೇವ-ಲ ಜಡ — ಪ್ರಕೃತಿ-ಯಿದಕಧಿ |
ದೇವ-ತೆಯು ಮಹ — ಲಕುಮಿ-ಯೆನಿಪಳು |
ಆ ವಿ-ರಜೆಯ — ಸ್ನಾನ-ಪರಿಯಂ — ತರದಿ- ಹತ್ತಿಹು-ದು || ೯-೧೩ ||
ಆರ-ಧಿಕ ದಶ — ಕಳೆಗ-ಳುಳ್ಳ ಶ- |
ರೀರ- ಅನಿರು — ದ್ಧಗಳ- ಮಧ್ಯದಿ |
ಸೇರಿ- ಇಪ್ಪವು — ಜೀವ- ಪರಮಾ — ಚ್ಛಾದಿ-ಕದ್ವಯ-ವು ||
ಬಾರ-ದಂದದಿ — ದಾನ-ವರನತಿ- |
ದೂರ-ಗೈಸುತ — ಶ್ರೀಜ-ನಾರ್ದನ |
ಮೂರು- ಗುಣದೊಳ — ಗಿಪ್ಪ-ನೆಂದಿಗು — ತ್ರಿವೃತು- ಎಂದೆನಿ-ಸಿ || ೯-೧೪ ||
ರುದ್ರ- ಮೊದಲಾ — ದಮರ-ರಿಗೆ ಅನಿ- |
ರುದ್ಧ- ದೇಹವೆ — ಮನೆಯೆ-ನಿಸುವುದು |
ಇದ್ದು- ಕೆಲಸವ — ಮಾಡ-ರಲ್ಲಿಂ — ದಿತ್ತ- ಸ್ಥೂಲದ-ಲಿ ||
ಕೃದ್ಧ- ಖಳ ದಿವಿ — ಜರು ಪ-ರಸ್ಪರ |
ಸ್ಪರ್ಧೆ-ಯಿಂದಲಿ — ದ್ವಂದ್ವ-ಕರ್ಮ ಸ- |
ಮೃದ್ಧಿ-ಗಳನಾ — ಚರಿಸು-ವರು ಪ್ರಾ — ಣೇಶ-ನಾಜ್ಞೆಯ-ಲಿ || ೯-೧೫ ||
ಮಹಿಯೊ-ಳಗೆ ಸು — ಕ್ಷೇತ್ರ- ತೀರ್ಥದಿ |
ತುಹಿನ- ವರ್ಷ ವ — ಸಂತ- ಕಾಲದಿ |
ದಹಿಕ- ದೈಶಿಕ — ಕಾಲಿ-ಕತ್ರಯ — ಧರ್ಮ- ಕರ್ಮಗ-ಳ ||
ದ್ರುಹಿಣ- ಮೊದಲಾ — ದಮರ-ರೆಲ್ಲರು |
ವಹಿಸಿ- ಗುಣಗಳ — ನನುಸ-ರಿಸಿ ಸ- |
ನ್ನಿಹಿತ-ರಾಗಿ — ದ್ದೆಲ್ಲ-ರೊಳು ಮಾ — ಡುವರು- ನಿರ್ಭಯ-ದಿ || ೯-೧೬ ||
ಕೇಶ- ಸಾಸಿರ — ವಿಧ ವಿ-ಭಾಗವ |
ಗೈಸ-ಲೆನಿತನಿ — ತಿಹ ಸು-ಷುಮ್ನವು |
ಆಶಿ-ರಾಂತದಿ — ವ್ಯಾಪಿ-ಸಿಹದೀ — ದೇಹ- ಮಧ್ಯದ-ಲಿ ||
ಆ ಸು-ಷುಮ್ನಕೆ — ವಜ್ರಿ-ಕಾರ್ಯ ಪ್ರ- |
ಕಾಶಿ-ನೀ ವೈ — ದ್ಯುತಗ-ಳಿಹವು ಪ್ರ- |
ದೇಶ-ದಲಿ ಪ — ಶ್ಚಿಮಕೆ- ಉತ್ತರ — ಪೂರ್ವ- ದಕ್ಷಿಣ-ಕೆ || ೯-೧೭ ||
ಆ ನ-ಳಿನ ಭವ — ನಾಡಿ-ಯೊಳಗೆ ತ್ರಿ- |
ಕೋಣ- ಚಕ್ರವು — ಇಪ್ಪ-ದಲ್ಲಿ ಕೃ- |
ಶಾನು- ಮಂಡಲ — ಮಧ್ಯ-ಗನು ಸಂ — ಕರ್ಷ-ಣಾಹ್ವಯ-ನು ||
ಹೀನ- ಪಾಪಾ — ತ್ಮಕ ಪು-ರುಷನ ದ- |
ಹಾನ-ಗೈಸುತ — ದಿನದಿ-ನದಿ ವಿ- |
ಜ್ಞಾನ-ಮಯ ಶ್ರೀ — ವಾಸು-ದೇವನ — ಐದಿ-ಸುವ ಕರು-ಣಿ || ೯-೧೮ ||
ಮಧ್ಯ- ನಾಡಿಯ — ಮಧ್ಯ-ದಲಿ ಹೃ- |
ತ್ಪದ್ಮ- ಮೂಲದಿ — ಮೂಲ-ಪತಿ ಪದ- |
ಪದ್ಮ- ಮೂಲದ — ಲಿಪ್ಪ- ಪವನನ — ಪಾದ- ಮೂಲದ-ಲಿ ||
ಪೊಂದಿ-ಕೊಂಡಿಹ — ಜೀವ- ಲಿಂಗನಿ- |
ರುದ್ಧ- ದೇಹ ವಿ — ಶಿಷ್ಟ-ನಾಗಿ ಕ- |
ಪರ್ದಿ- ಮೊದಲಾ — ದಮರ-ರೆಲ್ಲರು — ಕಾದು-ಕೊಂಡಿಹ-ರು || ೯-೧೯ ||
ನಾಳ-ಮಧ್ಯದ — ಲಿಪ್ಪ- ಹೃತ್ಕೀ- |
ಲಾಲ-ಜದೊಳಿ — ಪ್ಪಷ್ಟ-ದಳದಿ ಕು- |
ಲಾಲ- ಚಕ್ರದ — ತೆರದಿ- ಚರಿಸುತ — ಹಂಸ- ನಾಮಕ-ನು ||
ಕಾಲ- ಕಾಲಗ — ಳಲ್ಲಿ- ಎಣ್ದೆಸೆ- |
ಪಾಲ-ಕರ ಕೈ — ಸೇವೆ-ಗೊಳುತ ಕೃ- |
ಪಾಳು- ಅವರಭಿ — ಲಾಷೆ-ಗಳ ಪೂ — ರೈಸಿ- ಕೊಡುತಿ-ಪ್ಪ || ೯-೨೦ ||
ವಾಸ-ವಾನುಜ — ರೇಣು-ಕಾತ್ಮಜ |
ದಾಶ-ರಥಿ ವೃಜಿ — ನಾರ್ದ-ನಮಲ ಜ- |
ಲಾಶ-ಯಾಲಯ — ಹಯವ-ದನ ಶ್ರೀ — ಕಪಿಲ- ನರಸಿಂ-ಹ ||
ಈಸು- ರೂಪದ — ಲವರ-ವರ ಸಂ- |
ತೋಷ-ಬಡಿಸುತ — ನಿತ್ಯ- ಸುಖಮಯ |
ವಾಸ-ವಾಗಿಹ — ಹೃತ್ಕ-ಮಲದೊಳು — ಬಿಂಬ-ನೆಂದೆನಿ-ಸಿ || ೯-೨೧ ||
ಸುರಪ-ನಾಲಯ — ಕೈದಿ-ದರೆ ಮನ- |
ವೆರಗು-ವುದು ಸ — ತ್ಪುಣ್ಯ- ಮಾರ್ಗದಿ |
ಬರಲು- ವಹ್ನಿಯ — ಮನೆಗೆ- ನಿದ್ರಾ — ಲಸ್ಯ- ಹಸಿ ತೃಷೆ-ಯು ||
ತರಣಿ- ತನಯ ನಿ — ಕೇತ-ನದಿ ಸಂ- |
ಭರಿತ- ಕೋಪಾ — ಟೋಪ- ತೋರುವು- |
ದರ ವಿ-ದೂರನು — ನಿಋತಿ-ಯಲಿ ಬರೆ — ಪಾಪ-ಗಳ ಮಾ-ಳ್ಪ || ೯-೨೨ ||
ವರುಣ-ನಲ್ಲಿ ವಿ — ನೋದ- ಹಾಸ್ಯವು |
ಮರುತ-ನೊಳು ಗಮ — ನಾಗ-ಮನ ಹಿಮ- |
ಕರ ಧ-ನಾಧಿಪ — ರಲ್ಲಿ- ಧರ್ಮದ — ಬುದ್ಧಿ- ಜನಿಸುವು-ದು ||
ಹರನ- ಮಂದಿರ — ದಲ್ಲಿ- ಗೋ ಧನ- |
ಧರಣಿ- ಕನ್ಯಾ — ದಾನ-ಗಳು ಒಂ- |
ದರಘ-ಳಿಗೆ ತಡೆ — ಯದಲೆ- ಕೊಡುತಿಹ — ಚಿತ್ತ- ಪುಟ್ಟುವು-ದು || ೯-೨೩ ||
ಹೃದಯ-ದೊಳಗೆ ವಿ — ರಕ್ತಿ- ಕೇಸರ- |
ಕೊದಗೆ- ಸ್ವಪ್ನ ಸು — ಷುಪ್ತಿ- ಲಿಂಗದಿ -|
ಮಧುಹ- ಕರ್ಣಿಕೆ — ಯಲ್ಲಿ- ಬರೆ ಜಾ — ಗೃತಿಯು- ಪುಟ್ಟುವು-ದು ||
ಸುದರು-ಶನ ಮೊದ — ಲಾದ- ಅಷ್ಟಾ- |
ಯುಧವ- ಪಿಡಿದು ದಿ — ಶಾಧಿ-ಪತಿಗಳ |
ಸದನ-ದಲಿ ಸಂ — ಚರಿಸು-ತೀಪರಿ — ಬುದ್ಧಿ-ಗಳ ಕೊಡು-ವ || ೯-೨೪ ||
ಸೂತ್ರ-ನಾಮಕ — ಪ್ರಾಣ-ಪತಿ ಗಾ- |
ಯತ್ರಿ- ಸಂಪ್ರತಿ — ಪಾದ್ಯ-ನಾಗೀ- |
ಗಾತ್ರ-ದೊಳು ನೆಲೆ — ಸಿರಲು- ತಿಳಿಯದೆ — ಕಂಡ-ಕಂಡ-ಲ್ಲಿ ||
ಧಾತ್ರಿ-ಯೊಳು ಸಂ — ಚರಿಸಿ- ಪುತ್ರಕ- |
ಳತ್ರ- ಸಹಿತನು — ದಿನದಿ- ತೀರ್ಥ- |
ಕ್ಷೇತ್ರ- ಯಾತ್ರೆಯ — ಮಾಡಿ-ದೆವು ಎಂ — ದೆನುತ- ಹಿಗ್ಗುವ-ರು || ೯-೨೫ ||
ನಾರ-ಸಿಂಹ ಸ್ವ — ರೂಪ-ದೊಳಗೆ ಶ- |
ರೀರ- ನಾಮದಿ — ಕರೆಸು-ವನು ಹದಿ- |
ನಾರು- ಕಳೆಗಳು — ಉಳ್ಳ- ಲಿಂಗದಿ — ಪುರುಷ- ನಾಮಕ-ನು ||
ತೋರು-ವನು ಅನಿ — ರುದ್ಧ-ದೊಳು ಶಾಂ- |
ತೀರ-ಮಣ ಅನಿ — ರುದ್ಧ- ರೂಪದಿ |
ಪ್ರೇರಿ-ಸುವ ಪ್ರ — ದ್ಯುಮ್ನ- ಸ್ಥೂಲ ಕ — ಳೇವ-ರದೊಳಿ-ದ್ದು || ೯-೨೬ ||
ಮೊದಲು- ತ್ವಕ್ಚ — ರ್ಮಗಳು- ಮಾಂಸವು |
ರುಧಿರ- ಮೇದೋ — ಮಜ್ಜ-ವಸ್ಥಿಗ- |
ಳಿದರೊ-ಳಗೆ ಏ — ಕೋನ-ಪಂಚಾ — ಶನ್ಮ-ರುದ್ಗಣ-ವು ||
ನಿಧನ- ಹಿಂಕಾ — ರಾದಿ- ಸಾಮಗ |
ಅದರ- ನಾಮದಿ — ಕರೆಸು-ತೊಂಭ- |
ತ್ತಧಿಕ- ನಾಲ್ವ — ತ್ತೆನಿಪ- ರೂಪದಿ — ಧಾತು-ಗಳೊಳಿ-ಪ್ಪ || ೯-೨೭ ||
ಸಪ್ತ- ಧಾತುಗ — ಳೊಳ ಹೊ-ರಗೆ ಸಂ- |
ತಪ್ತ- ಲೋಹಗ — ತಾಗ್ನಿ-ಯಂದದಿ |
ಸಪ್ತ- ಸಾಮಗ — ನಿಪ್ಪ- ಅನ್ನಮ — ಯಾದಿ- ಕೋಶದೊ-ಳು ||
ಲಿಪ್ತ-ನಾಗದೆ — ತತ್ತ-ದಾಹ್ವಯ |
ಕ್ಲೃಪ್ತ- ಭೋಗವ — ಕೊಡುತ- ಸ್ವಪ್ನ ಸು- |
ಷುಪ್ತಿ- ಜಾಗೃತಿ — ಯೀವ- ತೈಜಸ — ಪ್ರಾಜ್ಞ- ವಿಶ್ವಾ-ಖ್ಯ || ೯-೨೮ ||
ತೀವಿ-ಕೊಂಡಿಹ — ವಲ್ಲಿ- ಮಜ್ಜಕ- |
ಳೇವ-ರದಿ ಅಂ — ಗುಲಿಯ- ಪರ್ವದ |
ಠಾವಿ-ನಲಿ ಮು — ನ್ನೂರು- ಅರವ — ತ್ತೆನಿಪ- ತ್ರಿಸ್ಥಳ-ದಿ ||
ಸಾವಿ-ರದ ಎಂ — ಭತ್ತು- ರೂಪವ |
ಕೋವಿ-ದರು ಪೇ — ಳುವರು- ದೇಹದಿ |
ದೇವ-ತೆಗಳೊಡ — ಗೂಡಿ- ಕ್ರೀಡಿಸು — ವನು ರ-ಮಾರಮ-ಣ || ೯-೨೯ ||
ಕೀಟ- ಪೇಶ — ಸ್ಕಾರಿ- ನೆನವಿಲಿ |
ಕೀಟ-ಭಾವವ — ತೊರೆದು- ತದ್ವತ್ |
ಖೇಟ- ರೂಪವ — ನೈದಿ- ಆಡುವ — ತೆರದಿ- ಭಕುತಿಯ-ಲಿ ||
ಕೈಟ- ಭಾರಿಯ — ಧ್ಯಾನ-ದಿಂದ ಭ- |
ವಾಟ-ವಿಯನತಿ — ಶೀಘ್ರ-ದಿಂದಲಿ |
ದಾಟಿ- ಸಾರೂ — ಪ್ಯವನು- ಐದುವ — ರಲ್ಪ- ಜೀವಿಗ-ಳು || ೯-೩೦ ||
ಈ ಪ-ರಿಯ ದೇ — ಹದೊಳು- ಭಗವ- |
ದ್ರೂಪ-ಗಳ ಮರೆ — ಯದಲೆ- ಮನದಿ ಪ- |
ದೇ ಪ-ದೇ ಭಕು — ತಿಯಲಿ- ಸ್ಮರಿಸುತ — ಲಿಪ್ಪ- ಭಕುತರ-ನು ||
ಗೋಪ-ತಿ ಜಗ — ನ್ನಾಥ-ವಿಠಲ ಸ- |
ಮೀಪ-ಗನು ತಾ — ನಾಗಿ- ಸಂತತ |
ಸಾಪ-ರೋಕ್ಷಿಯ — ಮಾಡಿ- ಪೊರೆವನು — ಎಲ್ಲ- ಕಾಲದ-ಲಿ || ೯-೩೧ ||
|| ಇತಿ ಶ್ರೀ ವರ್ಣಪ್ರಕ್ರಿಯಾ (ಉದಾತ್ತಾನುದಾತ್ತ ) ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||
10. Sarvaprateeka Sandhi – HKS
- varNaprakriyaa saMdhi
(udAttAnudAtta )
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
hariye- paMcaa — shadwa-raNa su- |
swara u-daattanu — daatta- pracaya |
swarita- saMdhi vi — sarga- biMduga — LoLage- tadwaa-cya ||
iruva- tatta — nnaama- roopaga- |
Laritu-paasane — gaiva-riLeyoLu |
surare- sari nara — ralla- avaraa — Duvade vEdaa-rtha || 9-1 ||
eesha-nali vi — jjaana- bhagava- |
ddaasa-rali sa — dbhakti- viShaya ni- |
raase- mithyaa — vaada-dali pra — dwESha- nityada-li ||
ee sa-masta — praaNi-gaLoLu ra- |
mEsha-nihaneM — daridu- avarabhi- |
laaShe-gaLa poo — raisu-vade maha — yajja- haripoo-je || 9-2 ||
tridasha- Ekaa — tmakane-nisi bhoo- |
udaka- shikhiyoLu — hattu- karaNadi |
adhipa-renisuva — praaNa- mukhyaa — ditya-roLu nele-si ||
vidita-naagi — ddanava-rata nira- |
vadhika- mahimanu — sakala- viShayava |
nidhana- naamaka — saMka-ruShaNaa — hwayanu- sweekari-pa || 9-3 ||
dahika- daishika — kaali-ka traya |
gahana- karmaga — LuMTu- idaroLu |
vihita- karmaga — Laritu- niShkaa — makanu- neenaa-gi ||
bRuhati- naamaka — bhaara-teeshana |
mahita- roopava — nenedu- manadali |
ahara-har bhaga — vaMta-garpisu — parama- bhakutiya-li || 9-4 ||
mooru- vidha ka — rmagaLo-Lage kaM- |
saari- bhaargava — hayava-dana saM- |
prEra-kanu taa — naagi- navaroo — paMga-Lane dhari-si ||
soori- maanava — daana-varoLu vi- |
kaara- shoonyanu — maaDi- maaDisi |
saara-bhOktanu — sweeka-risi koDu — tippa- jeevari-ge || 9-5 ||
anala- pakwava — gaisi-dannava |
anala-noLu hO — misuva- teradaM- |
tanimi-ShEshanu — maaDi- maaDisi — dakhila- karmaga-La ||
mana va-cana kaa — yadali- tiLidanu- |
dinadi- koDu shaM — kisade- vRujinaa- |
rdana sa-daa kai — koMDu- saMtai — suvanu- tannava-ra || 9-6 ||
kudure- baalada — koneya- koodalu |
tudi vi-bhaagava — maaDe- shatavidha- |
vadaro-LoMdanu — nooru- bhaagava — maaDa-leMtihu-dO ||
vidhi bha-vaadi sa — masta- divijara |
modalu- maaDi tRu — NaaMta- jeevaro- |
Ladhika- nyoonate — illa-veMdigu — jeeva- parimaa-Nu || 9-7 ||
jeeva-naMgu — ShThaagra- mooruti |
jeeva-naMguTa — maatra- mooruti |
jeeva-na praa — dEsha- jeevaa — kaara- moortiga-Lu ||
Eva-maadi a — naMta- roopadi |
yaava-davayava — gaLoLu- vyaapisi |
kaava- karuNaa — LugaLa- dEvanu — ee ja-gatraya-va || 9-8 ||
biMba- jeevaaM — guShTha- maatradi |
iMbu-goMDiha — sarva-roLu soo- |
kShmaaMba-radi hRu — tkamala- madhya ni — vaasi-yeMdeni-si ||
eMba-reetage — kOvi-daru vi- |
shwaMbha-raatmaka — praaj~ja- bhaktaku- |
TuMbi- saMtai — suvanu- ee pari — balla- bhajakara-nu || 9-9 ||
puruSha- naamaka — sarva- jeevaro- |
Liruva- dEhaa — kaara- roopadi |
karaNa- nIyaa — maka hRu- ShIkapa — niMdri-yaMgaLa-li ||
turiya- naamaka — vishwa- taa ha- |
nneraDu- beraLuLi — dutta-maaMga-di |
eraDa-dhika e — ppattu-saavira — naaDi-yoLagi-ddu || 9-10 ||
vyaapa-kanu taa — naagi- jeeva swa- |
roopa- dEhada — oLa ho-rage ni- |
rlEpa-naagiha — jeeva- kRuta ka — rmagaLa-naacari-si ||
shree pa-yOja bha — vEra-riMda pra- |
deepa- varNa swa — moorti- madhyaga |
taa po-Leva vi — shwaadi- roopadi — sEve- kaikoLu-ta || 9-11 ||
garuDa- shESha bha — vaadi- naamava |
dharisi- pavana swa — roopa- dEhadi |
karaNa- nIyaa — makanu- taanaa — gippa- hariyaM-te ||
sarasi-jaasana — vaaNi- bhaarati |
bharata-niMdoDa — gooDi- liMgada- |
liruti-haru mi — kkaadi-tEyari — gilla-vaasthaa-na || 9-12 ||
jeeva-nake tuSha — daMte- liMgavu |
saava-kaashadi — poMdi- suttalu |
praava-raNa roo — padali- ippudu — bhagava-dicCheya-li ||
kEva-la jaDa — prakRuti-yidakadhi |
dEva-teyu maha — lakumi-yenipaLu |
aa vi-rajeya — snaana-pariyaM — taradi- hattihu-du || 9-13 ||
aara-dhika dasha — kaLega-LuLLa sha- |
reera- aniru — ddhagaLa- madhyadi |
sEri- ippavu — jeeva- paramaa — cCaadi-kadwaya-vu ||
baara-daMdadi — daana-varanati- |
doora-gaisuta — shreeja-naardana |
mooru- guNadoLa — gippa-neMdigu — trivRutu- eMdeni-si || 9-14 ||
rudra- modalaa — damara-rige ani- |
ruddha- dEhave — maneye-nisuvudu |
iddu- kelasava — maaDa-ralliM — ditta- sthoolada-li ||
kRuddha- khaLa divi — jaru pa-raspara |
spardhe-yiMdali — dwaMdwa-karma sa- |
mRuddhi-gaLanaa — carisu-varu praa — NEsha-naaj~jeya-li || 9-15 ||
mahiyo-Lage su — kShEtra- teerthadi |
tuhina- varSha va — saMta- kaaladi |
dahika- daishika — kaali-katraya — dharma- karmaga-La ||
druhiNa- modalaa — damara-rellaru |
vahisi- guNagaLa — nanusa-risi sa- |
nnihita-raagi — ddella-roLu maa — Duvaru- nirbhaya-di || 9-16 ||
kEsha- saasira — vidha vi-bhaagava |
gaisa-lenitani — tiha su-Shumnavu |
aashi-raaMtadi — vyaapi-sihadee — dEha- madhyada-li ||
aa su-Shumnake — vajri-kaarya pra- |
kaashi-nee vai — dyutaga-Lihavu pra- |
dEsha-dali pa — shchimake- uttara — poorva- dakShiNa-ke || 9-17 ||
aa na-Lina bhava — naaDi-yoLage tri- |
kONa- cakravu — ippa-dalli kRu- |
shaanu- maMDala — madhya-ganu saM — karSha-Naahwaya-nu ||
heena- paapaa — tmaka pu-ruShana da- |
haana-gaisuta — dinadi-nadi vi- |
j~jaana-maya shree — vaasu-dEvana — aidi-suva karu-Ni || 9-18 ||
madhya- naaDiya — madhya-dali hRu- |
tpadma- mooladi — moola-pati pada- |
padma- moolada — lippa- pavanana — paada- moolada-li ||
poMdi-koMDiha — jeeva- liMgani- |
ruddha- dEha vi — shiShTa-naagi ka- |
pardi- modalaa — damara-rellaru — kaadu-koMDiha-ru || 9-19 ||
naaLa-madhyada — lippa- hRutkI- |
laala-jadoLi — ppaShTa-daLadi ku- |
laala- cakrada — teradi- carisuta — haMsa- naamaka-nu ||
kaala- kaalaga — Lalli- eNdese- |
paala-kara kai — sEve-goLuta kRu- |
paaLu- avarabhi — laaShe-gaLa poo — raisi- koDuti-ppa || 9-20 ||
vaasa-vaanuja — rENu-kaatmaja |
daasha-rathi vRuji — naarda-namala ja- |
laasha-yaalaya — hayava-dana shree — kapila- narasiM-ha ||
eesu- roopada — lavara-vara saM- |
tOSha-baDisuta — nitya- sukhamaya |
vaasa-vaagiha — hRutka-maladoLu — biMba-neMdeni-si || 9-21 ||
surapa-naalaya — kaidi-dare mana- |
veragu-vudu sa — tpuNya- maargadi |
baralu- vahniya — manege- nidraa — lasya- hasi tRuShe-yu ||
taraNi- tanaya ni — kEta-nadi saM- |
bharita- kOpaa — TOpa- tOruvu- |
dara vi-dooranu — niRuti-yali bare — paapa-gaLa maa-Lpa || 9-22 ||
varuNa-nalli vi — nOda- haasyavu |
maruta-noLu gama — naaga-mana hima- |
kara dha-naadhipa — ralli- dharmada — buddhi- janisuvu-du ||
harana- maMdira — dalli- gO dhana- |
dharaNi- kanyaa — daana-gaLu oM- |
daragha-Lige taDe — yadale- koDutiha — citta- puTTuvu-du || 9-23 ||
hRudaya-doLage vi — rakti- kEsara- |
kodage- swapna su — Shupti- liMgadi -|
madhuha- karNike — yalli- bare jaa — gRutiyu- puTTuvu-du ||
sudaru-shana moda — laada- aShTaa- |
yudhava- piDidu di — shaadhi-patigaLa |
sadana-dali saM — carisu-teepari — buddhi-gaLa koDu-va || 9-24 ||
sootra-naamaka — praaNa-pati gaa- |
yatri- saMprati — paadya-naagI- |
gaatra-doLu nele — siralu- tiLiyade — kaMDa-kaMDa-lli ||
dhaatri-yoLu saM — carisi- putraka- |
Latra- sahitanu — dinadi- teertha- |
kShEtra- yaatreya — maaDi-devu eM — denuta- higguva-ru || 9-25 ||
naara-siMha swa — roopa-doLage sha- |
reera- naamadi — karesu-vanu hadi- |
naaru- kaLegaLu — uLLa- liMgadi — puruSha- naamaka-nu ||
tOru-vanu ani — ruddha-doLu shaaM- |
teera-maNa ani — ruddha- roopadi |
prEri-suva pra — dyumna- sthoola ka — LEva-radoLi-ddu || 9-26 ||
modalu- twakca — rmagaLu- maaMsavu |
rudhira- mEdO — majja-vasthiga- |
Lidaro-Lage E — kOna-paMcaa — shanma-rudgaNa-vu ||
nidhana- hiMkaa — raadi- saamaga |
adara- naamadi — karesu-toMbha- |
ttadhika- naalwa — ttenipa- roopadi — dhaatu-gaLoLi-ppa || 9-27 ||
sapta- dhaatuga — LoLa ho-rage saM- |
tapta- lOhaga — taagni-yaMdadi |
sapta- saamaga — nippa- annama — yaadi- kOshado-Lu ||
lipta-naagade — tatta-daahwaya |
klRupta- bhOgava — koDuta- swapna su- |
Shupti- jaagRuti — yeeva- taijasa — praaj~ja- vishwaa-khya || 9-28 ||
teevi-koMDiha — valli- majjaka- |
LEva-radi aM — guliya- parvada |
Thaavi-nali mu — nnooru- arava — ttenipa- tristhaLa-di ||
saavi-rada eM — bhattu- roopava |
kOvi-daru pE — Luvaru- dEhadi |
dEva-tegaLoDa — gooDi- krIDisu — vanu ra-maarama-Na || 9-29 ||
keeTa- pEsha — skaari- nenavili |
keeTa-bhaavava — toredu- tadwat |
khETa- roopava — naidi- aaDuva — teradi- bhakutiya-li ||
kaiTa- bhaariya — dhyaana-diMda bha- |
vaaTa-viyanati — sheeghra-diMdali |
daaTi- saaroo — pyavanu- aiduva — ralpa- jeeviga-Lu || 9-30 ||
ee pa-riya dE — hadoLu- bhagava- |
droopa-gaLa mare — yadale- manadi pa- |
dE pa-dE bhaku — tiyali- smarisuta — lippa- bhakutara-nu ||
gOpa-ti jaga — nnaatha-viThala sa- |
meepa-ganu taa — naagi- saMtata |
saapa-rOkShiya — maaDi- porevanu — ella- kaalada-li || 9-31 ||
|| iti shree varNaprakriyaa (udAttAnudAtta ) saMdhi saMpoorNaM ||
|| shreekRuShNaarpaNamastu ||

Leave a Reply
You must be logged in to post a comment.