05. Vibhuti Sandhi – HKS

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Shri Kesava Rao Tadipatri

English Script

೫. ವಿಭೂತಿ ಸಂಧಿ

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು ||

ಶ್ರೀತ-ರುಣಿವ — ಲ್ಲಭನ- ಪರಮ ವಿ- |
ಭೂತಿ- ರೂಪವ — ಕಂಡ- ಕಂಡ- |
ಲ್ಲೀ ತೆ-ರದಿ ಚಿಂ — ತಿಸುತ- ಮನದಲಿ — ನೋಡು- ಸಂಭ್ರಮ-ದಿ ||
ನೀತ- ಸಾಧಾ — ರಣ ವಿ-ಶೇಷ ಸ- |
ಜಾತಿ- ನೈಜಾ — ಹಿತವು- ಸಹಜ ವಿ- |
ಜಾತಿ- ಖಂಡಾ — ಖಂಡ- ಬಗೆಗಳ — ನರಿತು- ಬುಧರಿಂ-ದ || ೫-೧ ||

ಜಲಧ-ರಾಗಸ — ದೊಳಗೆ- ಚರಿಸುವ |
ಹಲವು- ಜೀವರ — ನಿರ್ಮಿ-ಸಿಹನದ- |
ರೊಳು ಸ-ಜಾತಿ ವಿ — ಜಾತಿ- ಸಾಧಾ — ರಣ ವಿ-ಶೇಷಗ-ಳ ||
ತಿಳಿದು- ತತ್ತತ್ — ಸ್ಥಾನ-ದೊಳು ವೆ- |
ಗ್ಗಳಿಸಿ- ಹಬ್ಬಿದ — ಮನದಿ- ಪೂಜಿಸು- |
ತಲವ- ವ್ಯಾಪ್ತನ — ರೂಪ-ಗಳ ನೋ — ಡುತಲೆ- ಹಿಗ್ಗುತಿ-ರು || ೫-೨ ||

ಪ್ರತಿಮೆ- ಸಾಲ — ಗ್ರಾಮ- ಗೋಽಭ್ಯಾ- |
ಗತ ಅ-ತಿಥಿ ಶ್ರೀ — ತುಳಸಿ- ಪಿಪ್ಪಲ |
ಯತಿ ವ-ನಸ್ಥ ಗೃ — ಹಸ್ಥ- ವಟು ಯಜ — ಮಾನ- ಸ್ವಪರಜ-ನ ||
ಪೃಥಿವಿ- ಜಲ ಶಿಖಿ — ಪವನ- ತಾರಾ- |
ಪಥ ನ-ವಗ್ರಹ — ಯೋಗ- ಕರಣ ಭ |
ತಿಥಿ ಸಿ-ತಾಸಿತ — ಪಕ್ಷ- ಸಂಕ್ರಮ — ಅವನ-ಧಿಷ್ಠಾ-ನ || ೫-೩ ||

ಕಾದ- ಕಾಂಚನ — ದೊಳಗೆ- ಶೋಭಿಪ |
ಆದಿ-ತೇಯಾ — ಸ್ಯನ ತೆ-ರದಿ ಲ-
ಕ್ಷ್ಮೀಧ-ವನು ಪ್ರತಿ — ದಿನದಿ- ಶಾಲ — ಗ್ರಾಮ-ದೊಳಗಿ-ಪ್ಪ ||
ಐದು- ಸಾವಿರ — ಮೇಲೆ- ಮೂವ- |
ತ್ತೈದ-ಧಿಕ ಐ — ನೂರು- ರೂಪದಿ |
ಭೂಧ-ರಗಳಭಿ — ಮಾನಿ- ದಿವಿಜರೊ — ಳಿಪ್ಪ-ನನವರ-ತ || ೫-೪ ||

ಶ್ರೀರ-ಮಣ ಪ್ರತಿ — ಮೆಗಳೊ-ಳಗೆ ಹದಿ- |
ಮೂರ-ಧಿಕವಾ — ಗಿಪ್ಪ- ಮೇಲೈ- |
ನೂರು- ರೂಪವ — ಧರಿಸಿ- ಇಪ್ಪನು — ಆಹಿ-ತಾಚಲ-ದಿ ||
ದಾರು- ಮಥನವ — ಗೈಯೆ- ಪಾವಕ |
ತೋರು-ವಂತೆ ಪ್ರ — ತೀಕ- ಸುರರೊಳು |
ತೋರು-ತಿಪ್ಪನು — ತತ್ತ-ದಾಕಾ — ರದಲಿ- ನೋಳ್ಪರಿ-ಗೆ || ೫-೫ ||

ಕರಣ- ನೀಯಾ — ಮಕನು- ತಾನುಪ |
ಕರಣ-ದೊಳಗೈ — ವತ್ತೆ-ರಡು ಸಾ- |
ವಿರದ- ಹದಿನಾ — ಲ್ಕಧಿಕ- ಶತ ರೂ — ಪಂಗ-ಳನೆ ಧರಿ-ಸಿ ||
ಇರುತಿ-ಹನು ತದ್ — ರೂಪ- ನಾಮಗ- |
ಳರಿತು- ಪೂಜಿಸು — ತಿಹರ- ಪೂಜೆಯ |
ನಿರುತ- ಕೈಗೊಂ — ಬನು ತೃ-ಷಾರ್ತನು — ಜಲವ- ಕೊಂಬಂ-ತೆ || ೫-೬ ||

ಬಿಂಬ- ರೂಪನು — ಈ ತೆ-ರದಿ ಜಡ |
ಪೊಂಬ-ಸುರ ಮೊದ — ಲಾದ- ಸುರರೊಳ- |
ಗಿಂಬು-ಗೊಂಡಿಹ — ನೆಂದ-ರಿದು ಧ — ರ್ಮಾರ್ಥ- ಕಾಮಗ-ಳ ||
ಹಂಬ-ಲಿಸದನು — ದಿನದಿ- ವಿಶ್ವಕು- |
ಟುಂಬಿ- ಕೊಟ್ಟ ಕ — ಣಾನ್ನ- ಕುತ್ಸಿತ- |
ಕಂಬ-ಳಿಯೆ ಸೌ — ಭಾಗ್ಯ-ವೆಂದವ — ನಂಘ್ರಿ-ಗಳ ಭಜಿ-ಸು || ೫-೭ ||

ವಾರಿ-ಯೊಳಗಿ — ಪ್ಪತ್ತು- ನಾಲಕು |
ಮೂರೆ-ರಡು ಸಾ — ವಿರದ- ಮೇಲ್ಮು- |
ನ್ನೂರು- ಹದಿನೇ — ಳೆನಿಪ- ರೂಪವು — ಶ್ರೀತು-ಳಸಿ ದಳ-ದಿ |
ನೂರ- ಅರವ — ತ್ತೊಂದು- ಪುಷ್ಪದಿ |
ಮೂರ-ಧಿಕ ದಶ — ದೀಪ-ದೊಳು ನಾ- |
ನೂರು-ಮೂರು ಸು — ಮೂರ್ತಿ-ಗಳು ಗಂ — ಧದೊಳ-ಗಿರುತಿಹ-ವು || ೫-೮ ||

ಅಷ್ಟ-ದಳ ಸದ್ — ಹೃದಯ- ಕಮಲಾ- |
ಧಿಷ್ಠಿ-ತನು ತಾ — ನಾಗಿ- ಸರ್ವೋ- |
ತ್ಕೃಷ್ಟ- ಮಹಿಮನು — ದಳಗ-ಳಲಿ ಸಂ — ಚರಿಸು-ತೊಳಗಿ-ದ್ದು ||
ದುಷ್ಟ-ರಿಗೆ ದು — ರ್ಬುದ್ಧಿ- ಕರ್ಮ ವಿ- |
ಶಿಷ್ಟ-ರಿಗೆ ಸು — ಜ್ಞಾನ- ಧರ್ಮ ಸು- |
ಪುಷ್ಟಿ- ಗೈಸುತ — ಸಂತ-ಯಿಪ ನಿ — ರ್ದುಷ್ಟ- ಸುಖ ಪೂ-ರ್ಣ || ೫-೯ ||

ವಿತ್ತ- ದೇಹಾ — ಗಾರ- ದಾರಾ- |
ಪತ್ಯ- ಮಿತ್ರಾ — ದಿಗಳೊ-ಳಗೆ ಗುಣ – |
ಚಿತ್ತ- ಬುದ್ಧ್ಯಾ — ದಿಂದ್ರಿ-ಯಗಳೊಳು — ಜ್ಞಾನ- ಕರ್ಮದೊ-ಳು ||
ತತ್ತ-ದಾಹ್ವಯ — ನಾಗಿ- ಕರೆಸುತ |
ಸತ್ಯ- ಸಂಕ — ಲ್ಪಾನು-ಸಾರದಿ |
ನಿತ್ಯ-ದಲಿ ತಾ — ಮಾಡಿ- ಮಾಡಿಪ — ನೆಂದು- ಸ್ಮರಿಸುತಿ-ರು || ೫-೧೦ ||

ಭಾವ- ದ್ರವ್ಯ — ಕ್ರಿಯೆಗ-ಳೆನಿಸುವ |
ಈ ವಿ-ಧಾದ್ವೈ — ತತ್ರ-ಯಂಗಳ |
ಭಾವಿ-ಸುತ ಸದ್ — ಭಕ್ತಿ-ಯಲಿ ಸ — ರ್ವತ್ರ- ಮರೆಯದ-ಲೆ ||
ತಾವ-ಕನು ತಾ — ನೆಂದು- ಪ್ರತಿದಿನ |
ಸೇವಿ-ಸುವ ಭ — ಕ್ತರಿಗೆ- ತನ್ನನು |
ಈವ- ಕಾವ ಕೃ — ಪಾಳು- ಕರಿವರ — ಗೊಲಿದ- ತೆರದಂ-ತೆ || ೫-೧೧ ||

ಬಾಂದ-ಳವೆ ಮೊದ — ಲಾದು-ದರೊಳೊಂ- |
ದೊಂದ-ರಲಿ ಪೂ — ಜಾ ಸು-ಸಾಧನ- |
ವೆಂದೆ-ನಿಸುವ ಪ — ದಾರ್ಥ-ಗಳು ಬಗೆ — ಬಗೆಯ- ನೂತನ-ದಿ ||
ಸಂದ-ಣಿಸಿ ಕೊಂ — ಡಿಹವು- ಧ್ಯಾನಕೆ |
ತಂದಿ-ನಿತು ಚಿಂ — ತಿಸಿ ಸ-ದಾ ಗೋ – |
ವಿಂದ-ಗರ್ಪಿಸಿ — ನೋಡು- ನಲಿನಲಿ — ದಾಡು- ಕೊಂಡಾ-ಡು || ೫-೧೨ ||

ಜಲಜ- ನಾಭನ — ಮೂರ್ತಿ- ಮನದಲಿ |
ನೆಲೆಗೊ-ಳಿಸಿ ನಿ — ಶ್ಚಲ ಭ-ಕುತಿಯಲಿ |
ಚಳಿ ಬಿ-ಸಿಲು ಮಳೆ — ಗಾಳಿ-ಗಳ ನಿಂ — ದಿಸದೆ- ನಿತ್ಯದ-ಲಿ ||
ನೆಲದ-ಲಿಹ ಗಂ — ಧವೆ ಸು-ಗಂಧವು |
ಜಲವೆ- ರಸ ರೂ — ಪವೆ ಸು-ದೀಪವು |
ಯಲರು- ಚಾಮರ — ಶಬ್ದ- ವಾದ್ಯಗ — ಳರ್ಪಿ-ಸಲು ಒಲಿ-ವ || ೫-೧೩ ||

ಗೋಳ-ಕಗಳೆ ರ — ಮಾರ-ಮಣನ ನಿ- |
ಜಾಲ-ಯಗಳನು — ದಿನದಿ- ಸಂಪ್ರ- |
ಕ್ಷಾಳ-ನೆಯೆ ಸ — ಮ್ಮಾರ್ಜ-ನವು ಕರ — ಣಗಳೆ- ದೀಪಗ-ಳ ||
ಸಾಲು- ತತ್ತ — ದ್ವಿಷಯ-ಗಳ ಸ- |
ಮ್ಮೇಳ-ನವೆ ಪರಿ — ಯಂಕ- ತತ್ಸುಖ- |
ದೇಳಿ-ಗೆಯೆ ಸು — ಪ್ಪತ್ತಿ-ಗಾತ್ಮ ನಿ — ವೇದ-ನವೆ ವಸ-ನ || ೫-೧೪ ||

ಪಾಪ- ಕರ್ಮವು — ಪಾದು-ಕೆಗಳನು- |
ಲೇಪ-ನವು ಸ — ತ್ಪುಣ್ಯ- ಶಾಸ್ತ್ರಾ- |
ಲಾಪ-ನವೆ ಶ್ರೀ — ತುಳಸಿ- ಸುಮನೋ — ವೃತ್ತಿ-ಗಳೆ ಸುಮ-ನ ||
ಕೋಪ- ಧೂಪವು — ಭಕ್ತಿ- ಭೂಷಣ |
ವ್ಯಾಪಿ-ಸಿದ ಸ — ದ್ಬುದ್ಧಿ- ಛತ್ರವು |
ದೀಪ-ವೇ ಸು — ಜ್ಞಾನ- ಆರಾ — ರ್ತಿಗಳೆ- ಗುಣಕಥ-ನ || ೫-೧೫ ||

ಮನ ವ-ಚನ ಕಾ — ಯಕ ಪ್ರ-ದಕ್ಷಿಣೆ |
ಅನುದಿ-ನದಿ ಸ — ರ್ವತ್ರ- ವ್ಯಾಪಕ |
ವನರು-ಹೇಕ್ಷಣ — ಗರ್ಪಿ-ಸುತ ಮೋ — ದಿಸುತ-ಲಿರು ಸತ-ತ |
ಅನುಭ-ವಕೆ ತಂ — ದುಕೊ ಸ-ಕಲ ಸಾ- |
ಧನಗ-ಳೊಳಗಿದು — ಮುಖ್ಯ- ಪಾಮರ- |
ಮನುಜ-ರಿಗೆ ಪೇ — ಳಿದರೆ- ತಿಳಿಯದು — ಬುಧರಿ-ಗಲ್ಲದ-ಲೆ || ೫-೧೬ ||

ಚತುರ-ವಿಧ ಪುರು — ಷಾರ್ಥ- ಪಡೆವರೆ |
ಚತುರ-ದಶ ಲೋ — ಕಗಳ- ಮಧ್ಯದೊ- |
ಳಿತರು-ಪಾಯಗ — ಳಿಲ್ಲ- ನೋಡಲು — ಸಕಲ- ಶಾಸ್ತ್ರದ-ಲಿ ||
ಸತತ- ವಿಷಯೇಂ — ದ್ರಿಯಗ-ಳಲಿ ಪ್ರವಿ- |
ತತನೆ-ನಿಸಿ ರಾ — ಜಿಸುವ- ಲಕ್ಷ್ಮೀ- |
ಪತಿಗೆ- ಸರ್ವ ಸ — ಮರ್ಪ-ಣೆಯೆ ಮಹ — ಪೂಜೆ- ಸದುಪಾ-ಯ || ೫-೧೭ ||

ಗೋಳ-ಕವೆ ಕುಂ — ಡಾಗ್ನಿ- ಕರಣವು |
ಮೇಲೊ-ದಗಿಬಹ — ವಿಷಯ- ಸಮಿಧೆಯು |
ಗಾಳಿ- ಯತ್ನವು — ಕಾಮ- ಧೂಮವು — ಸನ್ನಿ-ಧಾನಾ-ರ್ಚಿ ||
ಮೇಳ-ನವೆ ಪ್ರ — ಜ್ವಾಲೆ- ಕಿಡಿಗಳು |
ತೂಳಿ-ದಾನಂ — ದಗಳು- ತತ್ತ -|
ತ್ಕಾಲ- ಮಾತುಗ — ಳೆಲ್ಲ- ಮಂತ್ರಾ — ಧ್ಯಾತ್ಮ- ಯಜ್ಞವಿ-ದು || ೫-೧೮ ||

ಮಧುವಿ-ರೋಧಿಯ — ಪಟ್ಟ-ಣಕೆ ಪೂ -|
ರ್ವದ ಕ-ವಾಟಗ — ಳಕ್ಷಿ- ನಾಸಿಕ- |
ವದನ- ಶ್ರೋತ್ರಗ — ಳೆರಡು- ದಕ್ಷಿಣ — ಉತ್ತ-ರ ದ್ವಾ-ರ ||
ಗುದ ಉ-ಪಸ್ಥಗ — ಳೆರಡು- ಪಶ್ಚಿಮ- |
ಕದಗ-ಳೆನಿಪವು — ಷಟ್ ಸ-ರೋಜವೆ |
ಸದನ- ಹೃದಯವೆ — ಮಂಟ-ಪಂಗಳು — ತ್ರಿಗುಣ-ಗಳೆ ಕಲ-ಶ || ೫-೧೯ ||

ಧಾತು-ಗಳೆ ಸ — ಪ್ತಾವ-ರಣ ಉಪ- |
ವೀಥಿ-ಗಳು ನಾ — ಡಿಗಳು- ಮದಗಳು |
ಯೂಥ-ಪಗಳು ಸು — ಷುಮ್ನ- ನಾಡಿಯೆ — ರಾಜ- ಪಂಥಾ-ನ ||
ಈ ತ-ನೂರು — ಹಗಳೆ- ವನಂಗಳು |
ಮಾತ-ರಿಶ್ವನು — ಪಂಚ- ರೂಪದಿ |
ಪಾತ-ಕಗಳೆಂ — ಬರಿಗ-ಳನು ಸಂ — ಹರಿಪ- ತಳವಾ-ರ || ೫-೨೦ ||

ಇನಶ-ಶಾಂಕಾ — ದಿಗಳು- ಲಕ್ಷ್ಮೀ- |
ವನಿತೆ-ಯರಸನ — ದ್ವಾರ-ಪಾಲಕ –
ರೆನಿಸು-ತಿಪ್ಪರು — ಮನದ- ವೃತ್ತಿಗ — ಳೇ ಪ-ದಾತಿಗ-ಳು ||
ಅನುಭ-ವಿಪ ವಿಷ — ಯಂಗ-ಳೇ ಪ- |
ಟ್ಟಣಕೆ- ಬಪ್ಪ ಪ — ಸಾರ-ಗಳು ಜೀ- |
ವನೆ ಸು-ವರ್ತಕ — ಕಪ್ಪ-ಗಳ ಕೈ — ಕೊಂಬ- ಹರಿ ತಾ-ನು || ೫-೨೧ ||

ಉರುಪ-ರಾಕ್ರಮ — ನರಮ-ನೆಗೆ ದಶ – |
ಕರಣ-ಗಳೆ ಕ — ನ್ನಡಿಯ- ಸಾಲುಗ- |
ಳರವಿ-ದೂರನ — ಸದ್ವಿ-ಹಾರಕೆ — ಚಿತ್ತ- ಮಂಟಪ-ವು ||
ಮರಳಿ- ಬೀಸುವ — ಶ್ವಾಸ-ಗಳು ಚಾ- |
ಮರ ವಿ-ಲಾಸಿನಿ — ಬುದ್ಧಿ- ದಾಮೋ- |
ದರಗೆ- ಸಾಷ್ಟಾಂ — ಗ ಪ್ರ-ಣಾಮಗ — ಳೇ ಸು-ಶಯನಗ-ಳು || ೫-೨೨ ||

ಮಾರ-ಮಣನರ — ಮನೆಗೆ- ಸುಮಹಾ- |
ದ್ವಾರ-ವೆನಿಸುವ — ವದನ-ಕೊಪ್ಪುವ |
ತೋರ-ಣ ಶ್ಮ — ಶ್ರುಗಳು- ಕೇಶಗ — ಳೇ ಪ-ತಾಕೆಗ-ಳು ||
ಊರಿ-ನಡೆವಂ — ಘ್ರಿಗಳು- ಜಂಘೆಗ- |
ಳೂರು- ಮಧ್ಯೋ — ದರ ಶಿ-ರಗಳಾ- |
ಗಾರ-ದುಪ್ಪರಿ — ಗೆಗಳು- ಕೋಶಗ — ಳೈದು- ಕೋಣೆಗ-ಳು || ೫-೨೩ ||

ಈ ಶ-ರೀರವೆ — ರಥ ಪ-ತಾಕ ಸು- |
ವಾಸ-ಗಳು ಪುಂ — ಡ್ರಗಳು- ಧ್ವಜ ಸಿಂ- |
ಹಾಸ-ನವೆ ಚಿ — ತ್ತವು ಸು-ಬುದ್ಧಿಯೆ — ಕಲಶ- ಸನ್ಮನ-ವು ||
ಪಾಶ-ಗುಣ ದಂ — ಡತ್ರ-ಯಗಳು ಶು- |
ಭಾಶು-ಭದ್ವಯ — ಕರ್ಮ- ಚಕ್ರ ಮ- |
ಹಾ ಸ-ಮರ್ಥಾ — ಶ್ವಗಳು- ದಶಕರ — ಣಂಗ-ಳೆನಿಸುವ-ವು || ೫-೨೪ ||

ಮಾತ-ರಿಶ್ವನು — ದೇಹ-ರಥದೊಳು |
ಸೂತ-ನಾಗಿಹ — ಸರ್ವ-ಕಾಲದಿ |
ಶ್ರೀತ-ರುಣಿ ವ — ಲ್ಲಭ ರ-ಥಿಕನೆಂ — ದರಿದು- ನಿತ್ಯದ-ಲಿ ||
ಪ್ರೀತಿ-ಯಿಂದಲಿ — ಪೋಷಿ-ಸುತ ವಾ- |
ತಾತ-ಪಾದಿಗ — ಳಿಂದ-ಲವಿರತ |
ಈ ತ-ನುವಿನೊಳು — ಮಮತೆ- ಬಿಟ್ಟವ — ನವನೆ- ಮಹಯೋ-ಗಿ || ೫-೨೫ ||

ಭವವೆ-ನಿಪ ವನ — ಧಿಯೊಳು- ಕರ್ಮ- |
ಪ್ರವಹ-ದೊಳು ಸಂ — ಚರಿಸು-ತಿಹ ದೇ- |
ಹವ ಸು-ನಾವೆಯ — ಮಾಡಿ- ತನ್ನವ — ರಿಂದ-ಲೊಡಗೂ-ಡಿ ||
ದಿವಸ-ದಿವಸಗ — ಳಲ್ಲಿ- ಲಕ್ಷ್ಮೀ- |
ಧವನು- ಕ್ರೀಡಿಪ — ನೆಂದು- ಚಿಂತಿಸೆ |
ಪವನ-ನಯ್ಯ ಭ — ವಾಬ್ಧಿ- ದಾಟಿಸಿ — ಪರಮ- ಸುಖವೀ-ವ || ೫-೨೬ ||

ಆಪ-ಣಾಲಯ — ಗತ ಪ-ದಾರ್ಥವು |
ಸ್ತ್ರೀಪು-ರುಷರುಗ — ಳಿಂದ್ರಿ-ಯಗಳಲಿ |
ದೀಪ- ಪಾವಕ — ರೊಳಗಿ-ಡುವ ತೈ — ಲಾದಿ- ದ್ರವ್ಯಗ-ಳ ||
ಆ ಪ-ರಮಗವ — ದಾನ-ವೆಂದು ಪ- |
ದೇ ಪ-ದೇ ಮರೆ — ಯದಲೆ- ಸ್ಮರಿಸುತ |
ಭೂಪ-ನಂದದಿ — ಸಂಚ-ರಿಸು ನಿ — ರ್ಭಯದಿ- ಸರ್ವ-ತ್ರ || ೫-೨೭ ||

ವಾರಿ-ಜ ಭವಾಂ — ಡವೆ ಸು-ಮಂಟಪ |
ಮೇರು-ಗಿರಿ ಸಿಂ — ಹಾಸ-ನವು ಭಾ- |
ಗೀರ-ಥಿಯೆ ಮ — ಜ್ಜನವು- ದಿಗ್ವ — ಸ್ತ್ರಗಳು- ನುಡಿ ಮಂ-ತ್ರ ||
ಭೂರು-ಹಜ ಫಲ — ಪುಷ್ಪ- ಗಂಧ ಸ- |
ಮೀರ- ಶಶಿರವಿ — ದೀಪ- ಭೂಷಣ |
ತಾರ-ಕೆಗಳೆಂ — ದರ್ಪಿ-ಸಲು ಕೈ — ಕೊಂಡು- ಮನ್ನಿಸು-ವ || ೫-೨೮ ||

ಭೂಸು-ರರೊಳಿ — ಪ್ಪಬ್ಜ- ಭವನೊಳು |
ವಾಸು-ದೇವನು — ವಾಯು- ಖಗಪ ಸ- |
ದಾಶಿ-ವಹಿಪೇಂ — ದ್ರನು ವಿ-ವಸ್ವಾ — ನ್ನಾಮ-ಕಾ ಸೂ-ರ್ಯ ||
ಭೇಶ- ಕಾಮಮ — ರಾಸ್ಯ- ವರುಣಾ- |
ದೀ ಸು-ರರು ಕ್ಷ — ತ್ರಿಯರೊ-ಳಿಪ್ಪರು |
ವಾಸ-ವಾಗಿಹ — ಸಂಕ-ರುಷಣನ — ನೋಡಿ- ಮೋದಿಪ-ರು || ೫-೨೯ ||

ಮೀನ- ಕೇತನ — ತನಯ- ಪ್ರಾಣಾ – |
ಪಾನ- ವ್ಯಾನೋ — ದಾನ- ಮುಖ್ಯೈ- |
ಕೋನ- ಪಂಚಾ — ಶನ್ಮ-ರುದ್ಗಣ — ರುದ್ರ- ವಸುಗಣ-ರು ||
ಮೇನ-ಕಾತ್ಮಜ — ಕುವರ- ವಿಷ್ವ- |
ಕ್ಸೇನ- ಧನಪಾ — ದ್ಯನಿಮಿ-ಷರನು ಸ- |
ದಾನು-ರಾಗದಿ — ಧೇನಿ-ಪುದು ವೈ — ಶ್ಯರೊಳು- ಪ್ರದ್ಯು-ಮ್ನ || ೫-೩೦ ||

ಇರುತಿ-ಹರು ನಾ — ಸತ್ಯ-ದಸ್ರರು |
ನಿರಋ-ತಿಯು ಯಮ — ಧರ್ಮ- ಯಮಕಿಂ- |
ಕರರು- ಮೇದಿನಿ — ಕಾಲ- ಮೃತ್ಯು ಶ — ನೈಶ್ಚ-ರಾದಿಗ-ಳು ||
ಕರೆಸಿ-ಕೊಂಬರು — ಶೂದ್ರ-ರೆಂದನ- |
ವರತ- ಶೂದ್ರರೊ — ಳಿಪ್ಪ-ರಿವರೊಳ- |
ಗರವಿ-ದೂರನಿ — ರುದ್ಧ-ನಿಹನೆಂ — ದರಿದು- ಮನ್ನಿಪು-ದು || ೫-೩೧ ||

ವೀತ-ಭಯ ನಾ — ರಾಯ-ಣ ಚತು- |
ಷ್ಪಾತು- ತಾನೆಂ — ದೆನಿಸಿ- ತತ್ತ- |
ಜ್ಜಾತಿ- ಧರ್ಮ ಸು — ಕರ್ಮ-ಗಳ ತಾ — ಮಾಡಿ- ಮಾಡಿಸು-ತ ||
ಚೇತ-ನರ ಒಳ — ಹೊರಗೆ- ಓತ- |
ಪ್ರೋತ-ನಾಗಿ — ದ್ದೆಲ್ಲ-ರಿಗೆ ಸಂ- |
ಪ್ರೀತಿ-ಯಲಿ ಧ — ರ್ಮಾರ್ಥ- ಕಾಮಾ — ದಿಗಳ- ಕೊಡುತಿಹ-ನು || ೫-೩೨ ||

ನಿಧನ- ಧನದ ವಿ — ಧಾತ- ವಿಗತಾ- |
ಭ್ಯಧಿಕ- ಸಮ ಸಮ — ವರ್ತಿ- ಸಾಮಗ |
ತ್ರಿದಶ-ಗಣಸಂ — ಪೂಜ್ಯ- ತ್ರಿಕಕು — ದ್ಧಾಮ- ಶುಭನಾ-ಮ ||
ಮಧುಮ-ಥನ ಭೃಗು — ರಾಮ- ಘೋಟಕ- |
ವದನ- ಸರ್ವ ಪ — ದಾರ್ಥ-ದೊಳು ತುದಿ- |
ಮೊದಲು- ತುಂಬಿಹ — ನೆಂದು- ಚಿಂತಿಸು — ಬಿಂಬ-ರೂಪದ-ಲಿ || ೫-೩೩ ||

ಕನ್ನ-ಡಿಯ ಕೈ — ವಿಡಿದು- ನೋಡಲು – |
ತನ್ನಿ-ರವು ಸ — ವ್ಯಾಪ- ಸವ್ಯದಿ |
ಕಣ್ಣಿ-ಗೊಪ್ಪುವ — ತೆರದಿ- ಅನಿರು — ದ್ಧನಿಗೆ- ಈ ಜಗ-ವು ||
ಭಿನ್ನ- ಭಿನ್ನವೆ — ತೋರು-ತಿಪ್ಪುದು |
ಜನ್ಯ-ವಾದುದ — ರಿಂದ- ಪ್ರತಿಬಿಂ- |
ಬನ್ನ-ಮಯಗಾ — ನೆಂದ-ರಿದು ಪೂ — ಜಿಸಲು- ಕೈಕೊಂ-ಬ || ೫-೩೪ ||

ಬಿಂಬ-ರೆನಿಪರು — ಸ್ವೋತ್ತ-ಮರು ಪ್ರತಿ- |
ಬಿಂಬ-ರೆನಿಪರು — ಸ್ವಾವ-ರರು ಪ್ರತಿ- |
ಬಿಂಬ- ಬಿಂಬಗ — ಳೊಳಗೆ- ಕೇವಲ — ಬಿಂಬ- ಹರಿಯೆಂ-ದು ||
ಸಂಭ್ರ-ಮದಿ ಪಾ — ಡುತಲಿ- ನೋಡುತ |
ಉಂಬು-ಡುವುದಿಡು — ವುದು ಕೊ-ಡುವುದೆ- |
ಲ್ಲಂಬು-ಜಾಂಬಕ — ನಂಘ್ರಿ- ಪೂಜೆಗ — ಳೆಂದು- ನಲಿದಾ-ಡು || ೫-೩೫ ||

ನದಿಯ- ಜಲ ನದಿ — ಗೆರೆವ- ತೆರದಂ- |
ದದಲಿ- ಭಗವ — ದ್ದತ್ತ- ಧರ್ಮಗ- |
ಳುದಧಿ-ಶಯನನಿ — ಗರ್ಪಿ-ಸುತ ವ್ಯಾ — ವೃತ್ತ- ನೀನಾ-ಗಿ ||
ವಿಧಿನಿ-ಷೇಧಾ — ದಿಗಳಿ-ಗೊಳಗಾ- |
ಗದಲೆ- ಮಾಡುತ — ದರ್ವಿ-ಯಂದದಿ |
ಪದುಮ-ನಾಭನ — ಸಕಲ- ಕರ್ಮಗ — ಳಲ್ಲಿ- ನೆನೆವುತಿ-ರು || ೫-೩೬ ||

ಅರಿಯ-ದಿದ್ದರು — ಎಮ್ಮೊ-ಳಿದ್ದನ- |
ವರತ- ವಿಷಯಗ — ಳುಂಬ- ಜ್ಞಾನೋ- |
ತ್ತರದಿ- ತನಗ — ರ್ಪಿಸಲು- ಚಿತ್ಸುಖ — ವಿತ್ತು- ಸಂತೈ-ಪ ||
ಸರಿತು- ಕಾಲ — ಪ್ರವಹ-ಗಳು ಕಂ- |
ಡರೆಯು- ಸರಿ ಕಾ — ಣದಿರೆ- ಪರಿವವು |
ಮರಳಿ- ಮಜ್ಜನ — ಪಾನ- ಕರ್ಮಗ — ಳಿಂದ- ಸುಖವಿಹ-ವು || ೫-೩೭ ||

ಏನು- ಮಾಡುವ — ಕರ್ಮ-ಗಳು ಲ- |
ಕ್ಷ್ಮೀನಿ-ವಾಸನಿ — ಗರ್ಪಿ-ಸನು ಸಂ -|
ಧಾನ- ಪೂರ್ವ ಕ — ದಿಂದ- ಸಂದೇ — ಹಿಸದೆ- ದಿನದಿನ-ದಿ ||
ಮಾನ-ನಿಧಿ ಕೈ — ಕೊಂಡು- ಸುಖವಿ- |
ತ್ತಾನ-ತರ ಸಂ — ತೈಪ- ತೃಣಜಲ |
ಧೇನು- ತಾನುಂ — ಡನವ-ರತ ಪಾ — ಲ್ಗರೆವ- ತೆರದಂ-ತೆ || ೫-೩೮ ||

ಪೂರ್ವ- ದಕ್ಷಿಣ — ಪಶ್ಚಿ-ಮೋತ್ತರ |
ಪಾರ್ವ-ತೀಪತಿ — ಅಗ್ನಿ- ವಾಯು ಸು- |
ಶಾರ್ವ-ರೀಚರ — ದಿಗ್ವ-ಲಯದೊಳು — ಹಂಸ- ನಾಮಕ-ನು ||
ಸರ್ವ-ಕಾಲದಿ — ಸರ್ವ-ರೊಳು ಸುರ- |
ಸಾರ್ವ-ಭೌಮನು — ಸ್ವೇಚ್ಛೆ-ಯಲಿ ಮ- |
ತ್ತೋರ್ವ-ರಿಗೆ ಗೋ — ಚರಿಸ-ದವ್ಯ — ಕ್ತಾತ್ಮ-ನೆಂದೆನಿ-ಪ || ೫-೩೯ ||

ಪರಿ ಇ- ಡಾವ — ತ್ಸರನು- ಸಂವ – |
ತ್ಸರದೊ-ಳನಿರು — ದ್ಧಾದಿ- ರೂಪವ |
ಧರಿಸಿ- ಬಾರ್ಹ — ಸ್ಪತ್ಯ- ಸೌರಭ — ಚಾಂದ್ರ-ಮನು ಎನಿ-ಸಿ ||
ಇರುತಿ-ಹ ಜಗ — ನ್ನಾಥ-ವಿಠ್ಠಲ |
ಸ್ಮರಿಸು-ವವರನು — ಸಂತ-ಯಿಪನೆಂ- |
ದುರುಪ-ರಾಕ್ರಮ — ಉಚಿತ- ಸಾಧನ — ಯೋಗ್ಯ-ತೆಯನರಿ-ತು || ೫-೪೦ ||

|| ಇತಿ ಶ್ರೀ ವಿಭೂತಿ ಸಂಧಿ ಸಂಪೂರ್ಣಂ ||
|| ಶ್ರೀ ಕೃಷ್ಣಾರ್ಪಣಮಸ್ತು ||

06. Panchamaha yagna Sandhi


  1. vibhooti saMdhi

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du ||

shreeta-ruNiva — llabhana- parama vi- |
bhooti- roopava — kaMDa- kaMDa- |
llI te-radi ciM — tisuta- manadali — nODu- saMbhrama-di ||
neeta- saadhaa — raNa vi-shESha sa- |
jaati- naijaa — hitavu- sahaja vi- |
jaati- khaMDaa — khaMDa- bagegaLa — naritu- budhariM-da || 5-1 ||

jaladha-raagasa — doLage- carisuva |
halavu- jeevara — nirmi-sihanada- |
roLu sa-jaati vi — jaati- saadhaa — raNa vi-shEShaga-La ||
tiLidu- tattat — sthaana-doLu ve- |
ggaLisi- habbida — manadi- poojisu- |
talava- vyaaptana — roopa-gaLa nO — Dutale- higguti-ru || 5-2 ||

pratime- saala — graama- gO&bhyaa- |
gata a-tithi shree — tuLasi- pippala |
yati va-nastha gRu — hastha- vaTu yaja — maana- swaparaja-na ||
pRuthivi- jala shikhi — pavana- taaraa- |
patha na-vagraha — yOga- karaNa bha |
tithi si-taasita — pakSha- saMkrama — avana-dhiShThaa-na || 5-3 ||

kaada- kaaMcana — doLage- shObhipa |
aadi-tEyaa — syana te-radi la-
kShmIdha-vanu prati — dinadi- shaala — graama-doLagi-ppa ||
aidu- saavira — mEle- moova- |
ttaida-dhika ai — nooru- roopadi |
bhoodha-ragaLabhi — maani- divijaro — Lippa-nanavara-ta || 5-4 ||

shreera-maNa prati — megaLo-Lage hadi- |
moora-dhikavaa — gippa- mElai- |
nooru- roopava — dharisi- ippanu — aahi-taacala-di ||
daaru- mathanava — gaiye- paavaka |
tOru-vaMte pra — teeka- suraroLu |
tOru-tippanu — tatta-daakaa — radali- nOLpari-ge || 5-5 ||

karaNa- neeyaa — makanu- taanupa |
karaNa-doLagai — vatte-raDu saa- |
virada- hadinaa — lkadhika- shata roo — paMga-Lane dhari-si ||
iruti-hanu tad — roopa- naamaga- |
Laritu- poojisu — tihara- poojeya |
niruta- kaigoM — banu tRu-Shaartanu — jalava- koMbaM-te || 5-6 ||

biMba- roopanu — ee te-radi jaDa |
poMba-sura moda — laada- suraroLa- |
giMbu-goMDiha — neMda-ridu dha — rmaartha- kaamaga-La ||
haMba-lisadanu — dinadi- vishwaku- |
TuMbi- koTTa ka — Naanna- kutsita- |
kaMba-Liye sou — bhaagya-veMdava — naMghri-gaLa bhaji-su || 5-7 ||

vaari-yoLagi — ppattu- naalaku |
moore-raDu saa — virada- mElmu- |
nnooru- hadinE — Lenipa- roopavu — shreetu-Lasi daLa-di |
noora- arava — ttoMdu- puShpadi |
moora-dhika dasha — deepa-doLu naa- |
nooru-mooru su — moorti-gaLu gaM — dhadoLa-girutiha-vu || 5-8 ||

aShTa-daLa sad — hRudaya- kamalaa- |
dhiShThi-tanu taa — naagi- sarvO- |
tkRuShTa- mahimanu — daLaga-Lali saM — carisu-toLagi-ddu ||
duShTa-rige du — rbuddhi- karma vi- |
shiShTa-rige su — j~jaana- dharma su- |
puShTi- gaisuta — saMta-yipa ni — rduShTa- sukha poo-rNa || 5-9 ||

vitta- dEhaa — gaara- daaraa- |
patya- mitraa — digaLo-Lage guNa – |
citta- buddhyaa — diMdri-yagaLoLu — j~jaana- karmado-Lu ||
tatta-daahwaya — naagi- karesuta |
satya- saMka — lpaanu-saaradi |
nitya-dali taa — maaDi- maaDipa — neMdu- smarisuti-ru || 5-10 ||

bhaava- dravya — kriyega-Lenisuva |
ee vi-dhaadvai — tatra-yaMgaLa |
bhaavi-suta sad — bhakti-yali sa — rvatra- mareyada-le ||
taava-kanu taa — neMdu- pratidina |
sEvi-suva bha — ktarige- tannanu |
eeva- kaava kRu — paaLu- karivara — golida- teradaM-te || 5-11 ||

baaMda-Lave moda — laadu-daroLoM- |
doMda-rali poo — jaa su-saadhana- |
veMde-nisuva pa — daartha-gaLu bage — bageya- nootana-di ||
saMda-Nisi koM — Dihavu- dhyaanake |
taMdi-nitu ciM — tisi sa-daa gO – |
viMda-garpisi — nODu- nalinali — daaDu- koMDaa-Du || 5-12 ||

jalaja- naabhana — moorti- manadali |
nelego-Lisi ni — shcala bha-kutiyali |
caLi bi-silu maLe — gaaLi-gaLa niM — disade- nityada-li ||
nelada-liha gaM — dhave su-gaMdhavu |
jalave- rasa roo — pave su-deepavu |
yalaru- caamara — shabda- vaadyaga — Larpi-salu oli-va || 5-13 ||

gOLa-kagaLe ra — maara-maNana ni- |
jaala-yagaLanu — dinadi- saMpra- |
kShaaLa-neye sa — mmaarja-navu kara — NagaLe- deepaga-La ||
saalu- tatta — dwiShaya-gaLa sa- |
mmELa-nave pari — yaMka- tatsukha- |
dELi-geye su — ppatti-gaatma ni — vEda-nave vasa-na || 5-14 ||

paapa- karmavu — paadu-kegaLanu- |
lEpa-navu sa — tpuNya- shaastraa- |
laapa-nave shree — tuLasi- sumanO — vRutti-gaLe suma-na ||
kOpa- dhoopavu — bhakti- bhooShaNa |
vyaapi-sida sa — dbuddhi- Chatravu |
deepa-vE su — j~jaana- aaraa — rtigaLe- guNakatha-na || 5-15 ||

mana va-cana kaa — yaka pra-dakShiNe |
anudi-nadi sa — rvatra- vyaapaka |
vanaru-hEkShaNa — garpi-suta mO — disuta-liru sata-ta |
anubha-vake taM — duko sa-kala saa- |
dhanaga-LoLagidu — mukhya- paamara- |
manuja-rige pE — Lidare- tiLiyadu — budhari-gallada-le || 5-16 ||

catura-vidha puru — Shaartha- paDevare |
catura-dasha lO — kagaLa- madhyado- |
Litaru-paayaga — Lilla- nODalu — sakala- shaastrada-li ||
satata- viShayEM — driyaga-Lali pravi- |
tatane-nisi raa — jisuva- lakShmI- |
patige- sarva sa — marpa-Neye maha — pooje- sadupaa-ya || 5-17 ||

gOLa-kave kuM — Daagni- karaNavu |
mElo-dagibaha — viShaya- samidheyu |
gaaLi- yatnavu — kaama- dhoomavu — sanni-dhaanaa-rci ||
mELa-nave pra — jwaale- kiDigaLu |
tooLi-daanaM — dagaLu- tatta -|
tkaala- maatuga — Lella- maMtraa — dhyaatma- yaj~javi-du || 5-18 ||

madhuvi-rOdhiya — paTTa-Nake poo -|
rvada ka-vaaTaga — LakShi- naasika- |
vadana- shrOtraga — LeraDu- dakShiNa — utta-ra dwaa-ra ||
guda u-pasthaga — LeraDu- pashcima- |
kadaga-Lenipavu — ShaT sa-rOjave |
sadana- hRudayave — maMTa-paMgaLu — triguNa-gaLe kala-sha || 5-19 ||

dhaatu-gaLe sa — ptaava-raNa upa- |
vIthi-gaLu naa — DigaLu- madagaLu |
yootha-pagaLu su — Shumna- naaDiye — raaja- paMthaa-na ||
ee ta-nooru — hagaLe- vanaMgaLu |
maata-rishwanu — paMca- roopadi |
paata-kagaLeM — bariga-Lanu saM — haripa- taLavaa-ra || 5-20 ||

inasha-shaaMkaa — digaLu- lakShmI- |
vanite-yarasana — dwaara-paalaka –
renisu-tipparu — manada- vRuttiga — LE pa-daatiga-Lu ||
anubha-vipa viSha — yaMga-LE pa- |
TTaNake- bappa pa — saara-gaLu jee- |
vane su-vartaka — kappa-gaLa kai — koMba- hari taa-nu || 5-21 ||

urupa-raakrama — narama-nege dasha – |
karaNa-gaLe ka — nnaDiya- saaluga- |
Laravi-doorana — sadwi-haarake — citta- maMTapa-vu ||
maraLi- beesuva — shwaasa-gaLu caa- |
mara vi-laasini — buddhi- daamO- |
darage- saaShTaaM — ga pra-Naamaga — LE su-shayanaga-Lu || 5-22 ||

maara-maNanara — manege- sumahaa- |
dwaara-venisuva — vadana-koppuva |
tOra-Na shma — shrugaLu- kEshaga — LE pa-taakega-Lu ||
oori-naDevaM — ghrigaLu- jaMghega- |
Looru- madhyO — dara shi-ragaLaa- |
gaara-duppari — gegaLu- kOshaga — Laidu- kONega-Lu || 5-23 ||

ee sha-reerave — ratha pa-taaka su- |
vaasa-gaLu puM — DragaLu- dhwaja siM- |
haasa-nave ci — ttavu su-buddhiye — kalasha- sanmana-vu ||
paasha-guNa daM — Datra-yagaLu shu- |
bhaashu-bhadwaya — karma- cakra ma- |
haa sa-marthaa — shwagaLu- dashakara — NaMga-Lenisuva-vu || 5-24 ||

maata-rishwanu — dEha-rathadoLu |
soota-naagiha — sarva-kaaladi |
shreeta-ruNi va — llabha ra-thikaneM — daridu- nityada-li ||
preeti-yiMdali — pOShi-suta vaa- |
taata-paadiga — LiMda-lavirata |
ee ta-nuvinoLu — mamate- biTTava — navane- mahayO-gi || 5-25 ||

bhavave-nipa vana — dhiyoLu- karma- |
pravaha-doLu saM — carisu-tiha dE- |
hava su-naaveya — maaDi- tannava — riMda-loDagoo-Di ||
divasa-divasaga — Lalli- lakShmI- |
dhavanu- krIDipa — neMdu- ciMtise |
pavana-nayya bha — vaabdhi- daaTisi — parama- sukhavee-va || 5-26 ||

Apa-Naalaya — gata pa-daarthavu |
strIpu-ruSharuga — LiMdri-yagaLali |
deepa- paavaka — roLagi-Duva tai — laadi- dravyaga-La ||
aa pa-ramagava — daana-veMdu pa- |
dE pa-dE mare — yadale- smarisuta |
bhoopa-naMdadi — saMca-risu ni — rbhayadi- sarva-tra || 5-27 ||

vaari-ja bhavaaM — Dave su-maMTapa |
mEru-giri siM — haasa-navu bhaa- |
geera-thiye ma — jjanavu- digwa — stragaLu- nuDi maM-tra ||
bhooru-haja phala — puShpa- gaMdha sa- |
meera- shashiravi — deepa- bhooShaNa |
taara-kegaLeM — darpi-salu kai — koMDu- mannisu-va || 5-28 ||

bhoosu-raroLi — ppabja- bhavanoLu |
vaasu-dEvanu — vaayu- khagapa sa- |
daashi-vahipEM — dranu vi-vaswaa — nnaama-kA soo-rya ||
bhEsha- kaamama — raasya- varuNaa- |
dee su-raru kSha — triyaro-Lipparu |
vaasa-vaagiha — saMka-ruShaNana — nODi- mOdipa-ru || 5-29 ||

meena- kEtana — tanaya- praaNaa – |
paana- vyaanO — daana- mukhyai- |
kOna- paMcaa — shanma-rudgaNa — rudra- vasugaNa-ru ||
mEna-kaatmaja — kuvara- viShwa- |
ksEna- dhanapaa — dyanimi-Sharanu sa- |
daanu-raagadi — dhEni-pudu vai — shyaroLu- pradyu-mna || 5-30 ||

iruti-haru naa — satya-dasraru |
niraRu-tiyu yama — dharma- yamakiM- |
kararu- mEdini — kaala- mRutyu sha — naishcha-raadiga-Lu ||
karesi-koMbaru — shoodra-reMdana- |
varata- shoodraro — Lippa-rivaroLa- |
garavi-doorani — ruddha-nihaneM — daridu- mannipu-du || 5-31 ||

veeta-bhaya naa — raaya-Na catu- |
Shpaatu- taaneM — denisi- tatta- |
jjaati- dharma su — karma-gaLa taa — maaDi- maaDisu-ta ||
cEta-nara oLa — horage- Ota- |
prOta-naagi — ddella-rige saM- |
preeti-yali dha — rmaartha- kaamaa — digaLa- koDutiha-nu || 5-32 ||

nidhana- dhanada vi — dhaata- vigataa- |
bhyadhika- sama sama — varti- saamaga |
tridasha-gaNasaM — poojya- trikaku — ddhaama- shubhanaa-ma ||
madhuma-thana bhRugu — raama- ghOTaka- |
vadana- sarva pa — daartha-doLu tudi- |
modalu- tuMbiha — neMdu- ciMtisu — biMba-roopada-li || 5-33 ||

kanna-Diya kai — viDidu- nODalu – |
tanni-ravu sa — vyaapa- savyadi |
kaNNi-goppuva — teradi- aniru — ddhanige- ee jaga-vu ||
bhinna- bhinnave — tOru-tippudu |
janya-vaaduda — riMda- pratibiM- |
banna-mayagaa — neMda-ridu poo — jisalu- kaikoM-ba || 5-34 ||

biMba-reniparu — swOtta-maru prati- |
biMba-reniparu — swaawa-raru prati- |
biMba- biMbaga — LoLage- kEvala — biMba- hariyeM-du ||
saMbhra-madi paa — Dutali- nODuta |
uMbu-DuvudiDu — vudu ko-Duvude- |
llaMbu-jaaMbaka — naMghri- poojega — LeMdu- nalidaa-Du || 5-35 ||

nadiya- jala nadi — gereva- teradaM- |
dadali- bhagava — ddatta- dharmaga- |
Ludadhi-shayanani — garpi-suta vyaa — vRutta- neenaa-gi ||
vidhini-ShEdhaa — digaLi-goLagaa- |
gadale- maaDuta — darvi-yaMdadi |
paduma-naabhana — sakala- karmaga — Lalli- nenevuti-ru || 5-36 ||

ariya-diddaru — emmo-Liddana- |
varata- viShayaga — LuMba- j~jaanO- |
ttaradi- tanaga — rpisalu- citsukha — vittu- saMtai-pa ||
saritu- kaala — pravaha-gaLu kaM- |
Dareyu- sari kaa — Nadire- parivavu |
maraLi- majjana — paana- karmaga — LiMda- sukhaviha-vu || 5-37 ||

Enu- maaDuva — karma-gaLu la- |
kShmIni-vaasani — garpi-sanu saM -|
dhaana- poorva ka — diMda- saMdE — hisade- dinadina-di ||
maana-nidhi kai — koMDu- sukhavi- |
ttaana-tara saM — taipa- tRuNajala |
dhEnu- taanuM — Danava-rata paa — lgareva- teradaM-te || 5-38 ||

poorva- dakShiNa — pashchi-mOttara |
paarva-tIpati — agni- vaayu su- |
shaarva-reecara — digwa-layadoLu — haMsa- naamaka-nu ||
sarva-kaaladi — sarva-roLu sura- |
saarva-bhaumanu — swEcChe-yali ma- |
ttOrva-rige gO — carisa-davya — ktaatma-neMdeni-pa || 5-39 ||

pari i- Daava — tsaranu- saMva – |
tsarado-Laniru — ddhaadi- roopava |
dharisi- baarha — spatya- sourabha — caaMdra-manu eni-si ||
iruti-ha jaga — nnaatha-viThThala |
smarisu-vavaranu — saMta-yipaneM- |
durupa-raakrama — ucita- saadhana — yOgya-teyanari-tu || 5-40 ||

|| iti shree vibhooti saMdhi saMpoorNaM ||
|| shree kRuShNaarpaNamastu ||

06. Panchamaha yagna Sandhi

Leave a Reply

You might also like

error: Content is protected !!