Enu sukrutava

Composer : Shri Vadirajaru

By Smt.Shubhalakshmi Rao

ಏನು ಸುಕೃತವ ಮಾಡಿದಳೊ ಯಶೊದೆ |ಪ|
ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿ
ಮುದ್ದಿಸುವಳಂತೆ |ಅ ಪ|

ಗಂಗಾಜನಕನಿಗೆ ಗಡಿಗೆ ನೀರರೆವಳಂತೆ |
ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |
ತುಂಗ ಭೂಧರನ್ನ ತೊಟ್ಟಿಲೊಳ್ ತೂಗುವಳಂತೆ |
ಕಂಗಳಿಗಗೋಚರನ ಕರೆದಪ್ಪಿ ಕೊಂಬಳಂತೆ |೧|

ನಗವನೆತ್ತಿದವನ ಮಗುವೆಂದೆತ್ತುವಳಂತೆ |
ನಿಗಮಗೋಚರನ ತಾ ನಿಟ್ಟಿಪಳಂತೆ |
ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ |
ಮಿಗೆ ನಿತ್ಯ ತೃಪ್ತಗೆ ಪಾಲನೆರೆವಳಂತೆ | ೨ |

ಬಹುಮುಖನಿಗೆ ಭಾಮೆ ಮುದ್ದು ಕೊಡುವಳಂತೆ |
ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |
ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ |
ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ | ೩ |

ಚತುರ್ಮುಖ ಪಿತನ ಸುತನೆಂದೆತ್ತುವಳಂತೆ |
ಶ್ರುತಿ ವಿನುತಗೆ ಜೋಗುಳ ಪಾಡುವಳಂತೆ |
ಶತ ರವಿತೇಜಗಾರತಿಯ-ನೆತ್ತುವಳಂತೆ |
ಗತ ಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ | ೪ |

ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ |
ಪಡು ಗಡಲ ತಡಿಯ ದ್ವಾರಕೆನಿಲಯ |
ಬಿಡದೆ ನೆಲೆಸಿದ ಹಯವದನ ಮುದ್ದು
ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ | ೫ |


Enu sukRutava mADidaLo yaSode |pa|
SrInidhiyAda kRuShNanna karadetti
muddisuvaLaMte |a pa|

gaMgAjanakanige gaDige nIrarevaLaMte |
maMgaLAMgage BAme SRuMgarisuvaLaMte |
tuMga BUdharanna toTTiloL tUguvaLaMte |
kaMgaLigagOcarana karedappi koMbaLaMte |1|

nagavanettidavana maguveMdettuvaLaMte |
nigamagOcarana tA niTTipaLaMte |
agaNita satvanna haggadi kaTTuvaLaMte |
mige nitya tRuptage pAlanerevaLaMte | 2 |

bahumuKanige BAme muddu koDuvaLaMte |
ahitalpanige hAva tuLidIyeMbaLaMte |
mahAdaityadallaNanige bahu Bayava tOruvaLaMte |
mahima narasiMhage gummana tOruvaLaMte | 3 |

caturmuKa pitana sutaneMdettuvaLaMte |
Sruti vinutage jOguLa pADuvaLaMte |
Sata ravitEjagAratiya-nettuvaLaMte |
gata BItanige BAme rakSheyikkuvaLaMte | 4 |

kaDegOla nENa kaiyali piDidolaviMda |
paDu gaDala taDiya dvArakenilaya |
biDade nelesida hayavadana muddu
uDupina kRuShNana uDiyoLettuvaLaMte | 5 |

Leave a Reply

You might also like

error: Content is protected !!