Composer : Shri Pandarinatha vittala
ಸ್ಮರಣೆ ಮಾಡಿರೋ ಸೋದೆ ವಾದಿರಾಜರ
ಮರುತ ಪಟ್ಟಕೇ ಮುಂದೆ ಬರುವ ರಾಜರ |ಪ|
ಯತಿಯ ವಾಗೀಶರ ಕರಜ ಖ್ಯಾತರ
ಹಿತವ ಕೊಡುವರ ಇದ್ದ ದುರಿತ ಕಳೆವರ |೧|
ರಾಮಾಚಾರ್ಯ ಗೌರಿಯ ಪ್ರೇಮ ಪುತ್ರರ
ಸೋಮಶೇಖರಗೆ ಇವರು ಗುರುಗಳೆನಿಪರ |೨|
ಗೃಹದ ಬಾಹ್ಯ ಗದ್ದೆಯಲ್ಲಿ ಜನಿಸಿ ಮೆರೆದರ
ಮಹಾಮಹಿಮರಾ ಲಾತವ್ಯ ಪದಸ್ಥರ |೩|
ಭೂವರಾಹನಾ ಪಾದ ಭಜಿಪ ಶ್ರೇಷ್ಠರ
ಭೂವರಾಹನಾ ನಾಮದಲ್ಲಿ ಮೆರೆದರ |೪|
ಸಕಲ ಕ್ಷೇತ್ರವ ಕಂಡು ವರ್ಣಿಸಿಪ್ಪರ
ಸಕಲ ಸುಜನರ ಸೇವೆಗೊಂಡು ಕಾಯ್ವರ |೫|
ಶಾಲಗ್ರಾಮದ ಹಾರ ಹರಿಗೆ ಇತ್ತರ
ಶಾಲ್ಮಲೀ ತೀರದಲ್ಲಿ ತಪವಗೊಂಡರ |೬|
ಪಂಢರಾಪುರಕೆ ಹೋಗಿ ಹರಿಯ ಕಂಡರ
ಪಾಂಡುರಂಗನನ್ನು ಕಂಡು ಹರುಷಗೊಂಡರ |೭|
ರುಕ್ಮಿಣೀಶವಿಜಯ ರಚಿಸಿ ಸ್ತುತ್ಯರಾದರಾ
ರುಕ್ಮಿಣೀಶ ಕರ್ತೃವೆಂದು ಅರ್ಪಿಸಿಪ್ಪರ |೮|
ಮದುವೆ ಕಾಲದಲ್ಲಿ ಸತ್ತ ವರನ ಕಾದರಾ
ಮುದದಿ ನೆರೆದ ಜನರಿಗೆಲ್ಲ ಮುದವನಿತ್ತರ |೯|
ಮಂತ್ರ ರೇಖೆ ರಚಿಸಿ ನಕ್ರಗಳನು ಅಟ್ದರ
ಮಂತ್ರವಾದಿ ತಂತ್ರವನ್ನು ಬಯಲು ಮಾಡ್ದರ |೧೦|
ಕ್ಲಿಷ್ಟ ಭಾರತದ ಪದಕೆ ಅರ್ಥ ಬರೆದರ
ಶ್ರೇಷ್ಠ ಮಾತೆ ವಚನವನ್ನು ಮಾನ್ಯ ಮಾಡ್ದರ |೧೧|
ಲೋಭಿಯನ್ನು ಕಂಡು ಶಾಲಗ್ರಾಮವಿತ್ತರಾ
ಲೋಭಿ ಧಾರಾಳಿಯಾದ ದಯದಿ ಗುರುವರಾ |೧೨|
ವಾದಿಗಳನು ವಾದದಲ್ಲಿ ಗೆದ್ದ ರಾಜರಾ
ವೇದವ್ಯಾಸರನ್ನು ಬದರಿಯಲ್ಲಿ ಕಂಡರಾ |೧೩|
ಬಂಡೆ ಸೀಳಿ ರಾಜನೀಗೆ ದ್ರವ್ಯವಿತ್ತರಾ
ಕಂಡು ಕರುಣಿ ವಿಠ್ಠಲನ್ನ ಇಟ್ಟುಕೊಂಡರಾ |೧೪|
ಪ್ರಸಂಗಾಭರಣ ತೀರ್ಥ ಪ್ರಶಸ್ತಿ ಪಡೆದರಾ
ಅಸದೃಶರು ರಾಜರೆಂಬ ಖ್ಯಾತಿ ಪಡೆದರಾ |೧೫|
ಭೂತಗಣದ ಬೀಡಿನಲ್ಲಿ ಹರನ ನಿಲಿಸಿದ
ಖ್ಯಾತವಾಯ್ತು ಬೀಡು ಧರ್ಮಸ್ಥಳವು ಎನ್ನುತಾ |೧೬|
ದಂಡದಿಂದ ದಂಡ ತೀರ್ಥ ಉಂಟು ಮಾಡಿದ
ಕಂಡು ಹರುಷ ಪಟ್ಟರೆಲ್ಲ ಪುರದ ಬಹುಜನ |೧೭|
ಎರಡು ಮಾಸ ಪೂಜೆ ಎರಡು ವರುಷ ಮಾಡಿದ
ಪರಮ ಪುಣ್ಯ ಕ್ಷೇತ್ರ ಉಡುಪಿಯಲ್ಲಿ ಕೃಷ್ಣನ |೧೮|
ಭೂತರಾಜ ಗುರು ಅಯ್ಯ ವಾದಿರಾಜರಾ
ಪ್ರೀತಿಯಿಂದ ಸ್ತೋತ್ರ ಮಾಡೆ ಒಲಿದು ಕಾಯ್ವರಾ |೧೯|
ಮಗುವ ಕಂಡರ ಮಾಯದ ಮಗುವ ಕಂಡರ
ನಗುತಲಿದ್ದ ಕೃಷ್ಣನೆಂಬ ಮಗುವ ಕಂಡರ |೨೦|
ಸ್ತುತ್ಯ ವೈಕುಂಠ ದಾಸರನ್ನು ನೋಡಿದ
ಮತ್ತೆ ದಾಸೋತ್ತಮರು ಎಂದು ಪೊಗಳಿದ |೨೧|
ಪಂಚ ವೃಂದಾವನದಿ ಪಂಚರೂಪನಾ
ಮುಂಚೆ ಸನ್ನಿಧಾನವನ್ನು ಅಲ್ಲಿ ಬರಿಸಿದ |೨೨|
ಮೂರು ವಿಕ್ರಮನ ರಥದ ಉತ್ಸವ ಮಾಡಿದ
ಕಾರಣಾತ್ಮಕ ಸಾರ್ವಭೌಮನನ್ನು ನಿಲಿಸಿದ |೨೩|
ವೇದವೇದ್ಯ ವೇದನಿಧಿಯ ವಿಶ್ವಪ್ರೀಯರಾ
ಮೋದದಿಂದ ಕಾದು ಆಖ್ಯಾನ ಪೇಳಿದ |೨೪|
ಕನಕದಾಸ ರಾಯರನ್ನು ಕಂಡು ಹಿಗ್ಗಿದಾ
ಕನಕವೆಂದಗ್ರಹಿಸಿ ಇವರ ಜನಕೆ ಸಾರಿದಾ |೨೫|
ಹರಿಯ ಕಂಡು ಅವನ ಪುರಕೆ ಪಯಣ ಬೆಳೆಸಿದಾ
ಹರಿಯ ಶ್ರೇಷ್ಠ ದಾಸರೆಂಬ ವಾದಿರಾಜರಾ |೨೬|
ವಾದಿರಾಜ ಕವಚವನ್ನು ದಿನದಿ ಪಠಿಪರಾ
ಮೋದದಿಂದ ಕಾಯ್ವೆನೆಂದು ಹರಿಯು ನುಡಿಸಿದ |೨೭|
ಇವರ ಚರಿತೆ ಏನು ಬಲ್ಲ ಮದಡ ಮಾನವ
ಕವಿಯು ಪಂಢರಿನಾಥ ವಿಠಲ ಇದನು ಪೇಳಿದ |೨೮|
smaraNe mADirO sOde vAdirAjara
maruta paTTakE muMde baruva rAjara |pa|
yatiya vAgISara karaja KyAtara
hitava koDuvara idda durita kaLevara |1|
rAmAcArya gauriya prEma putrara
sOmaSEKarage ivaru gurugaLenipara |2|
gRuhada bAhya gaddeyalli janisi meredara
mahAmahimarA lAtavya padasthara |3|
BUvarAhanA pAda Bajipa SrEShThara
BUvarAhanA nAmadalli meredara |4|
sakala kShEtrava kaMDu varNisippara
sakala sujanara sEvegoMDu kAyvara |5|
SAlagrAmada hAra harige ittara
SAlmalI tIradalli tapavagoMDara |6|
paMDharApurake hOgi hariya kaMDara
pAMDuraMganannu kaMDu haruShagoMDara |7|
rukmiNISavijaya racisi stutyarAdarA
rukmiNISa kartRuveMdu arpisippara |8|
maduve kAladalli satta varana kAdarA
mudadi nereda janarigella mudavanittara |9|
maMtra rEKe racisi nakragaLanu aTdara
maMtravAdi taMtravannu bayalu mADdara |10|
kliShTa BAratada padake artha baredara
SrEShTha mAte vacanavannu mAnya mADdara |11|
lOBiyannu kaMDu SAlagrAmavittarA
lOBi dhArALiyAda dayadi guruvarA |12|
vAdigaLanu vAdadalli gedda rAjarA
vEdavyAsarannu badariyalli kaMDarA |13|
baMDe sILi rAjanIge dravyavittarA
kaMDu karuNi viThThalanna iTTukoMDarA |14|
prasaMgABaraNa tIrtha praSasti paDedarA
asadRuSaru rAjareMba KyAti paDedarA |15|
BUtagaNada bIDinalli harana nilisida
KyAtavAytu bIDu dharmasthaLavu ennutA |16|
daMDadiMda daMDa tIrtha uMTu mADida
kaMDu haruSha paTTarella purada bahujana |17|
eraDu mAsa pUje eraDu varuSha mADida
parama puNya kShEtra uDupiyalli kRuShNana |18|
BUtarAja guru ayya vAdirAjarA
prItiyiMda stOtra mADe olidu kAyvarA |19|
maguva kaMDara mAyada maguva kaMDara
nagutalidda kRuShNaneMba maguva kaMDara |20|
stutya vaikuMTha dAsarannu nODida
matte dAsOttamaru eMdu pogaLida |21|
paMca vRuMdAvanadi paMcarUpanA
muMce sannidhAnavannu alli barisida |22|
mUru vikramana rathada utsava mADida
kAraNAtmaka sArvaBaumanannu nilisida |23|
vEdavEdya vEdanidhiya viSvaprIyarA
mOdadiMda kAdu AKyAna pELida |24|
kanakadAsa rAyarannu kaMDu higgidA
kanakaveMdagrahisi ivara janake sAridA |25|
hariya kaMDu avana purake payaNa beLesidA
hariya SrEShTha dAsareMba vAdirAjarA |26|
vAdirAja kavacavannu dinadi paThiparA
mOdadiMda kAyveneMdu hariyu nuDisida |27|
ivara carite Enu balla madaDa mAnava
kaviyu paMDharinAtha viThala idanu pELida |28|

Leave a Reply
You must be logged in to post a comment.