Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೭. ಪಂಚತನ್ಮಾತ್ರಾ ಸಂಧಿ
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು ||
ಭೂ ಸ-ಲಿಲ ಶಿಖಿ — ಪವನ- ಭೂತಾ- |
ಕಾಶ-ದೊಳಗೈ — ದೈದು- ತನ್ಮಾ- |
ತ್ರಾ ಸ-ಹಿತ ಒಂ — ದಧಿಕ- ಪಂಚಾ — ಶದ್ವ-ರಣ ವೇ-ದ್ಯ ||
ಈ ಶ-ರೀರದಿ — ವ್ಯಾಪಿ-ಸಿದ್ದು ಸು- |
ರಾಸು-ರರಿಗೆ ನಿ — ರಂತ-ರದಲಿ ಸು- |
ಖಾಸು-ಖಪ್ರದ — ನಾಗಿ- ಆಡುವ — ದ್ವೇಷಿ-ಪರ ಬಡಿ-ವ || ೭-೧ ||
ಪ್ರಣವ- ಪ್ರತಿಪಾ — ದ್ಯ ತ್ರಿ-ನಾಮದಿ |
ತನುವಿ-ನೊಳು ತ್ರಿ — ಸ್ಥಾನ-ಗನಿರು- |
ದ್ಧನು ತ್ರಿ-ಪಂಚಕ — ಏಕ-ವಿಂಶತಿ — ಚತುರ-ವಿಂಶತಿ-ಗ ||
ಎನಿಸಿ- ಎಪ್ಪ — ತ್ತೆರಡು-ಸಾವಿರ |
ಇನಿತು- ನಾಡಿಗ — ಳೊಳು ನಿ-ಯಾಮಿಸು- |
ತಿನಗ- ಭಸ್ತಿಗ — ಲೋಕ-ದೊಳು ಸ — ರ್ವತ್ರ- ಬೆಳಗುವ-ನು || ೭-೨ ||
ಜೀವ- ಲಿಂಗನಿ — ರುದ್ಧ- ಸ್ಥೂಲ ಕ- |
ಳೇವ-ರಗಳಲಿ — ವಿಶ್ವ- ತುರಗ- |
ಗ್ರೀವ- ಮೂಲೇ — ಶಾಚ್ಯು-ತ ತ್ರಯ — ಹಂಸ- ಮೂರ್ತಿಗ-ಳ ||
ಈ ವಿ-ಧ ಚತುಃ — ಸ್ಥಾನ-ದಲಿ ಶಾಂ- |
ತೀವ-ರನ ಈ — ರೆರಡು- ರೂಪದಿ |
ಭಾವಿ-ಸುವುದೇ — ಕೋನ- ವಿಂಶತಿ — ಮೂರ್ತಿ- ಸರ್ವ-ತ್ರ || ೭-೩ ||
ಕಲುಷ-ವಿಲ್ಲದ — ದರ್ಪ-ಣದಿ ಪ್ರತಿ- |
ಫಲಿಸಿ- ಸರ್ವ ಪ — ದಾರ್ಥ-ಗಳು ಕಂ- |
ಗೊಳಿಸು-ವಂದದಿ — ಬಿಂಬ- ಜಡ ಚೇ — ತನಗ-ಳೊಳಗಿ-ದ್ದು ||
ಪೊಳೆವ- ಬಹು ರೂ — ಪದಲಿ- ಸಜ್ಜನ- |
ರೊಳಗೆ- ಮನದ — ರ್ಪಣದಿ- ತಾ ನಿ- |
ಶ್ಚಲ ನಿ-ರಾಮಯ — ನಿರ್ವಿ-ಕಾರ ನಿ — ರಾಶ್ರ-ಯಾನಂ-ತ || ೭-೪ ||
ಈ ಶ-ರೀರ ಚ — ತುಷ್ಟ-ಯಗಳೊಳು |
ಕೋಶ- ಧಾತುಗ — ಭಾರ-ತೀ ಪ್ರಾ- |
ಣೇಶ-ನಿಪ್ಪ — ತ್ತೊಂದು- ಸಾವಿರ — ದಾರು-ನೂರೆನಿ-ಪ ||
ಶ್ವಾಸ- ರೂಪಕ — ಹಂಸ- ಭಾಸ್ಕರ- |
ಭೇಶ-ರೊಳಗಿ — ದ್ದವರ- ಕೈವಿಡಿ- |
ದೀ ಸ-ರೋಜ ಭ — ವಾಂಡ-ದೊಳು ಸ — ರ್ವತ್ರ- ತುಂಬಿಹ-ನು || ೭-೫ ||
ಶಿರಗ-ಳೈದೈ — ದೆರಡು- ಬಾಹುಗ- |
ಳೆರಡು- ಪಾದಗ — ಳೊಂದು- ಮಧ್ಯೋ- |
ದರದಿ- ಶೋಭಿಪ — ವಾಙ್ಮ-ನೋಮಯ — ನೆನಿಪ- ನಿತ್ಯದ-ಲಿ ||
ಕರಣ- ಧಾತುಗ — ಳಲ್ಲಿ- ಎಪ್ಪ- |
ತ್ತೆರಡು- ಸಾವಿರ — ನಾಡಿ-ಗಳೊಳಿ- |
ಪ್ಪರವಿ-ದೂರನು — ಭಾರ-ತ ಪ್ರತಿ — ಪಾದ್ಯ-ನೆಂದೆನಿ-ಸಿ || ೭-೬ ||
ಈರೆ-ರಡು ದೇ — ಹೋರ್ಮಿ- ಭೂತಗ- |
ಳಾರ-ಧಿಕ ದಶ — ಋಗ್ವಿ-ನುತ ಲ- |
ಕ್ಷ್ಮೀರ-ಮಣ ವಿ — ಷ್ಣ್ವಾಖ್ಯ- ರೂಪದಿ — ಚತುರ-ಷಷ್ಟಿಕ-ಲಾ- |
ಧಾರ-ಕನು ತಾ — ನಾಗಿ- ಬ್ರಹ್ಮ ಪು- |
ರಾರಿ- ಮುಖ್ಯರೊ — ಳಿದ್ದು- ಸತತ ವಿ- |
ಹಾರ- ಮಾಳ್ಪನು — ಚತು-ಷ್ಪಾದಾ — ಹ್ವಯದಿ- ಲೋಕದೊ-ಳು || ೭-೭ ||
ತೃಣ ಮೊ-ದಲು ಬ್ರ — ಹ್ಮಾಂತ- ಜೀವರ |
ತನು ಚ-ತುಷ್ಟಯ — ಗಳಲಿ- ನಾರಾ- |
ಯಣನ- ಸಾವಿರ — ದೈದು- ನೂರಿ — ಪ್ಪತ್ತು- ಮೇಲಾ-ರು ||
ಗಣನೆ- ಮಾಳ್ಪುದು — ಬುಧರು- ರೂಪವ |
ಘೃಣಿಯು- ಸೂರ್ಯಾ — ದಿತ್ಯ- ನಾಮಗ- |
ಳನುದಿ-ನದಿ ಜಪಿ — ಸುವರಿ-ಗೀವಾ — ರೋಗ್ಯ- ಸಂಪದ-ವ || ೭-೮ ||
ಐದು- ನೂರೆ — ಪ್ಪತ್ತು- ನಾಲಕು |
ಆದಿ- ಭೌತಿಕ — ದಲ್ಲಿ- ತಿಳಿವುದು |
ಐದೆ-ರಡು ಶತ — ಏಕ-ವಿಂಶತಿ — ರೂಪ-ವಧ್ಯಾ-ತ್ಮ ||
ಭೇದ-ಗಳಲಿ — ನ್ನೂರ- ಮೂವ- |
ತ್ತಾದ- ಮೇಲೊಂ — ದಧಿಕ- ಮೂರ್ತಿಗ- |
ಳಾದ-ರದಿ ಅಧಿ — ದೈವ-ದೊಳು ಚಿಂ — ತಿಪುದು- ಭೂಸುರ-ರು || ೭-೯ ||
ಸುರುಚಿ- ಶಾರ್ವರಿ — ಕರರೆ-ನಿಸಿ ಸಂ- |
ಕರುಷ-ಣ ಪ್ರ — ದ್ಯುಮ್ನ- ಶಶಿ ಭಾ- |
ಸ್ಕರರೊ-ಳಗೆ ಅರ — ವತ್ತ-ಧಿಕ ಮು — ನ್ನೂರು- ರೂಪದ-ಲಿ |
ಕರೆಸಿ-ಕೊಂಬನು — ಅಹ-ಸ್ಸಂವ- |
ತ್ಸರನೆ-ನಿಪ ಸುವಿ — ಶಿಷ್ಟ- ನಾಮದ- |
ಲರಿತ-ವರಿಗಾ — ರೋಗ್ಯ-ಭಾಗ್ಯವ — ನೀವ- ನಂದಮ-ಯ || ೭-೧೦ ||
ಏಕ- ಪಂಚಾ — ಶದ್ವ-ರಣ ಗತ |
ಮಾಕ-ಳತ್ರನು — ಸರ್ವ-ರೊಳಗ- |
ವ್ಯಾಕೃ-ತಾಕಾ — ಶಾಂತ- ವ್ಯಾಪಿಸಿ — ನಿಗಮ- ತತಿಗಳ-ನು ||
ವ್ಯಾಕ-ರಣ ಭಾ — ರತ ಮು-ಖಾದ್ಯಾ- |
ನೇಕ- ಶಾಸ್ತ್ರ ಪು — ರಾಣ- ಭಾಷ್ಯಾ- |
ನೀಕ-ಗಳ ಕ — ಲ್ಪಿಸಿ ಮ-ನೋವಾ — ಙ್ಮಯನೆ-ನಿಸಿಕೊಂ-ಬ || ೭-೧೧ ||
ಭಾರ- ಭೃನ್ನಾ — ಮಕನ- ಸಾವಿರ- |
ದಾರು- ನೂರಿ — ಪ್ಪತ್ತು- ನಾಲಕು |
ಮೂರು-ತಿಗಳು ಚ — ರಾಚ-ರದಿ ಸ — ರ್ವತ್ರ- ತುಂಬಿಹ-ವು ||
ಆರು- ನಾಲಕು — ಜಡಗ-ಳಲಿ ಹದಿ- |
ನಾರು- ಚೇತನ — ಗಳಲಿ- ಚಿಂತಿಸೆ |
ತೋರಿ-ಕೊಂಬನು — ತನ್ನ- ರೂಪವ — ಸರ್ವ- ಠಾವಿನ-ಲಿ || ೭-೧೨ ||
ಮಿಸುಣಿ- ಮೇಲಿಹ — ಮಣಿಯ- ವೋಲ್ ರಾ- |
ಜಿಸುವ- ಬ್ರಹ್ಮಾ — ದಿಗಳ- ಮನದಲಿ |
ಬಿಸಜ- ಜಾಂಡಾ — ಧಾರ-ಕನು ಆ — ಧೇಯ-ನೆಂದೆನಿ-ಸಿ ||
ದ್ವಿಶತ- ನಾಲ್ವ — ತ್ತೆರಡು- ರೂಪದಿ |
ಶಶಿಯೊ-ಳಿಪ್ಪನು — ಶಶ-ದೊಳಗೆ ಶೋ- |
ಭಿಸುವ- ನಾಲ್ವ — ತ್ತೆರಡ-ಧಿಕ ಶತ — ರೂಪ-ದಲಿ ಬಿಡ-ದೆ || ೭-೧೩ ||
ಎರಡು- ಸಾವಿರ — ದೆಂಟು- ರೂಪವ |
ನರಿತು- ಸರ್ವ ಪ — ದಾರ್ಥ-ದೊಳು ಶ್ರೀ- |
ವರನ- ಪೂಜೆಯ — ಮಾಡು- ವರಗಳ — ಬೇಡು- ಕೊಂಡಾ-ಡು ||
ಬರಿದೆ- ಜಲದಲಿ — ಮುಳುಗಿ- ಬಿಸಿಲೊಳು |
ಬೆರಳ-ನೆಣಿಸಿದ — ರೇನು- ಸದ್ಗುರು- |
ಹಿರಿಯ-ರನುಸರಿ — ಸಿದರ- ಮರ್ಮವ — ನರಿಯ-ದಿಹ ನರ-ನು || ೭-೧೪ ||
ಮತ್ತೆ- ಚಿದ್ದೇ — ಹದ ಒ-ಳಗೆ ಎಂ- |
ಭತ್ತು- ಸಾವಿರ– ದೇಳು- ನೂರಿ- |
ಪ್ಪತ್ತು- ಐದು ನೃ — ಸಿಂಹ- ರೂಪದ — ಲಿದ್ದು- ಜೀವರಿ-ಗೆ ||
ನಿತ್ಯ-ದಲಿ ಹಗ — ಲಿರುಳು- ಬಪ್ಪಪ- |
ಮೃತ್ಯು-ವಿಗೆ ತಾ — ಮೃತ್ಯು-ವೆನಿಸುವ |
ಭೃತ್ಯ-ವತ್ಸಲ — ಭಯ ವಿ-ನಾಶನ — ಭಾಗ್ಯ-ಸಂಪ-ನ್ನ || ೭-೧೫ ||
ಜ್ವರನೊ-ಳಿಪ್ಪ — ತ್ತೇಳು- ಹರನೊಳ- |
ಗಿರುವ-ನಿಪ್ಪ — ತ್ತೆಂಟು- ರೂಪದಿ |
ಎರಡು- ಸಾವಿರ — ದೆಂಟು- ನೂರಿ — ಪ್ಪತ್ತ-ರೇಳಧಿ-ಕ ||
ಜ್ವರ ಹ-ರಾಹ್ವಯ — ನಾರ-ಸಿಂಹನ |
ಸ್ಮರಣೆ- ಮಾತ್ರದಿ — ದುರಿತ- ರಾಶಿಗ- |
ಳಿರದೆ- ಪೋಪವು — ತರಣಿ- ಬಿಂಬವ — ಕಂಡ- ಹಿಮದಂ-ತೆ || ೭-೧೬ ||
ಮಾಸ- ಪರಿಯಂ — ತರವು- ಬಿಡದೆ ನೃ- |
ಕೇಸ-ರಿಯ ಶುಭ — ನಾಮ- ಮಂತ್ರ ಜಿ- |
ತಾಸ-ನದಲೇ — ಕಾಗ್ರ- ಚಿತ್ತದಿ — ನಿಷ್ಕ-ಪಟದಿಂ-ದ ||
ಬೇಸ-ರದೆ ಜಪಿ — ಸಲು ವೃ-ಜನಗಳ- |
ನಾಶ-ಗೈಸಿ ಮ — ನೋರ-ಥಗಳ ಪ- |
ರೇಶ- ಪೂರ್ತಿಯ — ಮಾಡಿ-ಕೊಡುವನು — ಕಡೆಗೆ- ಪರಗತಿ-ಯ || ೭-೧೭ ||
ಚತುರ- ಮೂರ್ತ್ಯಾ — ತ್ಮಕ ಹ-ರಿಯು ತ್ರಿಂ- |
ಶತಿ ಸು-ರೂಪದಿ — ಬ್ರಹ್ಮ-ನೊಳು ಮಾ- |
ರುತನೊ-ಳಿಪ್ಪ — ತ್ತೆಂಟು- ರೂಪದೊ — ಳಿಪ್ಪ- ಪ್ರದ್ಯು-ಮ್ನ ||
ಸುತೆರೊ-ಳಿಪ್ಪ — ತ್ತೈದು- ಹದಿನೇ- |
ಳತುಳ- ರೂಪಗ — ಳರಿತು- ವತ್ಸರ |
ಶತಗ-ಳಲಿ ಪೂ — ಜಿಸುತ-ಲಿರು ಚತು — ರಾತ್ಮ-ಕನ ಪದ-ವ || ೭-೧೮ ||
ನೂರು- ವರುಷಕೆ — ದಿವಸ- ಮೂವ- |
ತ್ತಾರು- ಸಾವಿರ — ವಹವು- ನಾಡಿ ಶ- |
ರೀರ-ದೊಳಗಿನಿ — ತಿಹವು- ಸ್ತ್ರೀ ಪುಂ — ಭೇದ-ದಲಿ ಹರಿ-ಯ ||
ಈರ-ಧಿಕ ಎ — ಪ್ಪತ್ತು- ಸಾವಿರ |
ಮೂರು-ತಿಗಳನು — ನೆನೆದು- ಸರ್ವಾ- |
ಧಾರ-ಕನ ಸ — ರ್ವತ್ರ- ಪೂಜಿಸು — ಪೂರ್ಣ-ನೆಂದರಿ-ದು || ೭-೧೯ ||
ಕಾಲ- ಕರ್ಮ ಗು — ಣ ಸ್ವ-ಭಾವ ಗ- |
ಳಾಲ-ಯನು ತಾ — ನಾಗಿ- ಲಕ್ಷ್ಮೀ- |
ಲೋಲ- ತತ್ತ — ದ್ರೂಪ- ನಾಮದಿ — ಕರೆಸು-ತೊಳಗಿ-ದ್ದು ||
ಲೀಲೆ-ಯಿಂದಲಿ — ಸರ್ವ- ಜೀವರ |
ಪಾಲಿ-ಸುವ ಸಂ — ಹರಿಪ- ಸೃಷ್ಟಿಪ |
ಮೂಲ- ಕಾರಣ — ಪ್ರಕೃತಿ- ಗುಣ ಕಾ — ರ್ಯಗಳ- ಮನೆಮಾ-ಡಿ || ೭-೨೦ ||
ತಿಲಜ- ವರ್ತಿಗ — ಳನುಸ-ರಿಸಿ ಪ್ರ- |
ಜ್ವಲಿಸಿ- ದೀಪಗ — ಳಾಲ-ಯದಿ ಕ- |
ತ್ತಲೆಯ- ಭಂಗಿಸಿ — ತತ್ಪ-ದಾರ್ಥವ — ತೋರು-ವಂದದ-ಲಿ ||
ಜಲರು-ಹೇಕ್ಷಣ — ತನ್ನ-ವರ ಮನ |
ದೊಳಗೆ- ಭಕ್ತಿ — ಜ್ಞಾನ- ಕರ್ಮಕೆ |
ಒಲಿದು- ಪೊಳೆವುತ — ತೋರು-ವನು ಗುಣ — ರೂಪ- ಕ್ರಿಯೆಗಳ-ನು || ೭-೨೧ ||
ಆವ- ದೇಹವ — ಕೊಡಲಿ- ಹರಿ ಮ- |
ತ್ತಾವ- ಲೋಕದೊ — ಳಿಡಲಿ- ತಾ ಮ- |
ತ್ತಾವ- ದೇಶದೊ — ಳಿರಲಿ- ಆವಾ — ವಸ್ಥೆ-ಗಳು ಬರ-ಲಿ ||
ಈ ವಿ-ಧದಿ ಜಡ — ಚೇತ-ನದೊಳು ಪ- |
ರಾವ-ರೇಶನ — ರೂಪ-ಗುಣಗಳ – |
ಭಾವಿ-ಸುತ ಸು — ಜ್ಞಾನ- ಭಕುತಿಯ — ಬೇಡು- ಕೊಂಡಾ-ಡು || ೭-೨೨ ||
ಒಂದ-ರೊಳಗೊಂ — ದೊಂದು- ಬೆರೆದಿಹ |
ಇಂದಿ-ರೇಶನ — ರೂಪ-ಗಳ ಮನ- |
ಬಂದ- ತೆರದಲಿ — ಚಿಂತಿ-ಸಿದಕನು — ಮಾನ-ವಿನಿತಿ-ಲ್ಲ ||
ಸಿಂಧು- ರಾಜನೊ — ಳಂಬ-ರಾಲಯ |
ಬಂಧಿ-ಸಲು ಪ್ರತಿ — ತಂತು-ಗಳೊಳುದ- |
ಬಿಂದು- ವ್ಯಾಪಿಸಿ — ದಂತೆ- ಇರುತಿ — ಪ್ಪನು ಚ-ರಾಚರ-ದಿ || ೭-೨೩ ||
ಒಂದು- ರೂಪದೊ — ಳೊಂದ-ವಯವದೊ- |
ಳೊಂದು- ರೋಮದೊ — ಳೊಂದು- ದೇಶದಿ |
ಪೊಂದಿ- ಇಪ್ಪವ — ಜಾಂಡ-ನಂತಾ — ನಂತ- ಕೋಟಿಗ-ಳು ||
ಹಿಂದೆ- ಮಾರ್ಕಂ — ಡೇಯ- ಕಾಣನೆ -|
ಒಂದೆ- ರೂಪದಿ — ಸೃಷ್ಟಿ- ಪ್ರಳಯವ |
ಇಂದಿ-ರೇಶನೊ — ಳೇನಿ-ದಚ್ಚರಿ — ಅಪ್ರ-ಮೇಯ ಸ-ದಾ || ೭-೨೪ ||
ಒಂದ-ನಂತಾ — ನಂತ- ರೂಪಗ- |
ಳೊಂದು- ರೂಪದೊ — ಳಿಹವು- ಲೋಕಗ- |
ಳೊಂದೆ- ಕಾಲದಿ — ಸೃಷ್ಟಿ- ಸ್ಥಿತಿ ಮೊದ — ಲಾದ- ವ್ಯಾಪಾ-ರ ||
ಒಂದೆ- ಕಾಲದಿ — ಮಾಡಿ- ತಿಳಿಸದೆ |
ಸಂದ-ಣಿಸಿ ಕೊಂ — ಡಿಪ್ಪ- ಜಗದೊಳು |
ನಂದ- ನಂದನ — ರಣದೊ-ಳಿಂದ್ರಾ — ತ್ಮಜಗೆ- ತೋರಿಸ-ನೆ || ೭-೨೫ ||
ಶ್ರೀರ-ಮೇಶನ — ಮೂರ್ತಿ-ಗಳು ನವ- |
ನಾರಿ-ಕುಂಜರ — ದಂತೆ- ಏಕಾ- |
ಕಾರ- ತೋರ್ಪವು — ಅವಯ-ವಾಹ್ವಯ — ಅವಯ-ವಗಳ-ಲ್ಲಿ ||
ಬೇರೆ- ಬೇರೇ — ಕಂಗೊ-ಳಿಸುವ ಶ- |
ರೀರ-ದೊಳು ನಾ — ನಾ ಪ್ರ-ಕಾರ ವಿ- |
ಕಾರ- ಶೂನ್ಯ ವಿ — ರಾಟ-ನೆನಿಸುವ — ಪದುಮ-ಜಾಂಡದೊ-ಳು || ೭-೨೬ ||
ವಾರಿ-ಜ ಭವಾಂ — ಡದೊಳು- ಲಕ್ಷ್ಮೀ- |
ನಾರ-ಸಿಂಹನ — ರೂಪ- ಗುಣಗಳು |
ವಾರಿ-ಧಿಯೊಳಿಹ — ತೆರೆಗ-ಳಂದದಿ — ಸಂದ-ಣಿಸಿ ಇಹ-ವು ||
ಕಾರ-ಣಾಂಶಾ — ವೇಶ- ವ್ಯಾಪ್ತವ- |
ತಾರ- ಕಾರ್ಯಾ — ವ್ಯಕ್ತ- ವ್ಯಕ್ತವು |
ಈರ-ಯಿದು ವೀ — ಭೂತಿ- ಅಂತ — ರ್ಯಾಮಿ- ರೂಪಗ-ಳು || ೭-೨೭ ||
ಮಣಿಗ-ಳೊಳಗಿಹ — ಸೂತ್ರ-ದಂದದಿ |
ಪ್ರಣವ- ಪಾದ್ಯನು — ಚೇತ-ನಾ ಚೇ- |
ತನ ಜ-ಗತ್ತಿನೊ — ಳನುದಿ-ನದಿ ಆ — ಡುವನು- ಸುಖಪೂ-ರ್ಣ ||
ದಣುವಿ-ಕೆಯು ಇವ — ಗಿಲ್ಲ- ಬಹು ಕಾ- |
ರುಣಿಕ-ನಂತಾ — ನಂತ- ಜೀವರ |
ಗಣದೊ-ಳಗೆ ಏ — ಕಾಂಶ- ರೂಪದಿ — ನಿಂತು- ನೇಮಿಸು-ವ || ೭-೨೮ ||
ಜೀವ- ಜೀವರ — ಭೇದ- ಜಡಜಡ |
ಜೀವ- ಜಡ ಜಡ — ಜೀವ-ರಿಂದಲಿ |
ಶ್ರೀವ-ರನು ಅ — ತ್ಯಂತ- ಭಿನ್ನ ವಿ — ಲಕ್ಷ-ಣನು ಲ-ಕ್ಷ್ಮೀ ||
ಮೂವ-ರಿಂದಲಿ — ಪದುಮ-ಜಾಂಡದಿ |
ತಾ ವಿ-ಲಕ್ಷಣ — ಳೆನಿಸು-ತಿಪ್ಪಳು |
ಸಾವ-ಧಿಕ ಸಮ — ಶೂನ್ಯ-ಳೆಂದರಿ — ತೀರ್ವ-ರನು ಭಜಿ-ಸು || ೭-೨೯ ||
ಆದಿ-ತೇಯರು — ತಿಳಿಯ-ದಿಹ ಗುಣ |
ವೇದ-ಮಾನಿಗ — ಳೆಂದೆ-ನಿಪ ವಾ- |
ಣ್ಯಾದಿ-ಗಳು ಬ — ಲ್ಲರವ-ರರಿಯದ — ಗುಣಗ-ಣಂಗಳ-ನು ||
ವೇಧ- ಬಲ್ಲನು — ಬೊಮ್ಮ-ನರಿಯದ- |
ಗಾಧ- ಗುಣಗಳ — ಲಕುಮಿ- ಬಲ್ಲಳು |
ಶ್ರೀಧ-ರೊಬ್ಬನು — ಪಾಸ್ಯ- ಸದ್ಗುಣ — ಪೂರ್ಣ- ಹರಿಯೆಂ-ದು || ೭-೩೦ ||
ಈತ-ನಂತಾ — ನಂತ- ಗುಣಗಳ |
ಪ್ರಾಂತ-ಗಾಣದೆ — ಮಹಲ-ಕುಮಿ ಭಗ- |
ವಂತ-ಗಾಭರ — ಣಾಯು-ಧಾಂಬರ — ಆಲ-ಯಗಳಾ-ಗಿ ||
ಸ್ವಾಂತ-ದಲಿ ನೆಲೆ — ಗೊಳಿಸಿ- ಪರಮ ದು- |
ರಂತ- ಮಹಿಮನ — ದೌತ್ಯ-ಕರ್ಮ ನಿ- |
ರಂತ-ರದಿ ಮಾ — ಡುತಲಿ- ತದಧೀ — ನತ್ವ-ವೈದಿಹ-ಳು || ೭-೩೧ ||
ಪ್ರಳಯ- ಜಲಧಿಯೊ — ಳುಳ್ಳ- ನಾವೆಯು |
ಹೊಲಬು-ಗಾಣದೆ — ಸುತ್ತು-ವಂದದಿ |
ಜಲರು-ಹೇಕ್ಷಣ — ನಮಲ- ಗುಣ ರೂ — ಪಗಳ- ಚಿಂತಿಸು-ತ ||
ನೆಲೆಯ-ಗಾಣದೆ — ಮಹಲ-ಕುಮಿ ಚಂ- |
ಚಲವ-ನೈದಿಹ — ಳಲ್ಪ- ಜೀವರಿ- |
ಗಳವ-ಡುವುದೇ — ನಿವನ- ಮಾಯವು — ಈ ಜ-ಗತ್ರಯ-ದಿ || ೭-೩೨ ||
ಶ್ರೀನಿ-ಕೇತನ — ಸಾತ್ವ-ತಾಂಪತಿ |
ಜ್ಞಾನ-ಗಮ್ಯ ಗ — ಯಾಸು-ರಾರ್ದನ |
ಮೌನಿ-ಕುಲ ಸ — ನ್ಮಾನ್ಯ- ಮಾನದ — ಮಾತು-ಳ ಧ್ವಂ-ಸಿ ||
ದೀನ-ಜನ ಮಂ — ದಾರ- ಮಧುರಿಪು |
ಪ್ರಾಣ-ದ ಜಗ — ನ್ನಾಥ-ವಿಠ್ಠಲ |
ತಾನೆ- ಗತಿಯೆಂ — ದನುದಿ-ನದಿ ನಂ — ಬಿದವ-ರನು ಪೊರೆ-ವ || ೭-೩೩ ||
|| ಇತಿ ಶ್ರೀ ಪಂಚತನ್ಮಾತ್ರಾ ಸಂಧಿ ಸಂಪೂರ್ಣಂ ||
|| ಶ್ರೀ ಕೃಷ್ಣಾರ್ಪಣಮಸ್ತು ||
- paMcatanmaatraa saMdhi
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du ||
bhoo sa-lila shikhi — pavana- bhootaa- |
kaasha-doLagai — daidu- tanmaa- |
traa sa-hita oM — dadhika- paMcaa — shadwa-raNa vE-dya ||
ee sha-reeradi — vyaapi-siddu su- |
raasu-rarige ni — raMta-radali su- |
khaasu-khaprada — naagi- aaDuva — dwEShi-para baDi-va || 7-1 ||
praNava- pratipaa — dya tri-naamadi |
tanuvi-noLu tri — sthaana-ganiru- |
ddhanu tri-paMcaka — Eka-viMshati — catura-viMshati-ga ||
enisi- eppa — tteraDu-saavira |
initu- naaDiga — LoLu ni-yaamisu- |
tinaga- bhastiga — lOka-doLu sa — rvatra- beLaguva-nu || 7-2 ||
jeeva- liMgani — ruddha- sthoola ka- |
LEva-ragaLali — vishwa- turaga- |
greeva- moolE — shaacyu-ta traya — haMsa- moortiga-La ||
ee vi-dha catuH — sthaana-dali shaaM- |
teeva-rana ee — reraDu- roopadi |
bhaavi-suvudE — kOna- viMshati — moorti- sarva-tra || 7-3 ||
kaluSha-villada — darpa-Nadi prati- |
phalisi- sarva pa — daartha-gaLu kaM- |
goLisu-vaMdadi — biMba- jaDa cE — tanaga-LoLagi-ddu ||
poLeva- bahu roo — padali- sajjana- |
roLage- manada — rpaNadi- taa ni- |
shcala ni-raamaya — nirvi-kaara ni — raashra-yaanaM-ta || 7-4 ||
ee sha-reera ca — tuShTa-yagaLoLu |
kOsha- dhaatuga — bhaara-tI praa- |
NEsha-nippa — ttoMdu- saavira — daaru-nooreni-pa ||
shwaasa- roopaka — haMsa- bhaaskara- |
bhEsha-roLagi — ddavara- kaiviDi- |
dee sa-rOja bha — vaaMDa-doLu sa — rvatra- tuMbiha-nu || 7-5 ||
shiraga-Laidai — deraDu- baahuga- |
LeraDu- paadaga — LoMdu- madhyO- |
daradi- shObhipa — vaa~gma-nOmaya — nenipa- nityada-li ||
karaNa- dhaatuga — Lalli- eppa- |
tteraDu- saavira — naaDi-gaLoLi- |
pparavi-dooranu — bhaara-ta prati — paadya-neMdeni-si || 7-6 ||
eere-raDu dE — hOrmi- bhootaga- |
Laara-dhika dasha — Rugvi-nuta la- |
kShmIra-maNa vi — ShNwaakhya- roopadi — catura-ShaShTika-laa- |
dhaara-kanu taa — naagi- brahma pu- |
raari- mukhyaro — Liddu- satata vi- |
haara- maaLpanu — catu-Shpaadaa — hwayadi- lOkado-Lu || 7-7 ||
tRuNa mo-dalu bra — hmaaMta- jeevara |
tanu ca-tuShTaya — gaLali- naaraa- |
yaNana- saavira — daidu- noori — ppattu- mElaa-ru ||
gaNane- maaLpudu — budharu- roopava |
GRuNiyu- sooryaa — ditya- naamaga- |
Lanudi-nadi japi — suvari-geevaa — rOgya- saMpada-va || 7-8 ||
aidu- noore — ppattu- naalaku |
aadi- bhoutika — dalli- tiLivudu |
aide-raDu shata — Eka-viMshati — roopa-vadhyaa-tma ||
bhEda-gaLali — nnoora- mUva- |
ttaada- mEloM — dadhika- moortiga- |
Laada-radi adhi — daiva-doLu ciM — tipudu- bhoosura-ru || 7-9 ||
suruci- shaarvari — karare-nisi saM- |
karuSha-Na pra — dyumna- shashi bhaa- |
skararo-Lage ara — vatta-dhika mu — nnooru- roopada-li |
karesi-koMbanu — aha-ssaMva- |
tsarane-nipa suvi — shiShTa- naamada- |
larita-varigaa — rOgya-bhaagyava — neeva- naMdama-ya || 7-10 ||
Eka- paMcaa — shadwa-raNa gata |
maaka-Latranu — sarva-roLaga- |
vyaakRu-taakaa — shaaMta- vyaapisi — nigama- tatigaLa-nu ||
vyaaka-raNa bhaa — rata mu-khaadyaa- |
nEka- shaastra pu — raaNa- bhaaShyaa- |
neeka-gaLa ka — lpisi ma-nOvaa — ~gmayane-nisikoM-ba || 7-11 ||
bhaara- bhRunnaa — makana- saavira- |
daaru- noori — ppattu- naalaku |
mooru-tigaLu ca — raaca-radi sa — rvatra- tuMbiha-vu ||
aaru- naalaku — jaDaga-Lali hadi- |
naaru- cEtana — gaLali- ciMtise |
tOri-koMbanu — tanna- roopava — sarva- Thaavina-li || 7-12 ||
misuNi- mEliha — maNiya- vOl raa- |
jisuva- brahmaa — digaLa- manadali |
bisaja- jaaMDaa — dhaara-kanu aa — dhEya-neMdeni-si ||
dwishata- naalwa — tteraDu- roopadi |
shashiyo-Lippanu — shasha-doLage shO- |
bhisuva- naalwa — tteraDa-dhika shata — roopa-dali biDa-de || 7-13 ||
eraDu- saavira — deMTu- roopava |
naritu- sarva pa — daartha-doLu shree- |
varana- poojeya — maaDu- varagaLa — bEDu- koMDaa-Du ||
baride- jaladali — muLugi- bisiloLu |
beraLa-neNisida — rEnu- sadguru- |
hiriya-ranusari — sidara- marmava — nariya-diha nara-nu || 7-14 ||
matte- ciddE — hada o-Lage eM- |
bhattu- saavira– dELu- noori- |
ppattu- aidu nRu — siMha- roopada — liddu- jeevari-ge ||
nitya-dali haga — liruLu- bappapa- |
mRutyu-vige taa — mRutyu-venisuva |
bhRutya-vatsala — bhaya vi-naashana — bhaagya-saMpa-nna || 7-15 ||
jwarano-Lippa — ttELu- haranoLa- |
giruva-nippa — tteMTu- roopadi |
eraDu- saavira — deMTu- noori — ppatta-rELadhi-ka ||
jwara ha-raahwaya — naara-siMhana |
smaraNe- maatradi — durita- raashiga- |
Lirade- pOpavu — taraNi- biMbava — kaMDa- himadaM-te || 7-16 ||
maasa- pariyaM — taravu- biDade nRu- |
kEsa-riya shubha — naama- maMtra ji- |
taasa-nadalE — kaagra- cittadi — niShka-paTadiM-da ||
bEsa-rade japi — salu vRu-janagaLa- |
naasha-gaisi ma — nOra-thagaLa pa- |
rEsha- poortiya — maaDi-koDuvanu — kaDege- paragati-ya || 7-17 ||
catura- moortyaa — tmaka ha-riyu triM- |
shati su-roopadi — brahma-noLu maa- |
rutano-Lippa — tteMTu- roopado — Lippa- pradyu-mna ||
sutero-Lippa — ttaidu- hadinE- |
LatuLa- roopaga — Laritu- vatsara |
shataga-Lali poo — jisuta-liru catu — raatma-kana pada-va || 7-18 ||
nooru- varuShake — divasa- moova- |
ttaaru- saavira — vahavu- naaDi sha- |
reera-doLagini — tihavu- strI puM — bhEda-dali hari-ya ||
eera-dhika e — ppattu- saavira |
mooru-tigaLanu — nenedu- sarvaa- |
dhaara-kana sa — rvatra- poojisu — poorNa-neMdari-du || 7-19 ||
kaala- karma gu — Na swa-bhaava ga- |
Laala-yanu taa — naagi- lakShmI- |
lOla- tatta — droopa- naamadi — karesu-toLagi-ddu ||
leele-yiMdali — sarva- jeevara |
paali-suva saM — haripa- sRuShTipa |
moola- kaaraNa — prakRuti- guNa kaa — ryagaLa- manemaa-Di || 7-20 ||
tilaja- vartiga — Lanusa-risi pra- |
jwalisi- deepaga — Laala-yadi ka- |
ttaleya- bhaMgisi — tatpa-daarthava — tOru-vaMdada-li ||
jalaru-hEkShaNa — tanna-vara mana |
doLage- bhakti — j~jaana- karmake |
olidu- poLevuta — tOru-vanu guNa — roopa- kriyegaLa-nu || 7-21 ||
aava- dEhava — koDali- hari ma- |
ttaava- lOkado — LiDali- taa ma- |
ttaava- dEshado — Lirali- aavaa — vasthe-gaLu bara-li ||
ee vi-dhadi jaDa — cEta-nadoLu pa- |
raava-rEshana — roopa-guNagaLa – |
bhaavi-suta su — j~jaana- bhakutiya — bEDu- koMDaa-Du || 7-22 ||
oMda-roLagoM — doMdu- berediha |
iMdi-rEshana — roopa-gaLa mana- |
baMda- teradali — ciMti-sidakanu — maana-viniti-lla ||
siMdhu- raajano — LaMba-raalaya |
baMdhi-salu prati — taMtu-gaLoLuda- |
biMdu- vyaapisi — daMte- iruti — ppanu ca-raacara-di || 7-23 ||
oMdu- roopado — LoMda-vayavado- |
LoMdu- rOmado — LoMdu- dEshadi |
poMdi- ippava — jaaMDa-naMtaa — naMta- kOTiga-Lu ||
hiMde- maarkaM — DEya- kaaNane -|
oMde- roopadi — sRuShTi- praLayava |
iMdi-rEshano — LEni-daccari — apra-mEya sa-daa || 7-24 ||
oMda-naMtaa — naMta- roopaga- |
LoMdu- roopado — Lihavu- lOkaga- |
LoMde- kaaladi — sRuShTi- sthiti moda — laada- vyaapaa-ra ||
oMde- kaaladi — maaDi- tiLisade |
saMda-Nisi koM — Dippa- jagadoLu |
naMda- naMdana — raNado-LiMdraa — tmajage- tOrisa-ne || 7-25 ||
shreera-mEshana — moorti-gaLu nava- |
naari-kuMjara — daMte- Ekaa- |
kaara- tOrpavu — avaya-vaahwaya — avaya-vagaLa-lli ||
bEre- bErE — kaMgo-Lisuva sha- |
reera-doLu naa — naa pra-kaara vi- |
kaara- shoonya vi — raaTa-nenisuva — paduma-jaaMDado-Lu || 7-26 ||
vaari-ja bhavaaM — DadoLu- lakShmI- |
naara-siMhana — roopa- guNagaLu |
vaari-dhiyoLiha — terega-LaMdadi — saMda-Nisi iha-vu ||
kaara-NaaMshaa — vEsha- vyaaptava- |
taara- kaaryaa — vyakta- vyaktavu |
eera-yidu vI — bhooti- aMta — ryaami- roopaga-Lu || 7-27 ||
maNiga-LoLagiha — sootra-daMdadi |
praNava- paadyanu — cEta-naa cE- |
tana ja-gattino — Lanudi-nadi aa — Duvanu- sukhapoo-rNa ||
daNuvi-keyu iva — gilla- bahu kaa- |
ruNika-naMtaa — naMta- jeevara |
gaNado-Lage E — kaaMsha- roopadi — niMtu- nEmisu-va || 7-28 ||
jeeva- jeevara — bhEda- jaDajaDa |
jeeva- jaDa jaDa — jeeva-riMdali |
shreeva-ranu a — tyaMta- bhinna vi — lakSha-Nanu la-kShmI ||
moova-riMdali — paduma-jaaMDadi |
taa vi-lakShaNa — Lenisu-tippaLu |
saava-dhika sama — shoonya-LeMdari — teerva-ranu bhaji-su || 7-29 ||
aadi-tEyaru — tiLiya-diha guNa |
vEda-maaniga — LeMde-nipa vaa- |
Nyaadi-gaLu ba — llarava-rariyada — guNaga-NaMgaLa-nu ||
vEdha- ballanu — bomma-nariyada- |
gaadha- guNagaLa — lakumi- ballaLu |
shreedha-robbanu — paasya- sadguNa — poorNa- hariyeM-du || 7-30 ||
eeta-naMtaa — naMta- guNagaLa |
praaMta-gaaNade — mahala-kumi bhaga- |
vaMta-gaabhara — Naayu-dhaaMbara — aala-yagaLaa-gi ||
swaaMta-dali nele — goLisi- parama du- |
raMta- mahimana — doutya-karma ni- |
raMta-radi maa — Dutali- tadadhee — natwa-vaidiha-Lu || 7-31 ||
praLaya- jaladhiyo — LuLLa- naaveyu |
holabu-gaaNade — suttu-vaMdadi |
jalaru-hEkShaNa — namala- guNa roo — pagaLa- ciMtisu-ta ||
neleya-gaaNade — mahala-kumi caM- |
calava-naidiha — Lalpa- jeevari- |
gaLava-DuvudE — nivana- maayavu — ee ja-gatraya-di || 7-32 ||
shreeni-kEtana — saatwa-taaMpati |
j~jaana-gamya ga — yaasu-raardana |
mouni-kula sa — nmaanya- maanada — maatu-La dhwaM-si ||
deena-jana maM — daara- madhuripu |
praaNa-da jaga — nnaatha-viThThala |
taane- gatiyeM — danudi-nadi naM — bidava-ranu pore-va || 7-33 ||
|| iti shree paMcatanmaatraa saMdhi saMpoorNaM ||
|| shree kRuShNaarpaNamastu ||

Leave a Reply
You must be logged in to post a comment.