Entha Shurano Rama

Composer : Shri Rangesha vittala

ಎಂಥ ಶೂರನೊ ರಾಮ ಎಂಥ ಧೀರನೊ | ಪ |

ಕಂತುಹರನ ಧನುವನೆತ್ತಿ
ಪಂಥದಿಂದ ಮುರಿದು ಬಿಸುಟ | ಅ.ಪ |

ಹಲವು ಶೂರ ರಾಜರದನು
ಚಲಿಸಲಾಗದ ಧನುವ, ಸುಲಭ-
-ದಿಂದಲೆತ್ತಿ ಮುರಿದು
ಲಲನೆ ಸೀತೆಯನೊಲಿಸಿದವನು | ೧ |

ಸಕಲ ಕ್ಷತ್ರಿಯರನು ಗೆಲಿದು
ಪ್ರಕಟನಾದ ಪರಶುರಾಮ
ಶಕುತಿಯನ್ನು ತಾನು ಪರಮ
ಯುಕುತಿಯಿಂದ ಗೆಲಿದು ಬಂದ | ೨ |

ಸಾಲು ಶಿರನ ಕೀಟವೆಂದು
ಬಾಲದಲ್ಲಿ ತಂದ ವೀರ
ವಾಲಿಯನೇಕ ಬಾಣದಲಿ
ಲೀಲೆಯಿಂದಲಿರಿದ ಜಾಣ | ೩ |

ಹತ್ತುನಾಲ್ಕು ಲೋಕಗಳನು
ಸುತ್ತಿಗೆಲಿದು ಖ್ಯಾತನಾದ
ಹತ್ತು ತಲೆಯ ದುಷ್ಟನನ್ನು
ಕತ್ತು ಕಡಿದು ಕೆಡಹಿದವನು | ೪ |

ರಾಸಿ ದೈತ್ಯರನ್ನು ಕೊಂದು
ದೇಶವನ್ನು ಉದ್ಧರಿಸಿದ
ವಾಸವಾದಿ ಸುರನುತ ರಂ-
ಗೇಶ ವಿಟ್ಠಲರೇಯನವನು | ೫ |


eMtha SUrano rAma eMtha dhIrano | pa |

kaMtuharana dhanuvanetti
paMthadiMda muridu bisuTa | a.pa |

halavu SUra rAjaradanu
calisalAgada dhanuva, sulaBa-
-diMdaletti muridu
lalane sIteyanolisidavanu | 1 |

sakala kShatriyaranu gelidu
prakaTanAda paraSurAma
Sakutiyannu tAnu parama
yukutiyiMda gelidu baMda | 2 |

sAlu Sirana kITaveMdu
bAladalli taMda vIra
vAliyanEka bANadali
lIleyiMdalirida jANa | 3 |

hattunAlku lOkagaLanu
suttigelidu KyAtanAda
hattu taleya duShTanannu
kattu kaDidu keDahidavanu | 4 |

rAsi daityarannu koMdu
dESavannu uddharisida
vAsavAdi suranuta raM-
gESa viTThalarEyanavanu | 5 |

Leave a Reply

You might also like

error: Content is protected !!