Composer: Shri Venkata vittala
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||
ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ||
ಜನನ ಮರಣ ನಿಂದೇ, ಜನ್ಮಸಾಧನ ನಿಂದೇ
ಅನುಕೂಲಾದರವು ನಿಂದೇ ಸ್ವಮೀ
ತನುಮನವೂ ನಿಂದೇ, ಕಾಯ ದೊರೆವುದೂ ನಿಂದೇ
ಚಿನುಮಯರೂಪನೇ ಅನುಮಾನವ್ಯಾತಕೆ ||೧||
ಕಾಯಕಷ್ಟವು ನಿಂದೇ, ದೇಹದ ಬಲ ನಿಂದೇ
ನ್ಯಾಯ ಅನ್ಯಾಯವೂ ನಿಂದೇ,
ಬಾಯಿಮಾತು ನಿಂದೇ, ಬರುವ ಭಾಗ್ಯವು ನಿಂದೇ
ಕಾಯಜ ಪಿತ ನಿನ್ನ ಮಾಯಾ ತಿಳಿಯದಯ್ಯಾ ||೨||
ಯಾತ್ರೆ ತೀರ್ಥವು ನಿಂದೇ, ಕ್ಷೇತ್ರದ ಫಲ ನಿಂದೇ
ಸತ್ಪಾತ್ರ ದಾನ ನೇಮ ನಿಂದೇ,
ಧಾತ್ರಿಯೊಳ್ ಪರಿಪೂರ್ಣ ಕ್ಷೇತ್ರ ವೆಂಕಟವಿಠಲ
ಸ್ತೋತ್ರ ಮಾಳ್ಪುದು ವಿಚಿತ್ರ ನಿನ್ನದಯ್ಯಾ ||೩||
naMdEnadO svAmi niMdE idellavU ||pa||
naMdanaMdana gOviMda, harE kRuShNA ||a.pa||
janana maraNa niMdE, janmasAdhana niMdE
anukUlAdaravu niMdE swamI
tanumanavU niMdE, kAya dorevudU niMdE
cinumayarUpanE anumAnavyAtake ||1||
kAyakaShTavu niMdE, dEhada bala niMdE
nyAya anyAyavU niMdE,
bAyimAtu niMdE, baruva BAgyavu niMdE
kAyaja pita ninna mAyA tiLiyadayyA ||2||
yAtre tIrthavu niMdE, kShEtrada Pala niMdE
satpAtra dAna nEma niMdE,
dhAtriyoL paripUrNa kShEtra veMkaTaviThala
stOtra mALpudu vicitra ninnadayyA ||3||
Leave a Reply