ಶ್ರೀ ವಾದಿರಾಜರ ಸ್ತೋತ್ರ ಸುಳಾದಿ
ರಾಗ : ಮಧುವಂತಿ
ಧ್ರುವತಾಳ
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರ –
ವಾದ ಮಾಯಾವಾದಿಗಳ ಗೆದ್ದ
ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ
ಮಾಧವ ವೇದವೇದ್ಯ ವಿಜಯವಿಠ್ಠಲ ತಾನು
ಆದರದಿಂದವರ ಭುಜದಿ ಹಯವಕ್ತ್ರನಾಗಿ
ಪಾದವನ್ನು ಇಟ್ಟು ಸ್ವಾದುವಾದ
ಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ || ೧ ||
ಮಟ್ಟತಾಳ
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ ಪಾಯಸ ಘೃತ ನೀಡೆ
ಒಡೆಯನು ಬ್ರಹ್ಮಾದಿ ಪರಿವಾರಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿನಿಂದ
ಉಡುರಾಜಮುಖ ನಮ್ಮ ವಿಜಯವಿಠ್ಠಲನು
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ || ೨ ||
ತ್ರಿವಿಡಿತಾಳ
ತಾಮಸ ಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮ ನುಡಿಯೆ
ಪರಂಧಾಮ ದೊರಿಯದು ಭೂಮಿಯೊಳಗಿದ್ದ
ಭ್ರಾಮಕ ಜನರಿಗೆ
ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯವಿಠ್ಠಲನು
ಸಾಮಾನ್ಯ ಜನರಿಗೆ ದೊರಕುವನೆ ಕೇಳಿ || ೩ ||
ಅಟ್ಟತಾಳ
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ
ದಿಗ್ವಿಜಯ ಮಾಡಲು ಪುರಕೆ
ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜನ ಪದಕೆ ಬಂದು ಅಖಿಳರನಾಳಿದಾ
ನಿಜ ವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಠಲನ
ಭಜನಿಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ
ಜ್ಞಾನಪಕ್ವಾದ ಮನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕರಿಂದ
ಅಜಪದಕೆ ಸಲ್ವನು ಲೇಶ ಸಂಶಯಬೇಡಿ
ನಿಜ ನಿಜ ನಿಜವೆಂದು ನಿತ್ಯ ಕೊಂಡಾಡಿರೊ || ೪ ||
ಆದಿತಾಳ
ಮನ ಶುದ್ಧರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ
ವನಜಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು
ಮುನಿ ವಾದಿರಾಜರ ಸಾಮಾನ್ಯರೆಂತೆಂದು
ಎಣಿಸಿದವರನ್ನು ಘನವಾಗಿ ಶಿಕ್ಷಿಪ
ಇನ ತನುಜೋಧ್ಬವ ಕೋಪದಿಂದ
ವಾದಿರಾಜರ ಮಹಿಮೆಯನು ಕೊಂಡಾಡಿ
ಅನುದಿನ ಸುಜನರು || ೫ ||
ಜತೆ
ಮೋದತೀರ್ಥರ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಠ್ಠಲ ದಾಸಾ ||
SrI vAdirAjara stOtra suLAdi
rAga : madhuvaMti
dhruvatALa
mAdhavanaMGri nitya mOdadalli Bajipa
sAdhusanmunivarya sammOdatIrthara pAda
sAdaradiMda Bajisi mEdinige BAra –
vAda mAyAvAdigaLa gedda
vAdirAjara mahime varNisalaLavallA
mAdhava vEdavEdya vijayaviThThala tAnu
AdaradiMdavara Bujadi hayavaktranAgi
pAdavannu iTTu svAduvAda
kaDali hUraNavanu uMDa
SrIdharana mahime sAdhujanaru kELi || 1 ||
maTTatALa
kaDalalli pavaDisida oDiya tA poDaviyali
mRuDanuta gOviMda jaDithad~harivANadalli
kaDali sakkare berisi laDDugeya mADida
saDagarada BakSha pAyasa GRuta nIDe
oDeyanu brahmAdi parivArasahituMDu
kaDagOlu nENu piDiduDupiliniMda
uDurAjamuKa namma vijayaviThThalanu
beDagu kAryavannu naDesida bage kELi || 2 ||
triviDitALa
tAmasa guNavuLLa pAmara janarige
I mahime dorakuvudE svAmi silakuvane
kAmisi kOTi varuSha nAma nuDiye
paraMdhAma doriyadu BUmiyoLagidda
BrAmaka janarige
vAmadEvane hiriyaneMdu buddhiya koDuva
kAmAri vaMdya namma vijayaviThThalanu
sAmAnya janarige dorakuvane kELi || 3 ||
aTTatALa
aja satyalOkAdhipatyavannu mADi
digvijaya mADalu purake
nija suj~jAna pUrNapraj~jareMbO muniyu
ajana padake baMdu aKiLaranALidA
nija vAyu hanuma BIma madhvanenisida
vijayasArathi pAdarajada mahAtmeyiMda
gajavairi BaMjana vijayaviThalana
Bajaniya gaiyuta bahukAladi
RujugaNa paMktiyoLage kuLitA
nija nirmala suj~jAna dhyAnadiMda
j~jAnapakvAda manavuLLa
sujana SirOmaNi vAdirAjanu tA
nijavAgi bommAMDa purANa sAdhakariMda
ajapadake salvanu lESa saMSayabEDi
nija nija nijaveMdu nitya koMDADiro || 4 ||
AditALa
mana SuddharAgi mAdhavanaMGriyanu
dina dinadalli naMbikoMDippare
anavaratAnaMda guru madhvarAyara divya
vanajapAdaMgaLa smarisalu
hanumESa namma siri vijayaviThThala tAnu
muni vAdirAjara sAmAnyareMteMdu
eNisidavarannu GanavAgi SikShipa
ina tanujOdhbava kOpadiMda
vAdirAjara mahimeyanu koMDADi
anudina sujanaru || 5 ||
jate
mOdatIrthara mata sEnAdhipatiyAda
vAdirAja muniyu vijayaviThThala dAsA ||

Leave a Reply
You must be logged in to post a comment.