Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೧೬. ದತ್ತ ಸ್ವತಂತ್ರ್ಯ ಸಂಧಿ
|| ( ಸ್ವಾತಂತ್ರ್ಯ ವಿಭಜನ ಸಂಧಿ ) ||
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಕಾರು-ಣಿಕ ಹರಿ — ತನ್ನೊ-ಳಿಪ್ಪಾ |
ಪಾರ- ಸ್ವಾತಂ — ತ್ರಿಯ ಗು-ಣದಿ ನಾ |
ನೂರು- ತೆಗೆದು ಸ — ಪಾದ- ಆರೊಂ — ದಧಿಕ- ಅರವ-ತ್ತು ||
ನಾರಿ-ಗಿತ್ತ ದ್ವಿ — ಷೋಡ-ಶಾಧಿಕ |
ನೂರು- ಪಾದ — ತ್ರಯವ- ತನ್ನ ಶ- |
ರೀರ-ದೊಳಗೀ — ಪರಿ ವಿ-ಭಾಗವ — ಮಾಡ್ದ- ತ್ರಿಪದಾ-ಹ್ವ || ೧೬-೧ ||
ಸತ್ಯ-ಲೋಕಾ — ಧಿಪನೊ-ಳಗೆ ಐ- |
ವತ್ತೆ-ರಡು ಪವ — ಮಾನ-ನೊಳು ನಾ- |
ಲ್ವತ್ತು- ಮೇಲೆಂ — ಟಧಿಕ- ಶಿವನೊಳ — ಗಿಟ್ಟ-ನಿಪ್ಪ-ತ್ತು ||
ಚಿತ್ತ-ಜೇಂದ್ರರೊ — ಳೈದ-ಧಿಕ ದಶ- |
ತತ್ತ್ವ-ಮಾನಿಗ — ಳೆನಿಪ- ಸುರರೊಳು |
ಹತ್ತು- ಈರೈ — ದಖಿಳ- ಜೀವರೊ — ಳಿಟ್ಟ- ನಿರವ-ದ್ಯ || ೧೬-೨ ||
ಕಲಿ ಮೊ-ದಲುಗೊಂ — ಡಖಿಳ- ದಾನವ- |
ರೊಳಗೆ- ನಾಲ್ವ — ತ್ತೈದು- ಈ ಪರಿ |
ತಿಳಿದು-ಪಾಸನೆ — ಮಾಡು- ಮರೆಯದೆ — ಪರಮ- ಭಕುತಿಯ-ಲಿ ||
ಇಳೆಯೊ-ಳಗೆ ಸಂ — ಚರಿಸು- ಲಕ್ಷ್ಮೀ- |
ನಿಲಯ-ನಾಳಾ — ನೆಂದು- ಸರ್ವ- |
ಸ್ಥಳಗ-ಳಲಿ ಸಂ — ತೈಸು-ತಿಪ್ಪನು — ಗೆಳೆಯ-ನಂದದ-ಲಿ || ೧೬-೩ ||
ಅವನಿ-ಪ ಸ್ವಾ — ಮಿತ್ವ- ಧರ್ಮವ |
ಸ್ವವಶ-ಮಾತ್ಯರಿ — ಗಿತ್ತು- ತಾ ಮ- |
ತ್ತವರ- ಮುಖದಲಿ — ರಾಜ- ಕಾರ್ಯವ — ಮಾಡಿ-ಸುವ ತೆರ-ದಿ ||
ಕವಿ ಭಿ-ರೀಡಿತ — ತನ್ನ- ಕಳೆಗಳ |
ದಿವಿಜ- ದಾನವ — ಮಾನ-ವರೊಳಿ- |
ಟ್ಟವಿರ-ತ ಗುಣ — ತ್ರಯಜ- ಕರ್ಮವ — ಮಾಡಿ- ಮಾಡಿಸು-ವ || ೧೬-೪ ||
ಪುಣ್ಯ- ಪಾಪಗ — ಳೀ ತೆ-ರದಿ ಕಾ- |
ರುಣ್ಯ- ಸಾಗರ — ದೇವ- ದಾನವ- |
ಮಾನ-ವರೊಳಿ — ಟ್ಟವರ- ಫಲ ವ್ಯ — ತ್ಯಾಸ-ವನೆ ಮಾ-ಡಿ ||
ಬನ್ನ- ಬಡಿಸುವ — ಭಕ್ತಿ- ಹೀನರ |
ಸನ್ನು-ತ ಸುಕ — ರ್ಮ ಫಲ- ತೆಗೆದು ಪ್ರ- |
ಪನ್ನ-ರಿಗೆ ಕೊ — ಟ್ಟವರ- ಸುಖಬಡಿ — ಸುವನು- ಸುಭುಜಾ-ಹ್ವ || ೧೬-೫ ||
ಮಾಣಿ-ಕವ ಕೊಂ — ಡಂಗ-ಡಿಯೊಳಜಿ |
ವಾನ- ಕೊಟ್ಟಾ — ಪುರುಷ-ನ ಸಮಾ- |
ಧಾನ- ಮಾಡುವ — ತೆರದಿ- ದೈತ್ಯರು — ನಿತ್ಯ-ದಲಿ ಮಾ-ಳ್ಪ ||
ದಾನ- ಯಜ್ಞಾ — ದಿಗಳ- ಫಲ ಪವ- |
ಮಾನ- ಪಿತನಪ — ಹರಿಸಿ- ಅಸಮೀ- |
ಚೀನ- ಸುಖಗಳ — ಕೊಟ್ಟು- ಅಸುರರ — ಮತ್ತ-ರನು ಮಾ-ಳ್ಪ || ೧೬-೬ ||
ಏಣ- ಲಾಂಛನ — ನಮಲ- ಕಿರಣ ಕ್ರ- |
ಮೇಣ- ವೃದ್ಧಿಯ — ನೈದಿ- ಲೋಗರ |
ಕಾಣ-ಗೊಡದಿಹ — ಕತ್ತ-ಲೆಯ ಭಂ — ಗಿಸುವ- ತೆರದಂ-ತೆ ||
ವೈನ-ತೇಯಾಂ — ಸಗನ- ಮೂರ್ತಿ- |
ಧ್ಯಾನ-ವುಳ್ಳ ಮ — ಹಾತ್ಮ-ರಿಗೆ ಸು- |
ಜ್ಞಾನ- ಭಕ್ತ್ಯಾ — ದಿಗಳು- ವರ್ಧಿಸಿ — ಸುಖವ- ಕೊಡುತಿಹ-ವು || ೧೬-೭ ||
ಜನಪ-ನರಿಕೆಯ — ಚೋರ- ಪೊಳಲೊಳು |
ಧನವ- ಕದ್ದೊ — ಯ್ದೀಯ-ಲವನವ- |
ಗುಣಗ-ಳೆಣಿಸದೆ — ಪೊರೆವ- ಕೊಡದಿರೆ — ಶಿಕ್ಷಿ-ಸುವ ತೆರ-ದಿ ||
ಅನುಚಿ-ತೋಚಿತ — ಕರ್ಮ- ಕೃಷ್ಣಾ- |
ರ್ಪಣವೆ-ನಲು ಕೈ — ಕೊಂಡು- ತನ್ನರ- |
ಮನೆಯೊ-ಳಿಟ್ಟಾ — ನಂದ- ಬಡಿಸುವ — ಮಾಧ-ವಾನತ-ರ || ೧೬-೮ ||
ಅನ್ನ-ದನ್ನಾ — ದನ್ನ- ನಾಮಕ |
ಮುನ್ನ- ಪೇಳ್ದ ಪ್ರ — ಕಾರ- ಜೀವರೊ- |
ಳನ್ನ- ರೂಪ ಪ್ರ — ವೇಶ-ಗೈದವ — ರವರ- ವ್ಯಾಪಾ-ರ ||
ಬನ್ನ- ಬಡದಲೆ — ಮಾಡಿ- ಮಾಡಿಸಿ |
ಧನ್ಯ-ರಿವರಹು — ದೆಂದೆ-ನಿಸಿ ತ್ರೈ- |
ಗುಣ್ಯ- ವರ್ಜಿತ — ತತ್ತ-ದಾಹ್ವಯ — ನಾಗಿ- ಕರೆಸುವ-ನು || ೧೬-೯ ||
ಸಲಿಲ- ಬಿಂದು ಪ — ಯೋಬ್ಧಿ-ಯೊಳು ಬೀ- |
ಳಲು ವಿ-ಕಾರವ — ನೈದ- ಬಲ್ಲದೆ |
ಜಲವು- ತದ್ರೂ — ಪವನೆ- ಐದುವ — ದೆಲ್ಲ- ಕಾಲದ-ಲಿ ||
ಕಲಿಮ-ಲಾಪಹ — ನರ್ಚಿ-ಸುವ ಸ- |
ತ್ಕುಲಜ-ರ ಕುಕ — ರ್ಮಗಳು- ತಾ ನಿ- |
ಷ್ಕಲುಷ- ಕರ್ಮಗ — ಳಾಗಿ- ಪುರುಷಾ — ರ್ಥಗಳ- ಕೊಡುತಿಹ-ವು || ೧೬-೧೦ ||
ಮೊಗದೊ-ಳಗೆ ಮೊಗ — ವಿಟ್ಟು- ಮುದ್ದಿಸಿ |
ಮಗುವಿ-ನಂ ಬಿಗಿ — ದಪ್ಪಿ- ನೇಹದಿ |
ತೆಗೆದು- ತನ್ನ — ಸ್ತನಗ-ಳುಣಿಸುವ — ಜನನಿ-ಯಂದದ-ಲಿ ||
ಅಗಣಿ-ತಾತ್ಮನು — ತನ್ನ- ಪಾದಾ- |
ಬ್ಜಗಳ- ಧೇನಿಪ — ಭಕ್ತ- ಜನರಿಗೆ |
ಪ್ರಘಟ-ಕನು ತಾ — ನಾಗಿ- ಸೌಖ್ಯಗ — ಳೀವ- ಸರ್ವ-ತ್ರ || ೧೬-೧೧ ||
ತೋಟಿ-ಗನು ಭೂ — ಮಿಯೊಳು- ಬೀಜವ |
ನಾಟ-ಬೇಕೆಂ — ದೆನುತ- ಹಿತದಲಿ |
ಮೋಟೆ-ಯಿಂ ನೀ — ರೆತ್ತಿ- ಸಸಿಗಳ — ಸಂತ-ಯಿಸುವಂ-ತೆ ||
ಪಾಟು- ಬಡದಲೆ — ಜಗದಿ- ಜೀವರ |
ಘೋಟ-ಕಾಸ್ಯನು — ಸೃಜಿಸಿ- ಯೋಗ್ಯತೆ |
ದಾಟ-ಗೊಡದಲೆ — ಸಲಹು-ತಿಪ್ಪನು — ಸರ್ವ-ಕಾಲದ-ಲಿ || ೧೬-೧೨ ||
ಭೂಮಿ-ಯೊಳು ಜಲ — ವಿರೆ ತೃ-ಷಾರ್ತನು |
ತಾ ಮ-ರೆದು ಮೊಗ — ವೆತ್ತಿ- ಎಣ್ದೆಸೆ |
ವ್ಯೋಮ- ಮಂಡಲ — ದೊಳಗೆ- ಕಾಣದೆ — ಮಿಡುಕು-ವಂದದ-ಲಿ ||
ಶ್ರೀಮ-ನೋರಮ — ಸರ್ವ-ರಂತ- |
ರ್ಯಾಮಿ-ಯಾಗಿರೆ — ತಿಳಿಯ-ದನುದಿನ |
ಭ್ರಾಮ-ಕರು ಭಜಿ — ಸುವರು- ಭಕುತಿಯ — ಲನ್ಯ- ದೇವತೆ-ಯ || ೧೬-೧೩ ||
ಮುಖ್ಯ- ಫಲ ವೈ — ಕುಂಠ- ಮುಖ್ಯಾ- |
ಮುಖ್ಯ- ಫಲ ಮಹ — ರಾದಿ- ಲೋಕಾ- |
ಮುಖ್ಯ- ಫಲ ವೈ — ಷಯಿಕ-ವೆಂದರಿ — ದತಿ ಭ-ಕುತಿಯಿಂ-ದ ||
ರಕ್ಕ-ಸಾರಿಯ — ಭಜಿಸು-ತಲಿ ನಿ- |
ರ್ದುಃಖ-ನಾಗು ನಿ — ರಂತ-ರದಿ ಮೊರೆ- |
ಹೊಕ್ಕ-ವರ ಬಿಡ — ಭಕ್ತ- ವತ್ಸಲ — ಭಾರ-ತೀಶ ಪಿ-ತ || ೧೬-೧೪ ||
ವ್ಯಾಧಿ-ಯಿಂ ಪೀ — ಡಿತ ಶಿ-ಶುವಿಗೆ ಗು- |
ಡೋದ-ಕವ ನೆರೆ — ದದಕೆ- ಔಷಧ |
ತೇದು- ಕುಡಿಸುವ — ತಾಯಿ-ಯೋಪಾ — ದಿಯಲಿ- ಸರ್ವ-ಜ್ಞ ||
ಬಾದ-ರಾಯಣ — ಭಕ್ತ- ಜನಕೆ ಪ್ರ- |
ಸಾದ- ರೂಪಕ — ನಾಗಿ- ಭಾಗವ- |
ತಾದಿ-ಯಲಿ ಪೇ — ಳಿದನು- ಧರ್ಮಾ — ದಿಗಳೆ- ಫಲವೆಂ-ದು || ೧೬-೧೫ ||
ದೂರ-ದಲ್ಲಿಹ — ಪರ್ವ-ತ ಘನಾ- |
ಕಾರ- ತೋರ್ಪುದು — ನೋಳ್ಪ- ಜನರಿಗೆ |
ಸಾರ- ಗೈಯ್ಯಲು — ಸರ್ಪ- ವ್ಯಾಘ್ರ — ಗಳಿಂದ- ಭಯವಿಹು-ದು ||
ಘೋರ-ತರ ಸಂ — ಸಾರ- ಸೌಖ್ಯಾ- |
ಸಾರ- ತರವೆಂ — ದರಿತು- ನಿತ್ಯ ರ- |
ಮಾರ-ಮಣನಾ — ರಾಧಿ-ಸುವರದ — ರಿಂದ- ಬಲ್ಲವ-ರು || ೧೬-೧೬ ||
ಕೆಸರ- ಘಟಗಳ — ಮಾಡಿ- ಬೇಸಿಗೆ |
ಬಿಸಿಲೊ-ಳಿಟ್ಟೊಣ — ಗಿಸಿದ-ರದು ಘನ- |
ರಸವ- ತುಂಬಲು — ಬಹುದೆ- ಸರ್ವ ಸ್ವ — ತಂತ್ರ- ತಾನೆಂ-ಬ ||
ಪಶುಪ- ನರನೇ — ನೇನು- ಮಾಳ್ಪಾ- |
ನಶನ- ದಾನ — ಸ್ನಾನ- ಕರ್ಮಗ- |
ಳೊಸರಿ- ಪೋಪವು — ಬರಿದೆ- ದೇಹಾ — ಯಾಸ-ವನೆ ಕೊ-ಟ್ಟು || ೧೬-೧೭ ||
ಎರಡು- ದೀಕ್ಷೆಗ — ಳಿಹವು- ಬಾಹ್ಯಾಂ- |
ತರವೆ-ನಿಪ ನಾ — ಮದಲಿ- ಬುಧರಿಂ- |
ದರಿತು- ದೀಕ್ಷಿತ — ನಾಗು- ದೀರ್ಘ — ದ್ವೇಷ-ಗಳ ಬಿ-ಟ್ಟು ||
ಹರಿಯೆ- ಸರ್ವೋ — ತ್ತಮ ಕ್ಷ-ರಾಕ್ಷರ- |
ಪುರುಷ- ಪೂಜಿತ — ಪಾದ- ಜನ್ಮಾ- |
ದ್ಯರ ವಿ-ದೂರ ಸು — ಖಾತ್ಮ- ಸರ್ವಗ — ನೆಂದು- ಸ್ಮರಿಸುತಿ-ರು || ೧೬-೧೮ ||
ಹೇಯ- ವಸ್ತುಗ — ಳಿಲ್ಲ- ಊಪಾ- |
ದೇಯ- ವಸ್ತುಗ — ಳಿಲ್ಲ- ನ್ಯಾಯಾ- |
ನ್ಯಾಯ- ಧರ್ಮಗ — ಳಿಲ್ಲ- ದ್ವೇಷಾ — ಸೂಯೆ- ಮೊದಲಿ-ಲ್ಲ ||
ತಾಯಿ-ತಂದೆಗ — ಳಿಲ್ಲ- ಕಮಲದ- |
ಳಾಯ-ತಾಕ್ಷಗೆ — ಯೆನಲು- ಈಸುವ- |
ಕಾಯಿ-ಯಂದದಿ — ಮುಳುಗ-ಗೊಡದೆ ಭ — ವಾಬ್ಧಿ- ದಾಟಿಸು-ವ || ೧೬-೧೯ ||
ಮಂದ-ನಾದರು — ಸರಿಯೆ- ಗೋಪೀ- |
ಚಂದ-ನ ಶ್ರೀ — ಮುದ್ರೆ-ಗಳ ನಲ- |
ವಿಂದ- ಧರಿಸುತ — ಶ್ರೀತು-ಳಸಿ ಪ — ದ್ಮಾಕ್ಷ- ಸರಗಳ-ನು ||
ಕಂಧ-ರದ ಮ — ಧ್ಯದಲಿ- ಧರಿಸಿ ಮು- |
ಕುಂದ- ಶ್ರೀಭೂ — ರಮಣ- ತ್ರಿಜಗ- |
ದ್ವಂದ್ಯ- ಸರ್ವ — ಸ್ವಾಮಿ- ಮಮ ಕುಲ — ದೈವ-ವೆನೆ ಪೊರೆ-ವ || ೧೬-೨೦ ||
ಪ್ರಾಯ- ಧನ ಮದ — ದಿಂದ- ಜನರಿಗೆ |
ನಾಯ-ಕ ಪ್ರಭು — ವೆಂಬಿ- ಪೂರ್ವದಿ |
ತಾಯ- ಪೊಟ್ಟೆಯೊ — ಳಿರಲು- ಪ್ರಭುವೆಂ — ದೇಕೆ- ಕರೆಯರೆ-ಲೈ ||
ಕಾಯ- ನಿನ್ನನು — ಬಿಟ್ಟು- ಪೋಗಲು |
ರಾಯ- ನೀನೆಂ — ಬುವ ಪ್ರ-ಭುತ್ವ ಪ- |
ಲಾಯ-ನವನೈ — ದಿತು ಸ-ಮೀಪದ — ಲಿದ್ದ-ರದ ತೋ-ರು || ೧೬-೨೧ ||
ವಾಸು-ದೇವೈ — ಕ ಪ್ರ-ಕಾರದಿ |
ಈಶ-ನೆನಿಸುವ — ಬ್ರಹ್ಮ- ರುದ್ರ ಶ- |
ಚೀಶ- ಮೊದಲಾ — ದಮರ-ರೆಲ್ಲರು — ದಾಸ-ರೆನಿಸುವ-ರು ||
ಈ ಸು-ಮಾರ್ಗವ — ಬಿಟ್ಟು- ಸೊಽಹಮು- |
ಪಾಸ-ನೆಯ ಗೈ — ವ ನರ- ದೇಹಜ- |
ದೈಶಿ-ಕ ಕ್ಲೇ — ಶಗಳು- ಬರಲವ — ನೇಕೆ- ಬಿಡಿಸಿಕೊ-ಳ || ೧೬-೨೨ ||
ಆ ಪ-ರ ಬ್ರ — ಹ್ಮನಲಿ- ತ್ರಿಜಗ-
ದ್ವ್ಯಾಪ-ಕತ್ವ ನಿ — ಯಾಮ-ಕತ್ವ |
ಸ್ಥಾಪ-ಕತ್ವ ವ — ಶಿತ್ವ- ಈಶಿ — ತ್ವಾದಿ- ಗುಣಗಳಿ-ಗೆ ||
ಲೋಪ-ವಿಲ್ಲೇ — ಕ ಪ್ರ-ಕಾರ ಸ್ವ- |
ರೂಪ-ವೆನಿಪವು — ಸರ್ವ- ಕಾಲದಿ |
ಪೋಪ-ವಲ್ಲವು — ಜೀವ-ರಿಗೆ ದಾ — ಸತ್ವ-ದೋಪಾದಿ || ೧೬-೨೩ ||
ನಿತ್ಯ- ನೂತನ — ನಿರ್ವಿ-ಕಾರ ಸು- |
ಹೃತ್ತ-ಮ ಪ್ರಣ — ವಸ್ಥ- ವರ್ಣೋ- |
ತ್ಪತ್ತಿ- ಕಾರಣ — ವಾಙ್ಮ-ನೋಮಯ — ಸಾಮ- ಗಾನರ-ತ ||
ದತ್ತ- ಕಪಿಲ ಹ — ಯಾಸ್ಯ- ರೂಪದಿ |
ಪೃಥ್ ಪೃ-ಥಕು ಜೀ — ವರೊಳ-ಗಿದ್ದು ಪ್ರ- |
ವರ್ತಿ-ಸುವನವ — ರವರ- ಯೋಗ್ಯತೆ — ಕರ್ಮ-ವನುಸರಿ-ಸಿ || ೧೬-೨೪ ||
ಶ್ರುತಿಗ-ಳಾತನ — ಮಾತು- ವಿಮಲ- |
ಸ್ಮೃತಿಗ-ಳಾತನ — ಶಿಕ್ಷೆ- ಜೀವ- |
ಪ್ರತತಿ — ಪ್ರಕೃತಿಗ — ಳೆರಡು- ಪ್ರತಿಮೆಗ — ಳೆನಿಸಿ- ಕೊಳುತಿಹ-ವು ||
ಇತರ- ಕರ್ಮಗ — ಳೆಲ್ಲ- ಲಕ್ಷ್ಮೀ- |
ಪತಿಗೆ- ಪೂಜೆಗ — ಳೆಂದು- ಸ್ಮರಿಸುತ |
ಚತುರ- ವಿಧ ಪುರು — ಷಾರ್ಥ-ಗಳ ಬೇ — ಡದಿರು- ಸ್ವಪ್ನದ-ಲಿ || ೧೬-೨೫ ||
ಭೂತ-ಳಾಧಿಪ — ನಾಜ್ಞ- ಧಾರಕ- |
ದೂತ-ರಿಗೆ ಸೇ — ವಾನು-ಸಾರದಿ |
ವೇತ-ನವ ಕೊ — ಟ್ಟವರ- ಸಂತೋ — ಷಿಸುವ- ತೆರದಂ-ತೆ ||
ಮಾತ-ರಿಶ್ವ — ಪ್ರಿಯನು- ಪರಮ- |
ಪ್ರೀತಿ-ಪೂರ್ವಕ — ಸದ್ಗು-ಣಂಗಳ |
ಗಾಯ-ಕರ ಸಂ — ತೋಷ- ಬಡಿಸುವ — ಇಹ ಪ-ರಂಗಳ-ಲಿ || ೧೬-೨೬ ||
ದೀಪ- ದಿವದಲಿ — ಕಂಡ-ರಾದಡೆ |
ಲೋಪ-ಗೈಸುವ — ರಾಕ್ಷ-ಣ ಹರಿ ಸ- |
ಮೀಪ-ದಲ್ಲಿರೆ — ನಂದ- ನಾಮ ಸು-ನಂದ-ವೆನಿಸುವ-ವು ||
ಔಪ-ಚಾರಿಕ — ವಲ್ಲ- ಸುಜನರ |
ಪಾಪ- ಕರ್ಮವು — ಪುಣ್ಯ-ವೆನಿಪವು |
ಪಾಪಿ-ಗಳ ಸ — ತ್ಪುಣ್ಯ- ಕರ್ಮವು — ಪಾಪ-ವೆನಿಸುವ-ವು || ೧೬-೨೭ ||
ಧನವ- ಸಂಪಾ — ದಿಸುವ- ಪ್ರದ್ರಾ- |
ವಣಿಕ-ರಂದದಿ — ಕೋವಿ-ದರ ಮನೆ- |
ಮನೆಗ-ಳಲಿ ಸಂ — ಚರಿಸು- ಶಾಸ್ತ್ರ — ಶ್ರವಣ-ಗೋಸುಗ-ದಿ |
ಮನನ- ಗೈದುಪ — ದೇಶಿ-ಸುತ ದು- |
ರ್ಜನರ- ಕೂಡಾ — ಡದಿರು- ಸ್ವಪ್ನದಿ |
ಪ್ರಣತ- ಕಾಮದ — ಕೊಡುವ- ಸೌಖ್ಯಗ — ಳಿಹ ಪ-ರಂಗಳ-ಲಿ || ೧೬-೨೮ ||
ಕಾರ-ಕ ಕ್ರಿಯ — ದ್ರವ್ಯ- ವಿಭ್ರಮ |
ಮೂರು- ವಿಧ ಜೀ — ವರಿಗೆ- ಬಹು ಸಂ- |
ಸಾರ-ಕಿವು ಕಾ — ರಣವೆ-ನಿಸುವವು — ಎಲ್ಲ- ಕಾಲದ-ಲಿ ||
ದೂರ- ಓಡಿಸಿ — ಭ್ರಾಮ-ಕತ್ರಯ |
ಮಾರಿ-ಗೊಳಗಾ — ಗದಲೆ- ಸರ್ವಾ- |
ಧಾರ-ಕನ ಚಿಂ — ತಿಸುತ-ಲಿರು ಸ — ರ್ವತ್ರ- ಮರೆಯದ-ಲೆ || ೧೬-೨೯ ||
ಕರಣ- ಕರ್ಮವ — ಮಾಡಿ-ದರೆ ವಿ- |
ಸ್ಮರಣೆ- ಕಾಲದಿ — ಮಾತು-ಗಳಿಗು- |
ತ್ತರವ- ಕೊಡದಲೆ — ಸುಮ್ಮ-ನಿಪ್ಪನು — ಜಾಗ-ರಾವ-ಸ್ಥೆ ||
ಕರುಣಿ-ಸಲು ವ್ಯಾ — ಪಾರ- ಮಾಡುವ |
ಬರಲು- ನಾಲ್ಕಾ — ವಸ್ಥೆ-ಗಳು ಪರಿ- |
ಹರಿಸಿ-ಕೊಳನೇ — ತಕೆ ಸ್ವ-ತಂತ್ರನು — ತಾನೆ-ಯೆಂಬುವ-ನು || ೧೬-೩೦ ||
ಯುಕ್ತಿ- ಮಾತುಗ — ಳಲ್ಲ- ಶ್ರುತಿಸ್ಮೃ- |
ತ್ಯುಕ್ತ- ಮಾತುಗ — ಳಿವು ವಿ-ಚಾರಿಸೆ |
ಮುಕ್ತಿ-ಗಿವು ಸೋ — ಪಾನ-ವೆನಿಪವು — ಪ್ರತಿ ಪ್ರ-ತೀ ಪದ-ವು ||
ಭಕ್ತಿ- ಪೂರ್ವಕ — ಪಠಿಸು-ವವರಿಗೆ |
ವ್ಯಕ್ತಿ- ಕೊಡುವ ಸ್ವ — ರೂಪ- ಸುಖ ಪ್ರವಿ- |
ವಿಕ್ತ-ರನು ಮಾ — ಡುವನು- ಭವ ಭಯ — ದಿಂದ- ಬಹುರೂ-ಪ || ೧೬-೩೧ ||
ಶ್ರೀನಿ-ವಾಸನ — ಸುಗುಣ- ಮಣಿಗಳ |
ಪ್ರಾಣ- ಮತ ವಯು — ನಾಖ್ಯ- ಸೂತ್ರದಿ |
ಪೋಣಿ-ಸಿದ ಮಾ — ಲಿಕೆಯ- ವಾಙ್ಮಯ — ನಂಸ-ಗರ್ಪಿಸಿ-ದೆ ||
ಜ್ಞಾನಿ-ಗಳ ದೃ — ಗ್ವಿಷಯ-ವಹುದ- |
ಜ್ಞಾನಿ-ಗಳಿಗೆ ಅ — ಸಹ್ಯ- ತೋರ್ಪುದು |
ಮಾಣಿ-ಕವ ಮ — ರ್ಕಟನ- ಕೈಯೊಳು — ಕೊಟ್ಟ- ತೆರನಂ-ತೆ || ೧೬-೩೨ ||
ಶ್ರೀವಿ-ಧೀರ ವಿ — ಪಾಹಿ-ಪೇಶ ಶ – |
ಚೀವ-ರಾತ್ಮ ಭ — ವಾರ್ಕ- ಶಶಿ ದಿ- |
ಗ್ದೇವ- ಋಷಿ ಗಂ — ಧರ್ವ- ಕಿನ್ನರ — ಸಿದ್ಧ- ಸಾಧ್ಯ ಗ-ಣ ||
ಸೇವಿ-ತ ಪದಾಂ — ಭೋಜ- ತತ್ಪಾ- |
ದಾವ-ಲಂಬಿಗ — ಳಾದ- ಭಕ್ತರ |
ಕಾವ- ಕರುಣಾ — ಸಾಂದ್ರ- ಲಕ್ಷ್ಮೀ — ಹೃತ್ಕು-ಮುದ ಚಂ-ದ್ರ || ೧೬-೩೩ ||
ಆದ-ರುಶವ ಗ — ತಾಕ್ಷ- ಭಾಷಾ- |
ಭೇದ-ದಿಂದಲಿ — ಕರೆಯ-ಲದನು ನಿ- |
ಷೇಧ-ಗೈದವ — ಲೋಕಿ-ಸದೆ ಬಿಡು — ವರೆ ವಿ-ವೇಕಿಗ-ಳು ||
ಮಾಧ-ವನ ಗುಣ — ಪೇಳ್ವ- ಪ್ರಾಕೃತ- |
ವಾದ-ರೆಯು ಸರಿ — ಕೇಳಿ- ಪರಮಾ- |
ಹ್ಲಾದ- ಬಡದಿ — ಪ್ಪರೆ ನಿ-ರಂತರ — ಬಲ್ಲ- ಕೋವಿದ-ರು || ೧೬-೩೪ ||
ಭಾಸ್ಕ-ರನ ಮಂ — ಡಲವ- ಕಂಡು ನ- |
ಮಸ್ಕ-ರಿಸಿ ಮೋ — ದಿಸದೆ- ದ್ವೇಷದಿ |
ತಸ್ಕ-ರನು ನಿಂ — ದಿಸಲು- ಕುಂದಹು — ದೇ ದಿ-ವಾಕರ-ಗೆ ||
ಸಂಸ್ಕೃ-ತವಿದ — ಲ್ಲೆಂದು- ಕುಹಕ ತಿ- |
ರಸ್ಕ-ರಿಸಲೇ — ನಹುದು- ಭಕ್ತಿ ಪು- |
ರಸ್ಕ-ರದಿ ಕೇ — ಳ್ವರಿಗೆ- ಒಲಿವನು — ಪುಷ್ಕ-ರಾಕ್ಷ ಸ-ದಾ || ೧೬-೩೫ ||
ಪತಿತ-ನ ಕಪಾ — ಲದಲಿ- ಭಾಗೀ- |
ರಥಿಯ- ಜಲವಿರೆ — ಪೇಯ-ವೆನಿಪುದೆ |
ಇತರ- ಕವಿ ನಿ — ರ್ಮಿತ ಕು-ಕಾವ್ಯಾ — ಶ್ರಾವ್ಯ- ಬುಧರಿಂ-ದ ||
ಕೃತಿಪ-ತಿ ಕಥಾ — ನ್ವಿತವೆ-ನಿಪ ಪ್ರಾ- |
ಕೃತವೆ- ತಾ ಸಂ — ಸ್ಕೃತವೆ-ನಿಸಿ ಸ- |
ದ್ಗತಿಯ-ನೀವುದು — ಭಕ್ತಿ- ಪೂರ್ವಕ — ಕೇಳಿ- ಪೇಳ್ವರಿ-ಗೆ || ೧೬-೩೬ ||
ವೇದ- ಶಾಸ್ತ್ರ ಸ — ಯುಕ್ತಿ- ಗ್ರಂಥಗ- |
ಳೋದಿ- ಕೇಳ್ದವ — ನಲ್ಲ- ಸಂತತ |
ಸಾಧು-ಗಳ ಸಹ — ವಾಸ- ಸಲ್ಲಾ — ಪಗಳು- ಮೊದಲಿ-ಲ್ಲ ||
ಮೋದ- ತೀರ್ಥಾ — ರ್ಯರ ಮ-ತಾನುಗ- |
ರಾದ-ವರ ಕರು — ಣದಲಿ- ಪೇಳ್ದೆ ರ- |
ಮಾಧ-ವ ಜಗ — ನ್ನಾಥ-ವಿಠ್ಠಲ — ತಿಳಿಸಿ-ದದರೊಳ-ಗೆ || ೧೬-೩೭ ||
|| ಇತಿ ಶ್ರೀ ದತ್ತ ಸ್ವಾತಂತ್ರ್ಯ ಸಂಧಿ ಸಂಪೂರ್ಣಂ ||
|| ( ಇತಿ ಶ್ರೀ ಸ್ವಾತಂತ್ರ್ಯ ವಿಭಜನ ಸಂಧಿ ಸಂಪೂರ್ಣಂ ) ||
|| ಶ್ರೀಕೃಷ್ಣಾರ್ಪಣಮಸ್ತು ||
- datta swataMtrya saMdhi
|| ( swaataMtrya vibhajana saMdhi ) ||
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
kaaru-Nika hari — tanno-Lippaa |
paara- swaataM — triya gu-Nadi naa |
nooru- tegedu sa — paada- aaroM — dadhika- arava-ttu ||
naari-gitta dwi — ShODa-shaadhika |
nooru- paada — trayava- tanna sha- |
reera-doLagee — pari vi-bhaagava — maaDda- tripadaa-hwa || 16-1 ||
satya-lOkaa — dhipano-Lage ai- |
vatte-raDu pava — maana-noLu naa- |
lwattu- mEleM — Tadhika- shivanoLa — giTTa-nippa-ttu ||
citta-jEMdraro — Laida-dhika dasha- |
tattwa-maaniga — Lenipa- suraroLu |
hattu- eerai — dakhiLa- jeevaro — LiTTa- nirava-dya || 16-2 ||
kali mo-dalugoM — DakhiLa- daanava- |
roLage- naalwa — ttaidu- ee pari |
tiLidu-paasane — maaDu- mareyade — parama- bhakutiya-li ||
iLeyo-Lage saM — carisu- lakShmI- |
nilaya-naaLaa — neMdu- sarva- |
sthaLaga-Lali saM — taisu-tippanu — geLeya-naMdada-li || 16-3 ||
avani-pa swaa — mitwa- dharmava |
swawasha-maatyari — gittu- taa ma- |
ttavara- mukhadali — raaja- kaaryava — maaDi-suva tera-di ||
kavi bhi-reeDita — tanna- kaLegaLa |
divija- daanava — maana-varoLi- |
TTavira-ta guNa — trayaja- karmava — maaDi- maaDisu-va || 16-4 ||
puNya- paapaga — LI te-radi kaa- |
ruNya- saagara — dEva- daanava- |
maana-varoLi — TTavara- phala vya — tyaasa-vane maa-Di ||
banna- baDisuva — bhakti- heenara |
sannu-ta suka — rma phala- tegedu pra- |
panna-rige ko — TTavara- sukhabaDi — suvanu- subhujaa-hwa || 16-5 ||
maaNi-kava koM — DaMga-DiyoLaji |
vaana- koTTaa — puruSha-na samaa- |
dhaana- maaDuva — teradi- daityaru — nitya-dali maa-Lpa ||
daana- yaj~jaa — digaLa- phala pava- |
maana- pitanapa — harisi- asamee- |
ceena- sukhagaLa — koTTu- asurara — matta-ranu maa-Lpa || 16-6 ||
ENa- laaMChana — namala- kiraNa kra- |
mENa- vRuddhiya — naidi- lOgara |
kaaNa-goDadiha — katta-leya bhaM — gisuva- teradaM-te ||
vaina-tEyaaM — sagana- moorti- |
dhyaana-vuLLa ma — haatma-rige su- |
j~jaana- bhaktyaa — digaLu- vardhisi — sukhava- koDutiha-vu || 16-7 ||
janapa-narikeya — cOra- poLaloLu |
dhanava- kaddo — ydIya-lavanava- |
guNaga-LeNisade — poreva- koDadire — shikShi-suva tera-di ||
anuci-tOcita — karma- kRuShNaa- |
rpaNave-nalu kai — koMDu- tannara- |
maneyo-LiTTaa — naMda- baDisuva — maadha-vaanata-ra || 16-8 ||
anna-dannaa — danna- naamaka |
munna- pELda pra — kaara- jeevaro- |
Lanna- roopa pra — vEsha-gaidava — ravara- vyaapaa-ra ||
banna- baDadale — maaDi- maaDisi |
dhanya-rivarahu — deMde-nisi trai- |
guNya- varjita — tatta-daahwaya — naagi- karesuva-nu || 16-9 ||
salila- biMdu pa — yObdhi-yoLu bee- |
Lalu vi-kaarava — naida- ballade |
jalavu- tadroo — pavane- aiduva — della- kaalada-li ||
kalima-laapaha — narci-suva sa- |
tkulaja-ra kuka — rmagaLu- taa ni- |
ShkaluSha- karmaga — Laagi- puruShaa — rthagaLa- koDutiha-vu || 16-10 ||
mogado-Lage moga — viTTu- muddisi |
maguvi-naM bigi — dappi- nEhadi |
tegedu- tanna — stanaga-LuNisuva — janani-yaMdada-li ||
agaNi-taatmanu — tanna- paadaa- |
bjagaLa- dhEnipa — bhakta- janarige |
praghaTa-kanu taa — naagi- soukhyaga — Leeva- sarva-tra || 16-11 ||
tOTi-ganu bhoo — miyoLu- beejava |
naaTa-bEkeM — denuta- hitadali |
mOTe-yiM nee — retti- sasigaLa — saMta-yisuvaM-te ||
paaTu- baDadale — jagadi- jeevara |
ghOTa-kaasyanu — sRujisi- yOgyate |
daaTa-goDadale — salahu-tippanu — sarva-kaalada-li || 16-12 ||
bhoomi-yoLu jala — vire tRu-Shaartanu |
taa ma-redu moga — vetti- eNdese |
vyOma- maMDala — doLage- kaaNade — miDuku-vaMdada-li ||
shreema-nOrama — sarva-raMta- |
ryaami-yaagire — tiLiya-danudina |
bhraama-karu bhaji — suvaru- bhakutiya — lanya- dEvate-ya || 16-13 ||
mukhya- phala vai — kuMTha- mukhyaa- |
mukhya- phala maha — raadi- lOkaa- |
mukhya- phala vai — Shayika-veMdari — dati bha-kutiyiM-da ||
rakka-saariya — bhajisu-tali ni- |
rduHkha-naagu ni — raMta-radi more- |
hokka-vara biDa — bhakta- vatsala — bhaara-teesha pi-ta || 16-14 ||
vyaadhi-yiM pee — Dita shi-shuvige gu- |
DOda-kava nere — dadake- ouShadha |
tEdu- kuDisuva — taayi-yOpaa — diyali- sarva-j~ja ||
baada-raayaNa — bhakta- janake pra- |
saada- roopaka — naagi- bhaagava- |
taadi-yali pE — Lidanu- dharmaa — digaLe- phalaveM-du || 16-15 ||
doora-dalliha — parva-ta ghanaa- |
kaara- tOrpudu — nOLpa- janarige |
saara- gaiyyalu — sarpa- vyaaghra — gaLiMda- bhayavihu-du ||
ghOra-tara saM — saara- soukhyaa- |
saara- taraveM — daritu- nitya ra- |
maara-maNanaa — raadhi-suvarada — riMda- ballava-ru || 16-16 ||
kesara- ghaTagaLa — maaDi- bEsige |
bisilo-LiTToNa — gisida-radu ghana- |
rasava- tuMbalu — bahude- sarva swa — taMtra- taaneM-ba ||
pashupa- naranE — nEnu- maaLpaa- |
nashana- daana — snaana- karmaga- |
Losari- pOpavu — baride- dEhaa — yaasa-vane ko-TTu || 16-17 ||
eraDu- deekShega — Lihavu- baahyaaM- |
tarave-nipa naa — madali- budhariM- |
daritu- deekShita — naagu- deergha — dwESha-gaLa bi-TTu ||
hariye- sarvO — ttama kSha-raakShara- |
puruSha- poojita — paada- janmaa- |
dyara vi-doora su — khaatma- sarvaga — neMdu- smarisuti-ru || 16-18 ||
hEya- vastuga — Lilla- Upaa- |
dEya- vastuga — Lilla- nyaayaa- |
nyaaya- dharmaga — Lilla- dwEShaa — sooye- modali-lla ||
taayi-taMdega — Lilla- kamalada- |
Laaya-taakShage — yenalu- eesuva- |
kaayi-yaMdadi — muLuga-goDade bha — vaabdhi- daaTisu-va || 16-19 ||
maMda-naadaru — sariye- gOpI- |
caMda-na shree — mudre-gaLa nala- |
viMda- dharisuta — shreetu-Lasi pa — dmaakSha- saragaLa-nu ||
kaMdha-rada ma — dhyadali- dharisi mu- |
kuMda- shreebhoo — ramaNa- trijaga- |
dwaMdya- sarva — swaami- mama kula — daiva-vene pore-va || 16-20 ||
praaya- dhana mada — diMda- janarige |
naaya-ka prabhu — veMbi- poorvadi |
taaya- poTTeyo — Liralu- prabhuveM — dEke- kareyare-lai ||
kaaya- ninnanu — biTTu- pOgalu |
raaya- neeneM — buva pra-bhutwa pa- |
laaya-navanai — ditu sa-meepada — lidda-rada tO-ru || 16-21 ||
vaasu-dEvai — ka pra-kaaradi |
eesha-nenisuva — brahma- rudra sha- |
ceesha- modalaa — damara-rellaru — daasa-renisuva-ru ||
ee su-maargava — biTTu- so&hamu- |
paasa-neya gai — va nara- dEhaja- |
daishi-ka klE — shagaLu- baralava — nEke- biDisiko-La || 16-22 ||
aa pa-ra bra — hmanali- trijaga-
dwyaapa-katwa ni — yaama-katwa |
sthaapa-katwa va — shitwa- eeshi — twaadi- guNagaLi-ge ||
lOpa-villE — ka pra-kaara swa- |
roopa-venipavu — sarva- kaaladi |
pOpa-vallavu — jeeva-rige daa — satwa-dOpaadi || 16-23 ||
nitya- nootana — nirvi-kaara su- |
hRutta-ma praNa — vastha- varNO- |
tpatti- kaaraNa — vaa~gma-nOmaya — saama- gaanara-ta ||
datta- kapila ha — yaasya- roopadi |
pRuth pRu-thaku jee — varoLa-giddu pra- |
varti-suvanava — ravara- yOgyate — karma-vanusari-si || 16-24 ||
shrutiga-Laatana — maatu- vimala- |
smRutiga-Laatana — shikShe- jeeva- |
pratati — prakRutiga — LeraDu- pratimega — Lenisi- koLutiha-vu ||
itara- karmaga — Lella- lakShmI- |
patige- poojega — LeMdu- smarisuta |
catura- vidha puru — Shaartha-gaLa bE — Dadiru- swapnada-li || 16-25 ||
bhoota-Laadhipa — naaj~ja- dhaaraka- |
doota-rige sE — vaanu-saaradi |
vEta-nava ko — TTavara- saMtO — Shisuva- teradaM-te ||
maata-rishwa — priyanu- parama- |
preeti-poorvaka — sadgu-NaMgaLa |
gaaya-kara saM — tOSha- baDisuva — iha pa-raMgaLa-li || 16-26 ||
deepa- divadali — kaMDa-raadaDe |
lOpa-gaisuva — raakSha-Na hari sa- |
meepa-dallire — naMda- naama su-naMda-venisuva-vu ||
oupa-caarika — valla- sujanara |
paapa- karmavu — puNya-venipavu |
paapi-gaLa sa — tpuNya- karmavu — paapa-venisuva-vu || 16-27 ||
dhanava- saMpaa — disuva- pradraa- |
vaNika-raMdadi — kOvi-dara mane- |
manega-Lali saM — carisu- shaastra — shravaNa-gOsuga-di |
manana- gaidupa — dEshi-suta du- |
rjanara- kooDaa — Dadiru- swapnadi |
praNata- kaamada — koDuva- soukhyaga — Liha pa-raMgaLa-li || 16-28 ||
kaara-ka kriya — dravya- vibhrama |
mooru- vidha jee — varige- bahu saM- |
saara-kivu kaa — raNave-nisuvavu — ella- kaalada-li ||
doora- ODisi — bhraama-katraya |
maari-goLagaa — gadale- sarvaa- |
dhaara-kana ciM — tisuta-liru sa — rvatra- mareyada-le || 16-29 ||
karaNa- karmava — maaDi-dare vi- |
smaraNe- kaaladi — maatu-gaLigu- |
ttarava- koDadale — summa-nippanu — jaaga-raava-sthe ||
karuNi-salu vyaa — paara- maaDuva |
baralu- naalkaa — vasthe-gaLu pari- |
harisi-koLanE — take swa-taMtranu — taane-yeMbuva-nu || 16-30 ||
yukti- maatuga — Lalla- shrutismRu- |
tyukta- maatuga — Livu vi-caarise |
mukti-givu sO — paana-venipavu — prati pra-tI pada-vu ||
bhakti- poorvaka — paThisu-vavarige |
vyakti- koDuva swa — roopa- sukha pravi- |
vikta-ranu maa — Duvanu- bhava bhaya — diMda- bahuroo-pa || 16-31 ||
shreeni-vaasana — suguNa- maNigaLa |
praaNa- mata vayu — naakhya- sootradi |
pONi-sida maa — likeya- vaagmaya — naMsa-garpisi-de ||jaani-gaLa dRu — gwiShaya-vahuda- |
j
j~jaani-gaLige a — sahya- tOrpudu |
maaNi-kava ma — rkaTana- kaiyoLu — koTTa- teranaM-te || 16-32 ||
shreevi-dheera vi — paahi-pEsha sha – |
ceeva-raatma bha — vaarka- shashi di- |
gdEva- RuShi gaM — dharva- kinnara — siddha- saadhya ga-Na ||
sEvi-ta padaaM — bhOja- tatpaa- |
daava-laMbiga — Laada- bhaktara |
kaava- karuNaa — saaMdra- lakShmI — hRutku-muda caM-dra || 16-33 ||
aada-rushava ga — taakSha- bhaaShaa- |
bhEda-diMdali — kareya-ladanu ni- |
ShEdha-gaidava — lOki-sade biDu — vare vi-vEkiga-Lu ||
maadha-vana guNa — pELwa- praakRuta- |
vaada-reyu sari — kELi- paramaa- |
hlaada- baDadi — ppare ni-raMtara — balla- kOvida-ru || 16-34 ||
bhaaska-rana maM — Dalava- kaMDu na- |
maska-risi mO — disade- dwEShadi |
taska-ranu niM — disalu- kuMdahu — dE di-vaakara-ge ||
saMskRu-tavida — lleMdu- kuhaka ti- |
raska-risalE — nahudu- bhakti pu- |
raska-radi kE — Lwarige- olivanu — puShka-raakSha sa-daa || 16-35 ||
patita-na kapaa — ladali- bhaagee- |
rathiya- jalavire — pEya-venipude |
itara- kavi ni — rmita ku-kaavyaa — shraavya- budhariM-da ||
kRutipa-ti kathaa — nwitave-nipa praa- |
kRutave- taa saM — skRutave-nisi sa- |
dgatiya-neevudu — bhakti- poorvaka — kELi- pELwari-ge || 16-36 ||
vEda- shaastra sa — yukti- graMthaga- |
LOdi- kELdava — nalla- saMtata |
saadhu-gaLa saha — vaasa- sallaa — pagaLu- modali-lla ||
mOda- teerthaa — ryara ma-taanuga- |
raada-vara karu — Nadali- pELde ra- |
maadha-va jaga — nnaatha-viThThala — tiLisi-dadaroLa-ge || 16-37 ||
|| iti shree datta swaataMtrya saMdhi saMpoorNaM ||
|| ( iti shree swaataMtrya vibhajana saMdhi saMpoorNaM ) ||
|| shreekRuShNaarpaNamastu ||

Leave a Reply
You must be logged in to post a comment.