Kavivarara kavanadali 

Composer : Shri Vatatma guru Shri Jayesha Vittala – Shishyaru of Shri Jayesha Vittala

By Smt.Shubhalakshmi Rao

ಕವಿವರರ ಕವನದಲಿ ಕವಿ ಕವಿದು ಪೊಳೆವ
ಭುವನಪಾವನ ಚರಿತ ಇಂದೀವರಾಕ್ಷ [ಪ]

ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ
ನವನವದಿ ತೋರಿದೆಯೊ ಮೋದ ಕರಿವರದ
ಭವಭಂಗ ಪರಿಹಾರ ಕವನ ವೋದಿದ ಮಾತ್ರ
ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ [೧]

ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು
ಲವಲವಿಕೆ ಎಮ್ಮ ಚೇತನಕೆ ಕೊಟ್ಟು
ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ
ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ [೨]

ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು
ಶಿವ ಶುಕ ಪಿತ ಸವಿದ ರುಚಿಯು ಇಹುದು
ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ |
ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ [೩]

ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ
ಭವಮೂಲಕುನ್ಮೂಲ ಇದರ ಮಹಿವೈ
ಅವಲಿಯನು ತಿಂದವನು ಅಗಲಿರದೆ ಒಡನಿಹನು
ಜವನ ದೂತರು ತಲೆಮಣಿದು ಓಡುವರೊ [೪]

ತತ್ವಾಭಿಮಾನಿಗಳಿಗಾಹಾರವಿದು ಸತ್ಯ
ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ
ಸತ್ಕೃತಿಯ ಮಾಡಿ ಚಿತ್ಸುಖವ ಉಣು ನಿತ್ಯ
ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು [೫]


kavivarara kavanadali kavi kavidu poLeva
BuvanapAvana carita iMdIvarAkSha [pa]

tavapUrNa nija olime praBupUrNa kavanadali
navanavadi tOrideyo mOda karivarada
BavaBaMga parihAra kavana vOdida mAtra
dhavaLa kIruti beLudiMgaLanu mIrihudo [1]

tavapUrNa guNa kriye rUpa Gana BAvagaLu
lavalavike emma cEtanake koTTu
BavaBItige BIti taMdoDDuvudo kamalESa
saviduNNuvA janake jaDadallU nI baruve [2]

SravaNa mAtrake maimaresuvudu mahasiriyu
Siva Suka pita savida ruciyu ihudu
pavamAna kRuShNArya rAmAryarati valume |
Sravisuvudu paThiparanu Baktimattara mADi [3]

kavalumatiyali muLugi calisadiru idariMda
BavamUlakunmUla idara mahivai
avaliyanu tiMdavanu agalirade oDanihanu
javana dUtaru talemaNidu ODuvaro [4]

tatvABimAnigaLigAhAravidu satya
tatvArtha balu sulaBadalle manakavagAhya
satkRutiya mADi citsuKava uNu nitya
vAtAtma guru SrI jayESaviThalana nODu [5]

Leave a Reply

You might also like

error: Content is protected !!